ಗಂಡ ಹೆಂಡ್ತಿ. ಮತ್ತೊಂದು ಅತ್ತುಗಿ. ಅವಿಗೆ ಮಗಳ ಜ್ಞಾನಾಯ್ತು. ಮಗನೇ, ಅಕ್ಕನದಲ್ಲಿ ಹೋಬೇಕು ಮಾಡನಲ್ಲೆ ಸಣ್ಣಕ್ಕಿ ಮಾಡ್ಕಂಡಿ ಕೋಳಿ ತುಕ್ಕಿ ಮಾಡ್ಕಂಬಾ ಅಂತು. ಬುತ್ತಿ ಕಟ್ತು. ತಕಂಡ್ ಹೋಯ್ತು. ಮೊಟ್ಟೆ ಅಲ್ಲಿಟ್ಟು ಮೈನೀರಿಗೆ ಕೂತ್ತು. ಮೊಟ್ಟೆ ಯಂತದೋ ತಕಂಡ ನಡೀತು. ಹಿಂದೇ ಬಂತು. ಅಲ್ಲಿ ನೋಡೂವರಿಗೆ ಅಕ್ಕಿನೂ ಇಲ್ಲ ಮೊಟ್ಟೆನೂ ಇಲ್ಲ. ಸೊಸಿ ಕೋಳಿ ಕೊಚ್ಕಂಡಿ. ಅಕ್ಕಿರೊಟ್ಟಿ ಮಾಡ್ಕಂಡಿ ತಿಂತ್ತು. ನಿನ್ನ ಹೆಂಡ್ತಿ ಉಂಡಿತ್ತು. ಮಗನೇ, ಬರವರಿಗೆ ಅಕ್ಕಿನೂ ಇಲ್ಲ. ಮೊಟ್ಟೆನೂ ಇಲ್ಲ ಅಂತು.

ಅವ ಹಿಂಡ್ತಿ ಕೈಲಿ ಹೋಗ್ವನೋ ಕೇಳ್ದ. ಹೂಂ ಅಂತು. ಸೂಡ್ಲಿ ಗುಡ್ಡಿನಲ್ಲಿ ಕೂರ್ಸಿ, ಅಗ್ನಿ ಕೊಡ್ಕಂಡಿ ಹಿಂಡ್ತಿ ಹಮ್ಮಿಸಿಕೊಂಡ. ಈಡಿನ ಮೇಲೆ ಬೆಂಕಿ ಪೆಟ್ಗಲ್ಲ. ಮನಿಗೆ ಬಂದು ಆ ಮೇನ್ನ ಸೌದಿ ತಕ್ಕಂಡ್ತು. ಅರಿಕಲ್ಲ ಇಟ್ ಅರ ಮೇನ್ ಸೌದಿ ಹಚ್ತು. ಅಗ್ನಿ ಕೂಡಿ ದೂಡೆ ಮರ ಹತ್‌ತು. ಅವ ಬೆಂಕಿ ಹಾಕಿ ಮನಿಗೆ ಬಂದ. ಹೆಂಡ್ತಿ ಹಿಂಗ್ ಮಾಡ್ಕ ಬಂದಿದೆ. ಎಲಗಾರು ತಂದಿ ಗೋಕರ್ಣಕ್ಕೆ ಹೋಗ್ಬೇಕಾಯ್ತು. ಹೇಳಿ ಬಂದ. ಅರಿಕಲ್ಲು ಬರೀ ಬೂದಿ. ಅವಿಗೆ ಹೇಳ್ದ. ಸುಟ್ಕಬಾ ಹೇಳಿದ್ನೇ ನಾನು.

ಒಳ್ಳೇ ಮಜ್ಜನ ಬಂತು. ಸೊಸೆ ಬಂತು. ತಂಗಿ ಸುಟ್ಕ ಬಂದಿನ್ಕಂಡ ಎಲ್ಲಿದ್ದೆ ಕೇಳ್ತು. ಮಾವ ಕರ್ಕರಿ ಮಾಡ ಇಟ್ಕಂಡ್ ಕಜ್ಜಾಯ ಮಾಡಿ ಹಾಕ್ದ. “ಏನ್ ಲೈಕಾಗವ್ನೆ ನನ್ನ ಚೆಂದ್ ಮಾಡ್ ಕಳ್ಗಸ್ದ. ಅತ್ತಿ ಕಳ್ಗು ಹೇಳ್ದ” ಅಂತು.

“ಅಪ್ಪರು ನನ್‌ಕರ್ಕಂಬಾ ಹೇಳಾರಿಕಂಡ. ನಾವೊಂದ ಸಾರೆ ನೋಡ್ಕಂಬರಬೇಕಲ್ಲೆ” ಅಂತು. ಬೆಂಕಿಪೆಟ್ಗೆ ತಕಹೋದ. ಈಡ ಮಾಡ್ದ. ಕಡಸಾರೆ ಅಗ್ನಿಕೊಡ್ದ. ಅವಿ ಹೆಮ್ಮಿಸಿದ ಬೆಂಕಿ ಹಾಕ್ ಬಂದ, ಅವಿ ಸುಟ್ ಹೋಯ್ತು.

 ಹೇಳಿದವರು:

ದಿ. ಮಹಾದೇವಿ ರಾಮ ಪಟಗಾರ,
ಹೆಗಡೆ ಊರು