ತಂದೆ ತಾಯಿ ಸತ್ತೋರು ಬೇಡತ ಬಂದರು ಮೂರು ಮಕ್ಕಳು. ಅರಸು ಮನೆ ಸಿಕ್ತು. ಹೆಂಡ್ತಿ ಕೈಲಿ ಹೇಳ್ದ. “ತುತ್ ಕೂಳಹಾಕು ಯಾವುರಾಯ್ತೋ” ಅಂದ. ಕೂಳ ಹಾಕ್ತು. “ತಮ್ಮ, ಮನಿಕಂಬ್ದ್ ಯೆಲ್ಲಿ? “ಕೇಳ್ದ ಅರಸು.  “ಹತ್ತಿ ಹಾಸ್ಗೆ ಬೇಕು” ಅಂದ. ಮೂರನೆಯವ “ನನ್ಗೆ ಕುರಿಚೊಮ್ಮ ಬೇಕು” ಅಂದ. ಕೊಟ್ರು. ಮೂರನೆಯವ “ನನಗಿಟ್ ಹಸಿ ಚಾಪಿ ಕೊಟ್ರೆ ಸಾಕು.”

ಹಿರಿಯವ “ಹತ್ತಿ ಹಸೆಕೊಟ್ಟರು. ಬೆನ್ನಟ್ಟು ಅಣಿತು” ಅಂದ. “ಹತ್ತಿ ಹೊಡೆವವ ಬಂದರೆ ಹೇಳ್ತೆ” ಅಂದ.

ಯರಡನೆಯವನ್ನ ಕೇಳಿದರು. ಅವನ ಯದ್ದವ ಯೇನಂದ? “ಒಡೆರ್ ಹಾಸ್ಗೆ ಕೊಟ್ಟರು. ಉಚ್ಚಿಪರಮಳ” ಅಂದ. “ಏನು ಕುರಿ ಹೊಡೆವವನ ತಕತಂದರೆ ಹೇಳ್ತೆ”.

ಮೂರನೆಯವ “ಹಾಸ್ಗೆ ಹೆಣನಪರಿಮಣ” ಅಂದ. “ಏನೋ? ಗದ್ದಿ ಹೊಲ ಮಾಡ್ವರ ಕರಕಂಬಂದ್ರೆ ಹೇಳ್ತೆ” ಅಂದ.

ಹತ್ತಿ ಹೊಡೆವವ ಕರ್ಕ ಬಂದ್ರ. ಬಿಚ್ಚಿದರು. ಮಂಡೆಕಸ ಅದೆ. ಕುರಿ ಹೊಡೆವವನ ತಂದ್ರ, “ಕುರಿ ಕಟ್ಟಿ ಹಾಕಿದ್ದೆ. ಉಚ್ಚಿ ಹೊಯ್ದಿತ್ತು. ಚಮ್ಮ ಪರಿಮಳ” ಅಂದ.

ಗದ್ದಿ ಹೊಲ ಗೌಡ ಬಂದ. ಗೌಡ, ಯಂತದು ಅಂತ್ರಿ, ಗದ್ದಿ ಕಂಬಿ ಕೊಟ್ಟಿದ್ರಲ್ಲ, ಗದ್ದಿ ಉರಿತರಲ್ರ? ಮೇಲೆ ಹೆಣ ಸುಡ್ತಿರು. ಸುಟ್ಟ “ಬೇರೆ ಗದ್ದಿಲ್ ಬಿದ್ದ ಬೆಳ್ದ ಅಕ್ಕಿ ನೀವ್ ಉಣ್ಣಿಲ್ವ? ಅದೇ ಹೆಣದ ಪರಿಮಳ” ಅಂದ.

ಮತ್ತೊಂದು ರಾತ್ರಿ “ಏನು ಬೇಕು?” ಕೇಳಿದರು. ಒಂದನೆಯವ ‘ಹತ್ತು ನೂರು ರೂಪಾಯಿ ಬೇಕು’ ಅಂದ.

ಯಾಕೆ? “ಪದ್ಮಕ್ಷಿ ಸೂಳೆ ಮನೆಗೆ ಹೋಗಬೇಕು”

ತಕ ಹೋದ. ಹರಿವಾಣದಲ್ಲಿ ಹಾಕದ. ಬೆಳ್ಳಿಗೆಂಟಿ ಹೊಡೆದ.” ಇಂತಿಷ್ಟು ಹೊತ್ಗೆ ಬತ್ತೆ ಹೇಳಿ ಬಂದ.

ನಾಕುಗೆಂಟಿಗೆ ಇಂತಿಟಿ ಗೆಂಟೆಗೆ ಹೋದ. ರೂಪಾಯಿಯೂ ಇಲ್ಲ, ಪದ್ಮಾಕ್ಷಿ ಸೂಳೆನೂ ಇಲ್ಲ.

ಎರಡನೆಯನಗೆ ನಿಮಗೇನು ಬೇಕು “ಒಂಬತ್ತು ನೂರು, “ತಕಂಡ ಅಣ್ಣ ಹೋದಲ್ಲಿ ಹೋಗಿ ಹಾಕಿದ. ಬೆಳ್ಳಿಗಂಟೆ ಹೊಡೆದು ಇಂತಿಟ್ ಹೊತ್ತಿಗೋದ, ರೂಪಾಯಿನೂ ಇಲ್ಲ, ಪದ್ಮಾಕ್ಷಿನೂ ಇಲ್ಲ.

ಮೂರನೆಯವ “ಏಳನೂರು ಬೇಕು” ಅಂದ. ಅಣ್ಣ ನೀವ್ ಎಲ್ಲಿ ಹೋಗಿದ್ರ್ಯ?

ಹೀಗೆ ಹೋಗಿ ಬಂದಾಯ್ತು”, ಅಂದ್ರು.

ಕಿರಿಯವ ಹಾದಿಹಿಡಿದು ಹೋದ, ಅಜ್ಜಿಮುದ್ಕಿ ಮನಿತ್ತು. ಅಲ್ಲಿ ಹೋಗಿ ಕೂತ್ಕಂಡ. ಅದು ಪದ್ಮಾಕ್ಷಿ ಸೂಳೆ ಮನ್ಗೆ ನದಿಗುಡ್ಸೂಕೆ ಹೋತದೆ. ಯಾರೆ ಇಲ್ ಬಂದ ಕೂತರು? “ನನ್ಗೆ ಹೊಟ್ಟಿಕೊಳಿಲ್ಲ”. “ನಾ ಪದ್ಮಾಕ್ಷಿ ಸೂಳಿ ಮನ್ಗೆ ಹೋಗಿ ನಾಕಶಿದ್ದ ಅಕ್ಕಿ ತತ್ತೆ. ನಿನಗೆಲ್ಲಿ ಕೂಳ ಹಾಕಲೀ” ಕೇಳ್ತು. (ನಾನೂ ಪದ್ಮಾಕ್ಷಿ ಸೂಳಿ ಮನೆಗೆ ಬಂದಿದ್ದೆ) ಅಂದ.

“ಒಂದ ಮಾನ್ಗೆ ರಾಗಿ, ಒಂದ ಮಾನ್ಗೆ ಅಕ್ಕಿ, ಒಂದ ಶೇರು ಮೆಣಸು, ಎಲ್ಲ ತಂದ ಕೊಟ್ರೆ ಅಡ್ಡಿಲ್ಲ.” ಅಂತು. ತಂದ ಕೊಟ್ಟ. “ತಮ್ಮ, ಒಂದು ತೊಲ್ಯ ಬಂಗಿ ಸೊಪ್ ತಕಂಬಾ” ಅಂತು ಏನ್ ಮಾಡಬೇಕು? ತಕಂಡಿ ಹೇಗೆ ಹೋಗಬೇಕು?

ಅಲ್ಲಿ “ಬೊಕಣಾಚಾರಿಮನೆ ಯಾವದು? ಬಂಗಿ ಗುಡಗುಡಿ ಶೇದು ಮನೆಯಾವದು?” ಕೇಳು. “ನಾನೇ ನಾನೇ” ಅಂತಾ ಹೇಳು ಹೋಗು ಅಂತು. ಹೋದ.

“ಏನ್ ಬನ್ದ್ರಿ?” ಅಂದ. ಕಣ್ ಕಾಂಬೂದಿಲ್ ಅವಗೆ. “ಬಂಗಿಗುಡಗುಡಿಶೇದು ಮನೆಯಾವದು? ಹೇಳಿ?” ಶಕನ ಕೇಳ್ಬೇಕು ಬಂದೆ ಅಂದ. ಬಂಗಿ ಉಬ್ಬ ಸೇದ್ದ “ಆಹಾಹಾಹಾ! ಯಾವ ತಾಯಿ ಹೊಟ್ಟೆಲಿ ಹುಟ್ಟಿವನಪ್ಪ ! ಆಹಾ! ಅಂದ. ಮತ್ತೆ ಉಬ್ಬು ಸೇದಿದ. ಯಾಕೆ ಬಂದೆ?

“ಪದ್ಮಾಕ್ಷಿ ಸೂಳೆ ಬಗ್ಗಿಸು ಉಪಾಯ ಯಾವದು?”

“ನಾಕು ವರ ತಕಂಬೇಕು. ಶಣ್ಣಕ್ಕಿ ವಂದ ಶಿದ್ದಿ ತಕಂಬೇಕು. ಒಂದ್ ವರ್ಲಿಬೆಂಡು ತಕ್ಕಂಬೇಕು. ಒಂದ್ ಕೋಳಿ ಮೊಟ್ಟೆ, ವಂದ್ ಬೊಯ್ಡಗಾಯಿ ಮೂರ್ ಕಬ್ಬಿಣದ ಮೊಳಿ ತಕಂಬೇಕು.”

ಮೊದಲ ಬಾಗ್ಲ ಹೊಕ್ಕೂತ್ನೂವ ಶಿಪಾಯರು ನಿಲ್‌ತಾದೆ. ಅವರ್ಗೆ ನಾಕು ವರ ಕೊಡಬೇಕು ನೆಡಿತಾರೆ ತಕಂಡಿ.

ಮುಂದಿನ ಬಾಗಿಲಿಗೆ ಹೋಗಬೇಕು ಒಂದ್ ಬೊಂಬೆ ಕತ್ತಿ ತಕಂಡಿ ನಿಲ್ತದೆ. ಕತ್ತಿಲ್ ಅಚೀಚ್ ಕಡೂಕೆ ಮಾಡ್ತದೆ. ನೀವ್ ಮೊಳಿಯ ಕಂಕ್ಳಿಕ್ಕೆ ಹಾಕಿ ತಿರುಗಿಸಬೇಕು. ಕೈ ಉದುರಿ ಬೀಳತದೆ ಒಂದ್ ಕಬ್ಬಿಣ ಮೊಳೆ ತಿರಗಿಸಿದರೆ.

ಮುಂದೆ ಹೋಗು. ನವಿಲ ಸಿಕ್‌ತದೆ. ಯರಡ ಶಿದ್ದೆ ಬೆಣತಿಗೆ ಅಕ್ಕಿ ಹಾಕು. ಮುಂದೆ, ಹುಲಿ ಬತ್ತದೆ. ಹುಲಿಗೆ ವರ್ಲಿಬೆಂಡ್ ಹಾಕು. ತಿಂದ್ಕಹೋತದೆ. ಮುಂದೆ ಮಾಶೇಶ ಶಿಕ್ತದೆ. ಒಂದ್ ಕೋಳಿ ಮೊಟ್ಟಿ ಹೊತಾಕು.

ಮುಂದೆ ಹೋತ್ನೆ ಜಡೆ ತೀರ್ಥ, ಶಣ್ಣ, ದಿಡ್ ಆಚೆ ಹೊಳಿ ಈಚೆ ಹೊಳೆ, ಅದರ ಮೇಲಿನ ಬೊರ್ಡಗಾಯ ಗಿಡದ ಮೇನ್ ಬಿಡಬೇಕು. ಅದು ಹೊಡಚಾಡಿದ ಹಾಗೆ ಹೋಗಬೇಕು. ತಂಬಿಗಿಲಿ ಅಚ್ಚೇರು ನೀರು ಇರಿಸತಾರೆ, ಅರ್ಧಸೇರ ಇಟ್ಕ ಕಯ್ಕಾಲ್ ತೊಳ್ಕ ಹೋಬೇಕು.

ಮುಂದೆ ಮಂಚದ ಮೇನೆ ಕುಳ್ಳುವರಿಗೆ ಹಸಿಹಾಕುವದಿಲ್ಲ. ದೆಪ್ ಕಚ್ಚೂದಿಲ್ಲ. “(ಮುಂದೆ ಅವ ಹೇಳಿದಂತೆ ಮಾಡಿ ಸೂಳೆ ಮನೆಗೆ ಹೋದ ನಿರೂಪಕಿ ಇದನ್ನು ಹೇಳಲಿಲ್ಲ) ಅವ ಕೂತ್ಕಂಡ್ ಪದ್ಮಾಕ್ಷಿ, ಸೂಳಿ ಮನೆಕಂಡ. “ಹಶಿಹಾಕ್ವರಿಲ್ಲ” ಹೇಳ್ತ. ಇದು ಆಳಿಗೆ ಶಂಗಾರ ಮಾಡಿ ಪದ್ಮಾಕ್ಷಿ ಸೂಳೆ ನಮೂನಿ ಮಾಡಿ ಕಳ್ಸತಾಳೆ.

ಹಸಿ ಹಾಕುವಳು ಬಂದ್ಲು.

ತೂಳಿದು ಹಾಕಿದ. ಅದು ಹೋಯ್ತು. ಸೂಳಿ ಚಾಕ್ತಿನೂ ಬೇಡ ಹೇಳಿ ಬಾಯ್ ಹೊಯ್ಕಂತ ಹೋತದೆ.

ಎರಡನೆ ನೆಣಿ ಕತ್ತಸುವರಿಲ್ಲ ಅಂದ. ದೀಪ ಕತ್ಸುವವಳು ದೀಪ ಹೊಡೆದು ಕತ್‌ಸಿತು. ಅದ ತೊಳ್ದಿ ಹೆರ್ಗೆ ಹಾಕ್ದ.

ಮೂರನೆ “ಶದಿ ತೆಗ್ವೊರಿಲ್ಲ. ಈಗ ಹಿಡಿ ಕತಬತ್ತದ” ಅಂದ. ಗೆಕುಗುಟ್ಕಂಡಿ ತೋಳ್ದ ಹೋದ್ಲು. ಇವ ಕೂತ (ಅವಬಳೀನೂ ತಕಂಡ ಹೋತನೆ) ಬರೀಕೈ ಬಿಟ್ಕಂ ಹೋದ್ಲು ಒಬ್ಳು. ಕಣ್ಕಡ್ಕ ಬಳಿಹಾಕ್ದ. “ಬರೀ ಕಣಿ ಕಡ್ಕ ಬಳಿ ಹಾಕ್ದ ಬಳಿತಂದವ.” “ಯೇನನ್ನವ್ವ” ಅಂದಾ.

ನೆರಗುಡಿಲಿ ಗಂಡ ಹೆಂಡ್ತಿ ಇದ್ರು. ಅವರು ಏನು ಮಾಡಿದರು?” ತೊಗ್ಟಿ ತಂತ್ಕಂಡಿ ಆಶಿ ಮಾಡ್ಕಂಡಿ ಗನಾ ಊಟ ಉಣ್ವ” ಹೇಳಿ ಮಾಡ್ತ ಇದ್ರು. ಇವ ಎದ್ದು ಹೋಗಿ ಅಲ್ಲಿ ಕೂತ. ಉಪಾಸವ್ನೆ, ಸುಳಿಮನ್ಗೆ ಬಂದರ್ಕೆ ಹೇಳಿ. ಅಲ್ಲಿ ಒಂದೆ ಕೋಸ್‌ನನ್ಗೆ ರೊಟ್ಟಿ ಬೇಕು ಹೇಳಿ ತೀಡ್ತ.

ಗಂಡ ನಿನ್ ಮಗಲಿ ವಲಿಲಿ ಹಾಕು, ತೀಡ್ತನೆ ಅಂದ. ವಲಿ ಬೆಂಕಿಲ್ ಹಾಕ್ತು, ಸತ್ತ ಹೋದ. ಇವ ಹೋದೇವ್ರೆ! ನಾ ಒಂದ್ ತುತ್ ಹಾಕೂಕ ಹೇಳಿದ್ರೆ ಕೂಸ್ನ ವಲಿಲ್ ಹಾಕ್ ಸುಟ್ತು. ಇವರ ಮನಿ ಊಟ ಜರಿಲ್ತ. “ಎಂದಿ ಎದ್ ಹೋದ. ಹಾದಿಲಿ ಐದ್ ಜನ ಒಟ್ಟಾದ್ರು ಇವನೂ ಹಿಡಿದು. “ಎಲ್ಗೆ ಹೋತ್ಯೋ?”

“ಪದ್ಮಾವತಿ ಸೂಳಿ ಮದ್ಯಾಗಬೇಕು ಹೇಳಿ ಹೋತೆ” ಅಂದ್ರ ಎಲ್ಲ. “ಐದು ಜನ ಒಟ್ಟಾಗಿ ಒಂದೇ ದಿನ್ಕೆ ದೆಬ್ಣತೆಕಹೋಗ್ವ. ಯಾರ್ ಮುಂದಾದ್ರೂ ಅವರ್ಗೆ ಮದಿಯಾಗ್ಲಿ “ಅಂದ. ಹೆಂದೆವಳಿತ.

ಪದ್ಮಾಕ್ಷಿ ಕೊಂಡ ಕಡಿದು ಕೆಂಡಮಾಡಿ ಇರಸತದೆ. ಮದಿಗೆ ಐದ ಜನ ಬಾಸಿಂಗ ಕಟ್ಕಂಡ್ ಹೋದ್ರು. ಮೊದಲನೆ ದಿಬ್ಣ ಹೋಯ್ತು. ಬಾಗ್ಲ ಹೊಕ್ಕೂವರಿಗೇ ಕೊಂಡಕ ದೂಡಹಾಕ್ತು. ನಾಕೂ ಜನ್ನೂ ಹಾಗೆ ಹಾಕೂತ್ನೂವ, ಐದ್ನೇಯವನ ದಿಬ್ಬಣ ಹೋಯ್ತು. ಎದ್ರು ಗೊಂಬೂಕೆ ಬಂದ್ರು. “ಪದ್ಮಾಕ್ಷಿ ಸೂಳಿ ಮನಿಯ ಪಚ್ಚಿಕಂಬ್ಕೇ ಸೈ ನಾಮದಿಯಾಗಬೇಕಾದರೆ” ಹೇಳಿ ಹೋತ. ಇವ ಮೊದ್ಲು ಬಂದವ, ತಿಳಿತದೆ.

ಪದ್ಮಾಕ್ಷಿ ಅವನ ಮದಿಯಾಯ್ತು. ವರ ಹಣ ಎಲ್ಲ ಮಾಡ್ಸಿ ಹಾಕಂಡಿ ಬಂದ ಮನಿಗೆ. ಅಣ್ಣದಿರು ಎತ್ತೆತ್ತಗೆ ಹೋದ್ರೋ ಏನೋ.

 ಹೇಳಿದವರು:

ಮಹಾದೇವಿ ರಾಮ ಪಟಗಾರ,
ಹೆಗಡೆ ಊರು.