Categories
e-ದಿನ

ಆಗಸ್ಟ್-4

 

ಪ್ರಮುಖ ಘಟನಾವಳಿಗಳು:

1693: ಡಾಂ ಪೆರಿಗ್ನಾನ್ “ಶ್ಯಾಂಪೇನ್” ಕಂಡುಹಿಡಿದರು.

1777: ನಿವೃತ್ತ ಬ್ರಿಟೀಶ್ ಅಶ್ವಸೈನ್ಯದ ಅಧಿಕಾರಿ ಫಿಲಿಪ್ ಆಸ್ಟ್ಲೇ ಮೊದಲ ಸರ್ಕಸ್ ಸ್ಥಾಪಿಸಿದರು.

1789: ಫ್ರೆಂಚ್ ರಾಷ್ಟ್ರಿಯ ಸಭೆಯು ಊಳಿಗಮಾನ್ಯ ಪದ್ದತಿಯನ್ನು ಕೊನೆಗೊಳಿಸಿತು.

1862: ಅಮೇರಿಕಾ ತನ್ನ ಮೊದಲ ಆದಾಯ ತೆರಿಗೆಯನ್ನು ಸಂಗ್ರಹಿಸಿತು.

1870: ಬ್ರಿಟಿಷ್ ರೆಡ್ ಕ್ರಾಸ್ ಸೊಸೈಟಿ ರೂಪಿತವಾಯಿತು.

1914: ಗಾಂಧೀಜಿಯವರು ಲಂಡನನ್ನು ತಲುಪಿ ಭಾರತೀಯ ಸ್ವಯಂಸೇವಕರ ಗುಂಪನ್ನು ಬೆಳೆಸಿದರು.

1919: ರಾಡೆನ್ ವಸ್ತು ಸಂಗ್ರಹಾಲಯ ಪ್ಯಾರೀಸಿನಲ್ಲಿ ತೆರೆಯಿತು.

1921: ಮೊದಲ ಬಾರಿಗೆ ರೇಡಿಯೋದಲ್ಲಿ ಟೆನ್ನಸ್ ಪಂದ್ಯವನ್ನು ಪ್ರಸಾರಿಸಲಾಯಿತು.

1930: ಬೆಲ್ಜಿಯಮ್ಮಿನಲ್ಲಿ ಬಾಲ ಕಾರ್ಮಿಕರ ಕಾನೂನನ್ನು ಸ್ಥಾಪಿಸಲಾಯಿತು.

1935: ಭಾರತ ಸರ್ಕಾರ ರಾಯಲ್ ಅಸೆಂಟ್ ಆಕ್ಟ್ 1935 ಅನ್ನು ಪಡೆಯಿತು.

1936: ಭಾರತೀಯ ಸರ್ಕಾರದ ಕಾಯ್ದೆಯನ್ನು ರಾಜನಿಂದ ಅಂಗೀಕರಿಸಲ್ಪಟ್ಟಿತು.

1947: ಜಪಾನಿನ ಸರ್ವೋಚ್ಛ ನ್ಯಾಯಾಲಯವು ಸ್ಥಾಪನೆಯಾಯಿತು.

1954: ಪಾಕಿಸ್ತಾನ ಸರ್ಕಾರವು ಹಫೀಜ್ ಜುಲ್ಲಾಂಡ್ರಿ ಬರೆದ ಮತ್ತು ಅಹಮದ್ ಜಿ ಚಾಗ್ಲಾ ಸಂಯೋಜಿಸಿದ ರಾಷ್ಟ್ರಗೀತೆಯನ್ನು ಅಂಗೀಕರಿಸಿತು.

1956: ಪೂರ್ವ ಜಗತ್ತಿನ ಮತ್ತು ಭಾರತದ ಅತಿದೊಡ್ಡ ಮೊದಲ ಪರಮಾಣು ಶಕ್ತಿ- ನ್ಯೂಕ್ಲಿಯರ್ ರಿಯಾಕ್ಟರ್ ಘಟಕವನ್ನು ಬಾಂಬೆಯಲ್ಲಿ ತೆರೆಯಲಾಯಿತು.

1967: ವಿಶ್ವದ ಅತಿ ಉದ್ದ ಮತ್ತು ಎತ್ತರದ ಅಣೆಕಟ್ಟಾದ “ನಾಗಾರ್ಜುನ್ ಸಾಗರ”ವನ್ನು ಉದ್ಘಾಟಿಸಲಾಯಿತು.

1977: ಅಮೇರಿಕಾ ಅಧ್ಯಕ್ಷ ಕಾರ್ಟರ್ ಇಂಧನ ಇಲಾಖೆಯನ್ನು ಸ್ಥಾಪಿಸಿದರು.

ಪ್ರಮುಖ ಜನನ/ಮರಣ:

1845: ಹಿಂದಿ ಪತ್ರಿಕೆಯನ್ನು ಪ್ರಕಟಿಸಿದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸಂಸ್ಥಾಪಕರಲ್ಲಿ ಒಬ್ಬರಾದ ಫಿರೋಜ್ ಶಾಹ್ ಮೆಹತಾ ಜನಿಸಿದರು.

1894: ಪ್ರಖ್ಯಾತ ಹಿಂದಿ ಲೇಖಕ ನಾರಾಯಣ್ ಸಿತಾರಾಮ್ ಫಡ್ಕೆ ಜನಿಸಿದರು.

1906: ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಡಾ.ಯಶವಂತ್ ಸಿಂಗ್ ಪಾರ್ಮರ್ ಜನಿಸಿದರು.

1928: ಭಾರತದ ಹಾಕಿ ಆಟಗಾರ ಉಧಮ್ ಸಿಂಗ್ ಜನಿಸಿದರು.

1929: ಹಿನ್ನಲೆ ಗಾಯಕ ಕಿಶೋರ್ ಕುಮಾರ್ ಗಂಗೂಲಿ ಜನಿಸಿದರು.

1931: ಭಾರತದ ಕ್ರಿಕೆಟಿನ ವಿಕೆಟ್ ಕೀಪರ್ ಆಗಿದ್ದ ನರೇಂದ್ರ ಶಂಕರ್ ತಮ್ಹಾನೆ ಜನಿಸಿದರು.

1993: ಭಗವದ್ಗೀತೆಯ ಅಧ್ಯಯನದಲ್ಲಿ ಮುಖ್ಯಸ್ಥರಾದ ಸ್ವಾಮಿ ಚಿನ್ಮಯಾನಂದ ಅವರು ನಿಧನರಾದರು.

2000: ಬ್ರಿಟಿಶ್ ರಾಜ ಕುಟುಂಬದ ರಾಣಿ ಎಲಿಜಿಬತ್ ಅವರು ತಮ್ಮ 100ನೇ ಜನ್ಮ ದಿನವನ್ನು ಆಚರಿಸಿಕೊಂಡರು.