Categories
e-ದಿನ

ಆಗಸ್ಟ್-6

 

ಪ್ರಮುಖ ಘಟನಾವಳಿಗಳು:

1181: ಚೀನಿ ಮತ್ತು ಜಪಾನಿ ಖಗೋಳಶಾಸ್ತ್ರಜ್ಞರು ಸೂಪರ್ ನೋವಾವನ್ನು ಗಮನಿಸಿದರು.

1819: ನಾರ್ವಿಚ್ ವಿಶ್ವವಿದ್ಯಾನಿಲಯವನ್ನು ವರ್ಮೌಂಟಿನಲ್ಲಿ ಅಮೇರಿಕಾದ ಮೊದಲ ಖಾಸಗಿ ಮಿಲಿಟರಿ ಶಾಲೆಯಾಗಿ ಸ್ಥಾಪಿಸಲಾಯಿತು.

1845: ರಷ್ಯಾದ ಭೂಗೊಳಿಕ ಸಮಾಜವು ಸೇಂಟ್ ಪೀಟರ್ಸ್ ಬರ್ಗಿನಲ್ಲಿ ಸ್ಥಾಪಿಸಲಾಯಿತು.

1856: ದಿ ಗ್ರೇಟ್ ಬೆಲ್ಲನ್ನು ಗ್ರೇಟ್ ಕ್ಲಾಕ್ ಆಫ್ ವೆಸ್ಟ್ ಮಿನ್ಸ್ಟರ್ (ಬಿಗ್ ಬೆನ್)ನಲ್ಲಿ ಇರಿಸಲಾಯಿತು.

1861: ಅಮೇರಿಕಾದ ಕಾಂಗ್ರೆಸ್ ಮೊದಲ ಮುಟ್ಟುಗೋಲು ಕಾನೂನನ್ನು ಅಂಗೀಕರಿಸಿತು.

1890: ನ್ಯೂಯಾರ್ಕಿನಲ್ಲಿ ಕೊಲೆಗಾರ ವಿಲಿಯಂ ಕೆಮ್ಮ್ಲರ್ ಅವನನ್ನು ಮೊದಲ ಬಾರಿಗೆ ವಿದ್ಯುತ್ ಕುರ್ಚಿಯಲ್ಲಿ ಕೂರಿಸಿ ಮರಣ ದಂಡನೆ ವಿಧಿಸಲಾಯಿತು.

1926: ಗೆರ್ಟ್ರೂಡ್ ಎಡೆರ್ಲೆ ಇಂಗ್ಲಿಷ್ ಕಾಲುವೆಯನ್ನು ಈಜಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು

1932: ಮೊದಲ ವೆನಿಸ್ ಚಲನಚಿತ್ರ ಉತ್ಸವ ಪ್ರಾರಂಭಿಸಲಾಯಿತು.

1945: ಜಪಾನಿನ ಹಿರೋಶಿಮಾದ ಮೇಲೆ ಅಣು ಬಾಂಬ್ ಸ್ಫೋಟಿಸಲಾಯಿತು.

1961: ಬಾಹ್ಯಾಕಾಶದಲ್ಲಿ ಚಲನೆಯ ಅನಾರೋಗ್ಯದ ಮೊದಲ ಪ್ರಕರಣ ವರದಿಯಾಯಿತು.

1962: 300 ವರ್ಷಗಳ ನಂತರ ಬ್ರಿಟೀಷರ ಆಳ್ವಿಕೆಯಿಂದ ಜಮೈಕಾ ಸ್ವಾತಂತ್ರ ಪಡೆಯಿತು.

1964: ವಿಶ್ವದ ಅತ್ಯಂತ ಹಳೆಯ ಮರವಾದ “ಪ್ರೊಮೆಥೀಯಸ್”ವನ್ನು ನೆವಾಡದಲ್ಲಿ ಕತ್ತರಿಸಲಾಯಿತು.

1962: ಗಡಿ ವಿವಾದವನ್ನು ಬಗೆಹರಿಸಲು ಭಾರತದೊಂದಿಗೆ ಮಾತುಕತೆ ನಡೆಸಲು ಪೀಕಿಂಗ್ ಸಮ್ಮತಿಸಿತು.

1965: ಭಾರತೀಯ ಪಡೆಗಳು ಪಾಕಿಸ್ತಾನದ ಯುದ್ಧದಲ್ಲಿ ಪಾಕಿಸ್ಥಾವನ್ನು ಹಿಮೆಟ್ಟಿಸಿ ಪಾಕ್ ಪ್ರದೇಶವನ್ನು ಪ್ರವೇಶಿಸಿದವು

1992: ಭದ್ರತಾ ಹಗರಣವನ್ನು ತನಿಖೆ ಮಾಡಲು 30 ಸದಸ್ಯಬಲದ JPC ರಚಿಸಲಾಯಿತು.

1993: ನರ್ಮದಾ ವಿರೋಧಿ ಚಳುವಳಿಗಳ ಮೂಲಕ ಮೇಧಾ ಪಾಟ್ಕರ್ ಅವರು ಆತ್ಮಾಹುತಿ ಬೆದರಿಕೆಯನ್ನು ಘೋಷಿಸಿದರು.

1994: ಹಜರತ್ ಬಾಲ್ ದೇವಾಲಯದ ಮೇಲ್ವಿಚಾರಣೆಯನ್ನು ಮುಸ್ಲಿಂ ವಕ್ಫ್ ಟ್ರಸ್ಟಿಗೆವಹಿಸಲಾಯಿತು.

1998: ಮಹಾರಾಷ್ಟ್ರ ಸರ್ಕಾರವು 1992-93ರ ಸಾಮುದಾಯಿಕ ಗಲಭೆಗಳಲ್ಲಿ ಮತ್ತು ಮುಂಬೈಯ ಸರಣಿ ಸ್ಫೋಟಗಳಲ್ಲಿ ಪೋಲೀಸ್ ಬಲವನ್ನು ಸದೃಢಗೊಳಿಸಲು ಒಪ್ಪಿಕೊಂಡಿತು.

2010: ಭಾರತದ ಜಮ್ಮು ಕಾಶ್ಮೀರದಲ್ಲಿ ಪ್ರವಾಹ ಉಂಟಾಗಿ 71 ಪಟ್ಟಣಗಳು ಮುಳುಗಿ ಕನಿಷ್ಟ 255 ಜನರನ್ನು ಬಲಿ ಪಡೆಯಿತು.

ಪ್ರಮುಖ ಜನನ/ಮರಣ:

1925: ಆಧುನಿಕ ಭಾರತದ ಸಂಸ್ಥಾಪಕರಲ್ಲೊಬ್ಬರಾಗಿದ್ದ ಸುರೇಂದ್ರನಾಥ ಬ್ಯಾನರ್ಜಿ ನಿಧನರಾದರು.

1933: ಭಾರತದ ಕ್ರಿಕೆಟಿಗರಾದ ಏ.ಜಿ.ಕ್ರಿಪಾಲ್ ಸಿಂಗ್ ಜನಿಸಿದರು.

1951: ಶ್ರೇಷ್ಠ ಸಾಮಾಜಿಕ ಸುಧಾರಕ ಮತ್ತು ನಾಯಕ ರುಕ್ಮಿಣಿ ಲಕ್ಷ್ಮಿಪತಿ ನಿಧನರಾದರು.

1959: ಭಾರತದ ಪರಿಸರವಾದಿ ಜಲತಜ್ಞ ರಾಜೇಂದ್ರ ಸಿಂಗ್ ಅವರು ಜನಿಸಿದರು.

1970: ಭಾರತೀಯ-ಅಮೇರಿಕನ್ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಎಂ.ನೈಟ್ ಶ್ಯಾಮಲನ್ ಜನಿಸಿದರು.

1997: ಸಾಮಾಜಿಕ ಕಾರ್ಯಕರ್ತ ಸಂಜಯ್ ಘೋಶ್ ಅವರನ್ನು ULFA ಅಪಹರಿಸಿ ಕೊಂದರೆಂದು ಸೈನ್ಯವು ಖಚಿತಪಡಿಸಿತು.

2001: 1966-70 ಅವಧಿಯಲ್ಲಿ ಭಾರತೀಯ ನೌಕಾದಳದ ಮುಖ್ಯಸ್ಥರಾಗಿದ್ದ ಅಧಾರ್ ಕುಮಾರ್ ಚಟರ್ಜಿ ನಿಧನರಾದರು.