ಅಣ್ಣರೇನೆಂದೆ ನುಡಿದರವ್ವಾ ಕೋಲು ಕೋಲನ್ನ ಕೋಲೆ ||ಮು||
ಅಣ್ಣರೇನೆಂದೆ ನುಡಿದರವ್ವಾ ಕೋಲು ಕೋಲನ್ನ ಕೋಲೆ ||ಹಿ||

ನಮ್ಮ ತಂಗಿಯ ಮೈಯ ತೊಳೆಯಬೇಕೇ ಕೋಲು ಕೋಲನ್ನ ಕೋಲೆ ||ಮು||
ನಮ್ಮ ತಂಗಿಯ ಮೈಯ ತೊಳೆಯಬೇಕೇ ಕೋಲು ಕೋಲನ್ನ ಕೋಲೆ ||ಹಿ||

ಏಳುಪುಟ್ಟಿ ಹೂವು ತರಬೇಕೇ ಕೋಲು ಕೋಲನ್ನ ಕೋಲೆ ||ಮು||
ಏಳುಪುಟ್ಟಿ ಹೂವು ತರಬೇಕೇ ಕೋಲು ಕೋಲನ್ನ ಕೋಲೆ ||ಹಿ||

ಮಂಚಾದ ಮ್ಯಾಕೆ ಹರವಬೇಕೆ ಕೋಲು ಕೋಲನ್ನ ಕೋಲೆ ||ಮು||
ಮಂಚಾದ ಮ್ಯಾಕೆ ಹರವಬೇಕೆ ಕೋಲು ಕೋಲನ್ನ ಕೋಲೆ ||ಹಿ||

ದಿನಾ ಒಬ್ಬರು ತೂಗಬೇಕೆ ಕೋಲು ಕೋಲನ್ನ ಕೋಲೆ ||ಮು||
ದಿನಾ ಒಬ್ಬರು ತೂಗಬೇಕೆ ಕೋಲು ಕೋಲನ್ನ ಕೋಲೆ ||ಹಿ||

ಒಂದು ದಿನ ತೂಗ್ಯಾರೆ ಎರಡು ದಿನ ತೂಗ್ಯಾರ ಕೋಲು ಕೋಲನ್ನ ಕೋಲೆ ||ಮು||
ಒಂದು ದಿನ ತೂಗ್ಯಾರೆ ಎರಡು ದಿನ ತೂಗ್ಯಾರ ಕೋಲು ಕೋಲನ್ನ ಕೋಲೆ ||ಹಿ||

ಮೂರು ದಿನದಾಗ ಏನೊಂದು ನುಡಿದೆ ಕೋಲು ಕೋಲನ್ನ ಕೋಲೆ ||ಮು||
ಮೂರು ದಿನದಾಗ ಏನೊಂದು ನುಡಿದೆ ಕೋಲು ಕೋಲನ್ನ ಕೋಲೆ ||ಹಿ||

ಆರು ಬಟ್ಟಲ ಎಣ್ಣೆ ನೆತ್ತಿಯಾ ಕುಡಿದೈತೆ ಕೋಲು ಕೋಲನ್ನ ಕೋಲೆ ||ಮು||
ಆರು ಬಟ್ಟಲ ಎಣ್ಣೆ ನೆತ್ತಿಯಾ ಕುಡಿದೈತೆ ಕೋಲು ಕೋಲನ್ನ ಕೋಲೆ ||ಹಿ||

ಪುತ್ರನಾ ಹಡೆದು ಬಂದಳಲ್ಲ ಕೋಲು ಕೋಲನ್ನ ಕೋಲೆ ||ಮು||
ಪುತ್ರನಾ ಹಡೆದು ಬಂದಳಲ್ಲ ಕೋಲು ಕೋಲನ್ನ ಕೋಲೆ ||ಹಿ||

ಆರು ಬಟ್ಟಲ ಎಣ್ಣೆ ಆ ನೆತ್ತಿ ಕುಡಿದೈತೆ ಕೋಲು ಕೋಲನ್ನ ಕೋಲೆ ||ಮು||
ಆರು ಬಟ್ಟಲ ಎಣ್ಣೆ ಆ ನೆತ್ತಿ ಕುಡಿದೈತೆ ಕೋಲು ಕೋಲನ್ನ ಕೋಲೆ ||ಹಿ||

ಪುತ್ರನಾ ಹಡೆದು ಬಂದಳಲ್ಲ ಕೋಲು ಕೋಲನ್ನ ಕೋಲೆ ||ಮು||
ಪುತ್ರನಾ ಹಡೆದು ಬಂದಳಲ್ಲ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣ ಏನೊಂದೆ ನುಡಿದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ಏನೊಂದೆ ನುಡಿದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣ ಏನೊಂದೆ ನುಡಿದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ಏನೊಂದೆ ನುಡಿದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಇತ್ತಬಾರೋ ಪರದಾನಿ ಮಾತೊಂದು ಹೇಳ್ತೀನಿ ಕೋಲು ಕೋಲನ್ನ ಕೋಲೆ ||ಮು||
ಇತ್ತಬಾರೋ ಪರದಾನಿ ಮಾತೊಂದು ಹೇಳ್ತೀನಿ ಕೋಲು ಕೋಲನ್ನ ಕೋಲೆ ||ಹಿ||

ಪಟ್ಟಣಕ್ಕೆ ಡಂಗುರ ಸಾರಿಬಾರೋ ಕೋಲು ಕೋಲನ್ನ ಕೋಲೆ ||ಮು||
ಪಟ್ಟಣಕ್ಕೆ ಡಂಗುರ ಸಾರಿಬಾರೋ ಕೋಲು ಕೋಲನ್ನ ಕೋಲೆ ||ಹಿ||

ಪಟ್ಟಣಕ್ಕೆ ಡಂಗುರ ಸಾರಿಬಾರೋ ಕೋಲು ಕೋಲನ್ನ ಕೋಲೆ ||ಮು||
ಪಟ್ಟಣಕ್ಕೆ ಡಂಗುರ ಸಾರಿಬಾರೋ ಕೋಲು ಕೋಲನ್ನ ಕೋಲೆ ||ಹಿ||

ಕುಟ್ಟಕ್ಕೆ ಬಂದಾರ ಬೀಸಾಕ ಬಂದಾರ
ಕೂಸೀನಾs….. ಬಿಟ್ಟು ಹೋಗ್ಯಾರಲ್ಲೇ ಕೋಲು ಕೋಲನ್ನ ಕೋಲೆ ||ಮು||
ಕೂಸೀನಾs….. ಬಿಟ್ಟು ಹೋಗ್ಯಾರಲ್ಲೇ ಕೋಲು ಕೋಲನ್ನ ಕೋಲೆ ||ಹಿ||

ಕೂಸೀನ ಬಿಟ್ಟು ಹೋಗ್ಯಾರಲ್ಲೇ ಕೋಲು ಕೋಲನ್ನ ಕೋಲೆ ||ಮು||
ಕೂಸೀನ ಬಿಟ್ಟು ಹೋಗ್ಯಾರಲ್ಲೇ ಕೋಲು ಕೋಲನ್ನ ಕೋಲೆ ||ಹಿ||

ಬಡವರು ಬಗ್ಗರು ಬರಬೇಕೇ ಕೋಲು ಕೋಲನ್ನ ಕೋಲೆ ||ಮು||
ಬಡವರು ಬಗ್ಗರು ಬರಬೇಕೇ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣರ ಅರಮನಿಗೆ ಬಂದಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣರ ಅರಮನಿಗೆ ಬಂದಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕೂಸೀನ ಮಾರಿ ನೋಡ್ಯಾರವ್ವ ಕೋಲು ಕೋಲನ್ನ ಕೋಲೆ ||ಮು||
ಕೂಸೀನ ಮಾರಿ ನೋಡ್ಯಾರವ್ವ ಕೋಲು ಕೋಲನ್ನ ಕೋಲೆ ||ಹಿ||

ಕೂಸೀನ ಮಾರಿ ನೋಡ್ಯಾರವ್ವ ಕೋಲು ಕೋಲನ್ನ ಕೋಲೆ ||ಮು||
ಕೂಸೀನ ಮಾರಿ ನೋಡ್ಯಾರವ್ವ ಕೋಲು ಕೋಲನ್ನ ಕೋಲೆ ||ಹಿ||

ನಮ್ಮದಲ್ಲಪ್ಪ ಈ ಕೂಸೆ ಕೋಲು ಕೋಲನ್ನ ಕೋಲೆ ||ಮು||
ನಮ್ಮದಲ್ಲಪ್ಪ ಈ ಕೂಸೆ ಕೋಲು ಕೋಲನ್ನ ಕೋಲೆ ||ಹಿ||

ನಮ್ಮದಲ್ಲಪ್ಪ ಈ ಕೂಸೆ ಕೋಲು ಕೋಲನ್ನ ಕೋಲೆ ||ಮು||
ನಮ್ಮದಲ್ಲಪ್ಪ ಈ ಕೂಸೆ ಕೋಲು ಕೋಲನ್ನ ಕೋಲೆ ||ಹಿ||

ಹಿಂದಕ್ಕೆ ಅವರೇ ಹೋಗ್ಯಾರವ್ವ ಕೋಲು ಕೋಲನ್ನ ಕೋಲೆ ||ಮು||
ಹಿಂದಕ್ಕೆ ಅವರೇ ಹೋಗ್ಯಾರವ್ವ ಕೋಲು ಕೋಲನ್ನ ಕೋಲೆ ||ಹಿ||

ಹಿಂದಕ್ಕೆ ಅವರೇ ಹೋಗ್ಯಾರವ್ವ ಕೋಲು ಕೋಲನ್ನ ಕೋಲೆ ||ಮು||
ಹಿಂದಕ್ಕೆ ಅವರೇ ಹೋಗ್ಯಾರವ್ವ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||

ದ್ರೌಪತಿ ಮಗನ ಮಾಡಬೇಕೇ ಕೋಲು ಕೋಲನ್ನ ಕೋಲೆ ||ಮು||
ದ್ರೌಪತಿ ಮಗನ ಮಾಡಬೇಕೇ ಕೋಲು ಕೋಲನ್ನ ಕೋಲೆ ||ಹಿ||

ದ್ರೌಪತಿ ಮಗನ ಮಾಡಬೇಕೇ ಕೋಲು ಕೋಲನ್ನ ಕೋಲೆ ||ಮು||
ದ್ರೌಪತಿ ಮಗನ ಮಾಡಬೇಕೇ ಕೋಲು ಕೋಲನ್ನ ಕೋಲೆ ||ಹಿ||

ಮಕ್ಕಳಿಲ್ಲದಾಕೆ ದ್ರೌಪತಿ ಕೋಲು ಕೋಲನ್ನ ಕೋಲೆ ||ಮು||
ಮಕ್ಕಳಿಲ್ಲದಾಕೆ ದ್ರೌಪತಿ ಕೋಲು ಕೋಲನ್ನ ಕೋಲೆ ||ಹಿ||

ಮಕ್ಕಳಿಲ್ಲದಾಕೆ ದ್ರೌಪತಿ ಕೋಲು ಕೋಲನ್ನ ಕೋಲೆ ||ಮು||
ಮಕ್ಕಳಿಲ್ಲದಾಕೆ ದ್ರೌಪತಿ ಕೋಲು ಕೋಲನ್ನ ಕೋಲೆ ||ಹಿ||

ಇತ್ತಬಾರೋ ಪರದಾನಿ ಮಾತೊಂದು ಹೇಳ್ತೀನಿ ಕೋಲು ಕೋಲನ್ನ ಕೋಲೆ ||ಮು||
ಇತ್ತಬಾರೋ ಪರದಾನಿ ಮಾತೊಂದು ಹೇಳ್ತೀನಿ ಕೋಲು ಕೋಲನ್ನ ಕೋಲೆ ||ಹಿ||

ಸೂಲಗಿತ್ತಿ ಸಂಗವ್ವನ ಬರಹೇಳೇ ಕೋಲು ಕೋಲನ್ನ ಕೋಲೆ ||ಮು||
ಸೂಲಗಿತ್ತಿ ಸಂಗವ್ವನ ಬರಹೇಳೇ ಕೋಲು ಕೋಲನ್ನ ಕೋಲೆ ||ಹಿ||

ಸೂಲಗಿತ್ತಿ ಸಂಗವ್ವನ ಬರಹೇಳೇ ಕೋಲು ಕೋಲನ್ನ ಕೋಲೆ ||ಮು||
ಸೂಲಗಿತ್ತಿ ಸಂಗವ್ವನ ಬರಹೇಳೇ ಕೋಲು ಕೋಲನ್ನ ಕೋಲೆ ||ಹಿ||

ಬಟ್ಟಲದ ಕುದುರೆ ಹತ್ತಯಾನೆ ಪರದಾನಿ ಕೋಲು ಕೋಲನ್ನ ಕೋಲೆ ||ಮು||
ಬಟ್ಟಲದ ಕುದುರೆ ಹತ್ತಯಾನೆ ಪರದಾನಿ ಕೋಲು ಕೋಲನ್ನ ಕೋಲೆ ||ಹಿ||

ಸಂಗವ್ವನಾರಮನಿಗೆ ಹೋಗ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಸಂಗವ್ವನಾರಮನಿಗೆ ಹೋಗ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸಂಗವ್ವನಾರಮನಿಗೆ ಹೋಗ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಸಂಗವ್ವನಾರಮನಿಗೆ ಹೋಗ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಎಂದು ಬರದ ಪರದಾನಿ ಬಂದೀಯ ಬಾಳದಿನಕ ಕೋಲು ಕೋಲನ್ನ ಕೋಲೆ ||ಮು||
ಎಂದು ಬರದ ಪರದಾನಿ ಬಂದೀಯ ಬಾಳದಿನಕ ಕೋಲು ಕೋಲನ್ನ ಕೋಲೆ ||ಹಿ||

ಕುಂದರಗಳ್ಳಾ ಮನಿಗಳ್ಳಾ ಕೋಲು ಕೋಲನ್ನ ಕೋಲೆ ||ಮು||
ಕುಂದರಗಳ್ಳಾ ಮನಿಗಳ್ಳಾ ಕೋಲು ಕೋಲನ್ನ ಕೋಲೆ ||ಹಿ||

ಕುಂದರಕಾ ಬಂದಿಲ್ಲ ನಿಂದರಕಾ ಬಂದಿಲ್ಲ
ಧರ್ಮಣ್ಣರ ಮನಿಯಾಗೆ ಬಾಣಸ್ತಾನ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣರ ಮನಿಯಾಗೆ ಬಾಣಸ್ತಾನ ಕೋಲು ಕೋಲನ್ನ ಕೋಲೆ ||ಹಿ||

ಬಡವರು ಅಲ್ಲಪ್ಪ ಬಗ್ಗರು ಅಲ್ಲಪ್ಪಾ
ಬರೆಗಾಲಲ್ಲಿ ಬರಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ಬರೆಗಾಲಲ್ಲಿ ಬರಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನ ಪಲ್ಲಕ್ಕಿ ಕಳುವಬೇಕೆ ಕೋಲು ಕೋಲನ್ನ ಕೋಲೆ ||ಮು||
ಮುತ್ತಿನ ಪಲ್ಲಕ್ಕಿ ಕಳುವಬೇಕೆ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನ ಪಲ್ಲಕ್ಕಿ ಕಳುವಬೇಕೆ ಕೋಲು ಕೋಲನ್ನ ಕೋಲೆ ||ಮು||
ಮುತ್ತಿನ ಪಲ್ಲಕ್ಕಿ ಕಳುವಬೇಕೆ ಕೋಲು ಕೋಲನ್ನ ಕೋಲೆ ||ಹಿ||

ನಾಲಾರು ಗೌಳೇರನಾ ಕಳುವಬೇಕೇ ಕೋಲು ಕೋಲನ್ನ ಕೋಲೆ ||ಮು||
ನಾಲಾರು ಗೌಳೇರನಾ ಕಳುವಬೇಕೇ ಕೋಲು ಕೋಲನ್ನ ಕೋಲೆ ||ಹಿ||

ನಾಲಾರು ಗೌಳೇರನಾ ಕಳುವಬೇಕೇ ಕೋಲು ಕೋಲನ್ನ ಕೋಲೆ ||ಮು||
ನಾಲಾರು ಗೌಳೇರನಾ ಕಳುವಬೇಕೇ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣಗಾ ಬಂದು ಹೇಳುತಾರೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣಗಾ ಬಂದು ಹೇಳುತಾರೆ ಕೋಲು ಕೋಲನ್ನ ಕೋಲೆ ||ಹಿ||

ಬಡವರು ಅಲ್ಲಪ್ಪ ಬಗ್ಗರು ಅಲ್ಲಪ್ಪಾ
ಬರೆಗಾಲಲ್ಲಿ ಬರಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ಬರೆಗಾಲಲ್ಲಿ ಬರಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಬರೆಗಾಲಲ್ಲಿ ಬರಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ಬರೆಗಾಲಲ್ಲಿ ಬರಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನ ಪಲ್ಲಕ್ಕಿ ಕಳುವಬೇಕೆ ಕೋಲು ಕೋಲನ್ನ ಕೋಲೆ ||ಮು||
ಮುತ್ತಿನ ಪಲ್ಲಕ್ಕಿ ಕಳುವಬೇಕೆ ಕೋಲು ಕೋಲನ್ನ ಕೋಲೆ ||ಹಿ||

ನಾಲಾರು ಗೌಳೇರನಾ ಕಳುವಬೇಕೇ ಕೋಲು ಕೋಲನ್ನ ಕೋಲೆ ||ಮು||
ನಾಲಾರು ಗೌಳೇರನಾ ಕಳುವಬೇಕೇ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನ ಪಲ್ಲಕ್ಕಿ ಹರಗಿಟ್ಟೋ ಕೋಲು ಕೋಲನ್ನ ಕೋಲೆ ||ಮು||
ಮುತ್ತಿನ ಪಲ್ಲಕ್ಕಿ ಹರಗಿಟ್ಟೋ ಕೋಲು ಕೋಲನ್ನ ಕೋಲೆ ||ಹಿ||

ನಾಲಾರು ಗೌಳೇರನಾ ಕಳುವ್ಯಾನವ್ವ ಕೋಲು ಕೋಲನ್ನ ಕೋಲೆ ||ಮು||
ನಾಲಾರು ಗೌಳೇರನಾ ಕಳುವ್ಯಾನವ್ವ ಕೋಲು ಕೋಲನ್ನ ಕೋಲೆ ||ಹಿ||

ಸಂಗವ್ವನ ಅರಮನಿಗೆ ಹೋಗ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಸಂಗವ್ವನ ಅರಮನಿಗೆ ಹೋಗ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸಂಗವ್ವನ ಅರಮನಿಗೆ ಹೋಗ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಸಂಗವ್ವನ ಅರಮನಿಗೆ ಹೋಗ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಅಂಗಳದಾಗೆ ಹೋಗಿ ಇಳಿವ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಅಂಗಳದಾಗೆ ಹೋಗಿ ಇಳಿವ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸಂಗವ್ವ ಏನೊಂದೆ ನುಡಿದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಸಂಗವ್ವ ಏನೊಂದೆ ನುಡಿದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಹಲ್ಲಿಗೆ ಹಲ್ಲುಪುಡಿ ತೀಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಹಲ್ಲಿಗೆ ಹಲ್ಲುಪುಡಿ ತೀಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಜಳಕ ಸಂಗವ್ವ ಮಾಡುತಾಳೆ ಕೋಲು ಕೋಲನ್ನ ಕೋಲೆ ||ಮು||
ಜಳಕ ಸಂಗವ್ವ ಮಾಡುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಗಂಜಿಸೀರೆನ್ನುಟ್ಟು ಗಂಧದ ಬೊಟ್ಟನಿಟ್ಟು
ಗಂಧಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಮು||
ಗಂಧಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಹಿ||

ಗಂಧಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಮು||
ಗಂಧಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಹಿ||

ಚಂದಿಲವೆಂದೆ ಬಿಡುತಾಳೆ ಕೋಲು ಕೋಲನ್ನ ಕೋಲೆ ||ಮು||
ಚಂದಿಲವೆಂದೆ ಬಿಡುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಸಾದೀನ ಸೀರೆನ್ನುಟ್ಟು ಸಾದೀನ ಬೊಟ್ಟ ನಿಟ್ಟು
ಸಾದೀನ ಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಮು||
ಸಾದೀನ ಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನಿ ಸೀರೆನ್ನುಟ್ಟು ಮುತ್ತಿನ ಬೊಟ್ಟಾನಿಟ್ಟು
ಜೊತೆಗನ್ನಡಿ ಮುಖನೋಡಿ ಕೋಲು ಕೋಲನ್ನ ಕೋಲೆ ||ಮು||
ಜೊತ್ತಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಹಿ||

ಜೊತ್ತೇನೆ ಗನ್ನಡಿ ಮುಖ ನೋಡಿ ಸಂಗವ್ವ
ಒಪ್ಪಿದ್ದಿನೆಂದು ಉಡುತಾಳೆ  ಕೋಲು ಕೋಲನ್ನ ಕೋಲೆ ||ಮು||
ಒಪ್ಪಿದ್ದಿನೆಂದು ಉಡುತಾಳೆ  ಕೋಲು ಕೋಲನ್ನ ಕೋಲೆ ||ಹಿ||

ಕಣ್ಣಿಗೆ ಕಾಡಿಗೆ ಹಚ್ಚುತಾಳೆ ಕೋಲು ಕೋಲನ್ನ ಕೋಲೆ ||ಮು||
ಕಣ್ಣಿಗೆ ಕಾಡಿಗೆ ಹಚ್ಚುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಕಣ್ಣಿಗೆ ಕಾಡಿಗೆ ಹಚ್ಚುತಾಳೆ ಕೋಲು ಕೋಲನ್ನ ಕೋಲೆ ||ಮು||
ಕಣ್ಣಿಗೆ ಕಾಡಿಗೆ ಹಚ್ಚುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಗಂಧದ ಇಳೇವೆ ಮೇಲುದಾಳೆ ಕೋಲು ಕೋಲನ್ನ ಕೋಲೆ ||ಮು||
ಗಂಧದ ಇಳೇವೆ ಮೇಲುದಾಳೆ ಕೋಲು ಕೋಲನ್ನ ಕೋಲೆ ||ಹಿ||

ತನ್ನ ಮನಿಬೀಗ ಜಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ತನ್ನ ಮನಿಬೀಗ ಜಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನ ಪಲ್ಲಕ್ಯಾಗೆ  ಕುಂತಳಲ್ಲ ಕೋಲು ಕೋಲನ್ನ ಕೋಲೆ ||ಮು||
ಮುತ್ತಿನ ಪಲ್ಲಕ್ಯಾಗೆ  ಕುಂತಳಲ್ಲ ಕೋಲು ಕೋಲನ್ನ ಕೋಲೆ ||ಹಿ||

ನಾಲಾರು ಗೌಳೇರು ಹೊತ್ತರವ್ವ  ಕೋಲು ಕೋಲನ್ನ ಕೋಲೆ ||ಮು||
ನಾಲಾರು ಗೌಳೇರು ಹೊತ್ತರವ್ವ  ಕೋಲು ಕೋಲನ್ನ ಕೋಲೆ ||ಹಿ||

ನಾಲಾರು ಗೌಳೇರು ಹೊತ್ತರವ್ವ ಕೋಲು ಕೋಲನ್ನ ಕೋಲೆ ||ಮು||
ನಾಲಾರು ಗೌಳೇರು ಹೊತ್ತರವ್ವ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣರ ಮನಿಗೆ  ಬಂದರವ್ವಾ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣರ ಮನಿಗೆ  ಬಂದರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣರ ಮನಿಗೆ  ಬಂದರವ್ವಾ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣರ ಮನಿಗೆ  ಬಂದರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನ ಪಲ್ಲಕ್ಕಿ ಇಳಿವ್ಯಾರವ್ವ ಕೋಲು ಕೋಲನ್ನ ಕೋಲೆ ||ಮು||
ಮುತ್ತಿನ ಪಲ್ಲಕ್ಕಿ ಇಳಿವ್ಯಾರವ್ವ ಕೋಲು ಕೋಲನ್ನ ಕೋಲೆ ||ಹಿ||

ಸಂಗವ್ವ ಮನಿಯಾಕೆ ಹೋಗ್ಯಾಳವ್ವ ಕೋಲು ಕೋಲನ್ನ ಕೋಲೆ ||ಮು||
ಸಂಗವ್ವ ಮನಿಯಾಕೆ ಹೋಗ್ಯಾಳವ್ವ ಕೋಲು ಕೋಲನ್ನ ಕೋಲೆ ||ಹಿ||

ಯಾಕ ಕರಸೀಯಾ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಯಾಕ ಕರಸೀಯಾ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||

ಯಾಕ ಕರಸೀಯಾ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಯಾಕ ಕರಸೀಯಾ ಧರ್ಮಣ್ಣ  ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣ ಏನೊಂದೆ ನುಡಿದಾನವ್ವ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ಏನೊಂದೆ ನುಡಿದಾನವ್ವ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣ ಏನೊಂದೆ ನುಡಿದಾನವ್ವ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ಏನೊಂದೆ ನುಡಿದಾನವ್ವ ಕೋಲು ಕೋಲನ್ನ ಕೋಲೆ ||ಹಿ||

ನಾನು ಹೇಳಿದಂಗೆ ಕೇಳಬೇಕೇ ಕೋಲು ಕೋಲನ್ನ ಕೋಲೆ ||ಮು||
ನಾನು ಹೇಳಿದಂಗೆ ಕೇಳಬೇಕೇ ಕೋಲು ಕೋಲನ್ನ ಕೋಲೆ ||ಹಿ||

ಕೇಳಿದ್ದು ನಾನಾ ಕೊಡತೀನಿ ಕೋಲು ಕೋಲನ್ನ ಕೋಲೆ ||ಮು||
ಕೇಳಿದ್ದು ನಾನಾ ಕೊಡತೀನಿ  ಕೋಲು ಕೋಲನ್ನ ಕೋಲೆ ||ಹಿ||

ಅದು ಏನು ಸುದ್ದಿ ಹೇಳಬೇಕೆ ಕೋಲು ಕೋಲನ್ನ ಕೋಲೆ ||ಮು||
ಅದು ಏನು ಸುದ್ದಿ ಹೇಳಬೇಕೆ ಕೋಲು ಕೋಲನ್ನ ಕೋಲೆ ||ಹಿ||

ಅದು ಏನು ಸುದ್ದಿ ಹೇಳಬೇಕೆ ಕೋಲು ಕೋಲನ್ನ ಕೋಲೆ ||ಮು||
ಅದು ಏನು ಸುದ್ದಿ ಹೇಳಬೇಕೆ ಕೋಲು ಕೋಲನ್ನ ಕೋಲೆ ||ಹಿ||

ಮಕ್ಕಳಿಲ್ಲದಾಕಿ ದ್ರೌಪತಿ  ಕೋಲು ಕೋಲನ್ನ ಕೋಲೆ ||ಮು||
ಮಕ್ಕಳಿಲ್ಲದಾಕಿ ದ್ರೌಪತಿ  ಕೋಲು ಕೋಲನ್ನ ಕೋಲೆ ||ಹಿ||

ಮಕ್ಕಳಿಲ್ಲದಾಕಿ ದ್ರೌಪತಿ ಕೋಲು ಕೋಲನ್ನ ಕೋಲೆ ||ಮು||
ಮಕ್ಕಳಿಲ್ಲದಾಕಿ ದ್ರೌಪತಿ ಕೋಲು ಕೋಲನ್ನ ಕೋಲೆ ||ಹಿ||

ದ್ರೌಪತಿ ಮಗನಾ ಮಾಡಬೇಕೆ ಕೋಲು ಕೋಲನ್ನ ಕೋಲೆ ||ಮು||
ದ್ರೌಪತಿ ಮಗನಾ ಮಾಡಬೇಕೆ ಕೋಲು ಕೋಲನ್ನ ಕೋಲೆ ||ಹಿ||

ಮಾಡ್ತೀನಿ ಅಂದಾಳೆ ಸಂಗವ್ವ ಕೋಲು ಕೋಲನ್ನ ಕೋಲೆ ||ಮು||
ಮಾಡ್ತೀನಿ ಅಂದಾಳೆ ಸಂಗವ್ವ  ಕೋಲು ಕೋಲನ್ನ ಕೋಲೆ ||ಹಿ||

ಮಾಡ್ತೀನಿ ಅಂದಾಳೆ ಸಂಗವ್ವ  ಕೋಲು ಕೋಲನ್ನ ಕೋಲೆ ||ಮು||
ಮಾಡ್ತೀನಿ ಅಂದಾಳೆ ಸಂಗವ್ವ  ಕೋಲು ಕೋಲನ್ನ ಕೋಲೆ ||ಹಿ||

ಕಂಚಿನ ಬಟ್ಟಲದಾಗ ಮಿಂಚೆಣ್ಣೆ ತಿಳಿದುಪ್ಪ
ನೆತ್ತಿ ದ್ರೌಪತಿಗೆ ತಲಿಗಚ್ಚಿ ಕೋಲು ಕೋಲನ್ನ ಕೋಲೆ ||ಮು||
ನೆತ್ತಿ ದ್ರೌಪತಿಗೆ ತಲಿಗಚ್ಚಿ ಕೋಲು ಕೋಲನ್ನ ಕೋಲೆ ||ಹಿ||

ಬೆಳ್ಳಿ ಬಟ್ಟಲದಾಗ ಎಳ್ಳೇಣ್ಣೆ ತಿಳಿದುಪ್ಪ
ನೆತ್ತಿ ದ್ರೌಪತಿಗೆ ತಲಿಗಚ್ಚಿ ಕೋಲು ಕೋಲನ್ನ ಕೋಲೆ ||ಮು||
ನೆತ್ತಿ ದ್ರೌಪತಿಗೆ ತಲಿಗಚ್ಚಿ ಕೋಲು ಕೋಲನ್ನ ಕೋಲೆ ||ಹಿ||

ಹಂಡೆವದ ನೀರು ಆರುತಾ ತೋರುತಾ
ಯಾಲಕ್ಕಿ ನಾಕಿ ಸುಳಿಮಳ್ಳೆ ಕೋಲು ಕೋಲನ್ನ ಕೋಲೆ ||ಮು||
ಯಾಲಕ್ಕಿ ನಾಕಿ ಸುಳಿಮಳ್ಳೆ ಕೋಲು ಕೋಲನ್ನ ಕೋಲೆ ||ಹಿ||

ದಾರಿ ಬಚ್ಚಲಕಾ ಇಡವ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ದಾರಿ ಬಚ್ಚಲಕಾ ಇಡವ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ದಾರಿ ಬಚ್ಚಲಕಾ ಇಡವ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ದಾರಿ ಬಚ್ಚಲಕಾ ಇಡವ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಉಪ್ಪರಿಕ್ಯಾಗಳ ನೀರು ಉಕ್ಕುತಾ ತೋರುತಾ
ಕರ್ಪೂರನಾಕಿ ಸುಳಿಮಳ್ಳೆ ಕೋಲು ಕೋಲನ್ನ ಕೋಲೆ ||ಮು||
ಕರ್ಪೂರನಾಕಿ ಸುಳಿಮಳ್ಳೆ ಕೋಲು ಕೋಲನ್ನ ಕೋಲೆ ||ಹಿ||

ಕರ್ಪೂರನಾಕಿ ಸುಳಿಮಳ್ಳೆ ಕೋಲು ಕೋಲನ್ನ ಕೋಲೆ ||ಮು||
ಕರ್ಪೂರನಾಕಿ ಸುಳಿಮಳ್ಳೆ ಕೋಲು ಕೋಲನ್ನ ಕೋಲೆ ||ಹಿ||

ಗಚ್ಚಿನ ಬಚ್ಚಲಕೆ ಇಡಿಸ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಗಚ್ಚಿನ ಬಚ್ಚಲಕೆ ಇಡಿಸ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಗಚ್ಚಿನ ಬಚ್ಚಲಕೆ ಇಡಿಸ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಗಚ್ಚಿನ ಬಚ್ಚಲಕೆ ಇಡಿಸ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಬೇವು ಅರೆದಾಳೆ ಸಂಗವ್ವ ಕೋಲು ಕೋಲನ್ನ ಕೋಲೆ ||ಮು||
ಬೇವು ಅರೆದಾಳೆ ಸಂಗವ್ವ ಕೋಲು ಕೋಲನ್ನ ಕೋಲೆ ||ಹಿ||

ಬೇವು ಅರೆದಾಳೆ ಸಂಗವ್ವ ಕೋಲು ಕೋಲನ್ನ ಕೋಲೆ ||ಮು||
ಬೇವು ಅರೆದಾಳೆ ಸಂಗವ್ವ ಕೋಲು ಕೋಲನ್ನ ಕೋಲೆ ||ಹಿ||

ಕುಡುಗೋಲು ತಪ್ಲ ಕೈ ಒಳಗೆ ಕೋಲು ಕೋಲನ್ನ ಕೋಲೆ ||ಮು||
ಕುಡುಗೋಲು ತಪ್ಲ ಕೈ ಒಳಗೆ ಕೋಲು ಕೋಲನ್ನ ಕೋಲೆ ||ಹಿ||

ಬಗ್ಗಿ ಬಾರವ್ವ ದ್ರೌಪತಿ ಕೋಲು ಕೋಲನ್ನ ಕೋಲೆ ||ಮು||
ಬಗ್ಗಿ ಬಾರವ್ವ ದ್ರೌಪತಿ ಕೋಲು ಕೋಲನ್ನ ಕೋಲೆ ||ಹಿ||

ಬಗ್ಗಿ ಬಾರವ್ವ ದ್ರೌಪತಿ  ಕೋಲು ಕೋಲನ್ನ ಕೋಲೆ ||ಮು||
ಬಗ್ಗಿ ಬಾರವ್ವ ದ್ರೌಪತಿ  ಕೋಲು ಕೋಲನ್ನ ಕೋಲೆ ||ಹಿ||

ಏನು ಕಾಣದಾಕಿ ದ್ರೌಪತಿ ಕೋಲು ಕೋಲನ್ನ ಕೋಲೆ ||ಮು||
ಏನು ಕಾಣದಾಕಿ ದ್ರೌಪತಿ ಕೋಲು ಕೋಲನ್ನ ಕೋಲೆ ||ಹಿ||

ಬಚ್ಚಲದಾಕೆ ಕರಕಂದೋಗೀ ಕೋಲು ಕೋಲನ್ನ ಕೋಲೆ ||ಮು||
ಬಚ್ಚಲದಾಕೆ ಕರಕಂದೋಗೀ ಕೋಲು ಕೋಲನ್ನ ಕೋಲೆ ||ಹಿ||

ನೀರು ಎರುದಾಳೆ ಸಂಗವ್ವ ಕೋಲು ಕೋಲನ್ನ ಕೋಲೆ ||ಮು||
ನೀರು ಎರುದಾಳೆ ಸಂಗವ್ವ ಕೋಲು ಕೋಲನ್ನ ಕೋಲೆ ||ಹಿ||

ನಾಣ್ಯದ ಸೀರೆ ಉಡಿಸ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ನಾಣ್ಯದ ಸೀರೆ ಉಡಿಸ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ನಾಣ್ಯದ ಸೀರೆ ಉಡಿಸ್ಯಾಳೆ  ಕೋಲು ಕೋಲನ್ನ ಕೋಲೆ ||ಮು||
ನಾಣ್ಯದ ಸೀರೆ ಉಡಿಸ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನ ಕುಬುಸ ತೊಡಿಸ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಮುತ್ತಿನ ಕುಬುಸ ತೊಡಿಸ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನ ಕುಬುಸ ತೊಡಿಸ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಮುತ್ತಿನ ಕುಬುಸ ತೊಡಿಸ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ತಲೆಗೆ ಪಟ್ಟೀಯ ಬಿಗಿದಾಳೆ ಕೋಲು ಕೋಲನ್ನ ಕೋಲೆ ||ಮು||
ತಲೆಗೆ ಪಟ್ಟೀಯ ಬಿಗಿದಾಳೆ ಕೋಲು ಕೋಲನ್ನ ಕೋಲೆ ||ಹಿ||

ತಲೆಗೆ ಪಟ್ಟೀಯ ಬಿಗಿದಾಳೆ ಕೋಲು ಕೋಲನ್ನ ಕೋಲೆ ||ಮು||
ತಲೆಗೆ ಪಟ್ಟೀಯ ಬಿಗಿದಾಳೆ ಕೋಲು ಕೋಲನ್ನ ಕೋಲೆ ||ಹಿ||

ನಡುವಿಗೆ ನಡುಕಟ್ಟ ಬಿಗಿದಾಳೆ ಕೋಲು ಕೋಲನ್ನ ಕೋಲೆ ||ಮು||
ನಡುವಿಗೆ ನಡುಕಟ್ಟ ಬಿಗಿದಾಳೆ ಕೋಲು ಕೋಲನ್ನ ಕೋಲೆ ||ಹಿ||