Categories
e-ದಿನ

ಆಗಸ್ಟ್-5

 

ಪ್ರಮುಖ ಘಟನಾವಳಿಗಳು:

1772: ಆಸ್ಟ್ರಿಯಾ, ಪ್ರಶ್ಯಾ ಮತ್ತು ರಷ್ಯಾದ ನಡುವಿನ ಪೋಲೆಂಡಿನ ಮೊದಲ ವಿಭಜನೆಯನ್ನು ಘೋಷಿಸಲಾಯಿತು.

1864: ಧೂಮಕೇತುವಿನ ಸ್ಪೆಕ್ಟ್ರಂ ಅನ್ನು ಮೊದಲ ಬಾರಿಗೆ ಜಿಯೋವನ್ನಿ ಡೊನಾಟಿ ಅವರು ವೀಕ್ಷಿಸಿದರು.

1874: ಜಪಾನ್ ಅಂಚೆ ಉಳಿತಾಯ ವ್ಯವಸ್ಥೆಯನ್ನು ಆರಂಭಿಸಿತು.

1882: ಜಪಾನಿನಲ್ಲಿ ಸಮರ ಕಾನೂನನ್ನು ಜಾರಿಗೆ ತರಲಾಯಿತು.

1882: ನ್ಯೂಜರ್ಸಿಯ ಸ್ಟಾಂಡರ್ಡ್ ತೈಲವನ್ನು ಸ್ಥಾಪಿಸಲಾಯಿತು.

1884: ನ್ಯೂಯಾರ್ಕಿನ “ಸ್ಟಾಚ್ಯೂ ಆಫ್ ಲಿಬರ್ಟಿ”ಗೆ ಅಡಿಪಾಯವನ್ನು ಹಾಕಲಾಯಿತು.

1891: ಮೊದಲ (ಟ್ರಾವೆಲ್ಲರ್ ಚೆಕ್) ಪ್ರಯಾಣಿಕರ ಚೆಕ್ಕನ್ನು ಅಮೇರಿಕನ್ ಎಕ್ಸ್ ಪ್ರೆಸ್ ಸಂಸ್ಥೆಯು ಬಿಡುಗಡೆ ಮಾಡಿತು.

1912: ಜಪಾನಿನ ಮೊದಲ ಟ್ಯಾಕ್ಸಿ ಕ್ಯಾಬ್ ಸೇವೆಯನ್ನು ಟೋಕಿಯೋದಲ್ಲಿ ಆರಂಭಿಸಲಾಯಿತು.

1914: ಕ್ಲೀವ್ಲ್ಯಾಂಡಿನ ಓಹಿಯೋದಲ್ಲಿ ಮೊದಲ ವಿದ್ಯುತ್ ಸಂಚಾರ ಸಿಗ್ನಲ್ ದೀಪಗಳನ್ನು ಸ್ಥಾಪಿಸಲಾಯಿತು.

1914: ಡಚ್ ಕಾರ್ಟ್ ವ್ಯಾನ್ ಡೆ ಲಿಂಡೆನ್ ಸರ್ಕಾರವು ಹಣವನ್ನು ಬೆಳ್ಳಿಯ ಬಾಂಡಿನ ರೂಪದಲ್ಲಿ ವಿತರಿಸಿತು.

1926: ಮೊದಲ ಮಾತುಗಾಳನ್ನು ಹೊಂದಿದ ಚಲನಚಿತ್ರ “ಡಾನ್ ಜುವಾನ್” ನ್ಯೂಯಾರ್ಕಿನ ವಾರ್ನರ್ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯಿತು.

1939: ಮಾದಕವಸ್ತು ನಿಷೇಧ ಕಾನೂನಿನ ಅಡಿಯಲ್ಲಿ ಬಂದ ಮೊದಲ ಪ್ರಕಣದಲ್ಲಿ, ರೈಲ್ ರೋಡ್ ಪ್ರಯಾಣಿಕರನ್ನು ಬ್ರಾಂದಿ ಬಾಟಲಿ ಹೊಂದಿದ್ದರೆಂದು ಆರೋಪಿಸಲಾಯಿತು.

1975: ಸಂಸತ್ತು ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಾಣಿಕೆ ಚಟುವಟಿಕೆಗಳ ಕಾಯ್ದೆ (COFEPOSA)ಯನ್ನು ಮತ್ತು ಆಂತರಿಕ ಭದ್ರತಾ ಕಾಯಿದೆಯನ್ನು (MISA) ಅನುಮೋದಿಸಲಾಯಿತು.

1975: ಆರ್.ಎಸ್.ಎಸ್, ಆನಂದಮಾರ್ಗ, ಜಮಾತ್-ಎ-ಇಸ್ಲಾಮಿ ಮತ್ತು ಇತರೆ 23 ಸಂಘಟನೆಗಳನ್ನು ತುರ್ತುಪರಿಸ್ಥಿತಿ ಘೋಷಣೆಯ ನಂತರನಿಷೇಧಿಸಲಾಯಿತು.

1991: ನ್ಯಾಯಮೂರ್ತಿ ಲೀಲಾ ಸೇಥ್ ಅವರು ರಾಜ್ಯ ಹೈಕೋರ್ಟಿನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾದರು. ಅವರು ದೆಹಲಿಯ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರಾಗಿ ಏಮಕವಾಗಿದ್ದರು.

2009: ಗೂಗಲ್ ಸಂಸ್ಥೆ ಮೊತ್ತಮೊದಲ ಬಾರಿಗೆ ಸಾರ್ವಜನಿಕ ಕಂಪನಿಯೊಂದನ್ನು ಖರೀದಿಸಿತು.

2011: ಇಂಗ್ಲಕ್ ಶಿನಾವತ್ರ ಅವರನ್ನು ಥೈಲ್ಯಾಂಡಿನ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಥೈಲ್ಯಾಂಡಿನ ಸಂಸತ್ತು ಚುನಾವಣೆಯಲ್ಲಿ ಆಯ್ಕೆ ಮಾಡಿತು.

2013: ವಿಶ್ವದ ಮೊದಲ ಗೋವಿನ ಖಂಡಕೋಶಗಳನ್ನು ಲ್ಯಾಬಿನಲ್ಲಿ ಬೆಳೆದು ಅದರಿಂದ ಬರ್ಗರ್ ಮಾಡಿ, ಅದನ್ನು ಒಂದು ಸಮಾವೇಶದಲ್ಲಿ ತಿನ್ನಲಾಗಿತ್ತು.

2016: 31ನೇ ಬೇಸಿಗೆ ಒಲಂಪಿಕ್ಸ್ ಬ್ರಜಿಲ್ಲಿನ ರಿಯೋ ಡೆ ಜನೇರಿಯೋದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.

ಪ್ರಮುಖ ಜನನ/ಮರಣ:

1905: ಸಮಾಜ ಸುಧಾರಕ ಡಾ.ರಾಜಾ ಸರ್ ಮುತ್ತಯ್ಯ ಚೆಟ್ಟಿಯಾರ್ ಜನಿಸಿದರು.

1950: ಆಧುನಿಕ ಅಸ್ಸಾಮಿನ ವಾಸ್ತುಶಿಲ್ಪಿ, ಸ್ವಾತಂತ್ರ ಹೋರಾಟಗಾರ ಮತ್ತು ನಾಯಕರಾಗಿದ್ದ ಗೋಪಿನಾಥ್ ಬರ್ದೋಲೋಯ್ ನಿಧನರಾದರು.

1969: ಭಾರತ ತಂಡದ ಕ್ರಿಕೆಟ್ ಪಟು ಮತ್ತು ತರಬೇತುದಾರರಾಗಿದ್ದ ವೆಂಕಟೇಶ್ ಪ್ರಸಾದ್ ಜನಿಸಿದರು.

1974: ಬಾಲಿವುಡ್ ಖ್ಯಾತ ನಟಿ ಕಾಜೋಲ್ ಜನಿಸಿದರು.

1986: ತಮಿಳು ಬಂಡಾಯ ನಾಯಕ ವೇಲುಪಿಳ್ಳೈ ಪ್ರಭಾಕರನ್ ಮೃತರಾದರು.

1987: ಭಾರತದ ಖ್ಯಾತ ನಟಿ ಜೆನಿಲಿಯ ಡಿಸೋಜಾ ಜನಿಸಿದರು.

1992: ಕ್ವಿಟ್ ಇಂಡಿಯಾ ಚಳುವಳಿಯ ನಾಯಕ ಅಚ್ಯುತ್ ರಾವ್ ಪಟ್ವರ್ದನ್ ನಿಧನರಾದರು.

2000: ಭಾರತದ ಮಾಜಿ ಕ್ರಿಕೆಟಿಗರಾದ ಲಾಲಾ ಅಮರನಾಥ್ ನಿಧನರಾದರು.

2014: ಭಾರತೀಯ ಇಂಗ್ಲಿಷ್ ಇತಿಹಾಸಕಾರ, ಪತ್ರಕರ್ತ ಮತ್ತು ಲೇಖಕ ಚಪ್ಮಾನ್ ಪಿಂಚರ್ ನಿಧನರಾದರು.