ವರ್ಧಮಾನಪುರಾಣಂ – ಅರ್ಥಕೋಶ

ಆಶ್ವಾಸ ಪದ್ಯ ಸಂಖ್ಯೆ
ಅಂಗರೋಚಿ ೨-೧೧ ದೇಹಕಾಂತಿ
ಅಂಚಳ ೨-೧೪ ಸೆರಗು
ಅಂಡಲೆ ೬-೨೩ ವ ಹಿಂಸಿಸು
ಅಂಪು ೬-೩೯ ವ ಅನುಲೇಪನ
ಅಂಬರ ೧-೩ ಆಕಾಶ
ಅಂಹೋಭಾವ ೭-೬೩ ಪಾಪಭಾರ
ಅಕಳಿತ ೩-೬೯ ವ ಅಖಂಡವಾದ
ಅಕುಳಿಸು ೧೫-೩೮ ಒಳಗೆ ಇಳಿ
ಅಗಪತಿ ೩-೬೦ ಪರ್ವತರಾಜ
ಅರ್ಗಲಿಸು ೯-೪೪ ವ ಅಗ್ಗಳಿಸು, ವಿಶೇಷವಾಗು
ಅಗರು ೧೪-೨೬ ಗುಗ್ಗುಳ
ಅಗೆ ೭-೧೪ ಅಂಕುರ, ಮೊಳಕೆ
ಅಗ್ರಾವ ೬-೨೯ ವ ಕಲ್ಲಲ್ಲದ
ಅಚ್ಚಿಗ ೧೧-೧೫ ಉತ್ಸಾಹ, ಸಂಭ್ರಮ
ಅಟ್ಟೆ ೭-೬೩ ಮುಂಡ, ತಲೆಯಿಲ್ಲದ ದೇಹ
ಅಡಕಿಲ್ ೯-೪೪ ವ ಒಂದರ ಮೇಲೊಂದು ಪೇರಿಸಿರುವುದು
ಅಡಗು ೧೧-೨೦ ಮಾಂಸ
ಅಡಪ ೧೫-೫೨ ಕೈಚೀಲ
ಅಡಸು ೨-೫೧ ಪ್ರಾಪ್ತವಾಗು
ಅಡಹಡಿಸು ೬-೫೫ ವ ಚಡಪಡಿಸು
ಅಡಹಡಿಸು ೬-೫೬ ವ ಉದ್ರೇಕಗೊಳ್ಳು
ಅಡ್ಡಣ ೧-೬೫ ಗುರಾಣಿ
ಅಡ್ಡಣ ೧೦-೫ ವ ತಟ್ಟೆ
ಅಡಿಗುಟ್ಟು ೧೩-೫೨ ಪಾದವನ್ನೊತ್ತು
ಅಡೆವೊತ್ತು ೪-೬೭ ಅಡೆಹಾಕು, ಬೇಗೆಯನ್ನು ಪಡೆ
ಅಣಿ ೯-೫೬ ವ ಸೈನ್ಯ
ಅಣ್ಪು ೫-೪೪ ಪರಿಮಳದ್ರವ್ಯ
ಅಣ್ಕೆ ೬-೫೦ ಲೇಪನ
ಅದವಳಲ್ ೩-೫೮ ವ ವ್ಯಥೆ
ಅಧಃಕೃತ ೩-೬೬ ವ ತಿರಸ್ಕರಿಸಲ್ಪಟ್ಟ
ಅಧಿಷ್ಠಿತ ೧-೪ ನಿಲ್ಲಿಸಿದ
ಅನವದ್ಯ ೧-೧೦೬ ಶ್ರೇಷ್ಠವಾದ
ಅನಾರತ ೧-೫೫ ಸದಾಕಾಲ, ಅನವರತ
ಅನಿಮಿಷಶೈಲ ೧-೩೧ ದೇವತೆಗಳ ಪರ್ವತ-ಮೇರುಪರ್ವತ
ಅನ್ವಿತರ್ ೧-೮೯ ಕೂಡಿದವರು
ಅನುಬಂಧ ೪-೬ ಬಾಂಧವ್ಯ
ಅನುಶಯ ೯-೪೪ ವ ಕೋಪ
ಅನುಷಂಗ ೪-೫೬ ವ ಸಂಬಂಧ
ಅನೋಕಹ ೧-೫೩ ವೃಕ್ಷ
ಅಪತ್ಯ ೯-೪೮ ವ ಮಗ
ಅರ್ಬಿಸು ೪-೬೮ ಅರ್ಭಟಿಸು
ಅಭಿಯಾತಿ ೧-೭೭ ಶತ್ರು
ಅಭ್ಯುತ್ಥಾನ ೫-೪೫ ವ ನಿಂತು ಗೌರವಿಸುವುದು
ಅಮರ್ಕೆ ೯-೫೯ ಹೊಂದಿಕೆ
ಅಮೇಯ ೧-೧ ಎಣಿಕೆಮೀರಿದ
ಅರ ೮-೪೦ ಆರೆಕಾಲು
ಅರಾತಿ ೧-೯೦ ಶತ್ರು
ಅರುಣಿ ೧-೪೨ ಕೆಂಪು
ಅಱಗುಲಿ ೧೧-೧೨ ಧರ್ಮನಾಶಕ
ಅರ್ತಿ ೬-೨೩ ವ್ಯಥೆ
ಅಲಕ್ತ ೧-೭೪ ಅರಗಿನ ರಸ
ಅಲರ್ ೧-೪೦ ಹೂವು, ಅರಳು
ಅಲುಂಬು ೫-೬೩ ವ ಸೆಳೆ, ಅಲ್ಲಾಡಿಸು
ಅವಗೞೆ ೫-೬೩ ವ ಉರವಣೆ, ಅತಿಶಯ
ಅವಗಾಹ ೨-೨೬ ವ ಮುಳುಗು
ಅವಗ್ರಹ ೧-೪೮ ಅಗಲಿಕೆ, ಲೇಪನ
ಅವಟಯಿಸು ೫-೨೩ ವ ಕೊಡು, ಒದಗಿಸು
ಅವತಂಸ ೫-೧೮ ಕಿವಿಯ ಆಭರಣ
ಅವದಾತ ೧-೮೩ ಅವಲಂಬಿಸಿದ, ಸುಂದರವಾದ ಬಿಳಿದಾದ
ಅವರಜ ೧-೯೧ ತಮ್ಮ
ಅವ್ವಳಿಸು ೨-೫೦ ಉರವಣಿಸು
ಅಶ್ಮ ೭-೩ ವ ಕಲ್ಲು
ಅಸಕಳಿ ೪-೬೮ ವಶತಪ್ಪು
ಅಸಕೃತ್ ೧-೪೩ ಮೇಲಿಂದ ಮೇಲೆ
ಅಸವಸ ೪-೮೫ ವ ಆತುರ, ಅಸ್ತವ್ಯಸ್ತ
ಅಸವಸ ೧೦-೩೩ ಸಂಭ್ರಮ
ಅಪ್ಪಂದ ೨-೫೫ ವ ಅಲ್ಲಾಡದ
ಅಸಿಪತ್ರ ೩-೧೮ ಕತ್ತಿಯ ಅಲಗು
ಅಸುಕೆ ೪-೬೩ ಅಶೋಕವೃಕ್ಷ
ಅಸೆ ೮-೫೮ ಮುಂಭಾಗ
ಅಸ್ತೋಕ ೧-೨೨ ಮಹತ್ತಾದ
ಅಳಕ ೧-೬೯ ಮುಂಗುರುಳು
ಅಳ್ಳವಿಳ್ಳೆಯಾಗು ೯-೫೪ ಬಳಲು, ಅಸ್ತವ್ಯಸ್ತವಾಗು
ಅಳಿ ೧-೪೫ ದುಂಬಿ
ಅಳೀಕ ೩-೧೧ ವ ಮೋಸ
ಅಳುಂಬ ೩-೨೭ ವಿಶೇಷವಾದ
ಅಳುರ್ ೪-೪೭ ವ್ಯಾಪಿಸು
ಅಳ್ವು ೮-೨೨ ಹಬ್ಬು, ಆಕ್ರಮಿಸು
ಅಳ್ಕೆ ೩-೧೧ ಪಕ್ಕೆ
ಅೞರು ೧-೧೯ ಹೆದರು
ಅೞಲ್ ೨-೪೯ ವ ವ್ಯಥೆ
ಅೞ್ಕಱು ೧-೧ ಪ್ರೀತಿ
ಅೞ್ಕಿಸು ೫-೮ ಅರಗಿಸು
ಅೞ್ತಿ ೩-೪೭ ಅಕ್ಕರೆ
ಅೞ್ಗು ೭-೪೮ ನಾಶವಾಗು
ಆಕುಳ ೪-೭೨ ವ್ಯಥೆ
ಆಕೃಷ್ಟ ೩-೪೫ ವ ಆಕರ್ಷಿಸಲ್ಪಟ್ಟ
ಆಗಾರ ೧-೨೭ ವಾಸಸ್ಥಾನ, ಮನೆ
ಆಘ್ರಾಣಿಸು ೩-೪ ಮೂಸಿನೋಡು
ಆಟವಿಕ ೬-೩೨ ವ ಅಡವಿಯ
ಆತತ ೩-೩೭ ವ ವಿಸ್ತಾರವಾದ
ಆತ್ತ ೧-೫೫ ಪ್ರಾಪ್ತವಾದ
ಆತೋದ್ಯ ೭-೨ ಮಂಗಳವಾದ್ಯ
ಆದಮೆ ೧-೧೬ ವಿಶೇಷವಾಗಿ
ಆದರ್ಶ ೧-೬೯ ಕನ್ನಡಿ
ಆರ್ದ್ರಮಾಸ ೧-೭೪ ಮೃದುವಾದ, ದ್ರವವಸ್ತುವುಳ್ಳ
ಆಧಿ ೨-೩೩ ವ ಮನೋರೋಗ
ಆನ್ ೨-೨೪ ಮುಟ್ಟು, ಮೇಲೆ ಬೀಳು
ಆನಕ ೫-೩೭ ನಗಾರಿ
ಆನೀಕ ೧-೨೧ ಗುಂಪು, ಸಮೂಹ
ಆನು ೧-೮೧ ಸೇರು
ಆಪನೋದನ ೪-೮೪ ವ ನಿವಾರಣೆ
ಆಭೀಳ ೮-೪೫ ಭಯಂಕರವಾದ
ಆರಯ್ ೧-೨೦ ವಿಚಾರಮಾಡು
ಆಱಡಿ ೬-೨೨ ವ ದುಂಬಿ, ವ್ಯಥೆ
ಆವಾಳ ೧-೩೩ ಪಾತಿ
ಆವಿಳ ೮-೪ ವಿಲಾಸ, ಸೌಂದರ್ಯ
ಆವು ೩-೪ ಹಸು
ಆಶಾಚಕ್ರ ೧-೮೦ ದಿಕ್ಕುಗಳ ಸಮೂಹ
ಆಸವ ೯-೨೫ ಮದ್ಯ, ಅಮೃತ, ಮಕರಂದ
ಆಸ್ತರಣ ೪-೫೮ ಹಾಸಿಗೆ
ಆಹೂತ ೫-೧ ವ ಕರೆಯಲ್ಪಟ್ಟ
ಆಳ್ವೇರಿ ೫-೫೨ ಕೋಟೆಯ ಸುತ್ತಣ ಗೋಡೆ
ಇಂಚರ ೧-೮೬ ಮೃದುಧ್ವನಿ, ಮಧುರಗಾನ
ಇಂಬು ೧೫-೪ ಅವಕಾಶ
ಇಕ್ಕೆದಾಣ ೧೫-೮೪ ವಾಸಸ್ಥಾನ
ಇಕ್ಷುಕ್ಷೇತ್ರ ೧-೩೩ ಕಬ್ಬಿನ ಗದ್ದೆ
ಇಟ್ಟೆಡೆ ೬-೨೩ ವ ಇಕ್ಕಟ್ಟಾದ ಪ್ರದೇಶ
ಇಡುಕುರು ೬-೪೧ ವ ಇಕ್ಕಟ್ಟು, ದಟ್ಟ
ಇೞಿಕೆಯ್ ೪-೫೮ ವ ನಿಂದಿಸು
ಇರ್ಪು ೫-೬೩ ಹಸಿ
ಇಸು ೧-೩೯ ಬಾಣಪ್ರಯೋಗ ಮಾಡು
ಈಡಿತ ೧೩-೬ ಸ್ತೋತ್ರ
ಈರೆಲೆವೋಗು ೪-೨೦ ಎರಡೆಲೆ ಬಿಡು, ಚಿಗುರು
ಈೞೆ ೨-೩ ಕಿತ್ತಿಳೆ, ಹೇರಳೆ
ಉಂಡಿಗೆ ೫-೫೯ ಮುದ್ರೆ
ಉಚ್ಚಳಿಸು ೨-೬೦ ವ ಮೇಲೇಳು
ಉರ್ಚು ೩-೭ ಚುಚ್ಚು, ಬಿಚ್ಚು
ಉಡುಗು ೪-೫೮ ವ ಮುದುಡು
ಉಡೆನೂಲ್ ೭-೯ ವ ಉಡಿದಾರ
ಉತ್ತಂಸ ೪-೫ ವ ಶ್ರೇಷ್ಠವಾದ
ಉತ್ತರ ೩-೧ ವ ಶ್ರೇಷ್ಠ
ಉತ್ಕರ ೧-೩೨ ಶ್ರೇಷ್ಠ
ಉತ್ಕಳಿಕಾ ೯-೪೪ ಉತ್ಕಂಠತೆ, ವಿರಹಕಾತರ
ಉತ್ಪಾಟಿಸು ೩-೪೬ ಕಿತ್ತುಹಾಕು
ಉದಗ್ರ ೨-೪೫ ಶ್ರೇಷ್ಠ
ಉದ್ಘ ೧-೨೧ ಶ್ರೇಷ್ಠವಾದ
ಉದೀರ್ಣ ೧-೭೪ ಭಯಂಕರವಾದ
ಉದ್ಯೋತ ೧-೭೪ ಪ್ರಕಾಶಮಾನವಾದ
ಉನ್ನಯತ್ ೨-೪೩ ಎತ್ತಿದ
ಉಪರೋಧ ೬-೧೯ ವ ಅಡ್ಡಿ
ಉಪಳ ೧-೨೦ ಕಲ್ಲು
ಉಪ್ಪರವಟ್ಟ ೨-೬ ಎತ್ತರವಾಗಿ ಮೇಲೆ ಕಟ್ಟುವ ಧ್ವಜವಸ್ತ್ರ
ಉಪಾಂತ ೨-೩೨ ವ  ಸಮೀಪ
ಉಪಾರ್ಜಿಸು ೧-೯೧ ಗಳಿಸು
ಉಪಾದೇಯ ೩-೧೭ ವ ಸ್ವೀಕಾರಯೋಗ್ಯ
ಉಪಾಲಂಭ ೭-೩೬ ವ ವ್ಯಂಗ್ಯೋಕ್ತಿ, ಸಲಿಗೆ
ಉಪೇತ ೧-೪೬ ವ ಸೇರಿದುದು
ಉಮ್ಮಳಿಸು ೩-೪೭ ವ ದುಃಖಗೊಳ್ಳು
ಉರವಣಿಸು ೨-೪೮ ವ ವಿಜೃಂಭಿಸು
ಉರುಳಿ ೧೧-೬ ಉಂಡೆ
ಉಲಿ ೧-೪೩ ಧ್ವನಿ, ಧ್ವನಿಮಾಡು
ಉರ್ವು ೧-೯೬ ಹೆಚ್ಚಾಗು
ಉಷ್ಣಕರ ೬-೨೩ ವ ಸೂರ್ಯ
ಉಷ್ಮಾಯಮಾಣ ೪-೭೧ ಬೆಂಕಿಗೆ ಸಮನಾದ
ಉಸಲಿಂಕು ೬-೮ ತೇಗು, ಗಟ್ಟಿಯಾಗಿ ಉಸಿರುಬಿಡು
ಉೞಿಗಿರು ೧೦-೫೭ ತಪಸ್ಸುಮಾಡು
ಉೞ್ಕು ೬-೨೩ ವ ಉಕ್ಕು
ಎಕ್ಕತುಳ ೬-೩೩ ವ ಏಕಪ್ರಕಾರ
ಎಕ್ಕಲಗಾಣ ೯-೪೪ ವ ತನಿಸಂಗೀತಗಾರ, ಪಕ್ಕವಾದ್ಯವಿಲ್ಲದ ಒಂಟಿ ಗಾಯಕ
ಎಗ್ಗು ೯-೪೪ ವ ದಡ್ಡತನ
ಎಡ್ಡ ೭-೧೦ ಮನೋಹರ
ಎಣೆ ೧-೬೨ ಸಮಾನ
ಎಯ್ದೆ ೯-೭೧ ಪತಿವ್ರತೆ
ಎರಲೆ ೧-೭೫ ಜಿಂಕೆ
ಎರೆ ೯-೩೬ ಪ್ರಾರ್ಥಿಸು
ಎಱೆಯ ೧-೧೦೭ ಒಡೆಯ, ರಾಜ
ಎಲರ್ ೧-೪೩ ಗಾಳಿ
ಎಸಕ ೯-೧೦ ಕಾರ್ಯ, ಕೆಲಸ
ಎಳವಾೞೆ ೬-೭ ಎಳೆಯ ಮೀನು
ಎಳವು ೪-೩೭ ಹೊಂದಿಸು
ಎಳಸು ೧-೪೨ ಅಪೇಕ್ಷಿಸು
ಎಳೆ ೧-೩೮ ಭೂಮಿ
ಏಗಳುಂ ೧-೧೭ ಯಾವಾಗಲೂ
ಏಱು ೪-೩೭ ಗಾಯ
ಏೞಿಸು ೧-೬೫ ಹೀಯಾಳಿಸು
ಐಕಿಲ್ ೧೧-೪೮ ಮಂಜುಗಡ್ಡೆ, ಹಿಮ
ಒಗೆ ೧-೩೮ ಹುಟ್ಟು
ಒಚ್ಚತ ೧೩-೨೩ ಸಂತೋಷಕರ
ಒಟ್ಟಜೆ ೨-೪೭ ಗುಂಪು
ಒಟ್ಟಲು ೪-೪೪ ಗುಂಪು, ರಾಶಿ
ಒಡ್ಡಣ ೮-೧೨ ಸಮೂಹ
ಒಣರ್ ೧೦-೪೮ ಹೇಳು
ಒದವಿಸು ೩-೧ ವ ಒದಗಿಸು, ಉಂಟುಮಾಡು
ಒಪ್ಪ ೨-೬ ಒಪ್ಪಿಗೆ, ಮನೋಹರ
ಒಸಗೆ ೪-೮೫ ವ ಸಂತೋಷ
ಒಸೆ ೧೬-೭೬ ಪ್ರೀತಿಸು
ಒಳಱು ೧೦-೮ ಕಿರಿಚು
ಒಳವು ೩-೩೦ ಇವೆ
ಒಳಸೋರು ೮-೧೦ ಹಿಮ್ಮೆಟ್ಟು
ಓಕ ೧-೨೧ ವಾಸಸ್ಥಾನ
ಓಘ ೧-೯ ಸಮೂಹ, ಗುಂಪು
ಓಪ ೪-೬೬ ಗ ಪ್ರಿಯತಮ
ಓವನಿಗೆ ೪-೩೬ ಬೀಸುವ ಹಾಡು
ಓವರಿ ೮-೩೩ ಕೋಣೆ, ಮೂಲೆ
ಓವು ೧-೨ ಸಂರಕ್ಷಿಸು, ಕಾಪಾಡು
ಔಡೊತ್ತು ೭-೪೧ ವ ಹಲ್ಲುಕಡಿ
ಔರ್ವಾನಲ ೨-೩೦ ಪ್ರಳಯಾಗ್ನಿ
ಕಂಕೆಲ್ಲಿ ೨-೬ ಅಶೋಕವೃಕ್ಷ
ಕಂಡೂ ೭-೬೧ ವ ತೀಟೆ, ಕಡಿತ
ಕಚ ೨-೧೨ ಕೂದಲು
ಕಜ್ಜಳ ೧-೧೦೪ ಕಾಡಿಗೆ
ಕಟಕ ೧-೩೪ ಕಡಗ, ಸೈನ್ಯ
ಕಟಿ ೧-೬೬ ಪೊರವಾರು, ಸೊಂಟ
ಕಡಿಕೆಯ್ ೧-೨೭ ತುಂಡುಮಾಡು
ಕಡುಕೆಯ್ ೨-೪೭ ರೇಗು, ತೀವ್ರಗೊಳ್ಳು
ಕಡೆಪಡು ೩-೪೦ ಕೀಳಾಗು
ಕಡೆಯ ೫-೩೩ ರಂಗೋಲಿ
ಕಣಿತನ ೧೦-೪೦ ಧೈರ್ಯ
ಕಮ್ಮನೆ ೧-೬೪ ಸುವಾಸನಾಯುಕ್ತ, ಮನೋಹರ
ಕಮ್ರ ೧೩-೭೦ ಪ್ರಿಯವಾದ, ಪ್ರೇಮಮಯ
ಕರ್ವೊನ್ನು ೪-೫೮ ವ ಕಬ್ಬಿಣ
ಕರಪಾಳಿಕೆ ೩-೧೩ ಕತ್ತಿ, ದೊಣ್ಣೆ
ಕರವಾಳ ೨-೪೭ ವ ಕೈಗತ್ತಿ
ಕರುವೆಸನ ೭-೩ ವ ಎರಕದ ಕೆಲಸ
ಕರಂಡಕ ೧-೪೬ ಪೆಟ್ಟಿಗೆ
ಕಲ್ಪೆ ೩-೫೦ ವ ವಿದ್ಯಾವಂತೆ
ಕವಾಟ ೧-೭೩ ಬಾಗಿಲು
ಕಸಱಿಸು ೨-೩೫ ಅಸಹ್ಯಕರವಾಗು
ಕಳಾಪ ೧-೯೪ ಸಮೂಹ
ಕಳಿಕೆ ೭-೪೧ ವ ಸೊಡರಕುಡಿ
ಕೞಲ್ ೨-೪೯ ವ ಕೆಳಗೆಬೀಳು, ಜಾರು
ಕೞಿ ೮-೪೯ ತುಂಬುಪ್ರವಾಹ, ದೂರ
ಕೞಿ ೧೦-೧ ಸತ್ತುಹೋಗು
ಕಾಂಡಪಟ ೭-೨ ವ ವಧೂವರರನಡುವೆ ಹಿಡಿಯುವ ಬಟ್ಟೆ, ಅಂತಃಪಟ
ಕಾದಲ ೪-೭೬ ಪ್ರೇಮಿ
ಕಾರ್ತಾಂತಿಕ ೩-೭೦ ವ ಮೌಹೂರ್ತಿಕ, ಜೋಯಿಸ
ಕಾವಣ ೪-೫೮ ವ ಬಳ್ಳಿಯಮನೆ, ಚಪ್ಪರ
ಕಾಸಾರ ೩-೧೬ ವ ಸರೋವರ, ಕೊಳ
ಕಾಳಾಯಸ ೪-೪೧ ವ ಕಬ್ಬಿಣ
ಕಾೞ್ಪುರ ೬-೧೨ ಕಾಡಿನ ಪ್ರವಾಹ
ಕಿತ್ತುಸಿರ್ ೪-೬೧ ಸಣ್ಣ ಉಸಿರು
ಕಿಱುಗುಳರ್ ೭-೬೦ ಅಲ್ಪರು
ಕಿಱುವಱುಗುಲ್ ೭-೪೧ ವ ಚಿಕ್ಕತಗ್ಗು
ಕಿವಿವೇಟ ೪-೩ ಸಂಗೀತವನ್ನು ಕೇಳಿ ಹುಟ್ಟುವ ಪ್ರೇಮ
ಕಿಸುಗಣ್ಣು ೪-೫೬ ಕೋಪಗೊಳ್ಳು
ಕಿೞುದಲೆ ೮-೫೭ ಕಿತ್ತತಲೆ
ಕಿೞ್ತಲೆ ೮-೫೭ ಬಾಗಿದ ತಲೆ
ಕೀಚಕ ೪-೩೩ ಬೊಂಬು
ಕೀಸು ೧೧-೪೭ ವ ಗೀರು, ಗಾಯಮಾಡು
ಕೀಳಾವಳಿ ೨-೬೫ ಉರಿಗಳ ಸಮೂಹ, ಜ್ವಾಲೆ
ಕುಕಿಲ್ ೧೫-೩೯ ಧ್ವನಿಮಾಡು
ಕುಟ್ಟಿಮ ೧-೬೧ ನೆಲಗಟ್ಟು
ಕುಣಪ ೩-೪೩ ಹೆಣ
ಕುತ್ಕೀಳ ೨-೨೨ ವ ಪರ್ವತ, ಬೆಟ್ಟ
ಕುತ್ತ ೧೧-೪೮ ರೋಗ
ಕುತ್ತು ೭-೪೮ ಚುಚ್ಚು, ಹೊಡೆ
ಕುತ್ತುಂಗಱಿ ೭-೮ ಸಣ್ಣಗರಿ
ಕುರುಳಿಗೊಳ್ ೮-೯ ಗುಳಿಬೀಳು
ಕುೞಿ ೩-೧೯ ಗುಳಿ
ಕುವಳಯ ೧-೧೧ ಭೂಮಂಡಲ, ಕನ್ನೈದಿಲೆ
ಕುಶೇಶಯ ೧೩-೯೫ ಕಮಲ
ಕೂರ್ ೧-೪೧ ಹರಿತ, ಪ್ರೀತಿ
ಕೆಂಕು ೫-೬೩ ವ ಕೆಂಪು
ಕೆದಱು ೯-೫೯ ಚೆಲ್ಲಾಡು
ಕೆತ್ತು ೬-೩೨ ವ ಹಾರು, ಹಾರಿಸು
ಕೆಮ್ಮನೆ ೧-೪೩ ಸುಮ್ಮನೆ
ಕೆಯ್ ೧-೫೨ ಗದ್ದೆ
ಕೆಯ್ವಾರ ೯-೬೭ ಸ್ತೋತ್ರ
ಕೆೞು ೩-೫ ಮುಚ್ಚು
ಕೆಳರ್ ೮-೧೯ ವ ರೇಗು
ಕೇರ್ ೯-೪೪ ಗೋಡೆ
ಕೇವಣ ೭-೩೨ ಕುಂದಣ
ಕೈಗಱೆ ೬-೨ ವ ವಿಶೇಷವಾಗಿ
ಕೈಘಟ್ಟಿ ೧೩-೫೨ ಶ್ರೀಗಂಧ
ಕೊಂಬುಗೊಳ್ ೬-೨೩ ವ ದ್ವಿಗುಣಿತವಾಗು, ಹಬ್ಬು
ಕೊಗ್ಗಿ ೭-೯ ಕಿವಿಯ ಕಸರು
ಕೊಗ್ಗು ೧೪-೮೪ ಕ್ಷೀಣಿಸು
ಕೊನೆ ೪-೧೬ ವ ಸಂತೋಷಗೊಳ್ಳು
ಕೊಸಗು ೨-೧೦ ಬೆಟ್ಟದಾವರೆ
ಕೋ ೩-೬ ತಿವಿ, ಪೋಣಿಸು
ಕೋಕ ೯-೮೧ ವ ಶ್ರೀ ವಿಜಯ ಒಂದು ಹೆಸರು
ಕೋಣ ೨-೧೩ ಢಕ್ಕೆಯನ್ನು ಹೊಡೆಯುವ ಕೋಲು, ವಾದನದಂಡ
ಕೋರಯಿಸು ೧೦-೪೩ ನಾಚಿಕೊಳ್ಳು
ಕೋಲ್ ೭-೫೨ ಬಾಣ
ಕೌಶಿಕ ೬-೨೯ ಗೂಬೆ
ಕ್ರಮ ೧-೭೪ ಹೆಜ್ಜೆ, ನಡಗೆ
ಖಚರ ೧-೭ ಆಕಾಶದಲ್ಲಿ ಸಂಚರಿಸುವವ, ಗಂಧರ್ವ
ಖಪುಷ್ಟ ೩-೩೪ ಆಕಾಶ ಪುಷ್ಪ
ಖದ್ಯೋತ ೬-೩೨ ವ ಮಿಂಚುಹುಳು
ಖೇಟಕ ೮-೪೮ ಗುರಾಣಿ
ಗಂಡಸ್ಥಳ ೧-೬೯ ಕಪೋಲ
ಗಂಧವಹ ೨-೨ ಗಾಳಿ
ಗಂಧಶಾಳಿ ೧-೪೧ ಭತ್ತ
ಗವಸಣಿಗೆ ೫-೧೭ ಹೊದಿಕೆ
ಗಸಣೆ ೭-೩ ವ ಆಯಾಸ, ಚಿಂತೆ
ಗೞೆ ೧-೯೯ ಬಿದಿರುಗಳೆ, ಕೋಲು
ಗುಂಗುಱು ೧೫-೪೦ ನುಸಿ ಹುಳು
ಗುೞ ೮-೫೨ ಪಕ್ಷರಕ್ಷೆ, ತಡಿ
ಗೊಂದಳ ೧೪-೫೭ ಗುಂಪು
ಗೊಜ್ಜುಗ ೫-೨೬ ಒಂದು ಜಾತಿ ಹೂವು, ಸೇವಂತಿಗೆ
ಗೋತ್ರ ೪-೬ ವಂಶ
ಗೋಮಿನಿ ೧-೮೮ ಲಕ್ಷ್ಮಿ
ಗ್ರಾವ ೧-೭೪ ಕಲ್ಲು
ಗ್ಲಪಿತ ೩-೬ ಭಯಗೊಂಡ, ನೊಂದ
ಗ್ರಾವ ೧-೭೪ ಕಲ್ಲು
ಘಟ ೩-೧೫ ಗಡಿಗೆ, ಮಡಕೆ
ಘಟ್ಟಿ ೧-೬೫ ಶ್ರೀಗಂಧ
ಘೂಕ ೮-೪೦ ವ ಗೂಗೆ
ಘೋಟಕ ೧೨-೯೧ ವ ಕುದುರೆ
ಚಂಚತ್ ೧-೩ ಹೊಳೆಯುವ
ಚಂಚರೀಕ ೪-೨೧ ದುಂಬಿ
ಚಂಚು ೨-೧೫ ಕೊಕ್ಕು
ಚಂದ್ರಿಕೆ ೨-೪೩ ಬೆಳದಿಂಗಳು
ಚರ್ಚೆ ೭-೩ ವ ವರ್ಣಲೇಪನ
ಚಟೂಕ್ತಿ ೬-೯ ವ ಬುದ್ಧಿವಂತಿಕೆಯ ಮಾತು
ಚಮೂ ೮-೯ ಸೈನ್ಯ
ಚಷಕ ೫-೬೩ ವ ಬಟ್ಟಲು
ಚಳನ ೧೩-೧೭ ಪಾದ
ಚಳಯ ೧೩-೭೫ ನೀರು ಚಿಮುಕಿಸುವುದು
ಚಾಟುಳ ೪-೬೬ ವ ಚಮತ್ಕಾರ
ಚಾರು ೧-೧೦೭ ಮನೋಹರ
ಚಿಕುರ ೯-೩೩ ತಲೆಗೂದಲು
ಚಿರಂತನ ೬-೪೩ ಪ್ರಾಚೀನ, ಶಾಶ್ವತವಾದ
ಚೀಲ ೫-೧೨ ಬಟ್ಟೆ
ಚೀಳಕ ೬-೪೪ ವ ಬಟ್ಟೆ
ಜಂಗುಳಿ ೮-೪೩ ವ ಸಮೂಹ
ಜಕ್ಕುಲಿಸು ೮-೩ ಅಲ್ಲಾಡು
ಜಡಿ ೬-೨೭ ವ ಗದರಿಸು
ಜನ್ನವಿರ ೧೬-೪ ಜನಿವಾರ
ಜವನಿಕೆ ೧-೫೪ ತೆರೆ
ಜವಲೆ ೯-೬೭ ವ ಜೋಡಿ
ಜಾತರೂಪ ೩-೨೦ ಸ್ವಸ್ವರೂಪ, ಬಂಗಾರ
ಜಾವಳಿಸು ೭-೫೮ ಗರ್ವದ ಮಾತನಾಡು
ಜಿನುಗು ೪-೫೮ ವ ಗೊಣಗು
ಜಿಹ್ಮಗ ೧೦-೩ ಹಾವು
ಜೀಮೂತ ೨-೫೫ ವ ಮೋಡ
ಜೂಬು ೭-೫೭ ವ ಬೂಟಾಟಿಕೆ
ಜೊನ್ನ ೧-೮೬ ಬೆಳ್ದಿಂಗಳು
ಟಕ್ಕು ೨-೫೨ ಮೋಸ
ಠವಣೆ ೯-೪೪ ಮೋಸ
ಡವಕೆ ೧೫-೫೨ ಪೀಕದಾನಿ
ಡಿಂಡೀರ ೩-೫೦ ವ ನೊರೆ
ತಂದಲ್ ೫-೨೭ ತುಂತುರುಮಳೆ
ತಂಡ್ರ ೧-೧೬ ಆಯಾಸಗೊಂಡು, ಜಡವಾದ
ತಕ್ಕು ೬-೬೯ ಪರಾಕ್ರಮ
ತಗುಳ್ಚು ೪-೮೪ ವ ಸ್ಥಿರಮಾಗಿ ನಿಲ್ಲು
ತಟಿಲ್ಲತೆ ೨-೪೯ ಬಳ್ಳಿ ಮಿಂಚು
ತಡಂಗಲಸು ೪-೭೬ ತಡೆಯಾಗು
ತಣ್ಣಲೆ ೪-೭೫ ತಂಪಾಗಿ ಬೀಸು
ತಣ್ಬುಳಿಲ್ ೧-೩೩ ತಂಪಾದ ಮರಳಿನ ರಾಶಿ
ತದೆ ೨-೫೨ ಚೆನ್ನಾಗಿ ಒದೆ
ತನುತ್ರ ೮-೧೨ ಕವಚ
ತಮಾಳ ೧-೫೩ ಹೊಂಗೆ
ತರಣಿ ೨-೬೩ ವ ದೋಣಿ, ಹಡಗು
ತರವಾರಿ ೧೨-೧೦೧ ವ ಕತ್ತಿ
ತರುವಲಿ ೨-೫೨ ಹುಡುಗ
ತಲೆಗರೆ ೬-೪೩ ವ ಮಾಯವಾಗು
ತಲೆವರಿಗೆ ೬-೩೯ ಶಿರಸ್ತ್ರಾಣ
ತವು ೧-೨ ನಾಶ, ಮುಕ್ತಾಯ
ತಾಂಡವ ೫-೫೫ ಗಂಡು ನರ್ತನ
ತಾರಯಿಸು ೫-೫೧ ಧ್ವನಿಮಾಡು
ತಾಳವೃಂತ ೫-೧೬ ಬೀಸಣಿಗೆ
ತಿಟ್ಟವಿಡು ೫-೬೨ ಚಿತ್ರಿಸು
ತಿಱಿ ೧-೪೦ ಬೇಡು
ತಿಱಿಕಲ್ಲು ೩-೪೬ ಅಣ್ಣೆಕಲ್ಲು
ತಿಸರಿ ೯-೪೪ ವ ಒಂದು ಬಗೆ ವೀಣೆ
ತ್ರಿದಿವ ೧-೩೧ ಸ್ವರ್ಗ
ತೀನ್ ೧೦-೧೫ ತೀಟೆ
ತೀವು ೨-೩ ತುಂಬು
ತುಂಡ ೨-೪ ಕೊಕ್ಕು
ತುಱುಂಗಲ್ ೫-೪೯ ವ ಸಮೂಹ
ತುಱುಗು ೧-೫೦ ತುಂಬು
ತುಱುಗೆಮೆ ೪-೬೨ ವ ದಟ್ಟವಾದ ಎವೆಗಳ
ತೂಳಿಕೆ ೪-೧೯ ಆಕ್ರಮಣ
ತೂೞ್ಚು ೧-೧೧ ಓಡಿಸು, ಬೆನ್ನಟ್ಟು
ತೆರ್ಕ್ಕೆ ೪-೬೨ ತೆಕ್ಕೆ, ದಟ್ಟವಾಗು
ತೆತ್ತಿಸು ೮-೫೫ ಸೇರಿಸು
ತೆಱಂಬೊಳೆ ೫-೩೪ ಪ್ರಕಾಶಿಸು
ತೆಱಪು ೧-೩೧ ಅವಕಾಶ
ತೊಡರ್ಪು ೧೨-೪ ತೊಡಕು
ತೊಣೆ ೧-೬೨ ಸಮಾನ
ತೋಮರ ೨-೬ ಈಟಿ
ತೋರ ೧-೪೦ ದಪ್ಪ
ದಂತುರ ೭-೪೧ ವ ಕೋರೆದಾಡೆ
ದಂದಶೂಕ ೮-೬೩ ಸರ್ಪ, ಹಾವು
ದಂದುಗ ೧೬-೪೨ ಕಷ್ಟ
ದಡಿ ೩-೫ ದೊಣ್ಣೆ
ದರವುರ ೧೨-೧೧ ಅತಿಶಯ
ದಸಿ ೧೫-೩೮ (ಚೂಪಾದ) ಗೂಟ
ದಳವೇಱು ೧-೬೪ ಉಬ್ಬು, ಸಂತೋಷಗೊಳ್ಳು
ದಳಿತ ೧-೭೯ ಅರಳಿದ
ದಾಡೆ ೧-೧೦೧ ಹಲ್ಲು, ಕೋರೆ ಹಲ್ಲು
ದಾಮ ೨-೪೪ ಹಾರ
ದೀರ್ಘಿಕಾ ೪-೫೮ ವ ಸರೋವರ, ಬಾವಿ
ದೀವ ೧-೭೫ ಮೃಗಗಳನ್ನು ಹಿಡಿಯಲು ಒಡ್ಡುವ ಯಂತ್ರ
ದೂದವಿ ೧೦-೭೩ ದೂತಿ
ದೂವೆ ೪-೫೮ ವ ಬೆಂಕಿ
ದೂಸಱ್ ೨-೫೯ ಕಾರಣ
ದೇವಾಂಗ ೭-೨ ವ ರೇಷ್ಮೆ
ದೊಣೆ ೧-೬೨ ಬಂಡೆ-ಬೆಟ್ಟಗಳಲ್ಲಿ ನೀರು ನಿಲ್ಲುವ ಗುಣಿ
ನಂದಿ ೨-೩೬ ವ ಸಂತೋಷಗೊಳ್ಳುವವನು
ನದಿಪು ೧೦-೪೭ ವ ಆರಿಸು
ನನೆಗಟ್ಟು ೧-೬೩ ಮೊಗ್ಗುಬಿಡು
ನರುಗುಂಪು ೧-೬೪ ಸುವಾಸನೆ
ನಸೆ ೪-೯ ವ ಬೆದೆ
ನಾರಜ ೧-೬೨ ಗವಾಕ್ಷಿ
ವಿಪಾಟವ ೩-೪೬ ಅದಕ್ಷತೆ
ನಿಕ್ಕುವಂ ೧-೧೦೪ ವ ನಿಶ್ಚಯವಾಗಿ
ನಿಕೋಚ ೮-೨೪ ಮೊಗ್ಗು
ನಿಗದಿಸು ೩-೨ ಹೇಳು, ನಿಶ್ಚಯಿಸು
ನಿಚಿಕುರ ೪-೬೩ ವ ಚಿಗುರು
ನಿಚಿತ ೭-೬೩ ಉಚಿತ, ಸೇರಿದ
ನಿಱಿ ೫-೩೪ ಮಡಿಕೆ
ನೀರಾಜಿಸು ೨-೪೩ ಆರತಿಮಾಡು
ನೆಗೞ್ ೧-೧೪ ಪ್ರಸಿದ್ಧವಾಗು
ನೆಯ್ ೭-೫ ಎಣ್ಣೆ
ನೆರಪು ೨-೩೨ ಮಾಡು
ನೆಱ ೯-೬೭ ವ ಸಹಾಯ
ನೇಣಜಂತ್ರ ೯-೫೯ ಸೂತ್ರದ ಬೊಂಬೆ
ನೇತ್ರ ೭-೨ ವ ರೇಷ್ಮೆ
ನೋಂಪಿ ೪-೩೮ ವ್ರತ
ಪಂಚತ್ವ ೩-೪೫ ವ ಸಾವು
ಪಂಚಾಸ್ಯ ೩-೩೮ ವ ಸಿಂಹ
ಪಗಿಲ್ ೪-೭೩ ಸ್ನಿಗ್ಧ
ಪರ್ಚು ೧೦-೪೦ ಹಂಚು
ಪಚ್ಚ ೪-೫೮ ವ ಅಲಂಕಾರ
ಪಟಳ ೨-೫೮ ವ ಸಮೂಹ
ಪಡಲಗೆ ೧೧-೩ ಬುಟ್ಟಿ
ಪಡಿ ೧-೮೮ ಸಮಾನ, ಪ್ರತಿ
ಪಡಿ ೩-೫ ಬಾಗಿಲು
ಪಡಿಕೆ ೧೧-೩೮ ಪ್ರಾಪ್ತವಾದ
ಪಡಿಯಱ ೧-೯೬ ಬಾಗಿಲು ಕಾಯುವವ
ಪಡು ೧೨-೨೯ ಮಲಗು
ಪಡುಕೆ ೧೧-೪೭ ವ ಪೆಟ್ಟಿಗೆ, ಬುಟ್ಟಿ
ಪತ್ತಿ ೮-೪೦ ಕಾಲಾಳು
ಪತ್ತುವಿಡು ೨-೫೮ ವ ಬಿಟ್ಟಬಿಡು, ಅಗಲು
ಪತ್ತೆಸಾರು ೨-೩೭ ವ ಹತ್ತಿರಕ್ಕೆ ಹೋಗು
ಪದುಳ ೩-೯ ಕ್ಷೇಮ
ಪರಿ ೧೫-೧೪ ಓಡು
ಪರಿಯಳ ೭-೩ ವ ತಟ್ಟೆ
ಪರಿಯಿಡು ೯-೫೭ ವ ನುಗ್ಗು
ಪರೇತವನ ೨-೨೫ ವ ಶ್ಮಶಾನ
ಪಱಮೆ ೬-೪೪ ವ ದುಂಬಿ
ಪಱಿವಱಿಯಾಡು ೬-೪೪ ವ ಬಗೆಬಗೆಯಾಗಿ ನರ್ತನ ಮಾಡು
ಪಱುಗೋಲು ೬-೧೨ ಹರಿಗೋಲು
ಪಱೆ ೮-೪೦ ವ ತಮ್ಮಟೆ
ಪಲ್ಲಣಿಸು ೯-೫೭ ವ ಜೀನುಹಾಕು
ಪಸರ ೧-೫೯ ಅಂಗಡಿ
ಪಸಲೆ ೪-೫೯ ಗರಿಕೆ
ಪಸಾಯಿತೆ ೫-೬೧ ಉಡುಗೆಗಳ ಮೇಲ್ವಿಚಾರಿಕೆ
ಪಳಂಚು ೧-೪೩ ತಾಗು
ಪೞಯಿಗೆ ೫-೩೮ ಹಳವಿಗೆ, ಬಾವುಟ
ಪ್ರತಿಪತ್ತಿ ೨-೪೫ ವ ಗೌರವ
ಪ್ರಪಾ ೧-೩೮ ಅರವಟ್ಟಿಗೆ
ಪ್ರವಲ್ವಿಕಾ ೬-೪೪ ವ ಪ್ರಹೇಳಿಕೆ, ಸಮಸ್ಯಾಪೂರಣ
ಪ್ರವಾಳ ೩-೨೫ ಹವಳ
ಪ್ರಸವ ೨-೭ ಹೂವು
ಪ್ಲವ ೪-೬೯ ವ ಪ್ರವಾಹ
ಪಾಂಖ ೧೧-೧೯ ವ ಜಾರ
ಪಾಗುಡ ೪-೫ ವ ಬಹುಮಾನ
ಪಾಸಟಿ ೧೪-೭೭ ಸಮಾನ
ಪಾಳಿ ೫-೨೪ ಕ್ರಮ, ಸಾಲು
ಪಿಂಛಾತಪತ್ರ ೫-೨೪ ನವಿಲುಗರಿಯ ಕೊಡೆ
ಪಿಟಕ ೧೧-೨೮ ಬೊಬ್ಬೆ
ಪಿತೃವ್ಯ ೨-೪೪ ಚಿಕ್ಕಪ್ಪ
ಪಿೞಿ ೧೧-೪೭ ವ ಹಿಳಿ, ಹಿಂಡು
ಪುಟಿಕೆ ೫-೬೩ ವ ಬುಟ್ಟಿ
ಪುಡುಕುನೀರ್ ೬-೯ ಕುದಿಯುವ ನೀರು
ಪುದ್ಗಲ ೨-೬೬ ಕರ್ಮ
ಪುರಂದರ ೧-೨೨ ದೇವೇಂದ್ರ
ಪುಳುಂಬು ೫-೬೪ ವ ಬಾಣದ ತುಂಡು
ಪುೞಿಲ್ ೨-೪೯ ವ ಮರಳು
ಪೂವಲಿ ೫-೩೩ ಹೂವಿನ ಪೂಜೆ
ಪೆಂಡವಾಸ ೫-೩೯ ರಾಣಿವಾಸ
ಪೆಂಪು ೩-೬೫ ಹಿರಿಯತನ
ಪೆಱೆ ೪-೫೮ ವ ಚಂದ್ರ
ಪೆೞರು ೧೧-೨೩ ವ ಹೆದರು
ಪೇಟಕ ೩-೪೪ ಸಮೂಹ
ಪೇರಿಗ ೬-೨೩ ವ ಕುದುರೆಸವಾರ
ಪೀಲಿ ೪-೧೮ ನವಿಲುಗರಿ
ಪೇಶಲ ೧೩-೬೨ ಸುಂದರ
ಪೊಗರ್ ೬-೧೨ ವ ಕಾಂತಿ, ಪ್ರಕಾಶ
ಪೊಣರ್ವಕ್ಕಿ ೪-೫೧ (ಜಗಳವಾಡುವ) ಚಕ್ರವಾಕಪಕ್ಷಿ
ಪೊದೞ್ ೨-೧೩ ಹೊರಹೊಮ್ಮು
ಪೊರ್ದು ೧-೧೦೫ ಹೊಂದು, ಸಮೀಪಿಸು
ಪೊಯ್ಲು ೧-೪೩ ಹೊಯ್ಲು, ಯುದ್ಧ
ಪೊಲಗಿಡು ೪-೭೬ ದಾರಿತಪ್ಪು
ಪೊಸೆ ೧೧-೩೦ ಹೊಸೆ, ಹಿಚಕು
ಪೊೞಲ್ ೨-೪೯ ವ ಪಟ್ಟಣ
ಬಂಟು ೭-೫೩ ಬಂಟ, ಯೋಧ
ಬಂಬಳಿಸು ೪-೬೨ ದಟ್ಟವಾಗು
ಬಟ್ಟು ೧೧-೮ ವ ಉಂಡೆ, ದುಂಡು
ಬಟ್ಟೆ ೬-೩೨ ವ ದಾರಿ
ಬಣ್ಣವುರ ೭-೩ ವರ್ಣಪೂರ
ಬದರಿ ೨-೩ ಎಲಚಿ
ಬದ್ಧವಣ ೧೩-೫೨ ಮಂಗಳವಾದ್ಯ
ಬನ್ನ ೨-೫೨ ಕಷ್ಟ
ಬಱತು ೧೫-೩೯ ವ ಬತ್ತಿಹೋಗು
ಬಲಗೊಳ್ ೧೦-೭೮ ವ ಪ್ರದಕ್ಷಿಣೆ ಮಾಡು
ಬಲಿ ೯-೫೭ ವ ಸಿದ್ಧಮಾಡು
ಬವರ ೭-೩೯ ವ ಯುದ್ಧ
ಬವಸೆ ೮-೬೮ ಬಯಕೆ
ಬಸನಿ ೨-೫೨ ವ್ಯಸನಿ
ಬಸುಱ್ ೩-೭ ಹೊಟ್ಟೆ
ಬಳವಿ ೯-೩೯ ಬೆಳವಣಿಗೆ
ಬಳಾಕೆ ೬-೩೨ ಬಲಾಹಕ, ನೀರುಹಕ್ಕಿ
ಬಳ್ಳು ೮-೪೦ ವ ಗುಳ್ಳೆನರಿ
ಬೞಿ ೬-೯೧ ವ ಮಾರ್ಗ
ಬಾಡವ ೧೦-೬೪ ಬ್ರಾಹ್ಮಣ
ಬಾದವಣ ೬-೧೫ ಗವಾಕ್ಷಿ
ಬಾಸಿಗ ೩-೫೨ ಹೂವಿನ ಕುಂಜ, ಕುಚ್ಚು
ಬಾಸೆ ೪-೨೭ ಹೊಟ್ಟೆಯ ಮೇಲಿನ ಕೂದಲು
ಬಾಳ್ ೮-೪೮ ಕತ್ತಿ
ಬಾೞ್ದಲೆ ೮-೭೩ ಜೀವಂತ ತಲೆ
ಬಾೞ್ವೇಲಿ ೪-೧೮ ಜೀವಂತವಾದ ಬೇಲಿ
ಬಿಚ್ಚತ ೩-೧೪ ವ ವಿಸ್ತಾರವಾದ
ಬಿಜ್ಜಣಿಗೆ ೫-೧ ಬೀಸಣಿಗೆ
ಬಿಣ್ಣಿತ್ತು ೭-೬೨ ಭಾರ
ಬಿಣ್ಪು ೪-೮೨ ಭಾರ
ಬಿತ್ತು ೬-೩೫ ಬೀಜ
ಬಿದ್ದಂಬರಿ ೬-೩೨ ವ ಬೀಳುವುದನ್ನು ಕಾಣದೆ ಓಡು
ಬಿದು ೭-೪೪ ಕುಂಭಸ್ಥಳದ ನಡುಭಾಗ, ನೆತ್ತಿ
ಬಿನದ ೪-೪೪ ವಿನೋದ
ಬಿನ್ನಣ ೭-೪೮ ಜಾಣತನ, ವಿಜ್ಞಾನ
ಬಿನ್ನನೆ ೫-೫೨ ಮೌನವಾಗಿ
ಬಿಸ ೪-೭೮ ತಾವರೆ
ಬಿಸಟಂಬರಿ ೬-೩೨ ವ ಮನಬಂದಂತೆ ಓಡು
ಬೀಡೆ ೨-೪ ಬಿರುಕು
ಬೀದಿವರಿ ೬-೩೨ ವ ಸ್ವೇಚ್ಛೆಯಾಗಿ ಓಡು
ಬೂತು ೭-೩೯ ನಾಚಿಕೆಗೆಟ್ಟವನು
ಬೆಗಡು ೬-೨೩ ವ ಹೆದರಿಕೆ
ಬೆಚ್ಚು ೪-೮೯ ಬೆಸುಗೆ ಹಾಕು
ಬೆಱೆ ೨-೨೫ ಅಹಂಕಾರಪಡು
ಬೆಸ ೩-೪೧ ಅಪ್ಪಣೆ
ಬೆೞಲ್ ೨-೩ ಚೀಲ
ಬೇವಸ ೪-೫೮ ವ ಸಂಕಟ, ಆಯಾಸ
ಬೈತಿಡು ೬-೨೩ ವ ಬಚ್ಚಿಡು
ಬೋನ ೧೩-೫೨ ಊಟ
ಭಾರ್ಗವ ೮-೪೮ ಬಾಣ
ಭಾಮಂಡಳ ೧-೧ ಪ್ರಭಾವಳಿಯ
ಮಂಚಕ ೧-೬೮ ಮಂಚ
ಮಂಡನ ೬-೧೯ ಅಲಂಕಾರ, ಆಭರಣ
ಮಂಡವಿ ೫-೫೬ ವ ಮಂಟಪ
ಮಂಥರ ಗತಿ ೫-೧೩ ನಿಧಾನವಾದ ನಡಿಗೆ
ಮಂದಯಿಸು ೫-೬೪ ವ ದಟ್ಟವಾಗು
ಮಗುೞ್ಚು ೧-೬೫ ಹಿಂದಿರುಗಿಸು
ಮಡ ೧೫-೬೧ ಹಿಮ್ಮಡಿ
ಮಡಲಿಡು ೨-೧೬ ದಟ್ಟವಾಗು
ಮಡಿಪು ೨-೪೬ ಕೊಲ್ಲು
ಮಣಿಗಾರ ೧-೫೯ ರತ್ನವ್ಯಾಪಾರಿ
ಮದಿಲ್ ೫-೫೨ ಗೋಡೆ
ಮದಿಲವಾಡ ೫-೫೨ ಬತೇರಿ
ಮನ್ನೆಯ ೩-೧೨ ವ ಮನ್ನಣೆಗೆ ಪಾತ್ರನಾದವನು
ಮಱಪಿಕ್ಕು ೯-೭೨ ಮರೆಯುವಂತೆ ಮಾಡು
ಮಱುವಕ್ಕು ೭-೯ ವ ಇದಿರು ಪಕ್ಷ, ಸ್ವರ್ಧೆ
ಮಱೆಯಟ್ಟು ೬-೨೩ ಓಡಿಸು
ಮಲ್ಲಣಿ ೩-೫ ಗಲಭೆ
ಮಸಗು ೨-೩೭ ವ ರೇಗು
ಮಸೃಣ ೯-೩೧ ಹೊಳೆಯುವ
ಮೞ್ಗು ೧೨-೧ ನಾಶವಾಗು, ತಣ್ಣಗಾಗು
ಮಾಂತನ ೧೨-೧೦೬ ಮಹತ್ತು, ಹಿರಿಯತನ
ಮಾಕಂದ ೩-೨ ಮಾವು
ಮಾಡ ೬-೧೦ ಉಪ್ಪರಿಗೆ ಮನೆ
ಮಾಱಡಕ ೭-೯ ವ ಪ್ರತಿಗೋಪ್ಯಸ್ಥಾನ
ಮಾಳ್ಕೆ ೩-೧೧ ರೀತಿ
ಮಾಱ್ಕೆ ೬-೨೦ ಕಾರ್ಯ
ಮಿಂಡ ೩-೪೬ ಪರಾಕ್ರಮಿ
ಮಿಡುಕು ೩-೪೬ ಉತ್ಸಾಹಗೊಳ್ಳು
ಮಿಡುಕು ೪-೫೮ ವ ಸ್ಪಂದಿಸು
ಮಿದಿ ೧೧-೩೭ ನಾದು, ಕುಟ್ಟು
ಮಿಱಪಿಗ ೯-೪೪ ವ ಡಾಂಭಿಕ
ಮುಂಗುಡಿ ೯-೨೮ ಸೈನ್ಯದ ಮುಂಭಾಗ
ಮುಂಗುರಿ ೧೫-೬೪ ಮುಂಗುಸಿ
ಮುಂದೂಳ ೬-೨೩ ವ ಮುಂಚೂಣಿ
ಮುರ್ಕು ೨-೪೮ ವ ಮುಕ್ಕು
ಮುಗುಳ್ ೧-೬೪ ಮೊಗ್ಗು
ಮುತ್ತು ೬-೨೩ ವ ಆಕ್ರಮಿಸು
ಮುನ್ನೀರ್ ೮-೫೫ ಸಮುದ್ರ
ಮುಯ್ ೬-೨೪ ಭುಜ
ಮುರಿ ೪-೭೭ ತಿರುಗಿಸು
ಮುಱಿ ೫-೬೩ ವ ತುಂಡು
ಮುಷಿತ ೮-೨೪ ಕಳೆದುಕೊಂಡ
ಮುಸುಱೆ ೧೦-೫ ವ ಅನ್ನದ ರಾಡಿ
ಮೂಡಿಗೆ ೮-೫೭ ಬತ್ತಳಿಕೆ
ಮೆಯ್ದೆಗೆ ೬-೨೩ ಮಾಯವಾಗು
ಮೆಯ್ವೆರ್ಚು ೩-೪ ಉಬ್ಬು
ಮೆಯ್ವೊರೆ ೯-೨೯ ದೇಹವನ್ನು ವ್ಯಾಪಿಸು
ಮೇದುರ ೮-೮೩ ವ ಸರಸ, ಮೃದು
ಮೇಲುದು ೬-೧೯ ಮೇಲುಹೊದಿಕೆ
ಮೇಳ ೬-೨೧ ಜೊತೆ
ಮೊಗವಡ ೭-೧೨ ವ ಮುಖವಾಡ
ಮೊಗೆ ೪-೭೫ ಬೊಗಸೆಯಿಂದೆತ್ತಿಕೊಳ್ಳು
ಮೊದಲ್ ೯-೭೧ ಬೇರು, ಬುಡ
ಮೊನೆ ೮-೬೧ ಯುದ್ಧ
ಮೊಱೆ ೧೧-೨೦ ರಕ್ಷಣೆ
ಮೊೞಗು ೯-೫೭ ವ ಗುಡುಗು, ಗರ್ಜಿಸು
ಮೊೞ್ಗು ೨-೫೯ ಅಡ್ಡಬೀಳು
ರಂಭಾ ೪-೨೦ ಬಾಳೆ
ರಜ ೧-೪೧ ಪರಾಗ
ರಥಾಂಗ ೨-೧೧ ಚಕ್ರವಾಕಪಕ್ಷಿ
ರವಣ ೬-೪ ವ ಆಯುಧ
ರಸೆ ೨-೭೩ ಭೂಮಿ
ರಾಕಾ ೩-೩೦ ವ ಬೆಳುದಿಂಗಳು
ರಾಜಾಯತನ ೧-೭೩ ಅರಮನೆ
ರಾವ ೨-೭ ಶಬ್ದ
ರುತಿ ೬-೪೬ ಶಬ್ದ
ರೂಕ್ಷ ೨-೩೦ ವ ಭಯಂಕರ
ರೈಯ ೧೬-೪ ಮನೋಹರ
ರೋಧ ೫-೪೮ ಆಕಾಶ
ಱೋಡಿಸು ೯-೪೪ ವ ಗೇಲಿಮಾಡು
ಲಂದಣಿಗ ೩-೧೨ ವ ಅನ್ನಮಾರುವವ
ಲಂಬಳ ೯-೪೪ ವ ಹಾರ
ಲಾಂಗೂಲ ೧೦-೫ ವ ಬಾಲ
ಲಾಂಗೂಲಿ ೯-೫೯ ಬಲರಾಮ
ಲುಂಟಾಕ ೬-೨೯ ವ ಸೆಳೆಯುವುದು
ಲುಳಿತ ೨-೧೧ ಬಾಗಿದ, ಸುಂದರವಾದ
ಲೆಂಕ ೯-೬೫ ಸೇವಕ
ವಂಧ್ಯ ೩-೩೪ ಬಂಜೆ
ವಂಶವಾದ್ಯ ೫-೭ ಕೊಳಲು
ವಧೂಟಿ ೯-೪ ಹೆಣ್ಣು
ವರ್ಮಿತ ೮-೩೭ ವ ಸಜ್ಜುಗೊಳಿಸಿದ
ವಯಸ್ಯೆ ೨-೩೭ ವ ಗೆಳತಿ
ವಲ್ಲಕೀ ೩-೬೬ ವ ವೀಣೆ
ವಾಗುರಿಕ ೬-೩೬ ಬೆಸ್ತ
ವಾಗುರೆ ೬-೧೨ ವ ಬಲೆ
ವಾಗೆ ೮-೭ ಕಡಿವಾಣ
ವಾಸವ ೧-೪೬ ವ ದೇವೇಂದ್ರ
ವಾಳ ೮-೪೦ ವ ಬಾಲ
ವ್ಯಾಕೋಚಿಸು ೧೧-೧ ಉಕ್ಕು
ವ್ಯಾಕೋಶ ೩-೩೨ ಗರ್ಭ, ಒಳಭಾಗ
ವಿಕೀರ್ಣ ೪-೬೩ ವ ತುಂಬಿದ
ವಿಗ್ರಹ ೨-೩೨ ಯುದ್ಧ
ವಿಜಾತಿ ೪-೫೪ ಪಕ್ಷಿ
ವಿಟಪ ೨-೭ ಮರ
ವಿತಾನ ೬-೪೩ ಮೇಲುಕಟ್ಟು
ವಿಧುಂತು ೧೫-೫೧ ವ ರಾಹು
ವಿಪಂಚಿ ೪-೩೩ ವೀಣೆ
ವಿಪಣಿ ೧-೬೦ ಅಂಗಡಿ
ವಿಭಾವರಿ ೬-೪೩ ವ ರಾತ್ರಿ
ವಿಲೂನ ೨-೩೭ ವ ಕಳೆದುಕೊಂಡ, ಕತ್ತರಿಸಿದ
ವಿವರ ೬-೩೭ ವ ಗುಹೆ, ಮೂಲೆ
ವಿಷಯ ೧-೩೨ ರಾಜ್ಯ
ವಿಷಾಣ ೩-೧೦ ಕೊಂಬು
ವೇತ್ರ ೩-೫೨ ಬೆತ್ತ
ವೇಸರಿ ೩-೪೦ ಹೆಣ್ಣುಕತ್ತೆ
ಶಂಕುರಾಗೆ ೮-೮೧ ಒಂದು ಬಗೆ ಆಯುಧ (?)
ಶತಧಾರ ೧-೧೪ ಸಿಡಿಲು
ಶಫಲ ೭-೪೦ ಮೀನು
ಶ್ಲಥ ೮-೨೮ ಸಡಿಲವಾದ
ಶಾಡ್ವಲ ೪-೮೪ ಹಸಿರು ಹುಲ್ಲು, ಗರಿಕೆ
ಶಾಬಕ ೬-೪೪ ವ ಮರಿ
ಶಾರ್ವರ ೨-೩೩ ವ ಕಷ್ಟ, ದುಃಖ
ಶಿಲೀಮುಖ ೪-೧೨ ಬಾಣ
ಶುದ್ಧಾಂತ ೭-೩೬ ಅಂತಃಪುರ
ಸಂದ ೨-೧ ಪ್ರಸಿದ್ಧವಾದ
ಸಂಸರಣ ೨-೬೨ ಸಂಸಾರ
ಸಂಸೃತಿ ೬-೩೮ ಸಂಸಾರ
ಸಕ್ಕಿ ೭-೪೧ ವ ಸಾಕ್ಷಿ
ಸತ್ವ ೩-೩೮ ವ ಪ್ರಾಣಿ
ಸಮಕಟ್ಟು ೬-೫೬ ವ ನಿಶ್ಚಯ
ಸಮ್ಮದ ೨-೧೮ ಸಂತೋಷ
ಸರಿ ೬-೨ ಮಳೆ
ಸ್ತಬಕ ೧-೪೨ ಗೊಂಚಲು
ಸಾದಿ ೭-೪೭ ಕುದುರೆ ಸವಾರ
ಸಾಧಿಸು ೨-೪೪ ಗೆಲ್ಲು
ಸಾಹಣಿ ೯-೫೭ ವ ಕುದುರೆಯ ಆಳು
ಸಿವಿಗೆ ೧೫-೨ ಪಲ್ಲಕ್ಕಿ
ಸೀತ್ಕೃತ ೨-೪ ಶಬ್ದಸಹಿತವಾದ ರಸಾಸ್ವಾದನೆ
ಸೀರ್ ೧೧-೪೦ ಕೋಪಗೊಳ್ಳು
ಸೀರಪಾಣಿ ೧೦-೧ ವ ನೇಗಿಲನ್ನು ಹಿಡಿದವ, ಬಲರಾಮ
ಸುತ್ತುಗತ್ತರಿ ೭-೩ ವ ಬೇಲಿ
ಸೂಡು ೯-೪೬ ವ ಮುಡಿ, ಧರಿಸು
ಸೂಳೆವಳ ೮-೩೩ ಸೂಳೆಯರ ಮೇಲ್ವಿಚಾರಕ
ಸೂಱ್ ೬-೧೫ ಸರದಿ
ಸೂೞೈಸು ೬-೨೩ ವ ಧ್ವನಿಮಾಡು
ಸೆಡೆ ೪-೩೨ ಅಹಂಕರಿಸು
ಸೆರೆ ೯-೬೧ ವ ಕುತ್ತಿಗೆಯ ನರ
ಸೆಲ್ಲ ೮-೫೧ ಶಲ್ಯ(ಸಂ), ಆಯುಧ
ಸೇಸೆ ೭-೧ ವ ಮಂತ್ರಾಕ್ಷತೆ
ಸೈತಿಡು ೬-೧೪ ಸಮಾಧಾನ ಪಡಿಸು
ಸೈರ ೭-೨೪ ನೇರವಾದ
ಸೊಡರ್ ೬-೩೫ ದೀಪ
ಸೊವಡು ೮-೩೪ ವಾಸನೆ
ಸೋವತ ೨-೪೦ ಬೇಟೆಯ ಮೃಗ
ಹಗರಣ ೭-೫೭ ನಾಟಕ ಪ್ರಕಾರ
ಹನನ ೩-೪೨ ಸಂಹಾರ
ಹಯನು ೫-೬೪ ಹಾಲು ಕರೆಯುವ ಹಸು
ಹರಿಗೆ ೫-೬೩ ಗುರಾಣಿ
ಹರಿಬ ೭-೪೨ ಕಾರ್ಯ
ಹೊಗರಿಸು ೪-೨೫ ಕಾಂತಿಯನ್ನು ಬೀರು
ಹೊಱಸು ೨-೬೮ ಕೆಟ್ಟ ಶಕುನದ ಹಕ್ಕಿ