ಒಂದೆಲ್ಲಾ ಒಂದೂರಾಗ ರಾಜಿದ್ನಂತೆ. ಆ ರಾಜಗೆ ಹುಡಗರಿಲ್ಲಾಗಿತ್ತಂತೆ. ಅವರ ಮನಿಗೆ ವಂದ ಆಳ ಬರತಿದ್ದ. ಅವನ ಕೈಲಿ “ಕಾಂತುಳಶಿ ತೆನಿಯ ತಂದ ಕೊಡು ತನ್ನ ಹೆಂಡ್ತಿಗೆ ಹೇಳ್ದನಂತೆ ರಾಜ. ಅವನ ಹುಡುಗಿ ಮೂರು ಕೊಡಪಾನ ತಕಂಡಿ ಹೊಳಿ ನೀರ್ಗೆ ಹೋಗಿತ್ತಂತೆ. ನೀರೆ ತಕಬತ್ತೇ ಇದ್ದಾಗ ಆ ರಾಜಾ ನೋಡ್ದಂರಂತೆ ಅದ್ರ. ನೋಡ್ಕಂಡಿ ಈ ಆಳ ಕೈಲಿ ಹೇಳ್ತರಂತೆ ರಾಜರು. “ಮೂರ ಕೊಡಪಾನ ತಕಂಬತ್ತದಲಾ ಆ ಹುಡ್ಗಿ ತನ್ಗೆ ಬೇಕು. ಎಲ್ಲಿ ಮನಿ ಹೇಳಿ ಹುಡಿಕಂಬಾ, ಪತ್ತಿ. ಮಾಡ್ಕಂಬಾ” ಹೇಳೆತ್ರು.

ಹಾಂಗೇ ಆಳು ಮನಿಗೆ ಬಂದ್ಕಂಡ ಮನಿಕಂಬಿಡ್ತ. “ಯೆಲ್ಲಿ ಪತ್ತಿಮಾಡುದು?” ಹೇಳಿ ಅವಗೆ ತೆಳುದೆಲ್ಲ. ಯೆಲ್ ನೋಡ್ಬೇಕು ಹೇಳಿ. “ಹುಡಿಕ ಬರದೆ ಹೋದ್ರೆ ತಲಿಹೊಡಿಸ್ತೆ” ಹೇಳ್ದರಂತೆ.

ಆಳ್ನ ಹುಡ್ಗಿ ಅದು. ರಾಜಗೂ ಗುತ್ತಿರೂದಿಲ್ಲ. ಅವನಿಗೂ ತನ ಮಗಳು ಹೇಳಿ ಗುತ್ತಿರೂದಿಲ್ಲ.

“ಯೆಂತಕ ಮನಿಕಂಡಿದ್ದೆ” ಕೇಳ್ತು ಹುಡ್ಗಿ. ಅಪ್ಪ “ನನ್‌ಕೈಲ್‌ಹೀಗೆ ಹೇಳರೆ ಅರ್ಸು. ಯೆಲ್ಲಿಂದ ಹುಡಿಕಬರ್ಲಿ ನಾನು ಹೇಳಿ ಮನಿಕಂಡಿದ್ದೆ” ಹೇಳ್ದ. ಕಡಿಗದ ಹೇಳ್ತದೆ, ತಾನೇ ಆಗಿತು ನೀರ್ ತಂದವ “ನಂಗ್ ಹುಡ್ಕ ಸಾಕಾಯ್ತು. ಯೆಲ್ಲೂ ಸಿಕ್‌ಲೆಲ್ಲಾ”, ಹೇಳ್ದ ಅರಸರ ಮನೆಗೋಗಿ. ಕಡಿಗೆ, “ಮೂರ್ ಕೊಡಪಾನಾ ತಂದ್ ಹುಡ್ಗೀನೂ ಪತ್ತೆ ಮಾಡ್ಲೆಲ್ಲ. ಕಾಮತುಳಸಿ ತೆನಿ ತಕಂಡಬಾ. ರಾಜ್ನ ಮನಿಲ್ ಆದ್ಯಂತೆ ಅದು. ಹೆಸ್ರ ಯೇನು, ಯಾವ ರಾಜ್ಯ ಹೇಳಿ ನಂಗೆ ಹೇಳ್ಲೆಲ್ಲ”. ಕಡಿಗಿವ ಮತ್ತೂ ತಲೆ ಬಿಶ್ಯಾಗಿ ಮನಿದಲ್ ಬತ್ತಾ ಅಳು ಬಂತವ್ನೆ ಮಗಳ ಹತ್ರೆ ಹೇಳ್ತಾ. “ಕಾಮತುಳಸಿ ಇಲ್ ತೆಲ್ ಹೋಗಬೇಕು?” ಕೇಳ್ದ ಮಗಳ ಹತ್ರ. ಹಡಿಗ ಮಗಳ ಹೇಳ್ತದೆ. “ನೀ ಹೆದ್ರೂದ್ ಬೇಡಾ, ತಾ ಹೋಗ್ ತೆಕಬತ್ತೆ. ಕುದ್ರಗಿದ್ರಿಯೆಲ್ಲಾ ತಯಾರ್ ಮಾಡು” ಹೇಳ್ತದೆ ಅವ್ನ ಹತ್ರ. ಕಡಿಗೆ ಹೋತದೆ ಗಂಡ್‌ಡ್ರೆಸ್ ಹಾಕಂಡಿ ವಂದ್‌ಗಿಳಿ ತಕಂಡ್ ಹೋತದೆ. ಸಾಕಂಡದು ಸಂತಿಗೆ ಉಳಿತದೆ ಗಿಳಿ. ಅದ್ರ ಹೆಗ್ಲಮೇನೆ ಕೂತ್ಕಂಡದೆ.

ಕಾಮತುಳಸಿ ಇದ್ದ ರಾಜನೂ ಒಂದ್ ಗಿಳಿ ಸಾಕನೆ. ಕಡಿಗೆ ಅವ್ರಮನಿಗೆ ಹೋತಲ್ರಾ ಅದು ರಾಜ ಅದ್ರ ನೋಡ್ತಾ. ಮುಂದೆ ರಾಜ್ನ ಗಿಳಿ ಅವ್ನಕೈಲಿ ಹೇಳ್ತದೆ. “ಇದು ಹುಡ್ಗಿ ಹುಡ್ಗಲ್ಲಾ” ಅಂತದೆ, ಅದು. ಕಡಿಗೆ ಅವ ಗಿಳಿ ಮಾತ ಹೌದೋ ಅಲ್ವೋ ನೋಡುಕ ಮೀವ್ಕೆ ಕರ್ಕಹೋತ. ಬಿಶಿಯಾ ಅಂತದೆ, ನೀರು. ನೀರ ಹಂಡಿಗೆ ಬಾವಿ ನೀರ ತಂದ ಹೊಯ್ತು. ಹೋಯ್ದ ಕೂಡ್ಲೆ ಹಂಡೆ ನೀರ್ ವಲೆಲ್ ಬಿಳ್ತದೆ. ಬೂದಿ ಹಾರ್ತದೆ. ಅವ್ನ ಕಣ್ಣಿಗೆ ಬೂದ್ ಹಾರ್ತದೆ, ಕಡಿಗೆ ಅವ ನೆಡ್ದ್‌ಬಿಡ್ತನೆ. ಇದ್ ಬಡ, ಬಡ ಮಿಂದ್ಕಂಡಿ ವಸ್ತ್ರ ಹಾಕಂಡ ಬಂದ್ ಬಿಡ್ತದೆ. ಬಿಳಿ ಹೇಳ ಕೊಡ್ತದೆ. “ರಾತ್ರಿ ಊಟ, ಗಂಡಸು ಊಟ್ಕ ಕೂತ ಹಾಗೆ ಚಕ್ರ ಪುಡ್ಗಿ ಹಾಕ್ಕಂಡ ಕೂತ್ಕ” ಹೇಳ್ತದೆ. ಊಟ ಮಾಡಿತು. ಕಡಿಗೆ ರಾತ್ರಿಗೆ ಮಲ್ಗ್‌ತ್ರಲ್ಲಾ? ಊಟ ಮಾಡ್ಕಂಡ್ ಮಲಿಕಣಿತ್ರು ಸಂತಿಗೇಯ.

ಕಡಿಗೆ ಹಾಂಗೆಯ ರಾತ್ರಿಗೆ ನಿದ್ರಿ ಬತದ್ಯಲಾ ಅವನಿಗೆ ನಿದ್ರೆ ಬಂದ್ ಕೂಡ್ಲೆಯ ಕಾಮತುಳಸಿ ಕೆನಿಯಾ ಕದ್ಕಂಡ್ ವೋಡೆ ಬರ್ತದೆ.

ಅವಗೆ ಕದ್ದ ಹೋಯ್ತು ಹೇಳ್ತದೆ. ಕಡಿಗೆ “ತಂದಿ ಈ ರಾಜಗೆ ಕೊಡು” ಹೇಳಿ ಅವಗೆ ಕೊಡ್ತದೆ ಅದು. ಕಡಿಗೆ ರಾಜ ಆಳಿಗೆ ಚಲೊ ಬಹುಮಾನ ಕೊಡ್‌ತ್ರು. ಮದವೆಲ್ಲಾ ಗುದೆಲ್ಲ. ನಂಗೆ ಅದ್ರೆಲ್ಲಾ ಹೇಳಲೆಲ್ಲ.

ಹೇಳಿದವರು:
ಸಾ. ಪರಮೇಶ್ವರಿ ನಾಗಪ್ಪ ಪಟಗಾರ,
೨೭ ವರ್ಷ, ೫ನೇಯತ್ತೆ ಊರಕೇರಿ, ೧೨-೧೦-೯೯, ಶ್ರೀ ಎಂ.ಜಿ. ವೈದ್ಯರ ಮನೆಯಲ್ಲಿ ಬರೆದುಕೊಂಡದ್ದು