Categories
e-ದಿನ

ಆಗಸ್ಟ್-12

 

ಪ್ರಮುಖ ಘಟನಾವಳಿಗಳು:

1658: ಮೊದಲ ಅಮೇರಿಕನ್ ಪೋಲಿಸ್ ಫೋರ್ಸ್ ರೂಪಗೊಂಡಿತು.

1765: ಅಲಹಾಬಾದ್ ಒಪ್ಪಂದವನ್ನು ಸಹಿ ಮಾಡಲಾಯಿತು. ಈ ಒಪ್ಪಂದವು ರಾಜಕೀಯ ಮತ್ತು ಸಂವಿಧಾನಿಕ ಒಳಗೊಳ್ಳುವಿಕೆ ಮತ್ತು ಭಾರತದಲ್ಲಿ ಕಂಪನಿಯ ಆಡಳಿತದ ಆರಂಭವನ್ನು ಗುರುತಿಸುತ್ತದೆ.

1851: ಐಸಾಕ್ ಸಿಂಗರ್ ಅವರಿಗೆ ಎರಡು ತಲೆಯ ಹೊಲಿಗೆ ಯಂತ್ರದ ಮೇಲೆ ಪೇಟೆಂಟ್ ನೀಡಲಾಯಿತು.

1865: ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಜೋಸೆಫ್ ಲಿಸ್ಟರ್ ಅವರು ಮೊದಲ ಬಾರಿಗೆ ಸೋಂಕು ನಿವಾರಕವನ್ನು ಬಳಸಿದರು.

1877: ಥಾಮಸ್ ಎಡಿಸನ್ ಫೋನೋಗ್ರಾಫ್ ಕಂಡುಹಿಡಿದರು, ಮತ್ತು ಮೊದಲ ಧ್ವನಿ ರೆಕಾರ್ಡಿಂಗ್ ಮಾಡಿದರು.

1879: ಮೊದಲ ರಾಷ್ಟ್ರೀಯ ಬಿಲ್ಲುಗಾರಿಕೆ ಸಂಘ ಪಂದ್ಯಾವಳಿ ಶಿಕಾಗೋದಲ್ಲಿ ನಡೆಯಿತು.

1908: ಹೆನ್ರಿ ಫೊರ್ಡ್ ಸಂಸ್ಥೆ ತನ್ನ ಮೊದಲ ಮಾದರಿ ಟಿ ಕಾರನ್ನು ನಿರ್ಮಿಸಿತು.

1947: ನಾಡಿಯಾ ಜಿಲ್ಲೆಯ ಬಹುತೇಕ ಭಾಗವನ್ನು ಪಾಕಿಸ್ತಾನಕ್ಕೆ ನೀಡಲಾಯಿತು.

1947: ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳನ್ನು ವಿಂಗಡಿಸಿದ ರೇಖೆಯ ಯೋಜನೆಯು ಕೂಡ ಈ ದಿನ ಸಿದ್ಧವಾಗಿತ್ತು ಎಂದು ಹೇಳಲಾಗುತ್ತದೆ.

1952: ಸಮಾಜ ಕಲ್ಯಾಣ ಮಂಡಳಿಯನ್ನು ಸಂಸತ್ತಿನಲ್ಲಿ ಉದ್ಘಾಟಿಸಲಾಯಿತು.

1953: ಸೋವಿಯೆತ್ ಒಕ್ಕೂಟ ತನ್ನ ಮೊದಲ ಹೈಡ್ರೋಜನ್ ಬಾಂಬನ್ನು ರಹಸ್ಯವಾಗಿ ಪರೀಕ್ಷಿಸಿತು.

1981: IBM ತನ್ನ ಮೊದಲ PCಯನ್ನು ಅನಾವರಣಗೊಳಿಸಿತು.

1988: ಕ್ಷಯರೋಗಕ್ಕೆ ನೆಲ್ಸನ್ ಮಂಡೇಲಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

1992: 72 ಉಗ್ರರು ಪಂಜಾಬಿನ ಮುಖ್ಯಮಂತ್ರಿ ಬೇಆಂತ್ ಸಿಂಗ್ ಅವರ ಮುಂದೆ ಶರಣಾದರು.

2005: ಶ್ರೀಲಂಕಾದ ವಿದೇಶಾಂಗ ಸಚಿವ ಲಕ್ಷ್ಮಣ್ ಕಧಿರ್ಗಮಾರ್ ಅವರನಿವಾಸದಲ್ಲಿ LTTE ಸದಸ್ಯನಿಂದ ಮಾರಣಾಂತಿಕ ಹಲ್ಲೆ ನಡೆಯಿತು.

2014: ಇಬೋಲಾ ವೈರಸ್ಸಿಗೆ ಚಿಕಿತ್ಸೆ ನೀಡಲು ಪ್ರಾಯೋಗಿಕ ಔಷಧಿಗಳ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಚಾಲನೆ ನೀಡುತ್ತದೆ.

2015: ಲಂಡನ್ನಿನ ಪುರಾತತ್ವಜ್ಞರು 1665ರ ಪ್ಲೇಗಿನಿಂದ ಬಲಿಯಾದ 30 ದೇಹಗಳ ಸಮೂಹ ಸಮಾಧಿಯನ್ನು ಉತ್ಖನನದ ಮೂಲಕ ಕಂಡುಕೊಂಡರು.

ಪ್ರಮುಖ ಜನನ/ಮರಣ:

1868: ಬ್ರಿಟಿಷ್-ಇಂಡಿಯಾದ ವೈಸೆರಾಯ್ ಆಗಿದ್ದ ಫ್ರೆಡ್ರಿಕ್ ಜೆ.ಎನ್.ಟಿ ಲಾರ್ಡ್ ಕ್ಲೆಮ್ಸ್ಫೋರ್ಡ್ ಜನಿಸಿದರು.

1897: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಮತ್ತು ಮುಖ್ಯ ರಕ್ಷಣಾ ಸಚಿವರಾಗಿದ್ದ ಮೇಜರ್ ಗೆಗೆರಲ್ ಹಿಮ್ಮತ್ ಸಿಂಗ್ ಜನಿಸಿದರು.

1919: ಭಾರತೀಯ ಭೌತಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ವಿಕ್ರಮ್ ಸಾರಾಭಾಯಿ ಜನಿಸಿದರು.

1948: ಕರ್ನಾಟಕದ 22ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಿಸಿದರು.

1973: ಗೋವಾ, ದಾಮನ್ ಮತ್ತು ದಿಯು ಮೊದಲ ಮುಖ್ಯಮಂತ್ರಿ ಆಗಿದ್ದ ದಯಾನಂದ್ ಬಾಲಕೃಷ್ಣ ಬಂಡೋಡ್ಕರ್ ನಿಧನರಾದರು.

2012: ಛಾಯಾಗ್ರಾಹಕ ಮತ್ತು ಲೇಖಕ ಪ್ರಭುದ್ದ ದಾಸ್ ಗುಪ್ತ ನಿಧನರಾದರು.