Categories
e-ದಿನ

ಆಗಸ್ಟ್-3

 

ಪ್ರಮುಖ ಘಟನಾವಳಿಗಳು:

1678: ಗ್ರಿಫಾನ್ ಅನ್ನುವ ಮೊದಲ ಅಮೇರಿಕಾದ ಹಡಗನ್ನು ರಾಬರ್ಟ್ ಲಾ ಸಲ್ಲೆ ನಿರ್ಮಿಸಿದರು.

1882: ಅಮೇರಿಕಾದ ಕಾಂಗ್ರೆಸ್ ಮೊದಲ ವಲಸೆ ಕಾನೂನನ್ನು ಜಾರಿಗೆ ತಂದಿತು.

1900: ಫೈರ್ ಸ್ಟೋನ್ ಟಯರ್ ಮತ್ತು ರಬ್ಬರ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1914: ವಿಶ್ವ ಯುದ್ಧ -1ರ ಸಮಯದಲ್ಲಿ ಫ್ರಾನ್ಸ್ ದೇಶದ ಮೇಲೆ ಜರ್ಮನಿ ದೇಶ ಯುದ್ಧ ಘೋಷಿಸಿತು.

1914: ಚರ್ಚುಗಳ ಮೂಲಕ ಅಂತರರಾಷ್ಟ್ರೀಯ ಸ್ನೇಹಕ್ಕಾಗಿ ಪ್ರಚಾರ ಮಾಡಲು ವಿಶ್ವ ಒಕ್ಕೂಟವೊಂದುರೂಪಗೊಂಡಿತು.

1926: ಪಿಕ್ಯಾಡೆಲಿ ಸರ್ಕಸ್ಸಿನಲ್ಲಿ ಸಂಚಾರ ದೀಪಗಳನ್ನು ಸ್ಥಾಪಿಸಲಾಯಿತು.

1949: ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಆಫ್ ಅಮೇರಿಕಾ ಮತ್ತು ನ್ಯಾಷನಲ್ ಬಾಸ್ಕೆಟ್ ಬಾಲ್ ಲೀಗ್ ಸಹಯೋಗದಲ್ಲಿ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಸ್ಥಾಪನೆಯಾಯಿತು.

1957: ಅಬ್ದುಲ್ ರೆಹಮಾನ್ ಅವರು ಮಲೇಷಿಯಾದ ನೂತನ ನಾಯಕರಾಗಿ ಚುನಾಯಿತರಾಗುತ್ತಾರೆ, ಇವರ ನಾಯಕತ್ವದಲ್ಲಿ ಮಲೇಷಿಯಾ ಬ್ರಿಟನ್ನಿನಿಂದ ಸ್ವಾತಂತ್ರ ಸಾಧಿಸಿತು.

1984: ಮದರಾಸು ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟವಾಗಿ 32 ಮಂದಿ ಮೃತರಾದರು.

1991: ಗೋವಾ ಆಳ್ವಿಕೆ ನಡೆಸಿದ ಪೋರ್ಚುಗೀಸ್ ಬ್ಯಾಂಕಿನಲ್ಲಿ ಸುಮಾರು 15 ದಶಲಕ್ಷ ಡಾಲರ್ ಮೌಲ್ಯದ 280 ಕೆ.ಜಿ. ಚಿನ್ನದ ಆಭರಣಗಳನ್ನು ಮರಳಿ ಭಾರತಕ್ಕೆ ತರಲಾಯಿತು.

1993: ಕೇಬಲ್ ಟೀವಿಯನ್ನು ನಿಯಂತ್ರಿಸಲು ರಾಜ್ಯ ಸಭೆಯಲ್ಲಿ ಕರಡು ನೀತಿಪತ್ರವನ್ನು ಪ್ರಸ್ತಾಪಿಸಲಾಯಿತು.

1994: ನವದೆಹೆಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಮೊದಲ ಯಶಸ್ವೀ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.

1995: ಎನ್ರಾನ್ ಪವರ್ ಪ್ರಾಜೆಕ್ಟ್ ಅನ್ನು ಮಹಾರಾಷ್ಟ್ರ ಸರ್ಕಾರದಿಂದ ರದ್ದು ಮಾಡಲಾಯಿತು.

1998: ಭಾರತವು ತನ್ನ ಅತ್ಯಾಧುನಿಕ ಮಧ್ಯಮ ಶ್ರೇಣಿಯ ಕ್ಷಿಪಣಿಯಾದ ಆಕಾಶನ್ನು ಚಂಡಿಪುರದ ಸಮುದ್ರದಲ್ಲಿ ಪರಿಕ್ಷೆ ಮಾಡಲು ಹಾರಿಸಲಾಯಿತು.

2003: ಅಮೇರಿಕಾದ ಆಂಗ್ಲಿಕನ್ ಚರ್ಚ್ ಸಲಿಂಕಕಾಮಿ ಬಿಷಪ್ ಅನ್ನು ನೇಮಿಸಲು ನಿರ್ಧರಿಸಿತು.

2011: 20 ಮಿಲಿಯನ್ ವರ್ಷಗಳ ಹಿಂದಿನ ತಲೆಬುರುಡೆಯೊಂದು ಉಗಾಂಡದಲ್ಲಿ ಪತ್ತೆಯಾಯಿತು. ಈ ತಲೆಬುರುಡೆ ಮಂಗನದೆಂದು ಗುರುತಿಸಲಾಯಿತು.

ಪ್ರಮುಖ ಜನನ/ಮರಣ:

1886: ಆಧುನಿಕ ಹಿಂದಿ ಕವಿ ಮತ್ತು ಚಿತ್ರಕಥೆಗಾರ ಮೈತಿಲಿ ಶರಣ್ ಗುಪ್ತ್ ಜನಿಸಿದರು.

1916: ಭಾರತೀಯ ಕವಿ ಮತ್ತು ಹಾಡು ರಚನೆಗಾರರಾಗಿದ್ದ ಶಕೀಲ್ ಬದಾಯುನಿ ಜನಿಸಿದರು.

1930: ಪ್ರಸಿದ್ಧ ಜ್ಯೋತಿಶಿ ಮತ್ತು ಸಂಶೋಧಕರಾದ ವೆಂಕಟೇಶ್ ಬಾಪುಜೀ ಕೇತ್ಕರ್ ನಿಧನರಾದರು.

1956: ಭಾರತೀಯ ಕ್ರಿಕೆಟ್ ತರಬೇತುದಾರರಾಗಿದ್ದ ಬಲ್ವಿಂದರ್ ಸಂಧು ನಿಧನರಾದರು.

1957: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುತ್ರ ಮತ್ತು ಪತ್ರಕರ್ತರಾಗಿದ್ದ ದೇವದಾಸ ಗಾಂಧಿ ನಿಧನರಾದರು.

1960: ಭಾರತದ ಕ್ರಿಕೆಟ್ ಪಟು ಗೋಪಾಲ್ ಶರ್ಮ ನಿಧನರಾದರು.

1984: ಭಾರತದ ಫುಟ್ ಬಾಲ್ ಆಟಗಾರರಾಗಿದ್ದ ಸುನಿಲ್ ಛತ್ರಿ ನಿಧನರಾದರು.

1984: ಅಮೇರಿಕಾದ ಈಜುಗಾರ ಮತ್ತು ಒಲಂಪಿಕ್ ಚಾಂಪಿಯನ್ ರಯಾನ್ ಲಾಕ್ಟೆ ಜನಿಸಿದರು.