ಭೀಮಾನ ಕುದುರೆಗೆ ಏನೇನೋ ಸಿಂಗಾರ ಬಂಗಾರದ ಜೂಲು ಹಾಕ್ಯಾರೆ ಹೇಳಮ್ಮಯೋ,
ಬಂಗಾರದ ಜೂಲು ಹಾಕ್ಯಾರೆ ಹೇಳಮ್ಮಯೋ ||ಮು||
ಬಂಗಾರದ ಜೂಲು ಹಾಕ್ಯಾರೆ ಹೇಳಮ್ಮಯೋ ||ಹಿ||

ಕಡ್ಲಿಯಾ ತಿಂಬೋದೆ ಹಿಪ್ಪಿ ಮಾಡಿ ಉಗುಳೋದೇ ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ
ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ ||ಮು||
ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ ||ಹಿ||

ಅರ್ಜುನನ ಕುದುರೆಗೆ ಏನೇನೋ ಸಿಂಗಾರ ಅರಿಶಿನ ಜೂಲು ಹಾಕ್ಯಾರೇ ನೋಡು ಅಮ್ಮಯೋ
ಅರಿಶಿನ ಜೂಲು ಹಾಕ್ಯಾರೇ ನೋಡು ಅಮ್ಮಯೋ ||ಮು||
ಅರಿಶಿನ ಜೂಲು ಹಾಕ್ಯಾರೇ ನೋಡು ಅಮ್ಮಯೋ ||ಹಿ||

ಕಡ್ಲಿಯಾ ತಿಂಬೋದೆ ಹಿಪ್ಪಿ ಮಾಡಿ ಉಗುಳೋದೇ ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ
ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ ||ಮು||
ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ ||ಹಿ||

ನಕುಲನಾ ಕುದುರೆಗೆ ಏನೇನೋ ಸಿಂಗಾರ ಬೆಳ್ಳಿಯ ಜೂಲು ಹಾಕ್ಯಾರೇ ನೋಡು ಅಮ್ಮಯೋ
ಬೆಳ್ಳಿಯ ಜೂಲು ಹಾಕ್ಯಾರೇ ನೋಡು ಅಮ್ಮಯೋ ||ಮು||
ಬೆಳ್ಳಿಯ ಜೂಲು ಹಾಕ್ಯಾರೇ ನೋಡು ಅಮ್ಮಯೋ ||ಹಿ||

ಕಡ್ಲಿಯಾ ತಿಂಬೋದೆ ಹಿಪ್ಪಿ ಮಾಡಿ ಉಗುಳೋದೇ ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ
ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ ||ಮು||
ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ ||ಹಿ||

ಸಹದೇವನಾ ಕುದುರೆಗೆ ಏನೇನೋ ಸಿಂಗಾರ ಬೆಳ್ಳಿಯ ಜೂಲು ಹಾಕ್ಯಾರೇ ನೋಡು ಅಮ್ಮಯೋ
ಬೆಳ್ಳಿಯ ಜೂಲು ಹಾಕ್ಯಾರೇ ನೋಡು ಅಮ್ಮಯೋ ||ಮು||
ಬೆಳ್ಳಿಯ ಜೂಲು ಹಾಕ್ಯಾರೇ ನೋಡು ಅಮ್ಮಯೋ ||ಹಿ||

ಕಡ್ಲಿಯಾ ತಿಂಬೋದೆ ಹಿಪ್ಪಿ ಮಾಡಿ ಉಗುಳೋದೇ ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ
ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ ||ಮು||
ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ ||ಹಿ||

ಧರ್ಮರಾಯನಾ ಕುದುರೆಗೆ ಏನೇನೋ ಸಿಂಗಾರ ಬೆಳ್ಳಿಯ ಜೂಲು ಹಾಕ್ಯಾರೇ ನೋಡು ಅಮ್ಮಯೋ
ಬೆಳ್ಳಿಯ ಜೂಲು ಹಾಕ್ಯಾರೇ ನೋಡು ಅಮ್ಮಯೋ ||ಮು||
ಬೆಳ್ಳಿಯ ಜೂಲು ಹಾಕ್ಯಾರೇ ನೋಡು ಅಮ್ಮಯೋ ||ಹಿ||

ಕಡ್ಲಿಯಾ ತಿಂಬೋದೆ ಹಿಪ್ಪಿ ಮಾಡಿ ಉಗುಳೋದೇ ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ
ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ ||ಮು||
ಗಗನಕ್ಕೆ ಕಾಲು ಕೆದರದೇ ನೋಡು ಅಮ್ಮಯೋ ||ಹಿ||

ಸತ್ಯಧರ್ಮರ ಛತ್ರಿ ಹಿಡಿದು ಬರುವಾಗ,
ಬಂಗಾರದ ಗಂಟೆ ನುಡಿದಾವೆ ನೋಡು ಅಮ್ಮಯೋ ||ಮು||
ಬಂಗಾರದ ಗಂಟೆ ನುಡಿದಾವೆ ನೋಡು ಅಮ್ಮಯೋ ||ಹಿ||

ಸಂದ ಮುಗಿದಾವೆಂದೇ ರಂಬೆಯ ಮಂಚವಿಳಿದೇ ||ಮು||
ಸಂದ ಮುಗಿದಾವೆಂದೇ ರಂಬೆಯ ಮಂಚವಿಳಿದೇ ||ಹಿ||

ಹರಕೆಯ ಹಾಡು

ಹುಲುಗಮ್ಮಗೆ ದಾನ ಧರ್ಮದ ದಯೆs…. ವಿರಲಿ ಸೋಬಾನವೇ ಸೋ||
ಹುಲುಗಮ್ಮಗೆ ಕುಮಾರಾಮಾನಂಥ ಮಕ್ಕs…. ಳಿರಲಿ ಸೋಬಾನವೇ ಸೋ||
ಹುಲುಗಮ್ಮಗೆ ಕಂಪಲಿಯಂಥ ಮೊಮ್ಮಕ್ಕಳಿರಲಿ ಸೋಬಾನವೇ ಸೋ||

ಗಂಜಿಯ ಸೀರೆನುಟ್ಟೆ ಗಂಧದ ಬೊಟ್ಟೆನಿಟ್ಟೆ
ಅರಮಂದ್ಯಾಗೆ ನಡೆಸಾವೆ ಸೋಬಾನವೇ ಸೋ||

ಅಯ್ಯಮ್ಮಗೆ ದಾನ ಧರ್ಮದ ದಯೆs….. ವಿರಲಿ ಸೋಬಾನವೇ ಸೋ||
ಅಯ್ಯಮ್ಮಗೆ ಮುತ್ತಿನ ತೊಲಬಾಗಿಲ ತಗ್ಯಾs….. ವಿರಲಿ ಸೋಬಾನವೇ ಸೋ||
ಅಯ್ಯಮ್ಮಗೆ ಲ್ಲಿದೂಳತ್ವದಯೆs….. ವಿರಲಿ ಸೋಬಾನವೇ ಸೋ||

ಹಾದ್ಯಾಗೆ ಏ ನಿನ್ನದೇ ಬೀದ್ಯಾಗೆ ಏ ನಿನ್ನದೇ
ಹತ್ತುಮಂದ್ಯಾಗೆ ಈ ಹಾಡ ನಮಗೆ ಕಲಿs….. ಸ್ಯಾಳೆ ಕಣಿಮವ್ವ ಸೋಬಾನವೇ ಸೋ||

ಕಣಿಮವ್ವ ಈ ಹಾಡೆ ನಮಗೆ ಕಲಿs….. ಸ್ಯಾಳೆ ಸೋಬಾನವೇ ಸೋ||
ಗ್ಯಾನಿದ್ದವ್ವನವರೇ ಕಲಿs….. ಬರ್ರೇ ಸೋಬಾನವೇ ಸೋ||

ಕಟ್ಯಾಗೆ ಏ ನಿನ್ನದೇ ಬೀಟ್ಯಾಗ ಏ ನಿನ್ನದೇ
ಹತ್ತುಮಂದ್ಯಾಗೆ ನಿನ್ನs….. ಹಾಡೇ ಸೋಬಾನವೇ ಸೋ||

ಕಣಿಮವ್ವ ಈ ಹಾಡೆ ನಮಗೆ ಕಲಿಸ್ಯಾಳೆ ಸೋಬಾನವೇ ಸೋ||
ಇಚ್ಚಿದವ್ವನವರೇ ಕಲಿಬರ್ರೇ ಸೋಬಾನವೇ ಸೋ||

ಹತ್ತಿಯ ಎಲೆಯಂಗೆ, ಜತ್ತೀಲಿ ಸೋ ಅಂಬಾಕೆ,
ಕಂಚಿನ ಸೀರೆ ಉಡಲವ್ವಾ ಸೋಬಾನವೇ ಸೋ||

ಹುಲುಗಮ್ಮಗೆ ಹೂವಿನ ಸೀರೆ ಉಡ ಕೊಡಿರೆ ಸೋಬಾನವೇ ಸೋ||
ಹುಲುಗಮ್ಮಗೆ ಮಗ್ಗಿಯ ಕುಬುಸ ತೊಡ ಕೊಡಿರೆ ಸೋಬಾನವೇ ಸೋ||
ಹುಲುಗಮ್ಮಗೆ ಮುತ್ತು ರತ್ನದ ಉಡಿs….. ಯಕ್ಕಿ ಸೋಬಾನವೇ ಸೋ||
ಹುಲುಗಮ್ಮಗೆ ಗಂಧದ ಇಳೇವು ನಡೆs….. ಸಿರಿ ಸೋಬಾನವೇ ಸೋ||

ವಾಲಿಯ ಎಲಿಯಂಗೆ ಜೋಡಿಲಿ ಸೋ ಅಂಬಾಕೆ
ವಾಲಿಯ ಕಿವಿಯ ಹನುಮವ್ವ ಸೋಬಾನವೇ ಸೋ||

ಹುನುಮವ್ವಗೆ ಹೂವಿನ ಸೀರೆ ಉಡ ಕೊಡಿರೆ ಸೋಬಾನವೇ ಸೋ||
ಹುನುಮವ್ವಗೆ ಮಗ್ಗಿಯ ಕುಬುಸ ತೊಡ ಕೊಡಿರೆ ಸೋಬಾನವೇ ಸೋ||
ಹುನುಮವ್ವಗೆ ಮುತ್ತು ರತ್ನದ ಉಡಿs….. ಯಕ್ಕಿ ಸೋಬಾನವೇ ಸೋ||
ಹುನುಮವ್ವಗೆ ಗಂಧದ ಇಳೇವು ನಡೆs….. ಸಿರಿ ಸೋಬಾನವೇ ಸೋ||

ಹಾರುವ ಗುಂಡಿನಲ್ಲಿ ಜಂಬಪ್ಪ ತೋರುವ ಬಾನದಲ್ಲಿ ಸೋ||

ಕಡಿಯ ಕಡಿಯೆಂಬ ಕತ್ತಿ ಭರಮಪ್ಪ ಕಡೆಯಾಗಿ ಹೋಗಲೇಳೋ ಸೋ||

ಹಿಡಿ ಹಿಡಿಯೆಂಬ ಕತ್ತಿ ಹುಲಗಪ್ಪ ಹಿಂಬಾಗಿ ಹೋಗಲೇಳೋ ಸೋ||

ಸಾವಿರಳ್ಯಾಗ ನಾಗಪ್ಪ ಧೀರನಾಗಿ ಬಾರೋ ಸೋ||

ಅವರಸ್ತ ಅಡಿಯಾಗಲೋ ಹನುಮಂತ ನಿಮ್ಮ ಹಸ್ತ ಮೇಲಾಗಲೋ ಸೋ||

ಸತ್ಯನಮ್ಮಧರ್ಮರು ಕೊಟ್ಟಂತ ಹರಕೇಲಿ ಮುತ್ತೈದೆರಾಗಿರಯೋ ಸೋ||
ಗ್ಯಾನನಮ್ಮ ಧರ್ಮರು ಕೊಟ್ಟಂತ ಹರಕೇಲಿ ಸಾವಂತಿರಾಗಿರೆಯೋ ಸೋ||

ಸಾಧೀನ ಸೀರೆನುಟ್ಟೆ ಸಾಧೀನಾ ಬೊಟ್ಟೆನಿಟ್ಟೆ
ಆರು ಮಂದ್ಯಾಗ ಹಾಡ ನಡೆಸಾವೇ ಸೋಬಾನವೇ ಸೋ||

ಸಂದ ಮುಗಿದಾವೆಂದೇ ರಂಬೆ ಮಂಚವಿಳದೇ
ತಂದಾಳ ಕಂಚಿನಾ ಬಲಗೈಯಾ ಸೋಬಾನವೇ ಸೋ||

ಇಲ್ಲಿಗೆ ನಿಮ್ಮದನಿಯಾ ನಿಲ್ಲ ವಡೀಲಿ ಸೋಬಾನವೇ ಸೋ||
ಇಲ್ಲಿಗೆ ನಿಮ್ಮದನಿಯಾ ನಿಲ್ಲ ವಡೀಲಿ ಸೋಬಾನವೇ ಸೋ|