Categories
e-ದಿನ

ಆಗಸ್ಟ್-11

 

ಪ್ರಮುಖ ಘಟನಾವಳಿಗಳು:

1347: ಬಹಮನಿ ರಾಜವಂಶದ ಮುಸ್ಲಿಂ ಸಾಮ್ರಾಜ್ಯದ ಸುಲ್ತಾನ ಅಲ್ಲಾಉದ್ದಿನ್ ಖಿಲ್ಜಿ ಗುಲ್ಬರ್ಗಾವನ್ನು ‘ಹಸನಾಬಾದ್’ ಎಂದು ಮರುನಾಮಕರಣ ಮಾಡಿದರು.

1860: ಅಮೇರಿಕಾದ ಮೊದಲ ಯಶಸ್ವಿ ಬೆಳ್ಳಿಯ ಗಿರಣಿಯ ಕಾರ್ಯಾಚರಣೆ ಆರಂಭವಾಯಿತು.

1866: ವಿಶ್ವದ ಮೊದಲ ರೋಲರ್ ರಿಂಕ್ ತೆರೆಯಲಾಯಿತು.

1874: ನೀರನ್ನು ಸಿಂಪಡಿಸುವ ಮೇಲಿನ ಮುಚ್ಚಳಕ್ಕೆ ಹ್ಯಾರಿ ಎಸ್ ಪಾರ್ಮೀಲಿ ಅವರಿಗೆ ಪೇಟೆಂಟ್ ನೀಡಲಾಯಿತು.

1896: ಹಾರ್ವೇ ಹುಬ್ಬೆಲ್ ಅವರು ವಿದ್ಯುತ್ ಲೈಟ್ ಬಲ್ಬಿನ ಸಾಕೆಟ್ ಮತ್ತು ಅದನ್ನು ಎಳೆಯುವ ಸರಪಣಿಗೆ ಪೇಟೆಂಟ್ ಪಡೆದರು.

1904: ಫ್ರಾನ್ಸ್ ಆಸ್ಟ್ರಿಯಾ ಮತ್ತು ಹಂಗೇರಿಯ ಮೇಲೆ ಆಕ್ರಮಣ ನಡೆಸುವುದಾಗಿ ಘೋಷಿಸಿತು.

1909: SOS (ಅಪಾಯದಲ್ಲಿ ರಕ್ಷಣೆ ಕೋರುವ ಸೂಚನೆ)ಯನ್ನು ಮೊದಲ ಬಾರಿಗೆ ಅಮೇರಿಕ ಹಡಗೊಂದು ಬಳಸಿತು.

1914: “ಆನಿಮೇಷನ್”ನನ್ನು ಜಾನ್ ವ್ರೇ ಪೇಟೆಂಟ್ ಪಡೆದರು.

1947: ಪಾಕಿಸ್ತಾನವು ರಾಷ್ಟ್ರೀಯ ಧ್ವಜವನ್ನು ಅಂಗೀಕರಿಸಿತು.

1948: ಲಂಡನ್ನಿನಲ್ಲಿ ಬೇಸಿಗೆ ಒಲಂಪಿಕ್ಸ್ ಆರಂಭಿಸಲಾಯಿತು.

1961: ದಾದ್ರಾ ಮತ್ತು ನಗರಹವೇಲಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಲಾಯಿತು.

1985: ರೊನಾಲ್ಡ್ ರೇಗನ್ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು.

1992: ಅಮೇರಿಕಾದ ಸಂಯುಕ್ತ ಸಂಸ್ಥಾನದ ಅತಿದೊಡ್ಡ ಶಾಪಿಂಗ್ ಮಾಲ್ ಆದ ಎಂ.ಎನ್.ಮಾಲ್ “ಮಾಲ್ ಆಫ್ ಅಮೇರಿಕಾ” ತೆರೆಯಲಾಯಿತು.

1997: ಹಿಮಾಚಲ ಪ್ರದೇಶದ ಶಿಮ್ಲಾ ಮತ್ತು ಕಿಯನ್ನೂರ್ ಜಿಲ್ಲೆಗಳಲ್ಲಿ ಪ್ರವಾಹದಿಂದ 135 ಜನರು ಮೃತರಾದರು.

2012: ಇರಾನಿನ ತಬ್ರೀಜ್ ಮತ್ತು ಆಹರಿನಲ್ಲಿ ಭೂಕಂಪ ಉಂಟಾಗಿ 153 ಜನರು ಮೃತಪಟ್ಟರು ಮತ್ತು ಸುಮಾರು 1300 ಜನ ಗಾಯಗೊಂಡರು.

2016: 392 ವರ್ಷಗಳಲ್ಲಿ ವಿಶ್ವದ ಅತ್ಯಂತ ಹಳೆಯ ಕಶೇರುಕವಾದ ಗ್ರೀನ್ ಲ್ಯಾಂಡ್ ಶಾರ್ಕ್ ಎಂದು ಅಂತರ ರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಘೋಷಿಸಿತು.

ಪ್ರಮುಖ ಜನನ/ಮರಣ:

1778: ಜಗತ್ತಿನ ಜಿಮ್ನಾಸ್ಟಿಕ್ಸ್ ಸಂಸ್ಥಾಪಕರಾದ ಜರ್ಮನ್ ಶಿಕ್ಷಕ ಫ್ರೆಡ್ರಿಚ್ ಲುಡ್ವಿಗ್ ಜನಿಸಿದರು.

1908: ಭಾರತದ ಕಾರ್ಯಕರ್ತ ಖುದಿರಾಮ್ ಬೋಸ್ ಅವರು ನಿಧನರಾದರು.

1954: ಭಾರತದ ಕ್ರಿಕೆಟ್ ಆಟಗಾರ ಮತ್ತು ತರಬೇತುಗಾರರಾಗಿದ್ದ ಎಂ.ವಿ.ನರಸಿಂಹ ರಾವ್ ಜನಿಸಿದರು.

1954: ಭಾರತೀಯ ಕ್ರಿಕೆಟ್ ಅಂಪೈರ್ ಅಗಿದ್ದ ಯಶಪಾಲ ಶರ್ಮ ಜನಿಸಿದರು.

1993: ದೆಹೆಲಿಯ ಮೊದಲ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಮಂತ್ರಿಯಾಗಿದ್ದ ಬ್ರಹ್ಮಪ್ರಕಾಶ್ ಚೌದರಿ ನಿಧನರಾದರು.

1999: ಭಾರತೀಯ ಕ್ರಿಕೆಟ್ ಓಪನಿಂಗ್ ಮಾಜಿಬ್ಯಾಟಮ್ಯಾನ್ ಆಗಿದ್ದ ರಾಮನಾಥ್ ಪಾರ್ಕರ್ ನಿಧನರಾದರು.

2000: ಗಾಂಧಿವಾದಿ ಉಶಾ ಮೆಹ್ತಾ ನಿಧನರಾದರು.

2012: ಭಾರತೀಯ ಭಾಷಾಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ಭದ್ರಿರಾಜು ಕೃಷ್ಣಮೂರ್ತಿ ನಿಧನರಾದರು.

2013: ಭಾರತೀಯ ಪಕ್ಷಿವಿಜ್ಞಾನಿ ಮತ್ತು ಲೇಖಕ ಜಾಫರ್ ಫುತೇಹಲಿ ನಿಧನರಾದರು.