ವಂದು ಮುದ್ ಬಿರಾಮಣ್ರ ದರ್ಬಿಯೆಲ್ಲಾ ಗಂಟ್ ಹಾಕಿ ಒಂದ ಕೆರಿಲ್ ಹೊತಾಕ್ಕಿದ್ರಂತೆ. ವಂದ್ ಮಾಣಿ, ತಾಯಿ ತಂದೆ ಯಾರೂ ಯಿಲದಿದ್ ಮಾಣಿ. ರಸ್ತಿಲ್ ಹೋಗತಿದ್ದ. ಅಜ್ಜಾ ನೀನು ಗನಾ ದರ್ಭೆ ತಿಪರಸ್ತಕ್ ಬತ್ತಿತ್ತು. ನೀನು ಯಂತಕೆ ಕೆರಿಲ್ ಹಾಕ್ತೆ? ಗಂಟ ಹಾಕ್ತೆ? ಕೇಳ್ದ. ನಾನು ಯಾವ ಗಂಡ್ಗೆ ಯಾವ ಹೆಣ್ಣು ಅಂದ್ ಗಂಟ್ ಹಾಕ್ತೆ ಅಂದ. “ಹಾಗಾದ್ರೆ ನನ್ಗ ಯಾರ ಮನಿ ಹೆಣ್ಣು?” ಅಂದ್ ಕೇಳ್ದ ಅವ. ಕಾಶಿ ಪಟ್ಟಣದಾಗೆ ವಂದ್ ಚಮಗಾರ ಮನ್ಯದೆ. ಅಲ್ ಚಮಗಾರ ಹುಡ್ಗ್ಯೆದೆ. ಆ ಹುಡ್ಗಿ ನಿನ್ಗೆ ಅಂದ ಬಟ್ಟ. ಚಮಗಾರ ಮನಿ ಹುಡ್ಗಿ ನನ್ಗೆ ಗಂಟಾಕಾನೆ. ಆವಾಗ ನಾನ್ ಹೇಗೆ ತಪ್ಸ್‌ಕ ಬೇಕಾಯ್ತು ಹೇಳ್ ಆಲಚ್ನೆಮಾಡ್ದ. ಆವಾಗೆ ಹೀಗೆ ಒಂದ್ ರಸ್ತಿ ಹಿಡ್ದ್ ಹೋದ ಅವ. ಹೋಗಬೇಕಾರೆ ಅಲ್ ವಂದೆ ಅಸ್ವಂತ್ ಕಟ್ಟಿ ಸಿಕ್ತು ಅವಂಗೆ. ಕಟ್ಟೀಮೇನೆ ಯೆಯ್ಡಜನ ಕಳ್ಳರು ಗಂಟ ಕದ್ಕ ಬಂಡ್ಕಂಡ್ ಪಾಲ್ ಮಾಡ್ಕುತಿದ್ರು. ಆವಾಗೆ ಈ ಮಾಣಿ ಕಂಡ್ಕಂಡಿ ಅವ್ರು ವೋಡುಕ್ ಮಾಡ್ರು. ಕೆಳಗೆ ನೀವ್ ವೋಡಬೇಡಿ, ನನ್ನದೊಂದು ಕೆಲ್ಸ ನಿಮ್ಮಿಂದ ಸಾದ್ಯಾಗಬೇಕು. ನಾಯೇನು ಮಾಡುವುದಿಲ್ಲ ನಿಮ್ಗೆ ಅಂದ. (ಯೇನ್ ಮಾಡಬೇಕು) ಕೇಳ್ತಾ. ಕಾಶಿ ಪಟ್ನಕ್ಕೋಗಿ ಚಮಗಾರ ಮನಿಲ್ ವಂದ್ ಹುಡ್ಗ್ಯದೆ. ಆ ಹುಡ್ಗಿ ಯತ್ಕಂಡ್ ಬರಬೇಕು ಹೇಳ್ದ. ಅವರಲ್ಲಿ ಒಬ್ಬವ್ ಅಲ್ ಉಳ್ದ. ಒಬ್ಬವ್ ಹೋಗಿ ಹುಡ್ಗಿ ಯೆತ್ಕಂಡ್ ಬಂದ ಚಮಗಾರ ಮನಿಗೋಗಿ.

ಅವರು ಕದ್ಕ ಬಂದ್ ದುರ್ಮಿ ತಕಂಡ್ ಮನಿಗೆ ಹೋದ್ರ. ಈ ಹುಡ್ಗಿ ಇವ್ನದಲ್ ಇಟ್ಕೆ ಹೋದ್ರ. ಆವಾಗೆ ಇವ್ ವಂದೆ ಪೆಟ್ಗಿ ಮಾಡ್ಸದ. ಪೆಟ್ಗಿಲ್ ಶಿಸು ಹಾಕಿ ಸಮ್ದ್ರುದಲ್ ಬಳ್ದ್ ಬಿಟ್ ಬಿಟ್ಟ. ಯಾವುದಾದರೂ ಒಂದ್ ಸ್ಟೇಶನಕೆ ಹೋಗ್ಲಿ ಹೇಳಿ. ಅದು ಒಂದ್ ಅಂಬಿಗ ಬಲಿಬೀಸ್ವಾಗೆ ಬಲಿವಳ್ಗಿ ಸಿಕ್ತು. ಆ ಪೆಟ್ಗಿ ಹೊತ್ಕಂಡಿ ಮನಿಗೆ ತಕಂಡೆ ಬಂದ ಅವ. ಅವ್ನ ಹಿಂಡ್ತಿ ಅದ್ರ ಕೀಲಿ ತೆಗ್ದ ನೋಡ್ತು. ಹೆಣ್ ಶಿಸು ಅದೆ. ಇದು ನಮ್ಗೆ ಯೆಂತಕೆ? ರಾಜ್ರಮನಿರ್ ಹುಡ್ಗರ ಇಲ್ದೆ ಗೋಳಾಡ್ತ ಅವ್ರೆ. ಅವ್ರಗೆ ಅದ್ರೂ ಕೊಟ್ಟಿಕ್. ನಮ್ಗೆ ಯೇನಾರ ಸಂಸಾರಕೆ ಕೊಡ್ತಿರು ಅಂತು. ಆವಾಗ ಅಂಬಿಗರವ ಪೆಟ್ಗಿ ಹೊತ್ಕಂಡು ರಾಜರ ಮನಿಗೆ ಹೋದ. ಅವರಿಗೆ ಪೆಟ್ಗಿ ಕೊಟ್ಟ. ಅವ್ರ ವಂದ್ ನೂರು ರೂಪಾಯ್ ಕೊಟ್ರು. ತೆಕಂಡ್ ಬಂದ.

ಅವ್ರು ಪೆಟ್ಗಿ ಒಳಗನ ಶಿಸು ತೆಗದಿ ಬಾಳ ಪಿರ್ತಿಂದ ಸಾಕ್ಕಂಡ್ರು. ಸಾಕಿ ಸಾಕಿ ಅದು ಬಗಿಲಿ ಪರಾಯಕ್ ಬಂತು. ಹುಡ್ಗಿ ಇಲ್ಲಿ ಕೇಳ್ದ ಮಾಣಿ ಅವ್ರ ಮನೀಗ ಹೋದ. ಗಂಡನ ಕಲ್ ಹೇಳ್ತು. “ನಮ್ಮನಿ ದೇವ್ರ ಪೂಜಿ ಮಾಡೂಕೂ ಯಾರೂ ಇಲ್ಲಾಗಿತ್ತು. ನಿಮಗೂ ಪರಾಯ ಬಂತು. ನಾವು ಈ ಹುಡ್ಗನ್ನ ಇಟ್ಕಬನಿ” ಅಂತು. ಹುಡ್ಗನ ಇಟ್ಕಂಡ್ರು. ಆ ಹುಡಗಿ, ಮಾಣಿ ಯೆಯ್ಡೂ ಜನ್ರೂ ನಗ್ನಕ್ಕೆ ಬಂದ್ರು. ಗಂಡ ಅವಗೆ ರಾಜನ ಹಾರಿಗೆ ಕರಸತು. ಒಂದ್ ದಿವಸ ಅವ ಊಟಕ್ ಬಂದಾಗ ರಾಜ್ನ ಹೆಂಡ್ತಿ ಹೇಳ್ತು. “ಹುಡ್ಗಿ ಹುಡ್ಗ ಇಬ್ರೂ ನಗ್ಲಕ್ ಬಂದ್ರು. ಅದ್ ಯೆಟ್ ದಿವ್ಸ ಅವ್ರ ಹೀಗೆ ಇಟ್ಕಂತ್ರು” ಕೇಳ್ತು. ಆವಾಗೆ ಅರಸು ಹೇಳ್ತ “ನಾವ್ ಬೇರೆಗೂಟ್ ಯಲ್ಲಿ ನೆಂಟಸ್ತನಕೆ ಹೋಗೂದು. ಆ ಮಾಣಿಗೆ ಕೂಸ್ನ ಕೊಟ್ರಾಯ್ತು” ಅಂದ. ಆ ಮಾಣಿಗೆ ಅದೇ ಕೂಸ್ ಕೋಟ್ ನಗ್ನ ಮಾಡ್ರು. ನಗ್ನಾಗಿ ಅದ ಒಂಬತ್ ತಿಂಗಳ ಗರ್ಬಿಣ್ಯಾಯ್ತ ಆ ಹುಡ್ಗಿ. ಆವಗ ಆ ಮಾಣಿ ದೃವ್ರ ಪೋಜಿಗಗ ಕುಂತಿದ್ದ. ಕೂತನ್ ಹೀಂಗ್ ಮೇನ್ ನೋಡ್ದ. ಆ ಪೆಟಗಿ ಕಂಡ ಮೇನಿಟ್ಟಿದ್ದ. ಅವ ‘ನಾನು ವಂದ್ ಹುಡ್ಗಿ ಹಾಕ್ ಬಳಬಿಟ್ ಪೆಟ್ಗಿ ಹೇಗೆ ಉಳಿತು?’ ಅವ ಅರಸನ ಹಿಂಡ್ತಿ ಕೇಳ್ದ. ಅದು ಒಂದ್ ಅಂಬಿಗ ನೀರೊಳಗೆ ಬಂದೀಪಬೇಕಾರೆ ಈ ಪೆಟ್ಗಿ ಸಿಕ್ಕಿತಂತೆ. ಅವ ನಮಗೆ ತಂದ್ ಕೊಟ್ಟಿದ್ದ. ಅದ್ರೊಳ್ಗೆ ಒಂದ್ ಶಿಸವಿತತ್ತು. ಅದೇ ಶಿಸುವಿನೇಯ ನಾವ್ ಸಾಯ್‌ಕಂಡ್ ನಿನಗೆ ನಗ್ನ ಮಾಡ್ದು ಅಂತು. ಆವಗ್ ಅವ ಆಲಚ್ನಿ ಹಾಕ್ದ. ನಾನೇ ಆಗಿತ್ತು ಶಿಸು ಪೆಟ್ಗಿಲ್ ಹಾಕ್ ಬಿಟ್ಟಿದು.

ಎಲ್ಲಾರೂ ನಿದ್ರೆ ಬೀಳಿತೇಯ ಯೆಲ್ಲಾ ಸಾಮಾನ್ ಕಟ್ಕಂಡಿ ಹೊಂಟ್ ಹೋದ. ಅವ್ನ ಹಿಂಡ್ತಿ ಯೆಚ್‌ರಾಗೇ ಇತ್ತು. ಸಂಜೆ ವಸ್ತ್ರ ಬಟ್ಟೆ ಕಟ್ಕಂಡ್ ರಾತ್ರಿಗೆ ಹೋದ ಹೇಳ್ಕಂಡಿ ಅದು ಅವ್ನ ಬೆನ್ಗೇ ನೆಡಿತು. ಸೊಮ್ಗೆ ಆವಾಗ್ ಅದ್ ಹೋಗ್ ಹೋಗ್ ಹೋಗಿ ಅಲ್‌ವಂದ್ ಅಸ್ವಂತ್ ಕಟ್ಟಿದ್ದಿತ್ತು.

ಕೆರಿಬುಡದಾಗೆ ಕೆರಿಲ್ ಮೊಕತೊಳ್ಕಂಡಿ ಕಟ್ಟಿ ಮೇನ್ ಕುಂತಕಂಡ. ಅದು ಅವ್ನ ಬೆನ್ಗೆ ಹೋದೋಳ್ ಕಟ್ಟಿ ಕೆಳಗೆ ಕುಂತ್ಕಂಡದೆ. ಅಲ್ಲೇ ಜನ್ಯಾಗ್ ಹೋಯ್ತು. ಗಂಡ್ನದಲ್ ಮುಟ್ಲೂ ಯೆಲ್ಲ. ಇನ ಮನಗಿ ಬಿಟ್ಟ. ಕಟ್ಟಿ ಮೇನ್ ಉಳ್ವಾಟ್ ಅನ್ನಿತ್ತು. ಯಾವ್ದೂ ಕಟ್ಟಿಲ್ಲಾಗಿತ್ತು. ಬೇಕಾದಿತ್ತು ಅಡ್ಡವಳ್ಗೆ ಬಂದಿ, ಜನ್ಯಾಯ್ತು ಅಂದಿ ದೇವ್ರ ಸ್ಮೊರಣಿ ಮೇನ್ ವಳ್ಕಬಿಡ್ತು ಶಿವಾ ಶಿವಾ ಅಂದಿ.

ಇವಗೆ ನೆದ್ರೆ ಬಂದಿತ್ತು. ಯೆಚರಾಗ್ ಹೋಯ್ತು. ಅದ್ ಅಟ್ ಹೇಳ್ವಾಗೆ ಅವಾಗವ ಶಟ್ನಿಯೆದ್ದಿ ಬಂದ್ ನೋಡ್ಗ. ನೋಡಾವರಿಗೆ ಅವ್ನ ಹೆಂಡ್ತಿ ಇದು. ಆಗ ಬವ್ಕೆ ಹಣಕದ. ಅವ ಹಾಕ್ದ ಗಂಟು ತಪ್ದೆ ಹೋಯ್ತು ತನ್ಗೆ ಯೇ ಮಾಡುದು?

ಅದೂ ಈಗೂ ತಪ್ಪೊದೆಲ್ಲ ಅಂದಿ ಹೆಂಡ್ತಿ ಕರ್ಕಂಡ್ ಪರತ್ ಮನೀಗ್ ಬಂದ. ಮನಿಗೆ ಬಂದ, ರಾಜ, ರಾಜ್ನ ಹೆಂಟ್ರಿ, ಕೇಳ್ತು ಅವ್ನ ಹೆತ್ರೆ, ನೀವ ಯಲ್ಲೆ ಹೋಗಿರಪ್ಪಾ ಅಂದಿ. ಅವಾಗೆ ತಾನೂ ನಗ್ನಾದ ನಂತೆ ಒಂದ್ ದಿವ್ಸದ ಮಾತಿಗೆ ಕಾಶಿಯಾತ್ರೆ ಮಾಡ್ಕ ಬತ್ತೆ ಅಂದ್ ಹೇಳ್ಕಂಡಿದೆ. ಯೆಗ ಮಾಡ್ಕಂಬಂತೆ ಹೇಳ್ದ. ಆಯ್ತೂ ಕತಿ.

 

ಹೇಳಿದವರು:
. ಕನ್ನೆ ಗೋವಿಂದ ಪಟಗಾರ,
ಮಾಸೂರು,
೧೩-೫-೭೧