ಗಹನ ವಿಷಯಗಳನ್ನು ಸರಳ ಕನ್ನಡದಲ್ಲಿ ಜನಸಾಮಾನ್ಯರಿಗೆ ಪರಿಚಯಿಸಿ ಕೊಡುವ ಪ್ರಸಾರ ಮಾಲೆಯನ್ನು ನನ್ನ ಈ ಕಿರು ಪುಸ್ತಕವನ್ನು ಪ್ರಕಟಿಸಲು ಮುಂದೆ ಬಂದಿರುವ ಮತ್ತು ಈಗಾಗಲೇ ನನ್ನ ‘ವೇದಗಳಲ್ಲಿ ಜನಸಾಮಾನ್ಯರು’ ಹಾಗೂ ‘ದೇವರನ್ನು ಕುರಿತು : ಒಂದು ಬಹುಮುಖಿ ನೋಟ’ (ಸಂಪಾದಿತ) ಕೃತಿಗಳನ್ನು ಪ್ರಕಟಿಸಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ನಾನು ಅತ್ಯಂತ ಅಭಾರಿಯಾಗಿದ್ದೇನೆ.

ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ವಿಶಾಲ ಬಯಲಿನಲ್ಲಿ ಬೆಳಕಿನ ಬೀಜಗಳನ್ನು ಬಿತ್ತಿ, ಇತ್ತೀಚೆಗೆ ಕರ್ನಾಟಕದ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಬಿ.ಎ. ವಿವೇಕ ರೈ ಅವರು. ಈಗ ಕನ್ನಡ ವಿಶ್ವವಿದ್ಯಾಲಯದ(ಪ್ರಭಾರ) ಕುಲಪತಿಗಳಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿರುವ ಡಾ. ಕೆ.ವಿ. ನಾರಾಯಣ ಅವರು, ಪ್ರಸಾರಾಂಗದ ಸಮರ್ಥ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರು ಹಾಗೂ ಸಹಾಯಕ ನಿರ್ದೇಶಕರಾದ ಶ್ರೀ. ಬಿ. ಸುಜ್ಞಾನಮೂರ್ತಿ ಅವರು, ಈ ಕೃತಿಯ ಪ್ರಕಟಣೆಗೆ ತಮ್ಮದೇ ಆದ ರೀತಿಯಲ್ಲಿ ನೆರವಾಗಿದ್ದಾರೆ. ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ.

ಈ ಕೃತಿಯ ರಚನೆಯ ಕಾಲದ ನನಗೆ ಸೂಕ್ತ ಸಲಹೆಗಳನ್ನು ನೀಡಿ ಬೆಂಬಲಿಸಿದ ಡಾ. ಟಿ.ಆರ್. ಚಂದ್ರಶೇಖರ್, ಡಾ. ಎಸ್.ಜಿ. ವಿರೂಪಣ್ಣ ಮತ್ತು ಪ್ರೊ. ಎಸ್.ಟಿ. ಶಿವಪ್ಪ ಅವರಿಗೆ ನಾನು ಋಣಿಯಾಗಿದ್ದೇನೆ.

ಬಿ.ವಿ. ವೀರಭದ್ರಪ್ಪ