ಕಿವ್ಯಾಗ ಹತ್ತಿ ಬೆಳ್ಳೊಳ್ಳಿ ಇಟ್ಟಾಳೆ ಕೋಲು ಕೋಲನ್ನ ಕೋಲೆ ||ಮು||
ಕಿವ್ಯಾಗ ಹತ್ತಿ ಬೆಳ್ಳೊಳ್ಳಿ ಇಟ್ಟಾಳೆ ಕೋಲು ಕೋಲನ್ನ ಕೋಲೆ ||ಹಿ||
ಸೂರ್ಯದೇವಗೆ ಕೈಯ ಮುಗಿಸ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಸೂರ್ಯದೇವಗೆ ಕೈಯ ಮುಗಿಸ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||
ಬಗ್ಗಿ ಬಾರವ್ವ ದ್ರೌಪತಿ ಕೋಲು ಕೋಲನ್ನ ಕೋಲೆ ||ಮು||
ಬಗ್ಗಿ ಬಾರವ್ವ ದ್ರೌಪತಿ ಕೋಲು ಕೋಲನ್ನ ಕೋಲೆ ||ಹಿ||
ಮಂಚದ ಮ್ಯಾಲೆ ಮಲಗಿಸ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಮಂಚದ ಮ್ಯಾಲೆ ಮಲಗಿಸ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಬೆಂಕಿ ಹಾಕ್ಯಾಳೆ ಸಂಗವ್ವ ಕೋಲು ಕೋಲನ್ನ ಕೋಲೆ ||ಮು||
ಬೆಂಕಿ ಹಾಕ್ಯಾಳೆ ಸಂಗವ್ವ ಕೋಲು ಕೋಲನ್ನ ಕೋಲೆ ||ಹಿ||
ಮಂಚಾದ ಅಡಿಯಲ್ಲಿ ಇಟ್ಟಾಳೆ ಕೋಲು ಕೋಲನ್ನ ಕೋಲೆ ||ಮು||
ಮಂಚಾದ ಅಡಿಯಲ್ಲಿ ಇಟ್ಟಾಳೆ ಕೋಲು ಕೋಲನ್ನ ಕೋಲೆ ||ಹಿ||

ಕೂಸೀನಾ ಮೈಯ ತೊಳೆದಾಳೆ ಕೋಲು ಕೋಲನ್ನ ಕೋಲೆ ||ಮು||
ಕೂಸೀನಾ ಮೈಯ ತೊಳೆದಾಳೆ ಕೋಲು ಕೋಲನ್ನ ಕೋಲೆ ||ಹಿ||
ಮಂಚದ ಮ್ಯಾಲೆ ಹಾಕ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಮಂಚದ ಮ್ಯಾಲೆ ಹಾಕ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಜಳಕ ಸಂಗವ್ವ ಮಾಡ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಜಳಕ ಸಂಗವ್ವ ಮಾಡ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಹೂವಿನ ಸೀರೆ ಉಟ್ಟಾಳೆ ಕೋಲು ಕೋಲನ್ನ ಕೋಲೆ ||ಮು||
ಹೂವಿನ ಸೀರೆ ಉಟ್ಟಾಳೆ ಕೋಲು ಕೋಲನ್ನ ಕೋಲೆ ||ಹಿ||

ಮಗ್ಗಿಯ ಕುಬುಸ ತೊಟ್ಟಾಳೆ ಕೋಲು ಕೋಲನ್ನ ಕೋಲೆ ||ಮು||
ಮಗ್ಗಿಯ ಕುಬುಸ ತೊಟ್ಟಾಳೆ ಕೋಲು ಕೋಲನ್ನ ಕೋಲೆ ||ಹಿ||

ಮುತ್ತುರತ್ನವಾ ಉಡಿಯಕ್ಕಿ ಕೋಲು ಕೋಲನ್ನ ಕೋಲೆ ||ಮು||
ಮುತ್ತುರತ್ನವಾ ಉಡಿಯಕ್ಕಿ ಕೋಲು ಕೋಲನ್ನ ಕೋಲೆ ||ಹಿ||

ಗಂಧದ ಇಳೇವು ಕೊಟ್ಟಾರೆ ಕೋಲು ಕೋಲನ್ನ ಕೋಲೆ ||ಮು||
ಗಂಧದ ಇಳೇವು ಕೊಟ್ಟಾರೆ ಕೋಲು ಕೋಲನ್ನ ಕೋಲೆ ||ಹಿ||
ಹೋಗಿ ಬರುತೀನಿ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಹೋಗಿ ಬರುತೀನಿ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||

ಹೋಗಿ ಬಾರಮ್ಮ ಸಂಗವ್ವ ಕೋಲು ಕೋಲನ್ನ ಕೋಲೆ ||ಮು||
ಹೋಗಿ ಬಾರಮ್ಮ ಸಂಗವ್ವ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣರ ಅರಮನಿ ಬಿಟ್ಟಾಳೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣರ ಅರಮನಿ ಬಿಟ್ಟಾಳೆ ಕೋಲು ಕೋಲನ್ನ ಕೋಲೆ ||ಹಿ||
ಊರಾಳ ಜನರು ಏನು ನುಡಿದೆ ಕೋಲು ಕೋಲನ್ನ ಕೋಲೆ ||ಮು||
ಊರಾಳ ಜನರು ಏನು ನುಡಿದೆ ಕೋಲು ಕೋಲನ್ನ ಕೋಲೆ ||ಹಿ||
ಯಾರೆ ಹಡದಾರೆ ಸಂಗವ್ವ ಕೋಲು ಕೋಲನ್ನ ಕೋಲೆ ||ಮು||
ಯಾರೆ ಹಡದಾರೆ ಸಂಗವ್ವ ಕೋಲು ಕೋಲನ್ನ ಕೋಲೆ ||ಹಿ||

ಧರ್ಮರ ಮನಿಯಾಗೆ ದ್ರೌಪತಿ ಕೋಲು ಕೋಲನ್ನ ಕೋಲೆ ||ಮು||
ಧರ್ಮರ ಮನಿಯಾಗೆ ದ್ರೌಪತಿ ಕೋಲು ಕೋಲನ್ನ ಕೋಲೆ ||ಹಿ||

ಗಣಮಗನ ಮನಿಯಾಗೆ ಮಲಗ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಗಣಮಗನ ಮನಿಯಾಗೆ ಮಲಗ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಹೊಟ್ಟೆ ಕಾಣಲಿಲ್ಲ ದ್ರೌಪತಿಗೆ ಕೋಲು ಕೋಲನ್ನ ಕೋಲೆ ||ಮು||
ಹೊಟ್ಟೆ ಕಾಣಲಿಲ್ಲ ದ್ರೌಪತಿಗೆ ಕೋಲು ಕೋಲನ್ನ ಕೋಲೆ ||ಹಿ||
ಮಂದಿಗೇಳಿಕೆಂತಾ ಹೋಗ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಮಂದಿಗೇಳಿಕೆಂತಾ ಹೋಗ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||
ತನ್ನ ಅರಮನಿಗೆ ಹೋಗ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ತನ್ನ ಅರಮನಿಗೆ ಹೋಗ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಒಂಬತ್ತು ದಿನದಾಗೆ ತೊಟ್ಲಾವೆ ಕೋಲು ಕೋಲನ್ನ ಕೋಲೆ ||ಮು||
ಒಂಬತ್ತು ದಿನದಾಗೆ ತೊಟ್ಲಾವೆ ಕೋಲು ಕೋಲನ್ನ ಕೋಲೆ ||ಹಿ||
ಇತ್ತ ಬಾರೋ ಪರದಾನಿ ಮಾತೊಂದು ಹೇಳೇನು
ಬಡೀಗೇರ ಅರಮನಿಗೆ ಹೋಗಬೇಕೆ ಕೋಲು ಕೋಲನ್ನ ಕೋಲೆ ||ಮು||
ಬಡೀಗೇರ ಅರಮನಿಗೆ ಹೋಗಬೇಕೆ ಕೋಲು ಕೋಲನ್ನ ಕೋಲೆ ||ಹಿ||

ಎತ್ಲುತ್ತ ಬಡಿಗೇರಣ್ಣ ತುಪ್ಪಬಾನ ಉಂಡು
ಉಕ್ಕಿನ ಉಳಿಬಾಸಿ ಹೆಗಲಿಗೆ ಕೋಲು ಕೋಲನ್ನ ಕೋಲೆ ||ಮು||
ಉಕ್ಕಿನ ಉಳಿಬಾಸಿ ಹೆಗಲಿಗೆ ಕೋಲು ಕೋಲನ್ನ ಕೋಲೆ ||ಹಿ||

ಸುತ್ತಾವ ಏಳುವನವಾ ತಿರುಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಸುತ್ತಾವ ಏಳುವನವಾ ತಿರುಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಉತ್ತತ್ತಿ ಮರವಾ ಇಳಿವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಉತ್ತತ್ತಿ ಮರವಾ ಇಳಿವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಎತ್ಲುತ್ತ ಬಡಿಗೇರಣ್ಣ ಹಾಲುಬಾನ ಉಂಡು
ಹಾಯಿಉಳ್ಳ ಉಳಿಬಾಸಿ ಹೆಗಲಮ್ಯಾಲೆ ಕೋಲು ಕೋಲನ್ನ ಕೋಲೆ ||ಮು||
ಹಾಯಿಉಳ್ಳ ಉಳಿಬಾಸಿ ಹೆಗಲಮ್ಯಾಲೆ ಕೋಲು ಕೋಲನ್ನ ಕೋಲೆ ||ಹಿ||

ಸಾಲು ಏಳುವನವಾ ತಿರುಗ್ಯಾನವ್ವ ಕೋಲು ಕೋಲನ್ನ ಕೋಲೆ ||ಮು||
ಸಾಲು ಏಳುವನವಾ ತಿರುಗ್ಯಾನವ್ವ ಕೋಲು ಕೋಲನ್ನ ಕೋಲೆ ||ಹಿ||

ಯಾಲಕ್ಕಿ ಮರವಾ ಇಳಿವ್ಯಾನವ್ವ ಕೋಲು ಕೋಲನ್ನ ಕೋಲೆ ||ಮು||
ಯಾಲಕ್ಕಿ ಮರವಾ ಇಳಿವ್ಯಾನವ್ವ ಕೋಲು ಕೋಲನ್ನ ಕೋಲೆ ||ಹಿ||

ಕಂದಗಾ ತೊಟ್ಟಿಲು ಮಾಡತಾನ ಕೋಲು ಕೋಲನ್ನ ಕೋಲೆ ||ಮು||
ಕಂದಗಾ ತೊಟ್ಟಿಲು ಮಾಡತಾನ ಕೋಲು ಕೋಲನ್ನ ಕೋಲೆ ||ಹಿ||
ಒಂದೇನೆ ಮೂಲಿಗೆ ಒಂದೇನೆ ಬಸವಣ್ಣ
ಒಂದಕ್ಕೆ ಒಂದೆ ಶಿವಗಂಟೆ ಕೋಲು ಕೋಲನ್ನ ಕೋಲೆ ||ಮು||
ಒಂದಕ್ಕೆ ಒಂದೆ ಶಿವಗಂಟೆ ಕೋಲು ಕೋಲನ್ನ ಕೋಲೆ ||ಹಿ||
ಒಂದಕ್ಕೆ ಒಂದೆ ಶಿವಗಂಟೆ ಪದಕ
ನಂದಿ ಈಶ್ವರನಾ ನಿಲ್ಲಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ನಂದಿ ಈಶ್ವರನಾ ನಿಲ್ಲಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಎರಡನೆ ಮೂಲಿಗೆ ಎರಡೇನೆ ಬಸವಣ್ಣ
ಎರಡಾಕ ಎರಡೆ ಶಿವಗಂಟೆ ಕೋಲು ಕೋಲನ್ನ ಕೋಲೆ ||ಮು||
ಎರಡಾಕ ಎರಡೆ ಶಿವಗಂಟೆ ಕೋಲು ಕೋಲನ್ನ ಕೋಲೆ ||ಹಿ||
ಎರಡಾಕ ಎರಡೆ ಶಿವಗಂಟೆ ಪದಕ
ಮುಕ್ಕಣ್ಣ ಈಶ್ವರನಾ ನಿಲ್ಲಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಮುಕ್ಕಣ್ಣ ಈಶ್ವರನಾ ನಿಲ್ಲಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಮೂರನೇ ಮೂಲಿಗೆ ಮೂರಾನೆ ಬಸವಣ್ಣ
ಮೂರಕ್ಕೆ ಮೂರೆ ಶಿವಗಂಟೆ ಕೋಲು ಕೋಲನ್ನ ಕೋಲೆ ||ಮು||
ಮೂರಕ್ಕೆ ಮೂರೆ ಶಿವಗಂಟೆ ಕೋಲು ಕೋಲನ್ನ ಕೋಲೆ ||ಹಿ||

ಮೂರಕ್ಕೆ ಮೂರೆ ಶಿವಗಂಟೆ ಪದಕ
ಮುಕ್ಕಣ್ಣ ಈಶ್ವರನಾ ನಿಲ್ಲಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಮುಕ್ಕಣ್ಣ ಈಶ್ವರನಾ ನಿಲ್ಲಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ನಾಲ್ಕನೆ ಮೂಲಿಗೆ ನಾಕೇನೆ ಬಸವಣ್ಣ
ನಾಲ್ಕಾಕ್ಕೆ ನಾಲ್ಕೆ ಶಿವಗಂಟೆ ಕೋಲು ಕೋಲನ್ನ ಕೋಲೆ ||ಮು||
ನಾಲ್ಕಾಕ್ಕೆ ನಾಲ್ಕೆ ಶಿವಗಂಟೆ ಕೋಲು ಕೋಲನ್ನ ಕೋಲೆ ||ಹಿ||

ನಾಲ್ಕಾಕ್ಕೆ ನಾಲ್ಕೆ ಶಿವಗಂಟೆ ಪದಕ
ಸಾಕ್ಷತ್ ಶಿವನಾ ನಿಲ್ಲಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಸಾಕ್ಷತ್ ಶಿವನಾ ನಿಲ್ಲಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಐದೇನೆ ಮೂಲಿಗೆ ಐದೇನೆ ಶಿವಾಗಂಟೆ
ಐದಕ್ಕೆ ಐದೆ ಶಿವಾಗಂಟೆ ಕೋಲು ಕೋಲನ್ನ ಕೋಲೆ ||ಮು||
ಐದಕ್ಕೆ ಐದೆ ಶಿವಾಗಂಟೆ ಕೋಲು ಕೋಲನ್ನ ಕೋಲೆ ||ಹಿ||

ಕಳಸದ ಚಂಬ ನಿಲ್ಲಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಕಳಸದ ಚಂಬ ನಿಲ್ಲಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಕಳಸದ ಚಂಬ ನಡವಿಟ್ಟೆ ಕೋಲು ಕೋಲನ್ನ ಕೋಲೆ ||ಮು||
ಕಳಸದ ಚಂಬ ನಡವಿಟ್ಟೆ ಕೋಲು ಕೋಲನ್ನ ಕೋಲೆ ||ಹಿ||
ಕಂದನಾs. . . . . ತೊಟ್ಟಿಲ ಮುಗಿದಾವೆ ಕೋಲು ಕೋಲನ್ನ ಕೋಲೆ ||ಮು||
ಕಂದನಾs. . . . . ತೊಟ್ಟಿಲ ಮುಗಿದಾವೆ ಕೋಲು ಕೋಲನ್ನ ಕೋಲೆ ||ಹಿ||

ಹೆಗಲಮ್ಯಾಲೆ ಬಡಿಗೇರ ಹೊತ್ತಾನೆ ಕೋಲು ಕೋಲನ್ನ ಕೋಲೆ ||ಮು||
ಹೆಗಲಮ್ಯಾಲೆ ಬಡಿಗೇರ ಹೊತ್ತಾನೆ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣರ ಅರಮನಿಗೆ ಬಂದಾನೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣರ ಅರಮನಿಗೆ ಬಂದಾನೆ ಕೋಲು ಕೋಲನ್ನ ಕೋಲೆ ||ಹಿ||
ಧರ್ಮಣ್ಣರರಾಮನಿಗೆ ಬಂದಾನೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣರರಾಮನಿಗೆ ಬಂದಾನೆ ಕೋಲು ಕೋಲನ್ನ ಕೋಲೆ ||ಹಿ||
ಪಡಸಾಲಿಗೆ ತೊಟ್ಲಾ ಇಳಿವ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಪಡಸಾಲಿಗೆ ತೊಟ್ಲಾ ಇಳಿವ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಹಾಲು ಅನ್ನವಾ ಉಣನೀಡೆ ಕೋಲು ಕೋಲನ್ನ ಕೋಲೆ ||ಮು||
ಹಾಲು ಅನ್ನವಾ ಉಣನೀಡೆ ಕೋಲು ಕೋಲನ್ನ ಕೋಲೆ ||ಹಿ||

ಮುತ್ತು ರತ್ನವಾ ಉಡಿಯಕ್ಕಿ ಕೋಲು ಕೋಲನ್ನ ಕೋಲೆ ||ಮು||
ಮುತ್ತು ರತ್ನವಾ ಉಡಿಯಕ್ಕಿ ಕೋಲು ಕೋಲನ್ನ ಕೋಲೆ ||ಹಿ||

ಗಂಧದ ಇಳೇವೆ ಕೊಟ್ಟಾರೆ ಕೋಲು ಕೋಲನ್ನ ಕೋಲೆ ||ಮು||
ಗಂಧದ ಇಳೇವೆ ಕೊಟ್ಟಾರೆ ಕೋಲು ಕೋಲನ್ನ ಕೋಲೆ ||ಹಿ||
ಹೋಗಿ ಬರುತೀನಿ ಧರ್ಮಣ್ಣಾ ಕೋಲು ಕೋಲನ್ನ ಕೋಲೆ ||ಮು||
ಹೋಗಿ ಬರುತೀನಿ ಧರ್ಮಣ್ಣಾ ಕೋಲು ಕೋಲನ್ನ ಕೋಲೆ ||ಹಿ||

ಅಪ್ಪಣೆ ಕೊಟ್ಟ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಅಪ್ಪಣೆ ಕೊಟ್ಟ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||

ತನ್ನ ಪಟ್ಟಣಕ್ಕೆ ನಡೆದಾನೆ ಕೋಲು ಕೋಲನ್ನ ಕೋಲೆ ||ಮು||
ತನ್ನ ಪಟ್ಟಣಕ್ಕೆ ನಡೆದಾನೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಏನೊಂದಾ ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಏನೊಂದಾ ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||

ಸಣ್ಣ ಸಣ್ಣದೊಂಟು ಆರಿಸಿಕೊಂಡು ಬರ್ರೇ ಕೋಲು ಕೋಲನ್ನ ಕೋಲೆ ||ಮು||
ಸಣ್ಣ ಸಣ್ಣದೊಂಟು ಆರಿಸಿಕೊಂಡು ಬರ್ರೇ ಕೋಲು ಕೋಲನ್ನ ಕೋಲೆ ||ಹಿ||

ಬೆಂಡೀನಾ ಸಾಮಾನಾ ಮಾಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಬೆಂಡೀನಾ ಸಾಮಾನಾ ಮಾಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ದೊಡ್ಡೇನೆ ಅರಿವ್ಯಾನಕ ತುಂಬ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ದೊಡ್ಡೇನೆ ಅರಿವ್ಯಾನಕ ತುಂಬ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣಾ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣಾ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||

ರೆಡ್ಡೇರ ಅರಮನಿಗೆ ಹೋಗಿ ಬರ್ರೇ ಕೋಲು ಕೋಲನ್ನ ಕೋಲೆ ||ಮು||
ರೆಡ್ಡೇರ ಅರಮನಿಗೆ ಹೋಗಿ ಬರ್ರೇ ಕೋಲು ಕೋಲನ್ನ ಕೋಲೆ ||ಹಿ||

ರೆಡ್ಡೇರರ ಸೊಸ್ತಿರರನ ಕರೆದು ಬರ್ರೇ ಕೋಲು ಕೋಲನ್ನ ಕೋಲೆ ||ಮು||
ರೆಡ್ಡೇರರ ಸೊಸ್ತಿರರನ ಕರೆದು ಬರ್ರೇ ಕೋಲು ಕೋಲನ್ನ ಕೋಲೆ ||ಹಿ||
ಊರಿಗೆ ಡಂಗುರ ಸಾರಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಊರಿಗೆ ಡಂಗುರ ಸಾರಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಧರ್ಮರ ಮನಿಯಾಗೆ ತೊಟ್ಲ ನೋಡೆ ಕೋಲು ಕೋಲನ್ನ ಕೋಲೆ ||ಮು||
ಧರ್ಮರ ಮನಿಯಾಗೆ ತೊಟ್ಲ ನೋಡೆ ಕೋಲು ಕೋಲನ್ನ ಕೋಲೆ ||ಹಿ||
ಬಡವರು ಬಗ್ಗರು ಬರಬೇಕೆ ಕೋಲು ಕೋಲನ್ನ ಕೋಲೆ ||ಮು||
ಬಡವರು ಬಗ್ಗರು ಬರಬೇಕೆ ನೋಡೆ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||

ಅಣ್ಣಾನೆಂಡರಿಗೆ ಹೇಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಅಣ್ಣಾನೆಂಡರಿಗೆ ಹೇಳುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಹೇಗೆ ಹೋಗುತೀರೋ ಹಾಗೆ ಬರ್ರೇ ಕೋಲು ಕೋಲನ್ನ ಕೋಲೆ ||ಮು||
ಹೇಗೆ ಹೋಗುತೀರೋ ಹಾಗೆ ಬರ್ರೇ ಕೋಲು ಕೋಲನ್ನ ಕೋಲೆ ||ಹಿ||

ಯಾವುದು ನೀವು ಅನ್ನಬ್ಯಾಡ್ರೆ ಕೋಲು ಕೋಲನ್ನ ಕೋಲೆ ||ಮು||
ಯಾವುದು ನೀವು ಅನ್ನಬ್ಯಾಡ್ರೆ ಕೋಲು ಕೋಲನ್ನ ಕೋಲೆ ||ಹಿ||

ದೊಡ್ಡ ಅರಿವ್ಯಾನ ಹೊತ್ತರವ್ವಾ ಕೋಲು ಕೋಲನ್ನ ಕೋಲೆ ||ಮು||
ದೊಡ್ಡ ಅರಿವ್ಯಾನ ಹೊತ್ತರವ್ವಾ ಕೋಲು ಕೋಲನ್ನ ಕೋಲೆ ||ಹಿ||
ದ್ರೌಪತಿ ಮೈಯ ತೊಳೆದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ದ್ರೌಪತಿ ಮೈಯ ತೊಳೆದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕೂಸೀನಾ ಮೈಯ ತೊಳೆದಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಕೂಸೀನಾ ಮೈಯ ತೊಳೆದಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕೂಸೀಗೆ ಅಂಗಿ ತೊಡಿಸ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಕೂಸೀಗೆ ಅಂಗಿ ತೊಡಿಸ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
Leave A Comment