ಜಳಕಾ ಮಾಡ್ಯಾಳೆ ಸಂಗವ್ವಾ ಕೋಲು ಕೋಲನ್ನ ಕೋಲೆ ||ಮು||
ಜಳಕ ಮಾಡ್ಯಾಳೆ ಸಂಗವ್ವಾ ಕೋಲು ಕೋಲನ್ನ ಕೋಲೆ ||ಹಿ||
ಹೂನಿನ ಸೀರೆ ಉಡುತಾಳೆ ಕೋಲು ಕೋಲನ್ನ ಕೋಲೆ ||ಮು||
ಹೂನಿನ ಸೀರೆ ಉಡುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಮಗ್ಗೀಯಾ ಕುಬುಸ ತೊಡುತಾಳೆ ಕೋಲು ಕೋಲನ್ನ ಕೋಲೆ ||ಮು||
ಮಗ್ಗೀಯಾ ಕುಬುಸ ತೊಡುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಮುತ್ತು ರತ್ನವಾ ಉಡಿಯಕ್ಕಿ ಕೋಲು ಕೋಲನ್ನ ಕೋಲೆ ||ಮು||
ಮುತ್ತು ರತ್ನವಾ ಉಡಿಯಕ್ಕಿ ಕೋಲು ಕೋಲನ್ನ ಕೋಲೆ ||ಹಿ||
ಗಂಧದ ಇಳೇವ ಇಡದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಗಂಧದ ಇಳೇವ ಇಡದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಹೋಗಿ ಬರುತೀನಿ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಮು||
ಹೋಗಿ ಬರುತಿನಿ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಹಿ||
ಹೋಗಿ ಬಾರವ್ವಾ ಸಂಗವ್ವಾ ಕೋಲು ಕೋಲನ್ನ ಕೋಲೆ ||ಮು||
ಹೋಗಿ ಬಾರವ್ವಾ ಸಂಗವ್ವಾ ಕೋಲು ಕೋಲನ್ನ ಕೋಲೆ ||ಹಿ||
ರೆಡ್ಡೇರಾ ಮನೆಗೆ ಬಾಣತಿಗೆ ಬಂದು
ತನ್ನ ಪಟ್ಟಣಕ್ಕೆ ನಡದಾಳೆ ಕೋಲು ಕೋಲನ್ನ ಕೋಲೆ ||ಮು||
ತನ್ನ ಪಟ್ಟಣಕ್ಕೆ ನಡದಾಳೆ ಕೋಲು ಕೋಲನ್ನ ಕೋಲೆ ||ಹಿ||
ಊರೋಳ ಜನರ ಏನು ನುಡಿದೆ ಕೋಲು ಕೋಲನ್ನ ಕೋಲೆ ||ಮು||
ಊರೋಳ ಜನರ ಏನು ನುಡಿದೆ ಕೋಲು ಕೋಲನ್ನ ಕೋಲೆ ||ಹಿ||
ಯಾರೆ ಹಡದಾರೆ ಸಂಗವ್ವಾ ಕೋಲು ಕೋಲನ್ನ ಕೋಲೆ ||ಮು||
ಯಾರೆ ಹಡದಾರೆ ಸಂಗವ್ವಾ ಕೋಲು ಕೋಲನ್ನ ಕೋಲೆ ||ಹಿ||
ರೆಡ್ಡೇರಾ ಮನಿಯಾಗೆ ಬಾಣಸ್ತಾನಾ ಕೋಲು ಕೋಲನ್ನ ಕೋಲೆ ||ಮು||
ರೆಡ್ಡೇರಾ ಮನಿಯಾಗೆ ಬಾಣಸ್ತಾನಾ ಕೋಲು ಕೋಲನ್ನ ಕೋಲೆ ||ಹಿ||
ಹೆಣ್ಣ ಮಗಳ ಹಡದಾಳೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣ ಮಗಳ ಹಡದಾಳೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಹಿ||
ಮಂದಿಗೆ ಹೇಳಿಕೆಂತಾ ಹೋಗುತಾಳೆ ಕೋಲು ಕೋಲನ್ನ ಕೋಲೆ ||ಮು||
ಮಂದಿಗೆ ಹೇಳಿಕೆಂತಾ ಹೋಗುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಒಂದು ದಿನ ಅಂಬೋದು ಒಂದೆ ತಿಂಗಳಾಗಿ ಕೋಲು ಕೋಲನ್ನ ಕೋಲೆ ||ಮು||
ಒಂದು ದಿನ ಅಂಬೋದು ಒಂದೆ ತಿಂಗಳಾಗಿ ಕೋಲು ಕೋಲನ್ನ ಕೋಲೆ ||ಹಿ||
ಎರಡೆ ದಿನ ಅಂಬೋದು ಎರಡೆ ತಿಂಗಳೆ ಕೋಲು ಕೋಲನ್ನ ಕೋಲೆ ||ಮು||
ಎರಡೆ ದಿನ ಅಂಬೋದು ಎರಡೆ ತಿಂಗಳೆ ಕೋಲು ಕೋಲನ್ನ ಕೋಲೆ |ಹಿ||
ಎರಡೆ ದಿನ ಅಂಬೋದು ನಾಕೆ ತಿಂಗಳೆ ಕೋಲು ಕೋಲನ್ನ ಕೋಲೆ ||ಮು||
ಎರಡೆ ದಿನ ಅಂಬೋದು ನಾಕೆ ತಿಂಗಳೆ ಕೋಲು ಕೋಲನ್ನ ಕೋಲೆ ||ಹಿ||
ಐದೆ ತಿಂಗಳಾ ಅಗ್ಯಾವಮ್ಮ ಕೋಲು ಕೋಲನ್ನ ಕೋಲೆ ||ಮು||
ಐದೆ ತಿಂಗಳಾ ಅಗ್ಯಾವಮ್ಮ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಮಲಮ್ಮ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||
ಗಂಗಮ್ಮಗಾ ನಾನು ಹೋಗಬೇಕೆ ಕೋಲು ಕೋಲನ್ನ ಕೋಲೆ ||ಮು||
ಗಂಗಮ್ಮಗಾ ನಾನು ಹೋಗಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಗರಡಿ ಮನಿಯಾಗೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಗರಡಿ ಮನಿಯಾಗೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಗರಡಿ ಮನಿಯಾಗೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಗರಡಿ ಮನಿಯಾಗೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಮನಿಯ ಸಾರಿಸ್ಯಾಳೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಮು||
ಮನಿಯ ಸಾರಿಸ್ಯಾಳೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಹಿ||
ಜಳಕಾವ ಮಾಡ್ಯಾಳೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಮು||
ಜಳಕಾವ ಮಾಡ್ಯಾಳೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಹಿ||
ಹಿತ್ತಲ ಪುಟ್ಟೀಗಿ ತುಂಬ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಹಿತ್ತಲ ಪುಟ್ಟೀಗಿ ತುಂಬ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||
ಹಿತ್ತಲ ಪುಟ್ಟೀಗಿ ತುಂಬ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಹಿತ್ತಲ ಪುಟ್ಟೀಗಿ ತುಂಬ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||
ಸಣ್ಣ ಕೊಡಪಾನ ತಗಂಡೆ ಕೋಲು ಕೋಲನ್ನ ಕೋಲೆ ||ಮು||
ಸಣ್ಣ ಕೊಡಪಾನ ತಗಂಡೆ ಕೋಲು ಕೋಲನ್ನ ಕೋಲೆ ||ಹಿ||
ಗಂಗಮ್ಮಗಾದರೆ ಹೋಗುತಾಳೆ ಕೋಲು ಕೋಲನ್ನ ಕೋಲೆ ||ಮು||
ಗಂಗಮ್ಮಗಾದರೆ ಹೋಗುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮ ಹೋಗೋದಾರಿ ನೋಡ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮ ಹೋಗೋದಾರಿ ನೋಡ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮ ಹೋಗೋದಾರಿ ನೋಡ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮ ಹೋಗೋದಾರಿ ನೋಡ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಕುಪ್ಪಳಿಸಿ ಮನಿಗೆ ಎಗರ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಕುಪ್ಪಳಿಸಿ ಮನಿಗೆ ಎಗರ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಕೈ ಬಡಿದೆ ಕೂಸು ಆಡುತೈತೆ ಕೋಲು ಕೋಲನ್ನ ಕೋಲೆ ||ಮು||
ಕೈ ಬಡಿದೆ ಕೂಸು ಆಡುತೈತೆ ಕೋಲು ಕೋಲನ್ನ ಕೋಲೆ ||ಹಿ||
ಗಜಭೀಮ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ಗಜಭೀಮ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||
ದೊಡ್ಡೋಳು ಆದರೆ ಗುರ್ತುಸಿಗಾದಿಲ್ಲ
ಗಲ್ಲಕ ಸೆಳ್ಳುಗರ ಇಡಬೇಕೆ ಕೋಲು ಕೋಲನ್ನ ಕೋಲೆ ||ಮು||
ಗಲ್ಲಕ ಸೆಳ್ಳುಗರ ಇಡಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಗಲ್ಲಕ ಸೆಳ್ಳುಗರ ಇಟ್ಟಾನವ್ವಾ ಕೋಲು ಕೋಲನ್ನ ||ಕೋಲೆ||
ಆ ಕೂಸು ನೋಡಿ ಅಳುತೈತೆ ಕೋಲು ಕೋಲನ್ನ ಕೋಲೆ ||ಮು||
ಆ ಕೂಸು ನೋಡಿ ಅಳುತೈತೆ ಕೋಲು ಕೋಲನ್ನ ಕೋಲೆ ||ಹಿ||
ಗಲ್ಲೆಲ್ಲ ರಾಮರಕುತಾ ಆಗೈತವ್ವಾ ಕೋಲು ಕೋಲನ್ನ ಕೋಲೆ ||ಮು||
ಗಲ್ಲೆಲ್ಲ ರಾಮರಕುತಾ ಆಗೈತವ್ವಾ ಕೋಲು ಕೋಲನ್ನ ಕೋಲೆ ||ಹಿ||
ಗರಡಿಯ ಮನೆಯಾಕೆ ಬಂದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಗರಡಿಯ ಮನೆಯಾಕೆ ಬಂದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಗಂಗಮ್ಮನ ಮಲ್ಲಮ್ಮ ಮಾಡುತಾಳೆ ಕೋಲು ಕೋಲನ್ನ ಕೋಲೆ ||ಮು||
ಗಂಗಮ್ಮನ ಮಲ್ಲಮ್ಮ ಮಾಡುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಚಂದಿರ ಬುಕ್ಕಿಟ್ಟು ಹಚ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಚಂದಿರ ಬುಕ್ಕಿಟ್ಟು ಹಚ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಗಂಗಮ್ಮಗಾ ದಂಡೆ ಹಾಕ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಗಂಗಮ್ಮಗಾ ದಂಡೆ ಹಾಕ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕುಬುಸದಾ ಕಣ ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಕುಬುಸದಾ ಕಣ ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಉದ್ದಿನಾ ಕಡ್ಡಿ ಹಚ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಉದ್ದಿನಾ ಕಡ್ಡಿ ಹಚ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಗೊನೆ ಮುರಿದಾ ಬಾಳೆಹಣ್ಣು ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಗೊನೆ ಮುರಿದಾ ಬಾಳೆಹಣ್ಣು ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ನೆನೆಯಕ್ಕಿ ನೆನಗಡಲೆ ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ನೆನೆಯಕ್ಕಿ ನೆನಗಡಲೆ ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಅಡಿಕೆ ಎಲೆಗಳಾ ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಅಡಿಕೆ ಎಲೆಗಳಾ ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಸುಡುತೇನೆ ಲೋಬಾನ ಸುಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಸುಡುತೇನೆ ಲೋಬಾನ ಸುಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕರಿಯ ಸಿಪ್ಪಿನಾ ಕಾಯಿ ಒಡೆದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಕರಿಯ ಸಿಪ್ಪಿನಾ ಕಾಯಿ ಒಡೆದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ನೇಮಿಸಿ ಕೈಯ ಮುಗಿದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ನೇಮಿಸಿ ಕೈಯ ಮುಗಿದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಹಿತ್ತಾಳೆ ಪುಟ್ಟೀಗಿ ತುಂಬ್ಯಾಳ್ಳವ್ವಾ ಕೋಲು ಕೋಲನ್ನ ಕೋಲೆ ||ಮು||
ಹಿತ್ತಾಳೆ ಪುಟ್ಟೀಗಿ ತುಂಬ್ಯಾಳ್ಳವಾ ಕೋಲು ಕೋಲನ್ನ ಕೋಲೆ ||ಹಿ||
ಕೊಡ ಹೊತ್ತುಕೊಂಡು ಬರುತಾಳೆ ಕೋಲು ಕೋಲನ್ನ ಕೋಲೆ ||ಮು||
ಕೊಡ ಹೊತ್ತುಕೊಂಡು ಬರುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಸಿಟ್ಟಿಕ್ಕಿ ಮಗಳ ಸೀರತೈತೆ ಕೋಲು ಕೋಲನ್ನ ಕೋಲೆ ||ಮು||
ಸಿಟ್ಟಿಕ್ಕಿ ಮಗಳ ಸೀರತೈತೆ ಕೋಲು ಕೋಲನ್ನ ಕೋಲೆ ||ಹಿ||
ನಡುಮನಿಗೆ ಕೊಡವಾ ಇಳಿಸ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ನಡುಮನಿಗೆ ಕೊಡವಾ ಇಳಿಸ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||
ಮಗಳ ಎತ್ತಿಗಂಡೆ ನೋಡುತಾಳೆ ಕೋಲು ಕೋಲನ್ನ ಕೋಲೆ ||ಮು||
ಮಗಳ ಎತ್ತಿಗಂಡೆ ನೋಡುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಗಲ್ಲೇನ ರಕುತಾ ಆಗ್ಯಾವಲ್ಲಾ ಕೋಲು ಕೋಲನ್ನ ಕೋಲೆ ||ಮು||
ಗಲ್ಲೇನ ರಕುತಾ ಆಗ್ಯಾವಲ್ಲಾ ಕೋಲು ಕೋಲನ್ನ ಕೋಲೆ ||ಹಿ||
ಊರಾಳ ಅಕ್ಕನೋರೆ ಕೇರ್ಯಾರ ತಂಗಿನೋರೆ,
ನನ್ನ ಮಗಳೀಗೆ ನೋಡಬರ್ರೆ ಕೋಲು ಕೋಲನ್ನ ಕೋಲೆ ||ಮು||
ನನ್ನ ಮಗಳೀಗೆ ನೋಡಬರ್ರೆ ಕೋಲು ಕೋಲನ್ನ ಕೋಲೆ ||ಹಿ||
ಊರಾಳ ಅಕ್ಕನೋರೆ ಕೇರ್ಯಾರ ತಂಗಿನೋರೆ,
ನನ್ನ ಮಗಳೀಗೆ ನೋಡಬರ್ರೆ ಕೋಲು ಕೋಲನ್ನ ಕೋಲೆ ||ಮು||
ನನ್ನ ಮಗಳೀಗೆ ನೋಡಬರ್ರೆ ಕೋಲು ಕೋಲನ್ನ ಕೋಲೆ ||ಹಿ||
ಗಲ್ಲಕ ರಾಮರಕುತಾ ಆಗ್ಯಾವವ್ವಾ ಕೋಲು ಕೋಲನ್ನ ಕೋಲೆ ||ಮು||
ಗಲ್ಲಕ ರಾಮರಕುತಾ ಆಗ್ಯಾವವ್ವಾ ಕೋಲು ಕೋಲನ್ನ ಕೋಲೆ ||ಹಿ||
ಆಸರಾಗ್ಯಾತಿ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಮು||
ಆಸರಾಗ್ಯಾತಿ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಹಿ||
ಬೆದರಿಕೊಂಡಾಳೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಮು||
ಬೆದರಿಕೊಂಡಾಳೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಹಿ||
ಆಸರಾ ತಗಿಯೇ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಮು||
ಆಸರಾ ತಗಿಯೇ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಹಿ||
ಆಸರಾ ತಗದಾಳೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಮು||
ಆಸರಾ ತಗದಾಳೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಹಿ||
ತೊಟ್ಟಲದಾಕೆ ಹಾಕ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ತೊಟ್ಟಲದಾಕೆ ಹಾಕ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||
ಒಂದು ದಿನ ಅಂಬೋದು ಒಂದೆ ವರುಷ ಕೋಲು ಕೋಲನ್ನ ಕೋಲೆ ||ಮು||
ಒಂದು ದಿನ ಅಂಬೋದು ಒಂದೆ ವರುಷ ಕೋಲು ಕೋಲನ್ನ ಕೋಲೆ ||ಹಿ||
ಎರಡು ದಿನ ಅಂಬೋದು ಮೂರು ವರುಷ ಕೋಲು ಕೋಲನ್ನ ಕೋಲೆ ||ಮು||
ಎರಡು ದಿನ ಅಂಬೋದು ಮೂರು ವರುಷ ಕೋಲು ಕೋಲನ್ನ ಕೋಲೆ ||ಹಿ||
ಮೂರೆ ದಿನ ಅಂಬೋದು ನಾಕೆ ವರುಷ ಕೋಲು ಕೋಲನ್ನ ಕೋಲೆ ||ಮು||
ಮೂರೆ ದಿನ ಅಂಬೋದು ನಾಕೆ ವರುಷ ಕೋಲು ಕೋಲನ್ನ ಕೋಲೆ ||ಹಿ||
ನಾಕು ವರುಷದ ಮಗಳೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಮು||
ನಾಕು ವರುಷದ ಮಗಳೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಹಿ||
ನಾರೀಗೆ ದಟ್ಟಿ ತರಬೇಕೆ ಕೋಲು ಕೋಲನ್ನ ಕೋಲೆ ||ಮು||
ನಾರೀಗೆ ದಟ್ಟಿ ತರಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಮಗಳಿಗೆ ದಟ್ಟಿ ಉಡಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮಗಳಿಗೆ ದಟ್ಟಿ ಉಡಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಮಗಳ ಚಂದವಾ ನೋಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮಗಳ ಚಂದವಾ ನೋಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಒಂಬತ್ತು ವರುಷದಾಕಿ ಅವ್ವಣೆವ್ವಾ ಕೋಲು ಕೋಲನ್ನ ಕೋಲೆ ||ಮು||
ಒಂಬತ್ತು ವರುಷದಾಕಿ ಅವ್ವಣೆವ್ವಾ ಕೋಲು ಕೋಲನ್ನ ಕೋಲೆ ||ಹಿ||
ಸಣ್ಣ ಸಣ್ಣ ಬೊಟ್ಟು ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಸಣ್ಣ ಸಣ್ಣ ಬೊಟ್ಟು ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಬಣ್ಣದಾ ಸೀರೆ ಉಡಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಬಣ್ಣದಾ ಸೀರೆ ಉಡಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಿಗೆ ಸರಕೊಟ್ಟು ಆಡುತಾಳೆ ಕೋಲು ಕೋಲನ್ನ ಕೋಲೆ ||ಮು||
ಮಲ್ಲಿಗೆ ಸರಕೊಟ್ಟು ಆಡುತಾಳೆ ಕೋಲು ಕೋಲನ್ನ ಕೋಲೆ ||ಹಿ||
ವಾರೀಗಿ ಗೆಳತ್ಯಾರೆ ನೀರಿಗೋಗಿ ಕೋಲು ಕೋಲನ್ನ ಕೋಲೆ ||ಮು||
ವಾರೀಗಿ ಗೆಳತ್ಯಾರೆ ನೀರಿಗೋಗಿ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಏನೆಂದು ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಏನೆಂದು ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||
ನೀರಿಗೆ ನಾನು ಹೋಗುತೀನಿ ಕೋಲು ಕೋಲನ್ನ ಕೋಲೆ ||ಮು||
ನೀರಿಗೆ ನಾನು ಹೋಗುತೀನಿ ಕೋಲು ಕೋಲನ್ನ ಕೋಲೆ ||ಹಿ||
ಸಣ್ಣ ಬಿಂದಿಗೆ ಕೊಂಡೆ ಕೊಡೆ ಕೋಲು ಕೋಲನ್ನ ಕೋಲೆ ||ಮು||
ಸಣ್ಣ ಬಿಂದಿಗೆ ಕೊಂಡೆ ಕೊಡೆ ಕೋಲು ಕೋಲನ್ನ ಕೋಲೆ ||ಹಿ||
ನೀನ್ಯಾಕ ನೀರಿಗೆ ಹೋಗುತೆವ್ವಾ ಕೋಲು ಕೋಲನ್ನ ಕೋಲೆ ||ಮು||
ನೀನ್ಯಾಕ ನೀರಿಗೆ ಹೋಗುತೆವ್ವಾ ಕೋಲು ಕೋಲನ್ನ ಕೋಲೆ ||ಹಿ||
ಗೆಣತೇರಾ ಕೂಡ ಹೋಗುತೀನಿ ಕೋಲು ಕೋಲನ್ನ ಕೋಲೆ ||ಮು||
ಗೆಣತೇರಾ ಕೂಡ ಹೋಗುತೀನಿ ಕೋಲು ಕೋಲನ್ನ ಕೋಲೆ ||ಹಿ||
ಗೆಣತೇರಾ ಕೂಡ ಹೋಗುತೀನಿ ಕೋಲು ಕೋಲನ್ನ ಕೋಲೆ ||ಮು||
ಗೆಣತೇರಾ ಕೂಡ ಹೋಗುತೀನಿ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವನ ಗೆಳತಿರೆ ಗಗಂಮ್ಮ ಗೌರಮ್ಮ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವನ ಗೆಳತಿರೆ ಗಗಂಮ್ಮ ಗೌರಮ್ಮ ಕೋಲು ಕೋಲನ್ನ ಕೋಲೆ ||ಹಿ||
ಬಂಗಾರದ ಕೊಳ್ಳ ಬರಲವ್ವಾ ಕೋಲು ಕೋಲನ್ನ ಕೋಲೆ ||ಮು||
ಬಂಗಾರದ ಕೊಳ್ಳ ಬರಲವ್ವಾ ಗೌರಮ್ಮ ಕೋಲು ಕೋಲನ್ನ ಕೋಲೆ ||ಹಿ||
ನೀರಿಗೆ ಆಕಿ ಹೋಗುತಾಳೆ ಕೋಲು ಕೋಲನ್ನ ಕೋಲೆ ||ಮು||
ನೀರಿಗೆ ಆಕಿ ಹೋಗುತಾಳೆ ಕೋಲು ಕೋಲನ್ನ ಕೋಲೆ ||ಹಿ||
ನಾಲರು ಕೂಡಿ ಹೋಗ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ನಾಲರು ಕೂಡಿ ಹೋಗ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕೊಡಗಳ ಅವರು ತುಂಬ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಕೊಡಗಳ ಅವರು ತುಂಬ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಸುತ್ತಮುತ್ತ ಅವರು ನೋಡ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಸುತ್ತಮುತ್ತ ಅವರು ನೋಡ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಮಂದಿಯಾರ್ಯಾರಾ ಸುಳಿವಿಲ್ಲ ಕೋಲು ಕೋಲನ್ನ ಕೋಲೆ ||ಮು||
ಮಂದಿಯಾರ್ಯಾರಾ ಸುಳಿವಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ಸುದ್ದಿ ಇಳಿದಾಂಗ ಇಳಿದಾನೆ ಕೋಲು ಕೋಲನ್ನ ಕೋಲೆ ||ಮು||
ಸುದ್ದಿ ಇಳಿದಾಂಗ ಇಳಿದಾನೆ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ಡಿ ಬಂದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿ ಬಂದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ಡಿ ಬಂದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿ ಬಂದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ನಮ್ಮ ಕೊಡಗಳ ಎತ್ತು ಬಾರೋ ಕೋಲು ಕೋಲನ್ನ ಕೋಲೆ ||ಮು||
ನಮ್ಮ ಕೊಡಗಳ ಎತ್ತು ಬಾರೋ ಕೋಲು ಕೋಲನ್ನ ಕೋಲೆ ||ಹಿ||
ನಮ್ಮ ಕೊಡಗಳ ಎತ್ತು ಬಾರೋ ಕೋಲು ಕೋಲನ್ನ ಕೋಲೆ ||ಮು||
ನಮ್ಮ ಕೊಡಗಳ ಎತ್ತು ಬಾರೋ ಕೋಲು ಕೋಲನ್ನ ಕೋಲೆ ||ಹಿ||
ನಾಲಾರ ಕೊಡಗಳಾ ಎತ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ನಾಲಾರ ಕೊಡಗಳಾ ಎತ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಸೀರೆಯ ಸೆರಗ ಹಿಡಿದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಸೀರೆಯ ಸೆರಗ ಹಿಡಿದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಗಂಡರ ಹೆಸರ ಹೇಳಬೇಕೆ ಕೋಲು ಕೋಲನ್ನ ಕೋಲೆ ||ಮು||
ಗಂಡರ ಹೆಸರ ಹೇಳಬೇಕೆ ಕೋಲು ಕೋಲನ್ನ ಕೋಲೆ ||ಹಿ||
ನಮ್ಮ ಸೆರಗಳಾ ಬಿಟ್ಟು ಬಿಡಾ ಕೋಲು ಕೋಲನ್ನ ಕೋಲೆ ||ಮು||
ನಮ್ಮ ಸೆರಗಳಾ ಬಿಟ್ಟು ಬಿಡಾ ಕೋಲು ಕೋಲನ್ನ ಕೋಲೆ ||ಹಿ||
ನಿಮ್ಮಕ್ಕನ ಮಗಳೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಮು||
ನಿಮ್ಮಕ್ಕನ ಮಗಳೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವನ ಸೆರಗ ಇಡಿಹೋಗೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವನ ಸೆರಗ ಇಡಿಹೋಗೆ ಕೋಲು ಕೋಲನ್ನ ಕೋಲೆ ||ಹಿ||
ನಿಮ್ಮ ಗಂಡರ ಹೆಸರ ಹೇಳಬೇಕೆ ಕೋಲು ಕೋಲನ್ನ ಕೋಲೆ ||ಮು||
ನಿಮ್ಮ ಗಂಡರ ಹೆಸರ ಹೇಳಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಮಾವನ ಮಗನೆ ರಾಕಿರೆಡ್ಡಿ ಕೋಲು ಕೋಲನ್ನ ಕೋಲೆ ||ಮು||
ಮಾವನ ಮಗನೆ ರಾಕಿರೆಡ್ಡಿ ಕೋಲು ಕೋಲನ್ನ ಕೋಲೆ ||ಹಿ||
ಅಕ್ಕನ ಮಗಳೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಮು||
ಅಕ್ಕನ ಮಗಳೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಹಿ||
ನಾಲಾರ ಕಲಿತು ಬಂದಾರವ್ವಾ ಕೋಲು ಕೋಲನ್ನ ಕೋಲೆ ||ಮು||
ನಾಲಾರ ಕಲಿತು ಬಂದಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಮನಿಯಾಕ ಕೊಡ ಇಳಿಸ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಮನಿಯಾಕ ಕೊಡ ಇಳಿಸ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ಡಿ ಎನೊಂದಾ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿ ಎನೊಂದಾ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||
ಹೆಣ್ಣಿಗೆ ನೀವು ಹೋಗಬೇಕೆ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣಿಗೆ ನೀವು ಹೋಗಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಅಕ್ಕನ ಮಗಳು ಕೇಳಬೇಕೆ ಕೋಲು ಕೋಲನ್ನ ಕೋಲೆ ||ಮು||
ಅಕ್ಕನ ಮಗಳು ಕೇಳಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಅಕ್ಕನ ಮಗಳು ಕೇಳಬೇಕೆ ಕೋಲು ಕೋಲನ್ನ ಕೋಲೆ ||ಮು||
ಅಕ್ಕನ ಮಗಳು ಕೇಳಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಬಿಡದೆ ಮಂಚಕ ಮಲಿಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಬಿಡದೆ ಮಂಚಕ ಮಲಿಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಎಷ್ಟು ಎಬ್ಬಿಸಿದರೆ ಏಳುವಲ್ಲಾ ಕೋಲು ಕೋಲನ್ನ ಕೋಲೆ ||ಮು||
ಎಷ್ಟು ಎಬ್ಬಿಸಿದರೆ ಏಳುವಲ್ಲಾ ಕೋಲು ಕೋಲನ್ನ ಕೋಲೆ ||ಹಿ||
ನಮಗೆ ಹೆಣ್ಣು ಕೊಡುತಾಳೇನೋ ಕೋಲು ಕೋಲನ್ನ ಕೋಲೆ ||ಮು||
ನಮಗೆ ಹೆಣ್ಣು ಕೊಡುತಾಳೇನೋ ಕೋಲು ಕೋಲನ್ನ ಕೋಲೆ ||ಹಿ||
ಭಾಗ್ಯಕೆ ಹೆಣ್ಣು ಮಗಳು ಹಡದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಭಾಗ್ಯಕೆ ಹೆಣ್ಣು ಮಗಳು ಹಡದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಹಳೇ ಸಂಬಂಧಕ್ಕೆ ಹೆಣ್ಣು ಕೊಡುದಿಲ್ಲಾ ಕೋಲು ಕೋಲನ್ನ ಕೋಲೆ ||ಮು||
ಹಳೇ ಸಂಬಂಧಕ್ಕೆ ಹೆಣ್ಣು ಕೊಡುದಿಲ್ಲಾ ಕೋಲು ಕೋಲನ್ನ ಕೋಲೆ ||ಹಿ||
ನಮಗೆ ಕನ್ಯೆ ಕೊಡೋದಿಲ್ಲಾ ಕೋಲು ಕೋಲನ್ನ ಕೋಲೆ ||ಮು||
ನಮಗೆ ಕನ್ಯೆ ಕೊಡೋದಿಲ್ಲಾ ಕೋಲು ಕೋಲನ್ನ ಕೋಲೆ ||ಹಿ||
Leave A Comment