ಆರುವರ್ಗವಾ | ಹರಿದು ಬಿಸುಟೆಂವಾ |
ಹರವಾಕ್ಕ ಕಚ್ಚೆಯ ಮೂರುಗುಣಂಗಳ
ಬಿಗಿದು ಹಿಡಿಯೆಂದಾ | ಆರ‍್ನಾಕ್ತಾ ಮುವತ್ತಾರು ತಪ್ಪದಾ
ಮೂಲ ಪರಿಯೆಂದಾ ||
ಬಲು ಸಿಟ್ಟಿನಿಂದಾ || ಮೂರು ಕರಣವು
ಸುದ್ದಿಯಿಲ್ಲದೆ | ನೂರು ಕಾಲವು ತಪಗೈದೂವೆ
ತೋರದಾತ್ಮನಂದ ಸುಖವೆಂದಾ |
ಜೋಪಾನವೆಂದಾ | ಯ |
ಎಂಟು ಮದಗಳ ಸೊಂಟ ಮುರಿಯಂದಾ || ಪಣಪಂಟ
ಮಾತಿನ ಗಂಟು ಕಳ್ಳರತೆಂಟೆ ಬೇಡೆಂದಾ || ನೀನಂಟಿ
ಕೊಂಡರೆ ಗಂಟ ಕತ್ತರಿಸುವವರು ತಿಳಿಯೆಂದಾ
ಮತಿಯಿರಲು ಯೆಂದಾ || ಯ ||
ತುಂಟದೈವರ ಕೆರೆಯೊಳಿರುಸುತೇ || ಎಂಟು
ಅಕ್ಷರಗಳನು ಪಡಿಸುತೇ ಕಂದಕ್ಕೊಬ್ಬನ
ಕಳೆದು ನಡೆಯೆಂದಾ || ನಿರ್ಗುಣ ಎಂದೆಂದಾ
ಕಾರಣದ ಗುರುವರನೆ ಬೇಕಂದಾ || ಅವ
ದೇವಗುರು ಅಪಾರ ಮಹಿಮ | ನಿಹಿತ
ನವನೆಂದಾ || ಆಗುರುವಿನಿಂದಾ ||