ಪ್ರಮುಖ ಘಟನಾವಳಿಗಳು:

 • 1672: ಈಸ್ಟ್ ಇಂಡಿಯಾ ಸಂಸ್ಥೆ ಮತ್ತು ಆಂಗ್ಲ ಕಾನೂನನ್ನು ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಯಿತು.

 • 1732: ಬ್ಯಾಂಕ್ ಆಫ್ ಇಂಗ್ಲೆಂಡಿಗೆ ಅಡಿಪಾಯ ಹಾಕಲಾಯಿತು.

 • 1793: ಮೊದಲ ಬಾರಿಗೆ ಫ್ರಾನ್ಸ್ ದೇಶವು ಮೆಟ್ರಿಕ್ ಪದ್ದತಿಯನ್ನು ಅಳವಡಿಸಿ ಉಪಯೋಗಿಸಿತು.

 • 1831: ನ್ಯೂ ಲಂಡನ್ ಸೇತುವೆಯನ್ನು ಸಾರ್ವಜನಿಕರ ಓಡಾಟಕ್ಕೆಂದು ತೆರೆಯಲಾಯಿತು.

 • 1833: ಗ್ರೇಟ್ ಬ್ರಿಟನ್ನಿನಲ್ಲಿ ಇನ್ ಲ್ಯಾಂಡ್ ಅಂಚೆ ಸೇವೆಯನ್ನು ಪ್ರರಂಭಿಸಲಾಯಿತು.

 • 1905: ಕುದುರೆ ಟಾಂಗಾಗಳ ಸೇವೆಯನ್ನು ಬಾಂಬೆಯಲ್ಲಿ ಸ್ಥಗಿತಗೊಳಿಸಲಾಯಿತು.

 • 1907: ಬ್ಯಾಂಕ್ ಆಫ್ ಇಟಲಿ ತನ್ನ ಮೊದಲ ಶಾಖೆಯನ್ನು ತೆರೆಯಿತು.

 • 1916: ಆನಿ ಬೆಸೆಂಟ್ ಹೋಂ ರೂಲ್ ಲೀಗನ್ನು ಪ್ರಾರಂಭಿಸಿದರು.

 • 1920: ಗಾಂಧಿಜಿಯವರ ನೇತೃತ್ವದಲ್ಲಿ ಲಾರ್ಡ್ ಕ್ಲೆಂಸ್ಫೋರ್ಡ್ ವಿರುದ್ಧ ಅಸಹಕಾರ ಚಳುವಳಿ ಆರಂಭವಾಯಿತು.

 • 1920: ಕಿರ್ಲೋಸ್ಕರ್ ಮಾಸಿಕ ನಿಯತಕಾಲಿಕೆಯನ್ನು ಪ್ರಕಟಿಸಲಾಯಿತು.

 • 1941: ಮೊದಲ “ಜೀಪನ್ನು” ನಿರ್ಮಿಸಲಾಯಿತು.

 • 1947: ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಯಿತು. ಅಧಿಕಾರವನ್ನು ವರ್ಗಾಯಿಸಲಾಯಿತು. ಲಾರ್ಡ್ ಮೌಂಟ್ ಬ್ಯಾಟೆನ್ ಭಾರತದ ಗವರ್ನರ್ ಆದರು ಮತ್ತು ಮುಹಮ್ಮದ್ ಅಲಿ ಜಿನ್ನ ಪಾಕಿಸ್ತಾನದ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದರು.

 • 1952: ನವದೆಹಲಿಯ ಸಫ್ದರ್‍ ಜಂಗ್ ಪ್ರದೇಶದಲ್ಲಿ ವಿಮಾನ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸುವ ಕಾರ್ಯಕ್ಕೆ ನೆಹರು ಚಾಲನೆ ನೀಡಿದರು.

 • 1953: ಆಲ್ ಏರ್ಲೈನ್ಸ್ ಇಂಡಿಯಾ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಎಲ್ಲಾ ಖಾಸಗೀ ವಿಮಾನ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು.

 • 1953: ವಿಲೀನಗೊಂಡ ಪ್ರದೇಶಗಳಲ್ಲಿ “ಜಹಗೀರ್” ಅನ್ನು ರದ್ದುಗೊಳಿಸಲು ಬಾಂಬೆ ಸರ್ಕಾರವು ನಿರ್ಧರಿಸಿತು.

 • 1955: ಮೊದಲ ಮೈಕ್ರೋ ಗ್ರಾವಿಟಿ ಸಂಶೋಧನೆ ಆರಂಭವಾಯಿತು.

 • 1957: ಎಂ.ಕೆ.ವೆಲ್ಲೋಡಿ ಅವರನ್ನು ಭಾರತದ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.

 • 1957: ನ್ಯಾಷನಲ್ ಬುಕ್ ಟ್ರಸ್ಟ್ ನ್ನು ಉದ್ಘಾಟಿಸಲಾಯಿತು.

 • 1958: ಆಚಾರ್ಯ ವಿನೋಬಾ ಭಾವೆಗೆ ಸಮುದಾಯ ನಾಯಕತ್ವಕ್ಕಾಗಿ ರೇಮನ್ ಮ್ಯಾಗಾಸೆಸೆ ಪ್ರಶಸ್ತಿಯನ್ನು ನೀಡಲಾಯಿತು.

 • 1960: ಪಾಕಿಸ್ತಾನದ ರಾಜಧಾನಿ ಕರಾಚಿಯಿಂದ ಇಸ್ಲಮಾಬಾದಿಗೆ ಬದಲಾಯಿಸಲಾಯಿತು.

 • 1962: ಮಹಾರಾಷ್ಟ್ರ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ಸ್ಥಾಪನೆಯಾಯಿತು.

ಪ್ರಮುಖ ಜನನ/ಮರಣ:

 • 1899: ಪಂಡಿತ್ ಜವಹಲಾಲ್ನೆಹರು ಅವರ ಧರ್ಮಪತ್ನಿಯಾದಸ್ವಾತಂತ್ರಹೋರಾಟಗಾರ್ತಿ ಕಮಲಾ ನೆಹರು ಜನಿಸಿದರು.

 • 1932: ಹಿಂದಿ ಚಿತ್ರರಂಗದ ಖ್ಯಾತ ನಟಿ ಮೀನಾ ಕುಮಾರಿ ಜನಿಸಿದರು.

 • 1974: ಶಿಕ್ಷಣ ಮತ್ತು ಹಣಕಾಸು ಸಲಹೆಗಾರ ಆಶುತೋಶ್ ಪಾಲ್ ಜನಿಸಿದರು.

 • 1920: ಭಾರತದ ಸ್ವಾತಂತ್ರ ಹೋರಾಟಗಾರರಾಗಿದ್ದ ಬಾಲ ಗಂಗಾಧರ ತಿಲಕ್ ನಿಧನರಾದರು.

 • 1999: ಬಂಗಾಳಿ ಲೇಖಕ ಉರದ್ ಸಿ.ಚೌದರಿ ಬ್ರಿಟನ್ನಿನಲ್ಲಿ ನಿಧನರಾದರು.

 • 2008: ಭಾರತೀಯ ಕಮ್ಯುನಿಸ್ಟ್ ಚಳುವಳಿಯ ಧುರೀಣ ಹರಕಿಶನ್ ಸಿಂಗ್ ಸುರ್ಜೀತ್ ನಿಧನರಾದರು.