Categories
e-ದಿನ

ಆಗಸ್ಟ್-9

 

ಪ್ರಮುಖ ಘಟನಾವಳಿಗಳು:

1173: ಪೀಸಾ ಗೋಪುರದ ನಿರ್ಮಾಣ ಆರಂಭವಾಯಿತು. ಈ ಕಾಮಗಾರಿಯುಪೂರ್ಣಗೊಳ್ಳಲು ಎರಡು ಶತಮಾನಗಳನ್ನು ತೆಗೆದುಕೊಂಡಿತು.

1655: ಲಾರ್ಡ್ ಪ್ರೊಟೆಕ್ಟರ್ ಆಲಿವರ್ ಕ್ರಾಮ್ವೆಲ್ ಇಂಗ್ಲೆಂಡನ್ನು 11 ಜಿಲ್ಲೆಗಳಾಗಿ ವಿಭಜಿಸಿದರು.

1790: ಕೊಲಂಬಿಯಾ ಹಡಗು ಸತತ ಮೂರು ವರ್ಷಗಳ ಪ್ರಯಾಣ ಮುಗಿಸಿ ಬೋಸ್ಟನ್ನಿಗೆ ಮರಳಿತು. ಅಮೇರಿಕಾದ ಧ್ವಜವನ್ನು ಹೊತ್ತು ವಿಶ್ವವನ್ನು ತಿರುಗಿದ ಮೊದಲ ಹಡಗು ಇದಾಗಿತ್ತು.

1803: ರಾಬರ್ಟ್ ಫುಲ್ಟನ್ ತನ್ನ ಉಗಿ ಪ್ಯಾಡಲ್ ದೋಣಿಯನ್ನು ಫ್ರಾನ್ಸಿನ ನದಿಯಾದ ಸೀನ್ ಮೇಲೆ ಪರೀಕ್ಷಿಸಿದರು.

1859: ಓಟಿಸ್ ಟಫ್ಟ್ ಮೊದಲ ಮಾನವ ಉಪಯೋಗಿಸುವ “ಎಲಿವೇಟರ್” ಅನ್ನು ಪೇಟೆಂಟ್ ಮಾಡಿದರು.

1898: ಜರ್ಮನಿಯ ರುಡಾಲ್ಫ್ ಡೀಸಲ್ ಅವರು ಡೀಸಲ್ ಆಂತರಿಕ ದಹನಕಾರಿ ಇಂಜಿನ್ನಿಗೆ ಪೇಟೆಂಟ್ ಪಡೆದರು.

1904: ರೊಚೆಸ್ಟರ್ ನ್ಯೂಯಾರ್ಕಿನ ಲಿಬಾನಸ್ ಮ್ಯಾಕ್ಲೌತ್ ಟೊಡ್ ತನ್ನ ಚೆಕ್ ಬರೆಯುವ ಯಂತ್ರಕ್ಕೆ ಪೇಟೆಂಟ್ ಪಡೆದರು.

1910: ವಿದ್ಯುತ್ ಬಟ್ಟೆ ಒಗೆಯುವ ಯಂತ್ರಕ್ಕೆ ಆಲ್ವಾ ಫಿಶರ್ ಪೇಟೆಂಟ್ ಪಡೆದರು.

1925: ಹಿಂದುಸ್ಥಾನ್ ಸಮಾಜವಾದಿ ರಿಪಬ್ಲಿಕನ್ ಅಸೋಸಿಯೇಷನ್ (HSRA) ಸದಸ್ಯರು ಉತ್ತರ ಪ್ರದೇಶದ ಲಕ್ನೋನಿಂದ 22 ಕಿ.ಮೀ ದೂರದಲ್ಲಿರುವ ಕಾಕೋರಿ ಬಳಿ ಅಂಚೆ ರೈಲಿನಿಂದ ಸರ್ಕಾರಿ ಖಜಾನೆಯನ್ನು ಲೂಟಿ ಮಾಡಿದರು.

1942: ಮಹಾತ್ಮಾ ಗಾಂಧಿಯವರನ್ನು ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸಿದ ನಂತರಬ್ರಿಟೀಷರು ಅವರನ್ನು ಬಾಂಬೆಯಲ್ಲಿ ಬಂಧಿಸಿದರು.

1945: ಅಮೇರಿಕಾ ತನ್ನ 2ನೇ ಪರಮಾಣು ಬಾಂಬನ್ನು ಜಪಾನಿನ ನಾಗಸಾಕಿಯ ಮೇಲೆ ಹಾರಿಸಿತು.

1952: ಬೆಳೆಗಳ ವೈಫಲ್ಯದಿಂದ 20 ಮಿಲಿಯನ್ ಭಾರತೀಯ ರೈತರು ತೊಂದರೆಗೊಳಗಾಗಿರುವ ಬಗ್ಗೆ ನವದೆಹಲಿಯಲ್ಲಿ ವರದಿಯಾಯಿತು.

1969: ಕಲ್ಕತ್ತಾದಲ್ಲಿನ ಒಚ್ಚಲೋರ್ನಿ ಸ್ಮಾರಕವನ್ನು “ಶಾಹಿದ್ ಮಿನಾರ್” ಎಂದು ಮರುನಾಮಕರಣ ಮಾಡಲಾಯಿತು.

1980: ಬೆಲ್ಜಿಯಂ ದೇಶದ ಸಂವಿಧಾನವನ್ನು ಪರಿಷ್ಕರಿಸಲಾಯಿತು.

ಪ್ರಮುಖ ಜನನ/ಮರಣ:

1892: ಮದರಾಸು ವಿಶ್ವವಿದ್ಯಾಲಯದ ಮೊದಲ ಗ್ರಾಂಥಪಾಲಕರಾಗಿದ್ದ ಶ್ರೀ ಶಿಯಾಲಿ ರಾಮಾಮೃತ ರಂಗನಾಥನ್ ಜನಿಸಿದರು.

1893: ಪ್ರಸಿದ್ದ ಹಿಂದಿ ಕಥೆಗಾರ ಮತ್ತು ಕಾದಂಬರಿಕಾರರಾಗಿದ್ದ ಶಿವಪುಜನ್ ಸಹಾ ಜನಿಸಿದರು.

1909: ಹಿರಿಯ ವಿದ್ವಾಂಸ, ಲೇಖಕ, ಶಿಕ್ಷಣತಜ್ಞ ಜ್ಞಾನಪೀಠ ಪುರಸ್ಕೃತ ವಿ.ಕೆ.ಗೋಕಾಕ್ ಅವರು ಜನಿಸಿದರು.

1911: ಭಾರತೀಯ ಕ್ರಿಕೆಟಿಗರಾದ ಖುರ್ಷಿ ದ್ ಜಿ ರುಸ್ತಂಜಿ ಮೆಹೆರ್ ಹೋಮ್ಜಿ ಜನಿಸಿದರು.

1971: ಬಿಹಾರದ ಮಾಜಿ ಮುಖ್ಯಮಂತ್ರಿ ವಿನೋದಾನಂದ ಝಾ ನಿಧನರಾದರು.

1975: ತೆಲಗು ಚಲನಚಿತ್ರ ಖ್ಯಾತ ನಟ ಮಹೇಶಬಾಬು ಜನಿಸಿದರು.

2015: ಹಿರಿಯ ಪತ್ರಕರ್ತ, ಲೇಖಕ ಮತ್ತು ಕವಿ ಕಯ್ಯಾರ ಕಿಞ್ಞಣ್ಣ ರೈ ನಿಧನರಾದರು.