ವಂದರಸು. ಮೂರ್ ಜನ ಹುಡ್ಗರಾಗಿತ್ತು. ಮೂರೂ ಜನರನೂ ಕುಳ್ಸಕಂಡಿ “ನಾನು ಬಹಳ ಮುಪ್ಗೆ ಬಂದನೆ. ಒಂದ್ ಕೂಮನ ಪೂಜಿ ಮಾಡಿ ಸಂದ್ರದೊಳ್ಗ್ ಬಿಡ್ತೆ ತಾನು. ಒಂದ ಕೂಮನ. ತಂದ ಕೊಡಿ” ಅಂದ. ಯೇನಡ್ಡೆಲ್ಲಪ್ಪಾ ಅಂಡ್ಕಂಡಿ, ಸಮ್ದರದಲ್ಲಿ ನೆಡ್ದೆ ಬಿಟ್ರು. ಮಹಾ ದೊಡ್ಡ ಕೋಮ ಮೇನ್ ಹತ್ತಿ ಮೊಟ್ಟಿ ಹಾಕೂಕೆ ಬಂದಿತ್ತು. ಅದ್ರ ಮಡ್ದ ಕೆಡ್ಗೆ  ಬಿಟ್ರು. ಅಣ್ಣಾನೀ ಹೊರು ಅಂದ. ‘ನಾ ಹೊರ್ವಾಂಗೆಲ್ಲ ನಾ ಅನ್ನ ಸುಕ’ ಅಂದ. ನೆಡ್ಗನ ಅಣ್ನ ಕೈಲಿ ‘ನೀ ಹೊರು’ ಅಂದರೆ ‘ ನಾ ತಿರಿಸು ಕವಿ ನಾ ಹೊರ್ವಾಂಗೆಲ್ಲ’ ಅಂದ. ಇವ್ರ್ಯೇನ ಬಡ್ದಾಡಿ ಊರನ್ ಜನ ‘ಅಬಾ ಇವ್ರೆ ಏನ್ ಬಡ್ದಾಡಿರೂ’. ಆಗ ನಾಕೆಂಟ್ ಜನ್ರ ಬಂದು ಊರ ಬದಿ ಯೇಕೆ ಬಡಿದಾಡ್ರೀತಿ? ಕೇಳ್ತು. ನನ್ನಪ್ಪ ಕೂಮ್ನ ಪೋಜಿ ಇರ್ರು ಅಂದ ಹೇಡ್ತೆ. ಕೋಮನ ಪುರ್ಡ ಹಾಕ್ರು? ಹೀಗೆ ಹೇಳ್ತು.

ಊರಣ್ ಜನ್ರು ತಕಹೋದ್ರು ಇವರು. ಅನ್ನ ಮಾಡಿ ಮೂರ್ ನಾಕ್ ಸಾರೆ ತೊಳದಿ ಸಣ್ಣಕ್ಕಿ ಅನ್ನ ಮಾಡ್ರು. ಅನ್ನ ಮಾಡ್ ಅಪ್ನಿಗೆ, ಹೆರಿ ಅಣ್ನಗೆ ಬಡ್ಸರು. ಹೆರಿ ಅಣ್ಣಾ ‘ಹು ಹು ಹು ಹು ಹೆಣದ ಪರಿಮಣ’ ಆ ತುತ್ತ ತೆಗ್ದೆ ಇಟ್ ಬಿಟ್ಟ.

ನೆಡ್ಗೆನ ಅಣ್ಣನ ಯೋಳ್ ಹಾಸ್ನ ತಡಿ ಮಾಡಿ ತಡಿವಳ್ಗ್ ಹಮ್ಸ ಬಿಟ್ರು. “ಅಯ್ಯಯ್ಯೋ ಅಯ್ಯಯ್ಯೋ ನನ್ ಯೆಲ್ಗೆ ಮುರ್ದೆ ಹೋಯ್ತು ಅಂದ ಅನ್ಸು ಕಾರಣ್ಯೇನು? ತಡಿವಳಗೆ ಒಂದ್  ಮಂಡಿ ಕಸ ಶಿಕ್ತು. ‘ಇದ್ದದ್ದು ಇದು’ ಹೇಳದ್ರು ತಂದು.

ಕಿರಿ ಹುಡ್ಗನಿಗೆ ಒಂದ್ ಮೈನೆರ್ದೆ ಹುಡ್ಗಿ ಕೋಣಿಲ್ ಇಟ್ಟ ಹುಡ್ಗಿ ಅವನ್ನೊವ ಕದ ಹೆಟ್ ಬಿಟ್ಟ. ಅವ ಹೇಳತಾನೆ ‘ಇದ್ಯೆಲ್ಲಪ್ಪ ಕುರಬರ್ಗೆ ಹುಟ್ಟಿದ್ದು ಇದು. ಹು ಹು ಹು ಹು ಹು  ಕುರಿವಾಸನಿಲ್ ನಿಲ್ಲು ಕಾಗುದಿಲ್ಲ ತನ್ ಕೈಲಿ’ ಅನ್ತಾನೆ. ಅದ್ರ ತಾಯಿ ತಂದಿ ಕರಿಸಿ ಇದ್ಕ್ ಕುರಿಹಾಲ್ ಹೊಯ್ದಿರೋ ಹೇಗೆ? ಹೌದು, ತಾಗ್ ಹಾಲಿಲ್ಲಾಗಿತ್ತು. ಇದ್ಕೆ ಕುರಿಹಾಲ್ ತಂದಿ ಹೊಯ್ದ್ ಹೌದು ಅವರಂದ್ರ. ‘ಇವ, ಅವರ ಕಿಂತ ಅವ, ವಬ್ರಕಿಂತ ಒಬ್ರು ಬುದ್‌ವಂತ್ರು’ ಅಂದ್ರ.

ಸಮುದ್ರದ ತಡಿಗೆ ಕರಕ ಬಂದಿ ‘ನೀವು ಮೂರು ಜನರೂ ಕೂಮಗೆ ತಲಿ ಹಾಕ್ಕಂಡು ತರಬೇಕು’ ಅಂದ್ರ. ಮೂರೂ ಜನ್ರೂ ತಲಿ ಹಾಯ್ಕಂಡೆ ತಂದಿ ತಂದಿ ಹತ್ರ ತಂದೆ ಇಟ್ರು. ತಂದೆ ಸೋಮರಾಜ್ಞೆ ಮಾಡ್ದ. ಊರೋರೆಲ್ಲ ಕರದಿ ಕೂಮನ ಪೂಜಿ ಮಾಡ್ದ.

ಮೂರೂ ಜನರ ಕೈಲಿ ಹೊರ್ಸೆಕಂಡಿ ಸಮುದ್ರಕೆ ತಕಂಡ್ ಬಂದ ಸಂದ್ರದಲ್ ಬಿಟ್ಟಿಕೊಂಡಿ ಮನಿಲ್ ಸುಕದಲ್ ಉಳದ್ರು.

ಹೇಳಿದವರು:

ಜಟ್ಟಿ ದೇವರ್ಸು ಪಟಗಾರ,
ಮದ್ಗುಣಿ, ೬೬ ವರ್ಷ, ಶ್ರೀ ರಾಮಮಾಸ್ತರ ವರ್ಲಿಂಗಭಟ್ಟರ ಮನೆಯಲ್ಲಿ ಉಳಿದು ಬರೆದುಕೊಂಡಿದ್ದು,
ದಿನಾಂಕ:೧೮-೦೪-೭೩