ಕೂಸಿನ ಬಾಯಾಕ ಹಾಕುತಾಳೋ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕೂಸಿನ ಬಾಯಾಕ ಹಾಕುತಾಳೋ ಜಾಣೆ ಕೋಲು ಕೋಲನ್ನ ಕೋಲೆ ||ಹಿ||

ಹಾಕುತಾಳೋ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಹಾಕುತಾಳೋ ಜಾಣೆ ಕೋಲು ಕೋಲನ್ನ ಕೋಲೆ ||ಹಿ||

ಸಪ್ಪೆ ಬಣಿಮ್ಯಾಕ ಹೋಗಾ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಸಪ್ಪೆ ಬಣಿಮ್ಯಾಕ ಹೋಗಾ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||

ಹೋಗಾ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಹೋಗಾ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||

ಸಪ್ಪೆ ಬಣಿಮ್ಯಾಗೆ ಕುಂತಾಳವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಸಪ್ಪೆ ಬಣಿಮ್ಯಾಗೆ ಕುಂತಾಳವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಹಿ||

ಕುಂತಾಳವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕುಂತಾಳವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಹಿ||

ಹಾಳುಗೋಡ್ಯಾಗ ಭೀಮ ಕುಂತನವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಹಾಳುಗೋಡ್ಯಾಗ ಭೀಮ ಕುಂತನವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಹಿ||

ಇಲ್ಲಿಗೆ ಹರಹರ ಇಲ್ಲಿಗೆ ಶಿವ ಶಿವ
ಇಲ್ಲಿಗೆ ಸಂದೀನ ಪದ ಮುಗಿದೆ ಸೋಬಾನವೆ ||ಮು||
ಇಲ್ಲಿಗೆ ಸಂದೀನ ಪದ ಮುಗಿದೆ ಸೋಬಾನವೆ ||ಹಿ||

ಇಲ್ಲಿಗೆ ನಿಮ್ಮ ದನಿಯ ನಿಲ್ಲ ವಡಿಯ ಸೋಬಾನವೆ ||ಮು||
ಇಲ್ಲಿಗೆ ನಿಮ್ಮ ದನಿಯ ನಿಲ್ಲ ವಡಿಯ ಸೋಬಾನವೆ ||ಹಿ||

ಧರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||

ಭೀಮಣ್ಣ ಎಲ್ಲೆಲ್ಲೆ ಸುಳಿವಿಲ್ಲ ಕೋಲು ಕೋಲನ್ನ ಕೋಲೆ ||ಮು||
ಭೀಮಣ್ಣ ಎಲ್ಲೆಲ್ಲೆ ಸುಳಿವಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಭೀಮಣ್ಣ ಎಲ್ಲೆಲ್ಲೆ ಸುಳಿವಿಲ್ಲ ಕೋಲು ಕೋಲನ್ನ ಕೋಲೆ ||ಮು||
ಭೀಮಣ್ಣ ಎಲ್ಲೆಲ್ಲೆ ಸುಳಿವಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಕೊಂತೆಮ್ಮನೋಗಿ ಕೇಳುತಾನೆ ಕೋಲು ಕೋಲನ್ನ ಕೋಲೆ ||ಮು||
ಕೊಂತೆಮ್ಮನೋಗಿ ಕೇಳುತಾನೆ ಕೋಲು ಕೋಲನ್ನ ಕೋಲೆ ||ಹಿ||

ಕೊಂತೆಮ್ಮನೋಗಿ ಕೇಳುತಾನೆ ಕೋಲು ಕೋಲನ್ನ ಕೋಲೆ ||ಮು||
ಕೊಂತೆಮ್ಮನೋಗಿ ಕೇಳುತಾನೆ ಕೋಲು ಕೋಲನ್ನ ಕೋಲೆ ||ಹಿ||

ಬೆಣ್ಣೆ ತಗಿತಾಳೆ ಕೊಂತೆಮ್ಮ ಕೋಲು ಕೋಲನ್ನ ಕೋಲೆ
ಬೆಣ್ಣೆ ತಗಿತಾಳೆ ಕೊಂತೆಮ್ಮ ಕೋಲು ಕೋಲನ್ನ ಕೋಲೆ ||ಮು||
ಬೆಣ್ಣೆ ತಗಿತಾಳೆ ಕೊಂತೆಮ್ಮ ಕೋಲು ಕೋಲನ್ನ ಕೋಲೆ ||ಹಿ||

ಭೀಮ ಎಲ್ಲಿಗೆs…..  ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಭೀಮ ಎಲ್ಲಿಗೆs…..  ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಭೀಮ ಎಲ್ಲಿಗೆs…..  ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಭೀಮ ಎಲ್ಲಿಗೆs…..  ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಬ್ಯಾಟಿಗೆ ಹೋಗ್ಯಾನೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಬ್ಯಾಟಿಗೆ ಹೋಗ್ಯಾನೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||

ಬ್ಯಾಟಿಗೆ ಹೋಗ್ಯಾನೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಬ್ಯಾಟಿಗೆ ಹೋಗ್ಯಾನೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||

ಕೂಸಿನ ಮಾರಿ ನೋಡ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಕೂಸಿನ ಮಾರಿ ನೋಡ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಹೊಲಿಕೆ ಭೀಮನಂಗ, ಕಣ್ಣು ಭೀಮನಂಗಾ
ಮುಖ ನೋಡಿದರೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಮು||
ಮುಖ ನೋಡಿದರೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಹಿ||

ಮುಸಿನಗು ಧರ್ಮಣ್ಣ ನಕ್ಕಾನೇ ಕೋಲು ಕೋಲನ್ನ ಕೋಲೆ ||ಮು||
ಮುಸಿನಗು ಧರ್ಮಣ್ಣ ನಕ್ಕಾನೇ ಕೋಲು ಕೋಲನ್ನ ಕೋಲೆ ||ಹಿ||

ಭೀಮ ಅಲ್ಲದಲ್ಲೆ ಬದಲಲ್ಲಾ ಕೋಲು ಕೋಲನ್ನ ಕೋಲೆ ||ಮು||
ಭೀಮ ಅಲ್ಲದಲ್ಲೆ ಬದಲಲ್ಲಾ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||

ಭೀಮನನ್ನು ನೀವು ಹುಡಿಕಿ ಬರ್ರೋ ಕೋಲು ಕೋಲನ್ನ ಕೋಲೆ ||ಮು||
ಭೀಮನನ್ನು ನೀವು ಹುಡಿಕಿ ಬರ್ರೋ ಕೋಲು ಕೋಲನ್ನ ಕೋಲೆ ||ಹಿ||

ನಕುಲ ಸಹದೇವಾ ಹೋಗ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ನಕುಲ ಸಹದೇವಾ ಹೋಗ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಹಳ್ಳವಾ ಕೊಳ್ಳವಾ ಹುಡಿಕ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಹಳ್ಳವಾ ಕೊಳ್ಳವಾ ಹುಡಿಕ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಎಲ್ಲೆಲ್ಲಿ ಭೀಮನ ಸುಳಾವಿಲ್ಲ ಕೋಲು ಕೋಲನ್ನ ಕೋಲೆ ||ಮು||
ಎಲ್ಲೆಲ್ಲಿ ಭೀಮನ ಸುಳಾವಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಹಾಳೇನಾ ಗೋಡ್ಯಾಕ ಬಂದರವ್ವಾ ಕೋಲು ಕೋಲನ್ನ ಕೋಲೆ ||ಮು||
ಹಾಳೇನಾ ಗೋಡ್ಯಾಕ ಬಂದರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಅಲ್ಲೇನೆ ಕುಂತಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಅಲ್ಲೇನೆ ಕುಂತಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಅಲ್ಲೇನೆ ಕುಂತಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಅಲ್ಲೇನೆ ಕುಂತಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಅಣ್ಣ ಕರೀತಾನೆ ಬರಬೇಕೆ ಕೋಲು ಕೋಲನ್ನ ಕೋಲೆ ||ಮು||
ಅಣ್ಣ ಕರೀತಾನೆ ಬರಬೇಕೆ ಕೋಲು ಕೋಲನ್ನ ಕೋಲೆ ||ಹಿ||

ಅಣ್ಣ ಕರೀತಾನೆ ಬರಬೇಕೆ ಕೋಲು ಕೋಲನ್ನ ಕೋಲೆ ||ಮು||
ಅಣ್ಣ ಕರೀತಾನೆ ಬರಬೇಕೆ ಕೋಲು ಕೋಲನ್ನ ಕೋಲೆ ||ಹಿ||

ನೀವು ಕರೆದರೆ ನಾನು ಬರೋದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನೀವು ಕರೆದರೆ ನಾನು ಬರೋದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣ ನನ್ನ ಬೈಯುತಾನೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ನನ್ನ ಬೈಯುತಾನೆ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣ ನನ್ನ ಬೈಯುತಾನೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ನನ್ನ ಬೈಯುತಾನೆ ಕೋಲು ಕೋಲನ್ನ ಕೋಲೆ ||ಹಿ||

ಹಿಂದಕಾ ಬಂದಾರೆ ಅವರೇನ ಕೋಲು ಕೋಲನ್ನ ಕೋಲೆ ||ಮು||
ಹಿಂದಕಾ ಬಂದಾರೆ ಅವರೇನ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣನ ಮುಂದೆ ಹೇಳುತಾರೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣನ ಮುಂದೆ ಹೇಳುತಾರೆ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣನ ಮುಂದೆ ಹೇಳುತಾರೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣನ ಮುಂದೆ ಹೇಳುತಾರೆ ಕೋಲು ಕೋಲನ್ನ ಕೋಲೆ ||ಹಿ||

ನಮ್ಮಿಗೆ ಆತ ಬರಾವಲ್ಲ ಕೋಲು ಕೋಲನ್ನ ಕೋಲೆ ||ಮು||
ನಮ್ಮಿಗೆ ಆತ ಬರಾವಲ್ಲ ಕೋಲು ಕೋಲನ್ನ ಕೋಲೆ ||ಹಿ||

ಅರ್ಜುನನಾದರೆ ಕಳಿವ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಅರ್ಜುನನಾದರೆ ಕಳಿವ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಅರ್ಜುನನೋಗಿ ಕರದಾನೆ ಕೋಲು ಕೋಲನ್ನ ಕೋಲೆ ||ಮು||
ಅರ್ಜುನನೋಗಿ ಕರದಾನೆ ಕೋಲು ಕೋಲನ್ನ ಕೋಲೆ ||ಹಿ||

ನಿನ್ನಿಂದೆ ನಾನು ಬರಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿನ್ನಿಂದೆ ನಾನು ಬರಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ನಿನ್ನಿಂದೆ ನಾನು ಬರಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿನ್ನಿಂದೆ ನಾನು ಬರಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣ ನನ್ನ ಬೈಯುತಾನೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ನನ್ನ ಬೈಯುತಾನೆ ಕೋಲು ಕೋಲನ್ನ ಕೋಲೆ ||ಹಿ||

ಯಾರಿಂದೆ ಬರುತ್ತಿಯೋ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಯಾರಿಂದೆ ಬರುತ್ತಿಯೋ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಕೊಂತೆಮ್ಮನಾದರೆ ಕಳಿಸಿಕೊಡೆ ಕೋಲು ಕೋಲನ್ನ ಕೋಲೆ ||ಮು||
ಕೊಂತೆಮ್ಮನಾದರೆ ಕಳಿಸಿಕೊಡೆ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನಾ ಪಲ್ಲಕ್ಕಿ ಹೊರಗೆ ಇಡಿರೋ ಕೋಲು ಕೋಲನ್ನ ಕೋಲೆ ||ಮು||
ಮುತ್ತಿನಾ ಪಲ್ಲಕ್ಕಿ ಹೊರಗೆ ಇಡಿರೋ ಕೋಲು ಕೋಲನ್ನ ಕೋಲೆ ||ಹಿ||

ಅದರಾಗ ಕೊಂತೆಮ್ಮ ಕುಂತಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಅದರಾಗ ಕೊಂತೆಮ್ಮ ಕುಂತಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ನಾಲಾರು ಗೌಳೇರು ಹೊತ್ತರವ್ವಾ ಕೋಲು ಕೋಲನ್ನ ಕೋಲೆ ||ಮು||
ನಾಲಾರು ಗೌಳೇರು ಹೊತ್ತರವ್ವಾ ಕೋಲು ಕೋಲನ್ನ ಕೋಲೆ ||ಹಿ||

ನಾಲಾರು ಗೌಳೇರು ಹೊತ್ತರವ್ವಾ ಕೋಲು ಕೋಲನ್ನ ಕೋಲೆ ||ಮು||
ನಾಲಾರು ಗೌಳೇರು ಹೊತ್ತರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಅರಗೀನಾ ಮನಿಮುಂದೆ ಇಳಿವ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಅರಗೀನಾ ಮನಿಮುಂದೆ ಇಳಿವ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕೊಂತೆಮ್ಮ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಕೊಂತೆಮ್ಮ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||

ಎಲ್ಲಿ ಕುಂತೀಯಾ ನನ್ನ ಮಗನೆ ಕೋಲು ಕೋಲನ್ನ ಕೋಲೆ ||ಮು||
ಎಲ್ಲಿ ಕುಂತೀಯಾ ನನ್ನ ಮಗನೆ ಕೋಲು ಕೋಲನ್ನ ಕೋಲೆ ||ಹಿ||

ಎಲ್ಲಿ ಕುಂತೀಯಾ ನನ್ನ ಮಗನೆ ಕೋಲು ಕೋಲನ್ನ ಕೋಲೆ ||ಮು||
ಎಲ್ಲಿ ಕುಂತೀಯಾ ನನ್ನ ಮಗನೆ ಕೋಲು ಕೋಲನ್ನ ಕೋಲೆ ||ಹಿ||

ಕಾರೆಪಲ್ಲೆ ತಿಂದು, ಬಾರೆ ಪಲ್ಲೆ ತಿಂದು
ಕಳ್ಳೆಲ್ಲಾ ಹಸಿರು ಏರ್ಯಾವೆ ಕೋಲು ಕೋಲನ್ನ ಕೋಲೆ ||ಮು||
ಕಳ್ಳೆಲ್ಲಾ ಹಸಿರು ಏರ್ಯಾವೆ ಮಗನೆ ಕೋಲು ಕೋಲನ್ನ ಕೋಲೆ ||ಹಿ||

ಕಳ್ಳೆಲ್ಲಾ ಹಸಿರು ಏರ್ಯಾವೆ ಕೋಲು ಕೋಲನ್ನ ಕೋಲೆ ||ಮು||
ಕಳ್ಳೆಲ್ಲಾ ಹಸಿರು ಏರ್ಯಾವೆ ಕೋಲು ಕೋಲನ್ನ ಕೋಲೆ ||ಹಿ||

ಹೊಟ್ಟೆ ಸವರಾಡಿ ನೋಡುತಾಳೆ ಕೋಲು ಕೋಲನ್ನ ಕೋಲೆ ||ಮು||
ಹೊಟ್ಟೆ ಸವರಾಡಿ ನೋಡುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಹೊಟ್ಟೆ ಸವರಾಡಿ ನೋಡುತಾಳೆ ಕೋಲು ಕೋಲನ್ನ ಕೋಲೆ ||ಮು||
ಹೊಟ್ಟೆ ಸವರಾಡಿ ನೋಡುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಕೊಂತೆಮ್ಮ ಬೋರಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಕೊಂತೆಮ್ಮ ಬೋರಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಕೊಂತೆಮ್ಮ ಬೋರಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಕೊಂತೆಮ್ಮ ಬೋರಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಕೊಂಡಗದ ಬಾನs….. ಉಂಬೋ ಕೋಲು ಕೋಲನ್ನ ಕೋಲೆ ||ಮು||
ಕೊಂಡಗದ ಬಾನs….. ಉಂಬೋ ಕೋಲು ಕೋಲನ್ನ ಕೋಲೆ ||ಹಿ||

ಕೊಪ್ಪರಿಕಿ ನೀರು ಕುಡಿಯೋ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಕೊಪ್ಪರಿಕಿ ನೀರು ಕುಡಿಯೋ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಕೊಪ್ಪರಿಕಿ ನೀರು ಕುಡಿಯೋ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಕೊಪ್ಪರಿಕಿ ನೀರು ಕುಡಿಯೋ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಹೋಗೋಣ ಬಾರ ನನ್ನ ಮಗನೆ ಕೋಲು ಕೋಲನ್ನ ಕೋಲೆ ||ಮು||
ಹೋಗೋಣ ಬಾರ ನನ್ನ ಮಗನೆ ಕೋಲು ಕೋಲನ್ನ ಕೋಲೆ ||ಹಿ||

ಹೋಗೋಣ ಬಾರ ನನ್ನ ಮಗನೆ ಕೋಲು ಕೋಲನ್ನ ಕೋಲೆ ||ಮು||
ಹೋಗೋಣ ಬಾರ ನನ್ನ ಮಗನೆ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನ ಪಲ್ಲಕ್ಯಾಗ ಕುಂತಾಳೆ ಕೊಂತೆಮ್ಮ ಕೋಲು ಕೋಲನ್ನ ಕೋಲೆ ||ಮು||
ಮುತ್ತಿನ ಪಲ್ಲಕ್ಯಾಗ ಕುಂತಾಳೆ ಕೊಂತೆಮ್ಮ ಕೋಲು ಕೋಲನ್ನ ಕೋಲೆ ||ಹಿ||

ಭೀಮ ಒಬ್ಬಾನೆ ಹೊತ್ತನವ್ವಾ ಕೋಲು ಕೋಲನ್ನ ಕೋಲೆ ||ಮು||
ಭೀಮ ಒಬ್ಬಾನೆ ಹೊತ್ತನವ್ವಾ ಕೋಲು ಕೋಲನ್ನ ಕೋಲೆ ||ಹಿ||

ನಡುಮನ್ಯಾಕ ಹೋಗಿ ಇಳಿವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ನಡುಮನ್ಯಾಕ ಹೋಗಿ ಇಳಿವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸೆರಗ ಮರೆಮಾಡಿ ಕುಂತರಿಸ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಸೆರಗ ಮರೆಮಾಡಿ ಕುಂತರಿಸ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಭೀಮನ ಮಾರಿ ನೋಡ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಭೀಮನ ಮಾರಿ ನೋಡ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕೊಂತೆಮ್ಮಗೆ ಏನೊಂದೆ ನುಡಿದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಕೊಂತೆಮ್ಮಗೆ ಏನೊಂದೆ ನುಡಿದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಭೀಮಾಗ ಜಳಕ ಮಾಡಿಸವ್ವಾ ಕೋಲು ಕೋಲನ್ನ ಕೋಲೆ ||ಮು||
ಭೀಮಾಗ ಜಳಕ ಮಾಡಿಸವ್ವಾ ಕೋಲು ಕೋಲನ್ನ ಕೋಲೆ ||ಹಿ||

ಭೀಮಾಗ ಊಟ ನೀಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಭೀಮಾಗ ಊಟ ನೀಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಅನ್ನ ತುಪ್ಪಾ ನೀಡೆ ಹಡದವ್ವಾ ಕೋಲು ಕೋಲನ್ನ ಕೋಲೆ ||ಮು||
ಅನ್ನ ತುಪ್ಪಾ ನೀಡೆ ಹಡದವ್ವಾ ಕೋಲು ಕೋಲನ್ನ ಕೋಲೆ ||ಹಿ||

ಉಂಡಾನೆ ಉಟ್ಟಾನೆ ಅಂಗೈ ತೊಳೆದಾನೆ
ಗಂಧದ ಇಳೇವೆ ಮೆಲುದಾನೆ ಕೋಲು ಕೋಲನ್ನ ಕೋಲೆ ||ಮು||
ಗಂಧದ ಇಳೇವೆ ಮೆಲುದಾನೆ ಕೋಲು ಕೋಲನ್ನ ಕೋಲೆ ||ಹಿ||

ಗರಡಿ ಮನಿಯಾಕೆ ಹೋದನವ್ವಾ ಕೋಲು ಕೋಲನ್ನ ಕೋಲೆ ||ಮು||
ಗರಡಿ ಮನಿಯಾಕೆ ಹೋದನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಗೆಣಿಯಾನ ಹೋಗಿ ಕರದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಗೆಣಿಯಾನ ಹೋಗಿ ಕರದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕುಸ್ತಿಯನ್ನು ಭೀಮ ಆಡುತಾನೆ ಕೋಲು ಕೋಲನ್ನ ಕೋಲೆ ||ಮು||
ಕುಸ್ತಿಯನ್ನು ಭೀಮ ಆಡುತಾನೆ ಕೋಲು ಕೋಲನ್ನ ಕೋಲೆ ||ಹಿ||

ಭೀಮನನ್ನು ಅವರೇ ದಣಿಸುತಾರೆ ಕೋಲು ಕೋಲನ್ನ ಕೋಲೆ ||ಮು||
ಭೀಮನನ್ನು ಅವರೇ ದಣಿಸುತಾರೆ ಕೋಲು ಕೋಲನ್ನ ಕೋಲೆ ||ಹಿ||

ಭೀಮನನ್ನು ಅವರೇ ದಣಿಸುತಾರೆ ಕೋಲು ಕೋಲನ್ನ ಕೋಲೆ ||ಮು||
ಭೀಮನನ್ನು ಅವರೇ ದಣಿಸುತಾರೆ ಕೋಲು ಕೋಲನ್ನ ಕೋಲೆ ||ಹಿ||

ಸಡ್ಡು ಬಡಿದು ಕುಸ್ತಿ ಆಡುತಾನೆ ಕೋಲು ಕೋಲನ್ನ ಕೋಲೆ ||ಮು||
ಸಡ್ಡು ಬಡಿದು ಕುಸ್ತಿ ಆಡುತಾನೆ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವ ಏನೊಂದೆ ಏನು ನುಡಿದೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಏನೊಂದೆ ಏನು ನುಡಿದೆ ಕೋಲು ಕೋಲನ್ನ ಕೋಲೆ ||ಹಿ||

ಸಪ್ಪಿ ಬಣವಿಗೆ ನಾನು ಹೋಗಬೇಕೆ ಕೋಲು ಕೋಲನ್ನ ಕೋಲೆ ||ಮು||
ಸಪ್ಪಿ ಬಣವಿಗೆ ನಾನು ಹೋಗಬೇಕೆ ಕೋಲು ಕೋಲನ್ನ ಕೋಲೆ ||ಹಿ||

ಅವರೇನೆ ಮನಿದಾರಿ ಬಿಟ್ಟರವ್ವಾ ಕೋಲು ಕೋಲನ್ನ ಕೋಲೆ ||ಮು||
ಅವರೇನೆ ಮನಿದಾರಿ ಬಿಟ್ಟರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಹಟ್ಯಾದಾಕ ಅವರು ಹೋಗ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಹಟ್ಯಾದಾಕ ಅವರು ಹೋಗ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸಪ್ಪೀನಾ ಸೂಡು ಕಿತ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಸಪ್ಪೀನಾ ಸೂಡು ಕಿತ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸಪ್ಪೀನಾ ಸೂಡು ಕಿತ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಸಪ್ಪೀನಾ ಸೂಡು ಕಿತ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವನ ಕೂದ್ಲು ಬಂದವವ್ವಾ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವನ ಕೂದ್ಲು ಬಂದವವ್ವಾ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವನ ಕೂದ್ಲು ಬಂದವವ್ವಾ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವನ ಕೂದ್ಲು ಬಂದವವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸಪ್ಪೆ ಬಣವಿಯಲ್ಲಿ ದೆವ್ವ ನೋಡೆ ಕೋಲು ಕೋಲನ್ನ ಕೋಲೆ ||ಮು||
ಸಪ್ಪೆ ಬಣವಿಯಲ್ಲಿ ದೆವ್ವ ನೋಡೆ ಕೋಲು ಕೋಲನ್ನ ಕೋಲೆ ||ಹಿ||

ಓಡೋಡಿ ಅವರೇನೆ ಬರುತಾರೆ ಕೋಲು ಕೋಲನ್ನ ಕೋಲೆ ||ಮು||
ಓಡೋಡಿ ಅವರೇನೆ ಬರುತಾರೆ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮ ತಾಯಿ ಅವ್ವಣೆವ್ವ ಕುಂತೀನಿ ಬರ್ರೇ ಕೋಲು ಕೋಲನ್ನ ಕೋಲೆ ||ಮು||
ನಿಮ್ಮ ತಾಯಿ ಅವ್ವಣೆವ್ವ ಕುಂತೀನಿ ಬರ್ರೇ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮ ತಾಯಿ ಅವ್ವಣೆವ್ವ ಕುಂತೀನಿ ಬರ್ರೇ ಕೋಲು ಕೋಲನ್ನ ಕೋಲೆ ||ಮು||
ನಿಮ್ಮ ತಾಯಿ ಅವ್ವಣೆವ್ವ ಕುಂತೀನಿ ಬರ್ರೇ ಕೋಲು ಕೋಲನ್ನ ಕೋಲೆ ||ಹಿ||

ಸಪ್ಪೆಯನ್ನು ಸೂಡು ಕಟ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಸಪ್ಪೆಯನ್ನು ಸೂಡು ಕಟ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸಪ್ಪೆಯ ಹೊರೆಯ ಹೊತ್ತರವ್ವಾ ಕೋಲು ಕೋಲನ್ನ ಕೋಲೆ ||ಮು||
ಸಪ್ಪೆಯ ಹೊರೆಯ ಹೊತ್ತರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಹೊರೆಯ ಹೊತ್ತುಕೊಂಡೆ ಬರುತಾರೆ ಕೋಲು ಕೋಲನ್ನ ಕೋಲೆ ||ಮು||
ಹೊರೆಯ ಹೊತ್ತುಕೊಂಡೆ ಬರುತಾರೆ ಕೋಲು ಕೋಲನ್ನ ಕೋಲೆ ||ಹಿ||

ಹೊರೆಯ ಹೊತ್ತುಕೊಂಡೆ ಬರುತಾರೆ ಕೋಲು ಕೋಲನ್ನ ಕೋಲೆ ||ಮು||
ಹೊರೆಯ ಹೊತ್ತುಕೊಂಡೆ ಬರುತಾರೆ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||

ನಮ್ಮ ಅಣ್ಣೋರೆ ಬೈಯುತಾರೆ ಕೋಲು ಕೋಲನ್ನ ಕೋಲೆ ||ಮು||
ನಮ್ಮ ಅಣ್ಣೋರೆ ಬೈಯುತಾರೆ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮಿಂದೆ ನಾನು ಬರೋದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿಮ್ಮಿಂದೆ ನಾನು ಬರೋದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮಿಂದೆ ನಾನು ಬರೋದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿಮ್ಮಿಂದೆ ನಾನು ಬರೋದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಸಪ್ಪೆ ಮರೆಮಾಡಿ ಒಯ್ಯುತೀವೀ ಕೋಲು ಕೋಲನ್ನ ಕೋಲೆ ||ಮು||
ಸಪ್ಪೆ ಮರೆಮಾಡಿ ಒಯ್ಯುತೀವೀ ಕೋಲು ಕೋಲನ್ನ ಕೋಲೆ ||ಹಿ||

ಸಪ್ಪೆ ಮರೆಮಾಡಿ ಒಯ್ಯುತೀವೀ ಕೋಲು ಕೋಲನ್ನ ಕೋಲೆ ||ಮು||
ಸಪ್ಪೆ ಮರೆಮಾಡಿ ಒಯ್ಯುತೀವೀ ಕೋಲು ಕೋಲನ್ನ ಕೋಲೆ ||ಹಿ||

ನಡು ಮನ್ಯಾಕ ಹೋಗಿ ಬಿಡತೀವೀ ಕೋಲು ಕೋಲನ್ನ ಕೋಲೆ ||ಮು||
ನಡು ಮನ್ಯಾಕ ಹೋಗಿ ಬಿಡತೀವೀ ಕೋಲು ಕೋಲನ್ನ ಕೋಲೆ ||ಹಿ||

ನಡು ಮನ್ಯಾಕ ಹೋಗಿ ಬಿಡತೀವೀ ಕೋಲು ಕೋಲನ್ನ ಕೋಲೆ ||ಮು||
ನಡು ಮನ್ಯಾಕ ಹೋಗಿ ಬಿಡತೀವೀ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವನ ಕರಕಂಡೆ ಬಂದಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವನ ಕರಕಂಡೆ ಬಂದಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ನಡುಮನ್ಯಾಕ ಹೋಗಿ ಬಿಟ್ಟರವ್ವಾ ಕೋಲು ಕೋಲನ್ನ ಕೋಲೆ ||ಮು||
ನಡುಮನ್ಯಾಕ ಹೋಗಿ ಬಿಟ್ಟರವ್ವಾ ಕೋಲು ಕೋಲನ್ನ ಕೋಲೆ ||ಹಿ||