ಒಬ್ಬ ರಾಜನಿಗೆ ಇಬ್ಬರು ಹೆಂಡತಿಯರು ಇದ್ದರು. ಅವರಲ್ಲಿ ಒಬ್ಬಳು ಬೆಳ್ಗೆ. ಇನ್ನೊಬ್ಬಳು ಕಪ್ಪು. ಒಮ್ಮೆ ತಾನು ಹೆಚ್ಚು, ತಾನೇ ಹೆಚ್ಚಿನವಳು ಎಂದು ಅವರಲ್ಲಿ ಜಗಳ ಶುರುವಾಯಿತು. ರಾಜ ಬಂದ ಮೇಲೆ ಇಬ್ಬರಲ್ಲಿ ಯಾರು ಹೆಚ್ಚು ಎಂದು ನಿರ್ಧರಿಸಬೇಕೆಂದು ಹೇಳಿದರು.

ರಾಜನು ಜಗಳವಾಡಬೇಡಿ ಎಂದು ಎಷ್ಟು ಹೇಳಿದರೂ ಅವರು ಕೇಳಲಿಲ್ಲ. ನಿರ್ಧಾರ ಮಾಡಬೇಕೆಂದು ಹಟ ಹಿಡಿದರು. ರಾಜನು ಒಂದು ಕಾಗದ ಪೆನ್ನು ತರಿಸಿಕೊಂಡು ಇಬ್ಬರ ಹತ್ತಿರವೂ ಅದರ ಮೇಲೆ ಏನನ್ನಾದರೂ ಬರೆಯಿರಿ ಎಂದನು. ಅವರು ಬರೆದರು.

ಆಗ ರಾಜನು “ಕಾಗದ ಬೆಳ್ಳಗೆ, ಶಾಯಿ ಕಪ್ಪ, ಕಾಗದವಿಲ್ಲದೆ ಪೆನ್ನಿಗೆ ಬರೆಯಲಿಕ್ಕೆ ಆಗುವುದಿಲ್ಲ”.

ನನಗೆ ನೀವಿಬ್ಬರೂ ಅಷ್ಟೆ ಪ್ರಾಣ ಪ್ರಿಯರು. ನನಗೆ ನೀವಿಬ್ಬರೂ ಬೇಕು. ಒಬ್ಬಳು ಇಲ್ಲವಾದರೂ ನನ್ನ ಜೀವನ ವ್ಯರ್ಥ. ನಾನು ಪೆನ್ನು. ನಿಮ್ಮಲ್ಲಿ ಒಬ್ಬಳು ಕಾಗದ, ಒಬ್ಬಳು ಶಾಯಿ. ಇಬ್ಬರೂ ನನಗೆ ಹೆಚ್ಚಿನವರು” ಎಂದು ಹೇಳಿ ಅವರನ್ನು ಸಮಾಧಾನ ಗೊಳಿಸಿದರು.

 ಕಥೆ ಹೇಳಿದವರು:

ಶ್ರೀ ಬೊಮ್ಮಣ್ಣ ಪಟಗಾರ,
ಬ್ರಹ್ಮೂರು