Categories
e-ದಿನ

ಆಗಸ್ಟ್-7

 

ಪ್ರಮುಖ ಘಟನಾವಳಿಗಳು:

1606: ಷೇಕ್ ಸ್ಪಿಯರ್ನ ದುರಂತ ನಾಟಕ “ಮ್ಯಾಕ್ ಬೆತ್” ಅನ್ನು ರಾಜ ಜೇಮ್ಸ್-I ಅವರ ಅರಮನೆಯ “ಗ್ರೇಟ್ ಹಾಲಿನಲ್ಲಿ” ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

1789: ಅಮೇರಿಕಾ ಕಾಂಗ್ರೆಸ್ ಯುದ್ಧ ಮತ್ತು ಲೈಟ್ ಹೌಸ್ ಸೇವೆಯ ಇಲಾಖೆಯನ್ನು ರಚಿಸಿತು.

1820: ಮೊದಲ ಬಾರಿಗೆ ಆಲೂಗೆಡ್ಡೆಯ ಗಿಡಗಳನ್ನು ಹವಾಯಿಯಲ್ಲಿ ನೆಡಲಾಯಿತು.

1888: ತಿರುಗುವ ಬಾಗಿಲಿಗೆ ಥಿಯೋಫೀಲಸ್ ವಾನ್ ಕಾನೆಲ್ ಪೇಟೆಂಟ್ ಪಡೆದರು.

1900: ವಜ್ರ ಕೆಲಸಗಾರರು ಆಮ್ಸ್ಟರ್ ಡ್ಯಾಮಿನಲ್ಲಿ ಮುಶ್ಕರ ಮಾಡಿದರು.

1906: ಮೊದಲ ತ್ರಿವರ್ಣ ರಾಷ್ಟ್ರೀಯ ಧ್ವಜವು ಹಸಿರು, ಹಳದಿ ಮತ್ತು ಕೆಂಪು ಬಣ್ಣಗಳನ್ನು ಒಳಗೊಂಡಿದ್ದು, ಎಂಟು ಕಮಲಗಳು ಮೇಲೆ, ವಂದೇ ಮಾತರಂ ಎಂಬ ಬರಹ ಎರಡನೇ ಭಾಗದಲ್ಲಿ ಮತ್ತು ಸೂರ್ಯ ಮತ್ತು ಅರ್ಧ ಚಂದ್ರ ಮೂರನೇ ಭಾಗದಲ್ಲಿ ಇದ್ದವು. ಈ ಧ್ವಜವನ್ನು ಸುರೇಂದ್ರನಾಥ್ ಬಾನರ್ ಅವರು ಕಲ್ಕತ್ತಾದ ಗ್ರೀನ್ ಪಾರ್ಕಿನಲ್ಲಿ ಹಾರಿಸಿದರು.

1908: ನ್ಯೂಜಿಲ್ಯಾಂಡಿನ ಉತ್ತರ ದ್ವೀಪದ ಮುಖ್ಯ ಟ್ರಂಕ್ ಲೈನ್ ಉದ್ದಕ್ಕೂ ಪ್ರಯಣಿಸುವ ಮೊದಲ ರೈಲು ವೆಲ್ಲಿಂಗ್ಟನಿಂದ ಹೊರಟಿತು.

1909: ಅಮೇರಿಕಾದ ಲಿಂಕನ್ನ ನಾಣ್ಯದ ಮೊದಲ ವಿತರಣೆ ಮಾಡಲಾಯಿತು.

1935: ಹಾರುವ ಇರುವೆಗಳ ಕಾಟದಿಂದ ಇಂಗ್ಲೆಂಡಿನಲ್ಲಿ ನಡೆಯುತ್ತಿದ್ದ ಟೆನ್ನಿಸ್ ಪಂದ್ಯಾವಳಿಯನ್ನು ನಿಲ್ಲಿಸಿತು.

1940: ಅಂಚೆ ಚೀಟಿಗಳಿಗಾಗಿ ಪಾವತಿಸಿದ ಅತೀ ಹೆಚ್ಚು ಮೊತ್ತ $45,000 ಆಗಿತ್ತು.

1944: IBM ಮೊದಲ ಪ್ರೋಗ್ರಾಮ್-ನಿಯಂತ್ರಿತ ಕ್ಯಾಲ್ಕುಲೇಟರ್ ಅನ್ನು ಸ್ವಯಂಚಾಲಿತವಾಗಿ ಅನುಕ್ರಮಗೊಳಿಸಿತು.

1947: ಬಾಂಬೆ ಮುನಿಸಿಪಲ್ ಕಾರ್ಪರೇಷನ್ ಔಪಚಾರಿಕವಾಗಿ ಬಾಂಬೆ ಎಲೆಕ್ಟ್ರಿಕ್ ಸರಬರಾಜು ಮತ್ತು ಸಾರಿಗೆ (BEST) ಅನ್ನು ಸ್ವಾಧೀನ ಪಡಿಸಿಕೊಂಡಿತು.

1955: ಸೋನಿ ಸಂಸ್ಥೆಗೆ ಪೂರ್ವಸೂಚಕವಾಗಿದ್ದ ಟೋಕ್ಯೋ ಟೆಲಿಕಮ್ಯುನಿಕೇಷನ್ಸ್ ಇಂಜಿನಿಯರಿಂಗ್ ಜಪಾನಿನಲ್ಲಿ ತನ್ನ ಮೊದಲ ಟ್ರಾನ್ಸಿಸ್ಟರ್ ರೇಡಿಯೋಗಳ ಮಾರಾಟ ಮಾಡಲು ಆರಂಭಿಸಿತು.

1970: ಮೊದಲ ಕಂಪ್ಯೂಟರ್ ಚೆಸ್ ಪಂದ್ಯಾವಳಿಯನ್ನು ನಡೆಸಲಾಯಿತು.

1976: ಕ್ಯಾಲಿಫೋರ್ನಿಯ ವಿಜ್ಞಾನಿಗಳು ಮಾರ್ಸ್ ಗ್ರಹದ ಮೇಲೆ ಸಂಭವನೀಯ ಜೀವನಕ್ಕೆ ಪ್ರಬಲವಾದ ಸೂಚನೆಯನ್ನು ಕಂಡು ಹಿಡಿದಿರುವುದಾಗಿ ಘೊಷಿಸಿದರು.

1998: ನ್ಯಾಷನಲ್ ಟಾಸ್ಕ್ ಫೊರ್ಸ್ ಶಿಫಾರಸ್ಸಿನ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್ ವೇರ್ ಉದ್ಯಮದ ಅಭಿವೃದ್ಧಿಗಾಗಿ ಸರ್ಕಾರ ಬ್ಯಾಂಕಿಂಗ್ ಮತ್ತು ವಿದೇಶಿ ವಿನಿಮಯ ನೀತಿಯನ್ನು ಪ್ರಕಟಿಸಿದರು.

2011: ನೇಪಾಳ ಮತ್ತು ಭಾರತದಲ್ಲಿ ಸಾರ್ವಜನಿಕ ಜಾಗಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಯಿತು.

ಪ್ರಮುಖ ಜನನ/ಮರಣ:

1868: ಆಧುನಿಕ ಬೆಂಗಾಲಿ ಕವಿ ಪ್ರಥಮ್ ಚೌದರಿ ಜನಿಸಿದರು.

1887: ರಾಜಕಾರಣಿ ಮತ್ತು ಪತ್ರಕರ್ತ ಕಸ್ತೂರಿ ಶ್ರೀನಿವಾಸ್ ಐಯಂಗಾರ್ ಜನಿಸಿದರು.

1888: ಸಾಹಿತ್ಯ ವಿಮರ್ಶಕ ಮತ್ತು ಬಹುಮುಖ ಗುಜರಾತಿ ಲೇಖಕ ನವಲ್ರಾಮ್ (ನವಲ್ರಮ್ ಲಕ್ಷ್ಮೀರಂ ಪಾಂಡ್ಯ) ನಿಧನರಾದರು.

1913: ನೋಬಲ್ ಪ್ರಶಸ್ತಿ ಪುರಸ್ಕೃತ ಕವಿ ಗುರುದೇವ ರಬೀಂದ್ರನಾಥ್ ಟಾಗೋರ್ ಅವರು ನಿಧನರಾದರು.

1925: ರಾಮನ್ ಮೆಗಾಸೆಸೆ ಪ್ರಶಸ್ತಿ ಪುರಸ್ಕೃತರಾದ (ಮೊನ್ಕಂಬು ಸಾಂಬಶಿವನ್) ಎಂ.ಎಸ್.ಸ್ವಾಮಿನಾಥನ್ ಜನಿಸಿದರು.