ದ್ರೌಪತಿಗೆ ನಾಣ್ಯದ ಸೀರೆ ಉಡಿಸ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ದ್ರೌಪತಿಗೆ ನಾಣ್ಯದ ಸೀರೆ ಉಡಿಸ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ನಡುಮನಿಗೆ ತೊಟ್ಟಿಲ ಕಟ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ನಡುಮನಿಗೆ ತೊಟ್ಟಿಲ ಕಟ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ರೆಡ್ಡೇರ ಸೊಸ್ತಿರ ಬಂದರವ್ವಾ ಕೋಲು ಕೋಲನ್ನ ಕೋಲೆ ||ಮು||
ರೆಡ್ಡೇರ ಸೊಸ್ತಿರ ಬಂದರವ್ವಾ ಕೋಲು ಕೋಲನ್ನ ಕೋಲೆ ||ಹಿ||
ತೊಟ್ಟಿಲದಾಗ ಹಾಸಿಗಿ ಮಾಡ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ತೊಟ್ಟಿಲದಾಗ ಹಾಸಿಗಿ ಮಾಡ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಹೊಸ ಸೀರೆ ಹೊಸ ಕುಬುಸ ಉಟ್ಟರವ್ವಾ ಕೋಲು ಕೋಲನ್ನ ಕೋಲೆ ||ಮು||
ಹೊಸ ಸೀರೆ ಹೊಸ ಕುಬುಸ ಉಟ್ಟರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಹೊಸ ಸೀರೆ ಹೊಸ ಕುಬುಸ ಉಟ್ಟರವ್ವಾ ಕೋಲು ಕೋಲನ್ನ ಕೋಲೆ ||ಮು||
ಹೊಸ ಸೀರೆ ಹೊಸ ಕುಬುಸ ಉಟ್ಟರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕೈಯಾಗ ಕಂಕಣ ಕಟ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಕೈಯಾಗ ಕಂಕಣ ಕಟ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕೈಯಾಗ ಕಂಕಣ ಕಟ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಕೈಯಾಗ ಕಂಕಣ ಕಟ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ತೊಟ್ಟಿಲ ಪೂಜಿ ಮಾಡ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ತೊಟ್ಟಿಲ ಪೂಜಿ ಮಾಡ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕೂಸೀನಾ ತೊಟ್ಲಾಕ ಹಾಕ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಕೂಸೀನಾ ತೊಟ್ಲಾಕ ಹಾಕ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಜೋ ಜೋ ಅಂದಾಳೆ ಗೋಪಿ ಜೋ ಜೋ
ಆ ನಾಡ ಬಿಳಿಜ್ವಾಳ, ಈ ನಾಡ ಬಿಳಿಜ್ವಾಳ
ದಾನ ಧರ್ಮರ ಬಿಳಿಜ್ವಾಳ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ದಾನ ಧರ್ಮರ ಬಿಳಿಜ್ವಾಳ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ದಾನ ಧರ್ಮರ ಬಿಳಿಜ್ವಾಳ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ದಾನ ಧರ್ಮರ ಬಿಳಿಜ್ವಾಳ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಜ್ವಾಳ ಗುಗ್ಗರಿಗೆ ಹಾಕ್ಯಾರವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಜ್ವಾಳ ಗುಗ್ಗರಿಗೆ ಹಾಕ್ಯಾರವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಪಟ್ಟಣಶಾಲ್ಯಾಗೆ ಸುರಿವ್ಯಾರೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಪಟ್ಟಣಶಾಲ್ಯಾಗೆ ಸುರಿವ್ಯಾರೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಆ ನಾಡ ಬಿಳ್ವಾಳ ಈ ನಾಡ ಬಿಳಿಜ್ವಾಳ
ಸತ್ಯಧರ್ಮರ ಬಿಳಿಜ್ವಾಳ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಸತ್ಯಧರ್ಮರ ಬಿಳಿಜ್ವಾಳ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಅಕ್ಕ ಗುಗ್ಗರಿ ಹಾಕ್ಯಾಳಲ್ಲಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಅಕ್ಕ ಗುಗ್ಗರಿ ಹಾಕ್ಯಾಳಲ್ಲಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಪಟ್ಟಣಶಾಲ್ಯಾಗೆ ಸುರಿವ್ಯಾರೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಪಟ್ಟಣಶಾಲ್ಯಾಗೆ ಸುರಿವ್ಯಾರೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಅವರು ಐದು ಮಂದಿಗೆ ಉಡಿಯಾ ತುಂಬಿ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಅವರು ಐದು ಮಂದಿಗೆ ಉಡಿಯಾ ತುಂಬಿ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಅವರು ಕರಿಸಿಪ್ಪಿನಾ ಕಾಯಿ ಒಡೆದಾರೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಅವರು ಕರಿಸಿಪ್ಪಿನಾ ಕಾಯಿ ಒಡೆದಾರೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಉದ್ದಿನ ಕಡ್ಡಿ ಹಚ್ಯಾರವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಉದ್ದಿನ ಕಡ್ಡಿ ಹಚ್ಯಾರವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ನಾಲಾರು ತೊಟ್ಲಾತೂಗಲು ನಿಂತರವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ನಾಲಾರು ತೊಟ್ಲಾತೂಗಲು ನಿಂತರವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಅವ್ವಣೆವ್ವ ಏನೊಂದೆ ನುಡಿದಾಳವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಅವ್ವಣೆವ್ವ ಏನೊಂದೆ ನುಡಿದಾಳವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಸತ್ಯನಮ್ಮ ಧರ್ಮರ ಸತ್ಯುಳ್ಳರಾದರೆ,
ಬಂಗಾರ ಸಾಮಾನ ಜಡಿಯಬಾರದೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಬಂಗಾರ ಸಾಮಾನ ಜಡಿಯಬಾರದೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಕೂಸೀನಾ ಮೈ ಮ್ಯಾಲೆ ಜಡಿದಾರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಕೂಸೀನಾ ಮೈ ಮ್ಯಾಲೆ ಜಡಿದಾರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಆ ನಾಡ ಸಿರಿಗಂಧ ಈ ನಾಡ ಸಿರಿಗಂಧ
ಸತ್ಯಧರ್ಮರ ಸಿರಿಗಂಧ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಸತ್ಯಧರ್ಮರ ಸಿರಿಗಂಧ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ತನುವಾದ ಅಡಿಗೆ ಮಾಡ್ಯಾರವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ತನುವಾದ ಅಡಿಗೆ ಮಾಡ್ಯಾರವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಆ ನಾಡ ಸಿರಿಗಂಧ ಈ ನಾಡ ಸಿರಿಗಂಧ
ದಾನ ಧರ್ಮರ ಸಿರಿಗಂಧ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ದಾನ ಧರ್ಮರ ಸಿರಿಗಂಧ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ವಾಲೀಯಾ ಕಿವಿಯಾಕಿ ಒಳಗೇನು ಮಾಡುತಿ
ಬಾಲನಾ ಹೆಸರ ಏನೆಂದು ಇಡುತಿ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಬಾಲನಾ ಹೆಸರ ಏನೆಂದು ಇಡುತಿ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಧರ್ಮಣ್ಣ ಬಾಲನ ಹೆಸರು ಏನೆಂದು ಇಡುತಿ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಧರ್ಮಣ್ಣ ಬಾಲನ ಹೆಸರು ಏನೆಂದು ಇಡುತಿ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಕಪ್ಪಿನ ಕಿವಿಯಾಕಿ ಮತ್ತೇನು ಮಾಡುತಿ
ಪುತ್ರನಾ ಹೆಸರು ಏನೆಂದು ಇಡುತಿ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಪುತ್ರನಾ ಹೆಸರು ಏನೆಂದು ಇಡುತಿ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಪುತ್ರನಾ ಹೆಸರು ಏನೆಂದು ಇಡುತಿ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಪುತ್ರನಾ ಹೆಸರು ಏನೆಂದು ಇಡುತಿ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಕೊಂತೆವ್ವನ ಕೇಳಿ ಹೆಸರಿಡರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಕೊಂತೆವ್ವನ ಕೇಳಿ ಹೆಸರಿಡರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಕೊಂತೆವ್ವನ ಕೇಳಿ ಹೆಸರಿಡರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಕೊಂತೆವ್ವನ ಕೇಳಿ ಹೆಸರಿಡರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಕೊಂತೆವ್ವ ಕೂಸೀನ ಹೆಸರು ಏನಿಡಬೇಕೇ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಕೊಂತೆವ್ವ ಕೂಸೀನ ಹೆಸರು ಏನಿಡಬೇಕೇ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಹಾದ್ಯಾಗ ಹುಟ್ಟಿದೋನು ಬೀದ್ಯಾಗ ಬೆಳೆದೋನು
ಬೊಬ್ಬಲಿ ಎಂದು ಕರೆಯಿರವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಬೊಬ್ಬಲಿ ಎಂದು ಕರೆಯಿರವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
‘ಬೊಬ್ಬಲಿ’ ಎಂದು ಕರೆಯಿರವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
‘ಬೊಬ್ಬಲಿ’ ಎಂದು ಕರೆಯಿರವ್ವಾ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಅವರು ಬೊಬ್ಬಲಿ ಎಂದು ಕರೆದರೆ ಜೋ ಜೋ….. ಅಂದಾಳೆ ಗೋಪಿ ಜೋ ಜೋ ||ಮು||
ಅವರು ಬೊಬ್ಬಲಿ ಎಂದು ಕರೆದರೆ ಜೋ ಜೋ…..ಅಂದಾಳೆ ಗೋಪಿ ಜೋ ಜೋ ||ಹಿ||
ಅವರು ತೊಟ್ಲನ ಕೈಬಿಟ್ಟು ನಿಂತಾರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಅವರು ತೊಟ್ಲನ ಕೈಬಿಟ್ಟು ನಿಂತಾರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಕೂಸೀನಾ ಮಾರಿ ನೋಡ್ಯಾರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಕೂಸೀನಾ ಮಾರಿ ನೋಡ್ಯಾರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ರೆಡ್ಡೇರಾ ಸೊಸ್ತಿರ ಏನ ನುಡಿದೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ರೆಡ್ಡೇರಾ ಸೊಸ್ತಿರ ಏನ ನುಡಿದೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಕಣ್ಣು ಕೊಂತೆವ್ವನಂಗಾ ಬೆನ್ನು ಭೀಮನಂಗೆ
ಮುಖ ನೋಡಿದರೆ ಅವ್ವಣೆವ್ವನಂಗೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಮುಖ ನೋಡಿದರೆ ಅವ್ವಣೆವ್ವನಂಗೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಮುಖ ನೋಡಿದರೆ ಅವ್ವಣೆವ್ವನಂಗೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಮುಖ ನೋಡಿದರೆ ಅವ್ವಣೆವ್ವನಂಗೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಧರ್ಮಣ್ಣಗೆ ಸಿಟ್ಟು ಬಂದಾನವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಧರ್ಮಣ್ಣಗೆ ಸಿಟ್ಟು ಬಂದಾನವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಅವರು ಹೊಸ ಸೀರೆ ಕುಬುಸ ಕಸಕೊಂಡೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಅವರು ಹೊಸ ಸೀರೆ ಕುಬುಸ ಕಸಕೊಂಡೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಉಡಿಯಾಳ ಉಡಿಯಕ್ಕಿ ಕಸಕೊಂಡೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಉಡಿಯಾಳ ಉಡಿಯಕ್ಕಿ ಕಸಕೊಂಡೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಕೈಯಾಗಳ ಕಂಕಣ ಬಿಚ್ಚಿಕೊಂಡೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಕೈಯಾಗಳ ಕಂಕಣ ಬಿಚ್ಚಿಕೊಂಡೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಅವರು ಅತಗಂತ ಕರಕಂತ ಹೋಗ್ಯಾರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಅವರು ಅತಗಂತ ಕರಕಂತ ಹೋಗ್ಯಾರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಅವ್ವಣೆವ್ವನ ಮುಂದೆ ಹೇಳ್ಯಾರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಅವ್ವಣೆವ್ವನ ಮುಂದೆ ಹೇಳ್ಯಾರವ್ವ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಸಮ್ಮನೆ ಹೋಗಿ ಬರಬೇಕಿತ್ತೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಸಮ್ಮನೆ ಹೋಗಿ ಬರಬೇಕಿತ್ತೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ಮನ್ಯಾಗ ಹೇಳಿ ಕಳವಿದ್ದೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ಮನ್ಯಾಗ ಹೇಳಿ ಕಳವಿದ್ದೆ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ನಿಮ್ಮ ಗಂಡರ ಹೇಸರೇಳಿರಮ್ಮ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಮು||
ನಿಮ್ಮ ಗಂಡರ ಹೇಸರೇಳಿರಮ್ಮ ಜೋ ಜೋ ಅಂದಾಳೆ ಗೋಪಿ ಜೋ ಜೋ ||ಹಿ||
ದರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ದರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||
ದರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ದರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||
ಒಂದೆ ದಿನ ಅಂಬೋದೆ ಒಂದು ತಿಂಗಳಾಗಿ
ಎರಡೆ ದಿನ ಅಂಬೋದೆ ಎರಡೇ ತಿಂಗಳಾ ಕೋಲು ಕೋಲನ್ನ ಕೋಲೆ ||ಮು||
ಎರಡೆ ದಿನ ಅಂಬೋದು ಎರಡೇ ತಿಂಗಳಾ ಕೋಲು ಕೋಲನ್ನ ಕೋಲೆ ||ಮು||
ಎರಡೆ ದಿನ ಅಂಬೋದು ಎರಡೇ ತಿಂಗಳಾ ಕೋಲು ಕೋಲನ್ನ ಕೋಲೆ ||ಹಿ||
ಮೂರು ದಿನ ಅಂಬೋದು ಮೂರು ತಿಂಗಳಾ ಕೋಲು ಕೋಲನ್ನ ಕೋಲೆ ||ಮು||
ಮೂರು ದಿನ ಅಂಬೋದು ಮೂರು ತಿಂಗಳಾ ಕೋಲು ಕೋಲನ್ನ ಕೋಲೆ ||ಹಿ||
ನಾಕು ದಿನ ಅಂಬೋದು ನಾಕು ತಿಂಗಳಾ ಕೋಲು ಕೋಲನ್ನ ಕೋಲೆ ||ಮು||
ನಾಕು ದಿನ ಅಂಬೋದು ನಾಕು ತಿಂಗಳಾ ಕೋಲು ಕೋಲನ್ನ ಕೋಲೆ ||ಹಿ||
ಒಂಬತ್ತು ವರುಷಾದ ಬೊಬ್ಬಲಿ ಕೋಲು ಕೋಲನ್ನ ಕೋಲೆ ||ಮು||
ಒಂಬತ್ತು ವರುಷಾದ ಬೊಬ್ಬಲಿ ಕೋಲು ಕೋಲನ್ನ ಕೋಲೆ ||ಹಿ||
ಊರೋಟು ಹೆಜ್ಜೆ ಮಾಡತಾನೆ ಕೋಲು ಕೋಲನ್ನ ಕೋಲೆ ||ಮು||
ಊರೋಟು ಹೆಜ್ಜೆ ಮಾಡತಾನೆ ಕೋಲು ಕೋಲನ್ನ ಕೋಲೆ ||ಹಿ||
ತಪ್ಪು ಹೆಜ್ಜೆ ಬೊಬ್ಬಲಿ ಇಡತಾನೆ ಕೋಲು ಕೋಲನ್ನ ಕೋಲೆ ||ಮು||
ತಪ್ಪು ಹೆಜ್ಜೆ ಬೊಬ್ಬಲಿ ಇಡತಾನೆ ಕೋಲು ಕೋಲನ್ನ ಕೋಲೆ ||ಹಿ||
ತಪ್ಪು ಹೆಜ್ಜೆ ಬೊಬ್ಬಲಿ ಇಡತಾನೆ ಕೋಲು ಕೋಲನ್ನ ಕೋಲೆ ||ಮು||
ತಪ್ಪು ಹೆಜ್ಜೆ ಬೊಬ್ಬಲಿ ಇಡತಾನೆ ಕೋಲು ಕೋಲನ್ನ ಕೋಲೆ ||ಹಿ||
ತಾಯಿಗೆ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ತಾಯಿಗೆ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||
ಬಿಲ್ಲು ಕೊಡವ್ವ ಹಡದವ್ವ ಕೋಲು ಕೋಲನ್ನ ಕೋಲೆ ||ಮು||
ಬಿಲ್ಲು ಕೊಡವ್ವ ಹಡದವ್ವ ಕೋಲು ಕೋಲನ್ನ ಕೋಲೆ ||ಹಿ||
ಬ್ಯಾಟ್ಯಾಡಿs….. ನಾನು ಬರತೀನಿ ಕೋಲು ಕೋಲನ್ನ ಕೋಲೆ ||ಮು||
ಬ್ಯಾಟ್ಯಾಡಿs….. ನಾನು ಬರತೀನಿ ಕೋಲು ಕೋಲನ್ನ ಕೋಲೆ ||ಹಿ||
ಬಿಲ್ಲು ಕೊಟ್ಟಾಳೆ ದ್ರೌಪತಿ ಕೋಲು ಕೋಲನ್ನ ಕೋಲೆ ||ಮು||
ಬಿಲ್ಲು ಕೊಟ್ಟಾಳೆ ದ್ರೌಪತಿ ಕೋಲು ಕೋಲನ್ನ ಕೋಲೆ ||ಹಿ||
ಕಳ್ಳಿಸಾಲ್ಯಾಕ ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಕಳ್ಳಿಸಾಲ್ಯಾಕ ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ದೊನ್ನಿಯಾಕಾಟ ಹೊಡೆದಾನೆ ಕೋಲು ಕೋಲನ್ನ ಕೋಲೆ ||ಮು||
ದೊನ್ನಿಯಾಕಾಟ ಹೊಡೆದಾನೆ ಕೋಲು ಕೋಲನ್ನ ಕೋಲೆ ||ಹಿ||
ಆಡಿ ಬಂದೀನಿ ಹಡದವ್ವ ಕೋಲು ಕೋಲನ್ನ ಕೋಲೆ ||ಮು||
ಆಡಿ ಬಂದೀನಿ ಹಡದವ್ವ ಕೋಲು ಕೋಲನ್ನ ಕೋಲೆ ||ಹಿ||
ಧರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||
ಧರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||
ಶಾಲಿಗೆ ನಾವೇ ಕಳಿಸಬೇಕೇ ಕೋಲು ಕೋಲನ್ನ ಕೋಲೆ ||ಮು||
ಶಾಲಿಗೆ ನಾವೇ ಕಳಿಸಬೇಕೇ ಕೋಲು ಕೋಲನ್ನ ಕೋಲೆ ||ಹಿ||
ಶಾಲಿಗೆ ನಾವೇ ಕಳಿಸಬೇಕೇ ಕೋಲು ಕೋಲನ್ನ ಕೋಲೆ ||ಮು||
ಶಾಲಿಗೆ ನಾವೇ ಕಳಿಸಬೇಕೇ ಕೋಲು ಕೋಲನ್ನ ಕೋಲೆ ||ಹಿ||
ಶಾಲಿಗೆ ಧರ್ಮಣ್ಣ ಕಳಿವ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಶಾಲಿಗೆ ಧರ್ಮಣ್ಣ ಕಳಿವ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಒಂದು ಬರೆ ಅಂದ್ರೆ ಎರಡು ಬರೆದ ಕೋಲು ಕೋಲನ್ನ ಕೋಲೆ ||ಮು||
ಒಂದು ಬರೆ ಅಂದ್ರೆ ಎರಡು ಬರೆದ ಕೋಲು ಕೋಲನ್ನ ಕೋಲೆ ||ಹಿ||
ಶಾಲಿ ಅಯ್ಯಗೆ ಕಲಿಸ್ತಾನೆ ಕೋಲು ಕೋಲನ್ನ ಕೋಲೆ ||ಮು||
ಶಾಲಿ ಅಯ್ಯಗೆ ಕಲಿಸ್ತಾನೆ ಕೋಲು ಕೋಲನ್ನ ಕೋಲೆ ||ಹಿ||
ಯಾರ ಮಗನಪ್ಪ ಮೊಮ್ಮಗನೆ ಕೋಲು ಕೋಲನ್ನ ಕೋಲೆ ||ಮು||
ಯಾರ ಮಗನಪ್ಪ ಮೊಮ್ಮಗನೆ ಕೋಲು ಕೋಲನ್ನ ಕೋಲೆ ||ಹಿ||
ಧರ್ಮರ ಮಗನೆ ನಾನೇನಾ ಕೋಲು ಕೋಲನ್ನ ಕೋಲೆ ||ಮು||
ಧರ್ಮರ ಮಗನೆ ನಾನೇನಾ ಕೋಲು ಕೋಲನ್ನ ಕೋಲೆ ||ಹಿ||
ನಮ್ಮಿಗೆ ಓದು ಕಲಿಸ್ತೀಯಾ ಕೋಲು ಕೋಲನ್ನ ಕೋಲೆ ||ಮು||
ನಮ್ಮಿಗೆ ಓದು ಕಲಿಸ್ತೀಯಾ ಕೋಲು ಕೋಲನ್ನ ಕೋಲೆ ||ಹಿ||
ಶಾಲೀಗೆ ನೀನೆ ಬರಬ್ಯಾಡ ಕೋಲು ಕೋಲನ್ನ ಕೋಲೆ ||ಮು||
ಶಾಲೀಗೆ ನೀನೆ ಬರಬ್ಯಾಡ ಕೋಲು ಕೋಲನ್ನ ಕೋಲೆ ||ಹಿ||
ತನ್ನ ಅರಮನಿಗೆ ಬಂದಾನೆ ಕೋಲು ಕೋಲನ್ನ ಕೋಲೆ ||ಮು||
ತನ್ನ ಅರಮನಿಗೆ ಬಂದಾನೆ ಕೋಲು ಕೋಲನ್ನ ಕೋಲೆ ||ಹಿ||
ಜಳಕ ಮಾಡ್ಯಾನೆ ಬೊಬ್ಬಲಿ ಕೋಲು ಕೋಲನ್ನ ಕೋಲೆ ||ಮು||
ಜಳಕ ಮಾಡ್ಯಾನೆ ಬೊಬ್ಬಲಿ ಕೋಲು ಕೋಲನ್ನ ಕೋಲೆ ||ಹಿ||
ಊಟ ಮಾಡ್ಯಾನೆ ಬೊಬ್ಬಲಿ ಕೋಲು ಕೋಲನ್ನ ಕೋಲೆ ||ಮು||
ಊಟ ಮಾಡ್ಯಾನೆ ಬೊಬ್ಬಲಿ ಕೋಲು ಕೋಲನ್ನ ಕೋಲೆ ||ಹಿ||
ತಾಯಿಗೆ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ತಾಯಿಗೆ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||
ಸರ್ಪ ಬಾಣವಾ ಕೊಡಬೇಕೆ ಕೋಲು ಕೋಲನ್ನ ಕೋಲೆ ||ಮು||
ಸರ್ಪ ಬಾಣವಾ ಕೊಡಬೇಕೆ ಕೋಲು ಕೋಲನ್ನ ಕೋಲೆ ||ಹಿ||
ದೂರ ನೀನಾದರೆ ಹೋಗಬ್ಯಾಡ ಕೋಲು ಕೋಲನ್ನ ಕೋಲೆ ||ಮು||
ದೂರ ನೀನಾದರೆ ಹೋಗಬ್ಯಾಡ ಕೋಲು ಕೋಲನ್ನ ಕೋಲೆ ||ಹಿ||
ಮಗನಿಗೆ ಬಾಣ ಕೊಟ್ಟಾಳೆ ಕೋಲು ಕೋಲನ್ನ ಕೋಲೆ ||ಮು||
ಮಗನಿಗೆ ಬಾಣ ಕೊಟ್ಟಾಳೆ ಕೋಲು ಕೋಲನ್ನ ಕೋಲೆ ||ಹಿ||
ಹೆಗಲಮ್ಯಾಲೆ ಇಟಕಂದೆ ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಹೆಗಲಮ್ಯಾಲೆ ಇಟಕಂದೆ ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಊರ ಹೊರಗೆ ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಊರ ಹೊರಗೆ ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಸ್ವಾದರ ಮಾವ ಶಕುನಿಯಾ ಕೋಲು ಕೋಲನ್ನ ಕೋಲೆ ||ಮು||
ಸ್ವಾದರ ಮಾವ ಶಕುನಿಯಾ ಕೋಲು ಕೋಲನ್ನ ಕೋಲೆ ||ಹಿ||
ಬೊಬ್ಬಲಿಗೆ ಏನೊಂದೆ ಕೇಳ್ತಾನೆ ಕೋಲು ಕೋಲನ್ನ ಕೋಲೆ ||ಮು||
ಬೊಬ್ಬಲಿಗೆ ಏನೊಂದೆ ಕೇಳ್ತಾನೆ ಕೋಲು ಕೋಲನ್ನ ಕೋಲೆ ||ಹಿ||
ಯಾರ ಮಗನಪ್ಪ ಮೊಮ್ಮಗಾ ಕೋಲು ಕೋಲನ್ನ ಕೋಲೆ ||ಮು||
ಯಾರ ಮಗನಪ್ಪ ಮೊಮ್ಮಗಾ ಕೋಲು ಕೋಲನ್ನ ಕೋಲೆ ||ಹಿ||
ಬೊಬ್ಬಲಿ ಹೆಸರು ಹೇಳಲಿಲ್ಲ ಕೋಲು ಕೋಲನ್ನ ಕೋಲೆ ||ಮು||
ಬೊಬ್ಬಲಿ ಹೆಸರು ಹೇಳಲಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ಕೆರೆಯಂಗಳದಾಕ ಬರುತ್ತಿಯಾ ಏನೋ ಕೋಲು ಕೋಲನ್ನ ಕೋಲೆ ||ಮು||
ಕೆರೆಯಂಗಳದಾಕ ಬರುತ್ತಿಯಾ ಏನೋ ಕೋಲು ಕೋಲನ್ನ ಕೋಲೆ ||ಹಿ||
ನಿನ್ನಮ್ಯಾಲೆ ವೈರಿ ಬಂದಾನಪ್ಪ ಕೋಲು ಕೋಲನ್ನ ಕೋಲೆ ||ಮು||
ನಿನ್ನಮ್ಯಾಲೆ ವೈರಿ ಬಂದಾನಪ್ಪ ಕೋಲು ಕೋಲನ್ನ ಕೋಲೆ ||ಹಿ||
ಬರ್ತೀನಿ ನಡೆಯೆ ನಮ್ಮ ತಾತ ಕೋಲು ಕೋಲನ್ನ ಕೋಲೆ ||ಮು||
ಬರ್ತೀನಿ ನಡೆಯೆ ನಮ್ಮ ತಾತ ಕೋಲು ಕೋಲನ್ನ ಕೋಲೆ ||ಹಿ||
ಕೆರೆಯಂಗಳದಾಕ ಹೋಗ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಕೆರೆಯಂಗಳದಾಕ ಹೋಗ್ಯಾನವ್ವಾಕೋಲು ಕೋಲನ್ನ ಕೋಲೆ ||ಹಿ||
ಆಲುಮರದಡಿಯಲ್ಲಿ ಮಲಿಗ್ಯಾನವ್ವ ಕೋಲು ಕೋಲನ್ನ ಕೋಲೆ ||ಮು||
ಆಲುಮರದಡಿಯಲ್ಲಿ ಮಲಿಗ್ಯಾನವ್ವ ಕೋಲು ಕೋಲನ್ನ ಕೋಲೆ ||ಹಿ||
ಶಕುನಿ ಏನೊಂದೆ ನುಡಿದಾನವ್ವ ಕೋಲು ಕೋಲನ್ನ ಕೋಲೆ ||ಮು||
ಶಕುನಿ ಏನೊಂದೆ ನುಡಿದಾನವ್ವ ಕೋಲು ಕೋಲನ್ನ ಕೋಲೆ ||ಹಿ||
ಸೇದಿಯನ್ನ ಬಾಣ ಬಿಟ್ಟನವ್ವ ಕೋಲು ಕೋಲನ್ನ ಕೋಲೆ ||ಮು||
ಸೇದಿಯನ್ನ ಬಾಣ ಬಿಟ್ಟನವ್ವ ಕೋಲು ಕೋಲನ್ನ ಕೋಲೆ ||ಹಿ||
ಎಲೆಗಳೆಲ್ಲವು ಉದಿರ್ಯಾವವ್ವ ಕೋಲು ಕೋಲನ್ನ ಕೋಲೆ ||ಮು||
ಎಲೆಗಳೆಲ್ಲವು ಉದಿರ್ಯಾವವ್ವ ಕೋಲು ಕೋಲನ್ನ ಕೋಲೆ ||ಹಿ||
ಐದೇನೆ ಎಲೆಗಳು ಉಳಿದಾವವ್ವ ಕೋಲು ಕೋಲನ್ನ ಕೋಲೆ ||ಮು||
ಐದೇನೆ ಎಲೆಗಳು ಉಳಿದಾವವ್ವ ಕೋಲು ಕೋಲನ್ನ ಕೋಲೆ ||ಹಿ||
ಐದುs….. ಎಲೆಗಳಾs….. ಉಳಿದಾವವ್ವ ಕೋಲು ಕೋಲನ್ನ ಕೋಲೆ ||ಮು||
ಐದುs….. ಎಲೆಗಳಾs….. ಉಳಿದಾವವ್ವ ಕೋಲು ಕೋಲನ್ನ ಕೋಲೆ ||ಹಿ||
ಐದು ಎಲೆಗಳು ಯಾರವುs….. ಮೊಮ್ಮಗನೆ ಕೋಲು ಕೋಲನ್ನ ಕೋಲೆ ||ಮು||
ಐದು ಎಲೆಗಳು ಯಾರವುs….. ಮೊಮ್ಮಗನೆ ಕೋಲು ಕೋಲನ್ನ ಕೋಲೆ ||ಹಿ||
ನಮ್ಮಪ್ಪನೋರೆ ಧರ್ಮಾರೆ ಕೋಲು ಕೋಲನ್ನ ಕೋಲೆ ||ಮು||
ನಮ್ಮಪ್ಪನೋರೆ ಧರ್ಮಾರೆ ಕೋಲು ಕೋಲನ್ನ ಕೋಲೆ ||ಹಿ||
ಅವರಾ ಹೆಸರುಗಳಾ ಹೇಳೇನಪ್ಪಾ ಕೋಲು ಕೋಲನ್ನ ಕೋಲೆ ||ಮು||
ಅವರಾ ಹೆಸರುಗಳಾ ಹೇಳೇನಪ್ಪಾ ಕೋಲು ಕೋಲನ್ನ ಕೋಲೆ ||ಹಿ||
ನಕುಲ ಸಹದೇವ ನೋಡೆತಾತ ಕೋಲು ಕೋಲನ್ನ ಕೋಲೆ ||ಮು||
ನಕುಲ ಸಹದೇವ ನೋಡೆತಾತ ಕೋಲು ಕೋಲನ್ನ ಕೋಲೆ ||ಹಿ||
ಭೀಮ ಅರ್ಜುನ ನೋಡೆ ತಾತ ಕೋಲು ಕೋಲನ್ನ ಕೋಲೆ ||ಮು||
ಭೀಮ ಅರ್ಜುನ ನೋಡೆ ತಾತ ಕೋಲು ಕೋಲನ್ನ ಕೋಲೆ ||ಹಿ||
ನಮ್ಮ ತಂದೆ ಆದ್ರೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ನಮ್ಮ ತಂದೆ ಆದ್ರೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||
ಮೋಸ ಮಾಡುತ್ತಾನೆ ಶಕುನಿಯಾ ಕೋಲು ಕೋಲನ್ನ ಕೋಲೆ ||ಮು||
ಮೋಸ ಮಾಡುತ್ತಾನೆ ಶಕುನಿಯಾ ಕೋಲು ಕೋಲನ್ನ ಕೋಲೆ ||ಹಿ||
ನಮ್ಮನ್ನು ಇವನು ಉಳಿಸಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಮ್ಮನ್ನು ಇವನು ಉಳಿಸಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ಗರುಡ ಗಂಭಕೆ ಒಯ್ಯಾಬೇಕೆ ಕೋಲು ಕೋಲನ್ನ ಕೋಲೆ ||ಮು||
ಗರುಡ ಗಂಭಕೆ ಒಯ್ಯಾಬೇಕೆ ಕೋಲು ಕೋಲನ್ನ ಕೋಲೆ ||ಹಿ||
ವೈರಿ ಬಂದಾವೆs….. ಮೊಮ್ಮಗನೆ ಕೋಲು ಕೋಲನ್ನ ಕೋಲೆ ||ಮು||
ವೈರಿ ಬಂದಾವೆs….. ಮೊಮ್ಮಗನೆ ಕೋಲು ಕೋಲನ್ನ ಕೋಲೆ ||ಹಿ||
Leave A Comment