ವಂದಲ್ಲಾ ವಂದೂರೊಳಗೆ ಒಂದ ಗಂಡ ಹೆಂಡ್ತಿ ಇದ್ದರು. ಇದ್ರೆ ಗಂಡನೂ ಕೆಪ್ಪ, ಹೆಂಡ್ತಿನೂ ಕೆಪ್ಪಿ. ಹೀಗೆ ಕೆಲವು ಕಾಲ ಕಳೀತು. ಒಂದೇ ಒಂದು ಜ್ಯೇಷ್ಠ ಪುತ್ರ ಹುಟ್ದ. ಅವ್ನ ಸಾಕಿ ದೊಡ್ಡವನನ್ನಾಗಿ ಮಾಡಿದ್ರು. ಸುಖದಿಂದ ಕಾಲ ಕಳೆಯುತ್ತಿದ್ದರು. ಅವರ ಉದ್ಯೋಗ ಗದ್ದೆ ಹೂಡೂದು. ಆಮೇಲೆ ಮನೆಗೆ ಬರುತ್ತಿದ್ದ. ಪ್ರಾಯಕ್ಕೆ ಬಂದ ಮಗನಿಗೆ ಮದುವೆಯನ್ನು ಮಾಡುವ ಕರ್ತವ್ಯ ತಂದೆ- ತಾಯಿಗಳದು. ಮಗನಿಗೆ ಮದುವೆ ಮಾಡಿದರು.

ಮಗನ ಹೆಂಡತಿ ಕೆಪ್ಪಿಯಾಗಿದ್ದಳು. ಮಗನೂ ಕೆಪ್ಪ, ಗದ್ದೇ ಹೂಡುಕೆ ಹೋದ ತನ್ನ ಗಂಡನಿಗೆ ಅನ್ನವನ್ನು ತೆಗೆದುಕೊಂಡು ಹೋಗುತ್ತಿದ್ದಳು.

ಹೀಗೆ ಕಾಲ ಕಳೆಯುತ್ತಿರುವಾಗ ಒಂದು ದಿವಸ ದಾರಿಯ ಮೇಲೆ ತಿರುಗುವವನಿಗೆ ದಾರಿ ತಪ್ಪಿ ಗದ್ದೆ ಹೂಡುವಲ್ಲಿಗೆ ಬಂದ. ಆ ಮೇಲೆ ಹೂಡುತ್ತಿದ್ದ ಈ ಕೆಪ್ಪನ ಹತ್ತಿರ ಕೇಳಿದ. “ಈ ದಾರಿ ಯಾವೂರಿಗೆ ಹೋಯಿತು?” ಎಂದು ಕೈ ತೋರಿದ. ಗದ್ದೆ ಹೂಡವ ಕೆಪ್ಪ ಕೂಡಲೆ ಉತ್ತರ ಕೊಟ್ಟ “ನನ್ನ ಎತ್ತಿನ ಹೆಸರು ಹಂಡ, ಒಂದು ಹುಂಡ ನಿಮಗೆ ಬೇಕೇನು?” ಎಂದು ಕೇಳಿದ.

ಇವನಿಗೆ ಕಿವಿ ಕೇಳುವುದಿಲ್ಲ. ಹಾಗಾಗಿ ಈ ರೀತಿ ಹೇಳುತ್ತಿದ್ದಾನೆ ಎಂದು ಹೇಳಿ ಮುಂದೆ ಸಾಗಿದ. ಆಮೇಲೆ ಈ ಕೆಪ್ಪನ ಹೆಂಡತಿ ಬುತ್ತಿ ಊಟ ತಕೊಂಡು ಬಂತು. ಊಟವನ್ನು ಗಂಡನಿಗೆ ಕೊಟ್ಟ ಕೂಡಲೆ ಹೇಳಲಿಲ್ಲೆ ಶುರು ಹತ್ತಿದ. ವಬ್ಬ ಬಂದು ನಮ್ಮ ಹಂಡನನ್ನು ನಮ್ಮ ಹುಂಡನನ್ನೂ ಕೇಳಿದ, ಆಮೇಲೆ ಹಾಗೇ ದಾರಿ ಸಾಗಿ ಬಿಟ್ಟ ಎಂದು ನಗೆಯಾಡಿ ಬಿಟ್ಟ.

ಆಮೇಲೆ ಹೆಂಡತಿಗೆ ಭಯಂಕರ ಸಿಟ್ಟು ಬಂತು. ಗಂಡ, ಯಾವ ರೀತಿ ಅಡಿಗೆ ಮಾಡಿದೆ ಊಟ ಮಾಡಲು ಆಗುವುದಿಲ್ಲ ಎಂದು ಗಂಡ ಹೇಳಿದ ಎಂದು ತಿಳಿದಳು “ನಿಮ್ಮ ತಾಯೊ.? ನಿಮ್ಮ ತಾಯಿ ಮಾಡಿದವಲು ನಾನೋ ಮಾಡಿದವಳು ನನಗೆ ಸಿಟ್ಟು ಮಾಡುಕೆ” ಅಂತು.

ಇವ ಮನಿಗೆ ಬಂದ ಅವನಪ್ಪ ಹುರುಳಿ ಬೇಯ್ಸಕಂತ ಅವನೆ. ವಲಿ ಯೇನ್ ಕತ್ತುದಿಲ್ಲ. ತಾಯಿ ಮಂಡೆ ಹಿಕ್ಕುತ್ ಜಗಲಿಯ ಮೇಲೆ ಕೂತುಕೊಂಡಿದ್ದಾಳೆ. ಅತ್ತೆಗೆ ಜೋರು ಮಾಡಿತು. “ತಾನೊ ಅಡಗಿ ಮಾಡಿದವಳು? ನೀನೋ? ನಿನ್ನ ಮಗ ನನಗೆ ಬಹಳ ಬಯ್ದು ಬಿಟ್ಟ” ಅಂದಿತು.

ಅತ್ತೆಗೆ ಸಿಟ್ಟೇ ಬಂತು, ಸಿಟ್ಟು ಬಂದಿ ಅತ್ತೆ ಆಸರೀದು, ಗಂಜೀದು ಸುದ್ದಿ ಕೇಳಲಿಲ್ಲ ನೀನು ಮಂಡಿ ಹಿಕ್ಕಂಡೆ, ಮಿಂಡನ ಮನಿಗೆ ಹೋಗಲು ತಯಾರಾಗಲು ಹೋಗಿದ್ದೆಯೇನು ಹೇಳಿ ಸೊಸೆ ಕೇಳಿತು.

ಕೇಳಿ ಕೂಡಲೆ ಏನು ಮಾಡಿತು ಅಂದರೆ ತನ್ನ ಗಂಡನ ಇದ್ದಲ್ಲಿ ಹೋಯಿತು. ಅತ್ತೆ ಹುಳ್ಳಿ ಬೇಯಿಸುತ್ತಿದ್ದ ಗಂಡನಲ್ಲಿಗೆ ಹೋದಳು. ಕಿವಿ ಕೇಳದಿದ್ದ ಕಾರಣ ತನ್ನ ಕೈಯಿಂದ ಗಂಡನನ್ನು ಸನ್ನೆ ಮಾಡಿ ಕೇಳಿದಳು. ನಿಮ್ಮ ಸೊಸೆ “ಮಿಂಡನ ಮಾಡುಕೆ ಮಂಡೆ ಬಾಚ್ಕಂತ್ ಇರವಿಯಾ ಹೇಳಬಹುದೊ?” ಅವನಿಗೆ ಹುರಳಿ ಬೇಯ್ಸಕಂತ ತಿಂದಕಂತ ಕುಂತಿದ್ಯೊ ಕೇಳ್ತು, ಕೇಳ್ತ, ವಟ್ಟು ಜನ ಉಂಬುಕೆ ಕೂತರು. ಗದ್ದಿ ಹೂಡುಕೆ ಹೋಗ ಮಗ ಕೇಳ್ತ” ಅತ್ತೆ ಕೈಲಿ. ಹಾದಿ ಹೋಕ ಬಂದಿದ್ದ. ನಾನು ಹಂಡಗೆ ಅರ ವರ ಹುಂಡಗೆ ಮೂರ ವರ ಹೇಳ್ದೆ. ಅಟ್ ಹೇಳ್ದವ ಹಾಗೆ ಹೋದ ಹೇಳ್ದ. ಯಜಮಾನಗೆ ಸನ್ನಿಯಿಂದೇ “ಹುರಳಿ ಬೇಯ್ದಕಂಡು ತಿಂತ ಕೂತಿದ್ದಿರಿ ನೀವು” ಎಂದು ಹೇಳಿದ್ದು ಕೇಳಿಸಿತು.

 ಹೇಳಿದವರು:

ಶ್ರೀ ಧಾಕು ಮಾರು ಪಟಗಾರ,
ಮಸಳೆಸಾಲು, ಅಘನಾಶಿನಿ, ೭೫ ವರ್ಷ, ಬರಹ ಕಲಿತವರಲ್ಲ.