ಪ್ರಮುಖ ಘಟನಾವಳಿಗಳು:
1509: ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ಪುನರುತ್ಥಾನವ ಚಕ್ರವರ್ತಿ ಕೃಷ್ಣದೇವರಾಯರ ಪಟ್ಟಾಭಿಷೇಕದಿಂದ ಆರಂಭವಾಯಿತು.
1549: ಫ್ರಾನ್ಸ್ ಇಂಗ್ಲೆಂಡಿನ ಮೇಲೆ ಯುದ್ಧ ಸಮರ ಸಾರಿತು.
1576: ಆ ಕಾಲಮಾನದ ವಿಶ್ವದ ಅತ್ಯಾಧುನಿಕ ಸಂಶೋಧನಾ ಸಂಸ್ಥೆಯಾದ ಡೆನ್ಮಾರ್ಕಿನ ಯುರಾನಿಬಾರ್ಗ್ ನಲ್ಲಿರುವ ಟೈಕೋ ಬ್ರಹೆಯವರ ವೀಕ್ಷಣಾಲಯಕ್ಕೆ ಅಡಿಪಾಯ ಹಾಕಲಾಯಿತು.
1609: ವೆನೆಷಿಯನ್ ಸೆನೇಟ್ ಗೆಲೀಲಿಯೋ ಟೆಲಿಸ್ಕೋಪನ್ನು ಪರೀಕ್ಷಿಸಿದರು.
1700: ಡೆನ್ಮಾರ್ಕ್ ಮತ್ತು ಸ್ವೀಡನ್ನಿನ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಮಾಡಲಾಯಿತು.
1786: ಅಮೇರಿಕಾದ ಕಾಂಗ್ರೆಸ್ ಬೆಳ್ಳಿ ಡಾಲರ್ ಮತ್ತು ಹಣದ ದಶಮಾಂಶ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು.
1854: ಲೋಹದ ಬುಲೆಟ್ ಸಿಡಿಮದ್ದುಗಳಿಗೆ ಸ್ಮಿತ್ ಮತ್ತು ವೆಸ್ಸನ್ ಪೇಟೆಂಟ್ ಪಡೆದರು.
1876: ಥಾಮಸ್ ಎಡಿಸನ್ ಮಿಮಿಯೋಗ್ರಾಫ್ (ನಕಲುಯಂತ್ರವನ್ನು) ಪೇಟೆಂಟ್ ಪಡೆದರು.
1911: ಭಾರೀ ಮಳೆಯ ಪರಿಣಾಮ ಭಾರತದ ಹಲವು ಪ್ರದೇಶಗಳಲ್ಲಿ ಭಾಗದಲ್ಲಿ ಕಾಲರಾ ಸಾಂಕ್ರಾಮಿಕ ರೋಗವುಂಟಾಯಿತು.
1919: ರಾವಲ್ಪಿಂಡಿ ಚರ್ಚೆಯಂತೆ ಬ್ರಿಟನ್ ಅಪ್ಘಾನಿಸ್ತಾನದ ಸ್ವಾತಂತ್ರ್ಯವನ್ನು ಅನುಮೋದಿಸಿತು.
1936: ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನವಾದ ಕಾರ್ಬೆಟ್ ಉದ್ಯಾನವನ್ನು ತೆರೆಯಲಾಯಿತು.
1942: ಮಹಾತ್ಮ ಗಾಂಧಿಯವರು ಮುಂಬೈಯ ಬ್ರಿಟಿಷ್ ಆಳ್ವಿಕೆಯ ಸ್ವಾತಂತ್ರಕ್ಕಾಗಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದರು.
1945: ಸೋವಿಯೆತ್ ಯೂನಿಯನ್ ಎರಡನೇ ವಿಶ್ವಯುದ್ಧದಲ್ಲಿ ಜಪಾನಿನ ವಿರುದ್ಧ ಯುದ್ಧ ಘೋಷಿಸಿತು.
1946: ಭೂತಾನ್ ದೇಶಕ್ಕೆ 32 ಮೈಲಿ ಪ್ರದೇಶವನ್ನು ನೀಡಲು ಭಾರತ ಸಮ್ಮತಿಸಿತು.
1949: ಭಾರತವು ಭೂತಾನಿನ ಜೊತೆಗೆ ಮೈತ್ರಿ ಮಾಡಿಕೊಂಡಿತು.
1966: ಭಾರತವು ಪರಮಾಣು ನಿಷೇಧ ಒಪ್ಪಂದವನ್ನು ಭಾಗಶಃ ಅನುಮೋದಿಸಿತು.
1988: 9 ವರ್ಷದ ಯುದ್ಧದ ನಂತರ ರಷ್ಯಾದ ಸೇನೆ ಅಫ್ಘಾನಿಸ್ತಾನದಿಂದ ಹಿಂದಿರುಗಲು ಆರಂಭಿಸಿತು.
1990: ಮಂಡಲ್ ಆಯೋಗದ ವರದಿಯ ಅನುಷ್ಟಾನದ ವಿರೋಧವಾಗಿ ಬಿಹಾರದಲ್ಲಿ ಹಿಂಸಾತ್ಮಕ ಪ್ರತಿಭಟನೆಯುಂಟಾಯಿತು.
1991: ಭಾರತ ಮತ್ತು ಸೋವಿಯೆತ್ ಒಕ್ಕೂಟವು 20 ವರ್ಷಗಳ ಅವಧಿಗೆ ಪರಸ್ಪರ ಶಾಂತಿ, ಸ್ನೇಹ ಮತ್ತು ಸಹಕಾರಗಳ ಒಪ್ಪಂದವನ್ನು ವಿಸ್ತರಿಸಿತು.
2000: ಪಾಟ್ನಾದ ಬಳಿ ಅಲಯನ್ಸ್ ವಿಮಾನ ದುರಂತವನ್ನು ತನಿಖೆ ಮಾಡಲು ಏರ್ ಮಾರ್ಷಲ್ ಪಿ.ರಾಜಕುಮಾರ್ ಅವರನ್ನು ಮುಖ್ಯಸ್ಥರನ್ನಾಗಿ ನ್ಯಾಯಾಲಯದ ಆದೇಶದಂತೆ ಸರ್ಕಾರವು ನೇಮಕ ಮಾಡಿತು.
ಪ್ರಮುಖ ಜನನ/ಮರಣ:
1921: ಭಾರತೀಯ ರೋಗಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ವುಲಿಮಿರಿ ರಾಮಲಿಂಗಸ್ವಾಮಿ ಜನಿಸಿದರು.
1934: ಭಾರತೀಯ ನಟ, ನಿರ್ದೇಶಕ ಮತ್ತು ಚಿತ್ರಕಥೆಕಾರರಾಗಿದ್ದ ಶರತ್ ಪುಜಾರಿ ಜನಿಸಿದರು.
1940: ಭಾರತೀಯ ಕ್ರಿಕೆಟ್ ಆಟಗಾರ ದಿಲಿಪ್ ಸರ್ದೇಸಾಯ್ ಜನಿಸಿದರು.
1948: ವಿಜ್ಞಾನಿ ಮತ್ತು ನೋಬಲ್ ಪ್ರಶಸ್ತಿ ವಿಜೇತರಾದ ಡಾ.ಎಲ್ಲಪ್ರಗಡ ಸುಬ್ಬರಾವ್ ನಿಧನರಾದರು.
1952: ಭಾರತೀಯ ಕ್ರಿಕೆಟ್ ಪಟು ಸುಧಾಕರರಾವ್ ಜನಿಸಿದರು.
1988: ಭಾರತದ ಬೇಸ್ಬಾಲ್ ಆಟಗಾರ ರಿಂಕು ಸಿಂಗ್ ಜನಿಸಿದರು.
1990: ಪ್ರಸಿದ್ಧ ಉದ್ಯಮಿ ನವಲ್ ಗೋದ್ರೇಜ್ ನಿಧನರಾದರು.
2000: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ನಿಧನರಾದರು.