ಅರ್ಥಕೋಶ

ಆಶ್ವಾಸ

ಪದ್ಯ

ಸಂಖ್ಯೆ

ಅಗ್ಗರಣೆ ೯-೧೦೧ ವ ನೇಣು: ಹಗ್ಗ
ಅಡರ್ಪು ೧-೮೭ ಊರೆ; ಆಸರೆ
ಅಡುರ್ ೭-೪೦ ಆಕ್ರಮಿಸು
ಅಣಕ ೮-೬೨ ವ ತೋರಿಕೆ; ನಟನೆ
ಅಣ್ಣನೆ ೨-೯೪ ಹಿತವಾಗಿ; ಆಪ್ಯಾಯಮಾನವಾಗಿ
ಅತ್ರಿಪುತ್ರ ೪-೪ ವ ಚಂದ್ರ
ಅದಿರ್ಪು ೩-೭೩ ನಿವಾರಿಸು; ದೂರಗೊಳಿಸು
ಅಧಮವರ್ಣ ೮-೩೧ ಶೂದ್ರ
ಅಧ್ವನ್ಯ ೧-೯೯ ದಾರಿಕಾರ; ಪಥಿಕ
ಅನಾಗಾರತೆ ೯-೪೦ ಸಂನ್ಯಾಸಧರ್ಮ; ಮುನಿಧರ್ಮ
ಅನುಶಯ ೨-೩೦ ಖೇದ; ದುಃಖ
ಅಬ್ದಕಾಲ ೪-೨೯ ಮಳೆಗಾಲ; ವರ್ಷಾಕಾಲ
ಅಭಿಜಾತ ೫-೧೨೨ ಕುಲೀನ
ಅಭಿಷೇಣನ ೯-೧೩೦ ದಂಡೆತ್ತಿ ಹೋಗುವುದು
ಅಮಂದರಾಗ ೯-೩೯ ಅತಿಶಯವಾದ ಸಂತೋಷ
ಅಯ ೧-೨೧ ಶ್ರೇಯಸ್ಸು
ಅಯುಕ್ತ ೮-೩೪ ಅಗಲಿದ; ವಿರಹಿಯಾದ
ಅರಿಷ್ಟಸದ್ಮ ೨-೯೭ ಹೆರಿಗೆಮನೆ; ಬಾಣಂತಮನೆ
ಅಲಗಣಸು ೭-೫೭ ಪ್ರತಿಸ್ಪರ್ದಿ
ಅವಟಯ್ಸು ೨-೧೦ ಒದಗಿಸು; ಉಂಟುಮಾಡು
ಅವದಾತ ೧೦-೩೧ ವ (೧) ಸುಂದರವಾದ (೨) ಬೆಳ್ಳಗಿರುವ; ಹೊಳೆಯುವ
ಅಶ್ಮಸಾರ ೯-೭೩ ಕಬ್ಬಿಣ
ಅಳಿಕ ೬-೩೮ ಹೇಡಿ; ಪೌರುಷಹೀನ
ಅಕ್ಷಿಶ್ರುತಿ ೫-೪ ವ ಹಾವು; ಸರ್ಪ
ಆಕಲ್ಪ ೯-೪೭ ತೊಡವು; ಆಭರಣ
ಆಕಳಿಸು ೫-೧೮ ಮುಸುಕು; ಆವರಿಸು
  ೬-೭೪ ಹಿಡಿದುಕೊಳ್ಳು
ಆಕಾರವಂತ ೬-೧೮ ವ ರೂಪವಂತ; ಸ್ಪುರದ್ರೂಪಿ
ಆಗಾರತೆ ೯-೫೦ ಗೃಹಸ್ಥಧರ್ಮ; ಶ್ರಾವಕಧರ್ಮ
ಅತ್ರೇಯ ೧-೩೩ ಚಂದ್ರ
ಆದಿತ್ಯಸುತ ೬-೩೭ ವ ಯಮರಾಜ
ಆಧಿ ೯-೯೬ ದುಃಖ; ವಿಪತ್ತು
ಆಮ್ರೇಡಿತ ೨-೫೫ ಮತ್ತೆ ಹೇಳಿದ; ಪುನರುಕ್ತ
ಆರುರುಕ್ಷು ೯-೩೧ ಏರಬಯಸುವವನು
ಆಲಿನೀರ್ ೫-೧೩೨ ತಂಪುಗೊಳಿಸಿದ ನೀರು; ಶೀತೋದಕ
ಆಸಂದಿ ೨-೪೯ ಪೀಠ
ಉಜ್ಜನ ೭-೩೭ ತ್ಯಾಗ, ವರ್ಜನ
ಉತ್ತವಳಿಸು ೩-೪೭ ಆತುರಪಡು
ಉಪಢೌರಿತ ೭-೩೦ ಸಮೀಪಿಸಿದ
ಉಪಪ್ಲವ ೫-೩೬ ತೊಂದರೆ
ಉಪಾರ್ಜಿಸು ೪-೫೮ ಗಳಿಸು
ಉಮ್ಮೆ ೯-೮೨ ತಾಪ
ಉಷರ್ಬುಧ ೧-೪೨ ಬೆಂಕಿ
ಊರ್ಜ ೯-೪೩ ಕಾರ್ತಿಕಮಾಸ
ಊಡು ೫-೯೦ ಅನುಭೋಗಿಸು
ಋಜುರೋಹಿತ ೪-೫೧ ವ ಇಂದ್ರಧನು; ಕಾಮನಬಿಲ್ಲು
ಎಡಂಬಡು ೬-೮೬ ಅಸಮಾಧಾನ
ಎಡಱು ೨-೧೫೨ ಬಡತನ
ಎರ್ದೆಗೊಳ್ ೨-೫೫ ಒಪ್ಪಿಕೊ; ಒಡಂಬಡು
ಎೞ್ತರ ೫-೮೨ ಅತಿಶಯ; ಅಗ್ಗಳಿಕೆ
ಐಳಬಿಳ ೧೧-೧೧೮ ಕುಬೇರ
ಒಗೆ ೫-೪೪ ಮೇಲೇಳು; ಎದ್ದು ಬರು
ಒಟ್ಟ ೮-೭೭ ತುಟಿ; ಓಷ್ಠ
ಒಡಮೆ ೯-೧೨೩ ಧನ; ಆಭರಣ
ಒತ್ತು ೨-೧೫ ನೆಲೆ; ಬೀಡು
ಒನಲ್ ೮-೯ ಕೊರಗು; ಮರುಗು
ಒಸೆಯಿಸು ೮-೫೩ ಸಂತೈಸು; ಪ್ರಸನ್ನಗೊಳಿಸು
ಒಳಸೋರ್ ೬-೭೯ ಕೈವಶವಾಗು; ಹಸ್ತಗತವಾಗು
  ೭-೭೭ ಹಿಮ್ಮೆಟ್ಟು; ಹಿಂದೆಗೆ
ಓವರಿ ೮-೬೧ (೧) ಒಳಮನೆ; ಒಳಕೋಣೆ (೨) ಗುರಿ; ಈಡು; ಬಲಿ
ಔದ್ಧತ್ಯ ೪-೧೧ ಉದ್ಧಟತೆ; ಅಹಂಕಾರ
ಕತ್ತಳಿಕೆ ೫-೧೦೫ ಕಿರುಗತ್ತಿ; ಕಠಾರಿ
ಕರಣಿ ೯-೭೭ (ಆನೆಯ) ಸೊಂಡಿಲು
ಕರಭ ೧೦-೩೦ ವ ಆನೆ; ಗಜ
ಕಲ್ಪೋಪರಮ ೧೦-೨೦ ಕಲ್ಪಾಂತ, ಪ್ರಳಯ
ಕಿಂಶುಕ ೯-೫ ಮುತ್ತುಗ
ಕುಂಜರ ೧೦-೩೯ ವ (೧) ಮಿಗಿಲಾದುದು (೨) ಆನೆ
ಕುಶಲವ ೭-೧೨೨ ಜಲಕೇಳಿ, ನೀರಾಟ
ಕುಳಿಶಿ ೧೨-೧೮೨ ವಜ್ರ, ಇಂದ್ರ
ಕೃಂತನ ೬-೭ ತುಂಡರಿಸುವಿಕೆ
ಕೇಳಿ ೧೨-೧೯೮ ನಾಟ್ಯ, ನರ್ತನ
ಕೈವಾರಿಸು ೩-೬೬ ನೆರವಾಗು; ಬೆಂಬಲವಾಗು
ಕ್ಷುತ ೩-೩೮ ಸೀನುವಿಕೆ; ಸೀನು
ಕ್ಷ್ವೇಡ ೨-೩೩ ನಂಜು; ವಿಷ
ಗಡ್ಡೆಯಂ ಬೋಗು ೭-೬೭ ಕೊರಡಾಗು; ಮರಗಟ್ಟು
ಗಣಿದ ೧-೬೪ ಎಣಿಕೆ; ಯೋಚನೆ
ಗರ್ಭೇಶ್ವರಿ ೧೦-೮ ವ ಆಗರ್ಭಶ್ರೀಮಂತೆ
ಗಳಕಂಬಳ ೨-೨೮ ಗಂಗೆದೊಗಲು
ಗಾರುಡಮಣಿ ೧-೧೪೭ ಹಸಿರು ರತ್ನ; ಪಚ್ಚೆ
ಗೊಂದೆ ೨-೨೯ ಎತ್ತು; ಬಸವ
ಗೊಡ್ಡ ೮-೮೦ ಹುರುಳಿಲ್ಲದ; ನಿರರ್ಥಕ
ಗೊತ್ತು ೪-೮ ನೆಲೆವೀಡು; ನಿವಾಸಸ್ಥಾನ
ಘಂಟಾಪಥ ೧-೯೭ ರಾಜಮಾರ್ಗ
ಘರ್ಮ ೧-೮ ಬೇಸಗೆ
ಘೃಣಿ ೧೧-೩೧ ಕಾಂತಿ; ಪ್ರಭೆ
ಚೂಳಿಕೆ ೫-೩ ತುದಿ; ಶಿಖರ
ಛಾದ್ಯ ೧೨-೧೦೯ ಮೇಲ್ಕಟ್ಟು; ವಿತಾನ
ಜೃಂಭಣ ೩-೩೬ ಆಗುಳಿಕೆ; ಆಕಳಿಕೆ
ಜತುಕ ೫-೬೫ ಬಾವಲಿ
ಜನಾಂತ ೬-೧೧ ವ ನಾಡು; ದೇಶ
ಜಪಾ ೫-೬೧ ದಾಸವಾಳ
ಜಱಚು ೭-೬೨ ವ ಗಳಹು; (ಜಂಬ) ಕೊಚ್ಚು
ಜಳನೀಳಿಕೆ ೨-೧೬ ಹಾವಸೆ; ಶೈವಾಲ
ಜಿಹಣತನ ೧೦-೩೬ ಹಾಡುಗಾರಿಕೆ; ಗಾಯನ
ಜೀಮೂತ ೩-೨ ಮೋಡ; ಮೇಘ
ಝಂಪಾಳ ೭-೧೦೪ ವೇಲುಹೋದಿಕೆ; ಮೇಲ್ಮುಸುಕು
ಠಕ್ಕುವೀೞು್ ೫-೧೨೩ ಮಂಕುಬಡಿ; ಮಂಕಾಗು
ಡಂಗೆ ೫-೭೦ ದೊಣ್ಣೆ; ದಂಡ
ಡಾಮರ ೮-೬೬ ಪೀಡೆ; ಭಾಧೆ
ತಡಂಗಲಸು ೧-೬೪ ಬೆರೆ; ಕೂಡಿಕೊ
ತಡವಾಯ್ ೭-೧೦೦ ಸರಯಾಗು; ಸಮನಾಗು
ತಣ್ಮಲೆ ೪-೬೪ ತುಂಬು; ಆವರಿಸು
ತಪನೀಯ ೪-೬೮ ವ ಚಿನ್ನ; ಬಂಗಾರ
ತರ್ಪಣ ೨-೭೧ ತುಷ್ಟಿ; ತೃಪ್ತಿ
ತರಂಗ ೧೦-೪೮ (೧) ಅಲೆ; ತೆರೆ (೨) (ಸೀರೆಯ) ನಿರಿ, ನಿರಿಗೆ
ತಲೆವೀಸು ೧೩-೩೦ ತಲೆಕೊಡಹು; ನಿರಾಕರಿಸು
ತವುತರ್ ೯-೭೯ ಮುಗಿದುಹೋಗು; ಬರಿದಾಗು
ತರ್ಷ ೯-೪೫ ಬಯಕೆ; ಬಾಯಾರಿಕೆ
ತಾಪಿಂಭ ೫-೫೦ ಹೊಂಗೆಮರ; ಹುಲಿಗಿಲ
ತಾರ್ಕ್ಯ ೫-೪ ವ ಹದ್ದು; ಗರುಡ
ತ್ರಿಶಕ್ತಿ ೯-೧೧೭ ರಾಜನಲ್ಲಿ ಇರಬೇಕಾದ ಪ್ರಭುಶಕ್ತಿ, ಉತ್ಸಾಹಶಕ್ತಿ ಮತ್ತು ಮಂತ್ರಶಕ್ತಿ ಎಂಬ ಮೂರು ಶಕ್ತಿಗಳು
ತುರಾಷಾಟ್ಖಡ್ಗ ೫-೩೯ ಇಂದ್ರನ ಆಯುಧ; ವಜ್ರ
ತೂರ್ಣಂ ೧೦-೯೧ ಶೀಘ್ರವಾಗಿ; ವೇಗವಾಗಿ
ತೌಗು ೪-೭೮ ಮುಕ್ತಾಯ; ಅಂತ್ಯ
ದಾಘ ೯-೬೫ ಉಮ್ಮಳ; ತಾಪ
ದುರ್ಬುಧ ೧-೪೨ ದುರ್ಬುದ್ಧಿ; ದುಷ್ಟ
ದುರ್ವೇಶ ೫-೬೬ ಒಳಸೇರಲು ಕಷ್ಟವಾದ; ದುರ್ಗಮ
ದೂರಿಸು ೮-೬೪ ಚಿಂತಿಸು; ಕಳವಳಿಸು
ದೊರೆ ೮-೧೩ ಯೋಗ್ಯ; ಉಚಿತ
ದೋರಾಂದೋಳನ ೧೦-೩ ತೋಳುಗಳ ಚಲನೆ; ಕೈಬೀಸುವುದು
ಧಾಮ ೯-೧೯ ತೇಜಸ್ಸು; ಕಾಂತಿ
ಧ್ವಜಿನಿ ೫-೧೧೦ ವ ಪಡೆ; ಸೈನ್ಯ
ನಂಜುರುಳಿ ೮-೧೫ ವಿಷದ ಗುಳಿಗೆ
ನದಿಪು ೭-೪೭ ಆರಿಸು; ನಂದಿಸು
ನಾಭಸ ೪-೩೦ ಮಳೆಗಾಲಕ್ಕೆ ಸಂಬಂಧಿಸಿದ
ನಿಕಾಮಂ ೨-೮೫ ಚೆನ್ನಾಗಿ; ಸ್ಪಷ್ಟವಾಗಿ
ನಿಗುಂಬಿಸು ೪-೬೪ ಸಂದಣಿಸು; ದಟ್ಟಣಿಸು
ನಿಟ್ಟೆ ೪-೫೭ ನಿತ್ಯ; ಶಾಶ್ವತ
ನಿಧನ ೭-೧೪೯ ಹೂಳಿಟ್ಟ ಧನ; ನಿಧಿ; ನಿಧಾನ
ನಿಪಾನ ೯-೭೮ ಚಿಕ್ಕ ಹೊಂಡ; ಪಲ್ವಲ
ನಿಸೃಷ್ಟಾರ್ಥ ೬-೧೮ ವ ದೂತ; ರಾಯಭಾರಿ
ನಿಯುದ್ಧ ೬-೨೭ ದ್ವಂದ್ವಯುದ್ಧ; ಮಲ್ಲಗಾಳೆಗ
ನಿಯೋಗ ೬-೮೫ ವ ಸೇವೆ; ಸೇವಾಕಾರ್ಯ
ನಿರಯ ೯-೩೮ ನರಕಲೋಕ
ನಿರ್ವಾಣರೇಖೆ ೬-೬೩ ವ ಬಾಹ್ಯರೇಖೆ; ಸೀಮಾರೇಖೆ
ನಿವೃತ್ತಿ ೨-೩೮ ವಿರತಿ; ವೈರಾಗ್ಯ
ನಿಷ್ಕುಟ ೮-೪೫ ಉಪವನ
ನಿಷ್ಟಪ್ತ ೯-೩ ವ ಕಾಯಿಸಿದ; ಪುಟವಿಟ್ಟ
ನಿಷ್ಪಂದಕಾರಿತ್ವ ೮-೮೫ ನಿಶ್ಚಲತೆ; ನಿಶ್ಚೇಷ್ಟತೆ
ನಿಷ್ಪ್ರತ್ಯೂಹ ೧-೧೦೬ ನಿರಾತಂಕವಾದ; ನಿರ್ಬಾಧವಾದ
ನೀಹಾರ ೩-೩೬ ಮಲಪ್ರವೃತ್ತಿ; ಮಲವಿಸರ್ಜನೆ
ನೃಪಾಗಮ ೬-೧ ರಾಜನೀತಿ
ನೆರಪು ೭-೬೯ ತೀರಿಸು; ಸಾಧಿಸು
ನೆಱ ೮-೬೪ ಮರ್ಮ
ಪಂಚಜನ ೧೩-೮೧ ಮಾನವ; ಮನುಷ್ಯ
ಪಂಚತೆ ೫-೧೩೬ (೧) ಐದಾಗಿರುವಿಕೆ (೨) ಸಾವು; ಮರಣ
ಪಚ್ಚವಡಿಸು ೬-೭೦ ವ ಹೊದಿಸು; ಆಚ್ಛಾದಿಸು
ಪಟ್ಟಣಿಗೆ ೮-೫೧ ಪಟ್ಟಾವಳಿ ಸೀರೆ; ದುಕೂಲ
ಪಟ್ಟವರ್ಧನ ೯-೧೦೨ ವ ಪಟ್ಟದಾನೆ; ಪಟ್ಟಗಜ
ಪಣೆ ೭-೮೭ ಮರದ ಕಾಂಡ
ಪದ್ಮಸದ್ಮ ೫-೪೧  (೧) ತಾವರೆಗೊಳ
೫-೯೬  (೨) ಬ್ರಹ್ಮ; ಸೃಷ್ಟಿಕರ್ತ
ಪನ್ನ ೯-೧೧೩ ಬಿಂಕ; ಅಗ್ಗಳಿಕೆ
ಪರಿವಾದಿನಿ ೩-೬೧ ವೀಣೆ
ಪಲಿತ ೨-೨೦ ನರೆ; ನರೆಗೂದಲು
ಪಲ್ಲಮಱಿ ೫-೬೫ ಆನೆಯ ಮರಿ
ಪಸಾಯ ೭-೪೨ ಬಹುಮಾನ; ಪಾರಿತೋಷಿಕ
ಪಸುಗೆ ೮-೬೬ ಒಪ್ಪ; ಶೋಭೆ
ಪಱಿವಱಿ ೮-೨೪ ತುಂಡು ತುಂಡಾದುದು; ಚೂರುಚೂರು
ಪೞಿ ೮-೫೨ ವ ನಿಂದೆ, ಅವಮಾನ
ಪಾಂಡು ೯-೮೪ ಬಿಳುಪು
ಪಾರಿಹಾರ್ಯ ೧೨-೧೩ ವ ಕಡಗ; ಕಂಕಣ
ಪಿಚುಮಂದ ೩-೯೭ ಬೇವು
ಪಿಳಿಗು ೬-೩೧ ಬಿರಿ; ಸೀಳು
ಪುರಂದರಚಾಪ ೪-೫೦ ಇಂದ್ರಧನು; ಕಾಮನಬಿಲ್ಲು
ಪುರುಭೂತಿ ೯-೧೨೧ ವ ಅಧಿಕಲಾಭ
ಪುರುಷಾಕಾರ ೫-೯ ವ ಧೈರ್ಯ
ಪುರುಳ್ ೨-೬೮ ಅರ್ಥ; ಔಚಿತ್ಯ
ಪುಲ್ವಟ್ಟೆ ೫-೫೩ ಕಾಲುದಾರಿ; ಸೀಳುದಾರಿ
ಪೂರಿಸು ೯-೭೬ ಹೀರಿಕೊಳ್ಳು; ಕುಡಿ
ಪೃಥುಕತ್ವ ೧೨-೧೬೮ ಶಿಶುತ್ವ; ಶೈಶವ
ಪೃಷತ್ಯ ೬-೩೯ ಬಾಣ; ಅಸ್ತ್ರ
ಪೇಶಲ ೧-೧೩೯ ಸುಂದರವಾದ; ನಯವಾದ
ಪೊಂಗು ೫-೯೯ ಹಿಗ್ಗು; ಉತ್ಸಾಹಿಸು
ಪೊದೆ ೬-೩೬ ಬತ್ತಳಿಕೆ; ಬಾಣಕೋಶ
ಪೊಸಯಿಸು ೧-೧೮೬ ರಚಿಸು; ನಿರ್ಮಿಸು
ಪೋರ್ ೫-೪೦ ವ ಹೋರಾಟ; ಕಾಳಗ
ಪ್ರಕೃತಿ ೭-೩೬ ವ ಪ್ರಜೆಗಳು
ಪ್ರಘಣ ೮-೨೪ ವ ಮೊಗಸಾಲೆ; ಮುಖಮಂಡಪ
ಪ್ರಣಾಳ ೬-೪೭ ಹರಿನಾಳಿಗೆ; ಕೊಟ್ಟ
ಪ್ರತಿಷ್ಠಿಸು ೬-೨೪ ಸ್ಥಿರೀಕರಿಸು; ದಕ್ಕಿಸಿಕೊಳ್ಳು
ಪ್ರತ್ಯಂತ ೧-೧೩೧ ಪಕ್ಕ; ಪಾರ್ಶ್ವ
ಪ್ರತ್ಯಯ ೪-೬೫ ಅರಿವು; ಜ್ಞಾನ
ಪ್ರಸ್ತರ ೩-೨ ಬಂಡೆಗಲ್ಲು; ಹಾಸುಗಲ್ಲು
ಬಂಟು ೫-೧೧೧ ವ ಕಲಿತನ; ಶೌರ್ಯ
ಬಗರಗೆ ೧೧-೮೫ ನೀರಿನ ಒರತೆ, ಕೊಳ
ಬಜ್ಜೆ ೮-೫೯ ವ ಧೂರ್ತೆ; ಚತುರೆ
ಬದ್ದವಣ ೪-೪೨ ಮಂಗಳವಾದ್ಯ, ವರ್ಧಮಾನ
ಬಸಿ ೫-೫೪ ಹರಿತಗೊಳಿಸು; ಚೂಪುಮಾಡು
ಬಳಭಿಚ್ಚಾಪ ೬-೫೨ ಇಂದ್ರಧನು
ಬಳ್ವಳಿಕೆ ೮-೫೦ ವ ಬೆಳವಣಿಗೆ; ಅಭಿವೃದ್ಧಿ
ಬಾಡವ ೧೦-೨೨ ಕುದುರೆ, ಬಾಡಬಾಗ್ನಿ
ಬಾನಲಾಗು ೮-೭೨ ಮುಸುಕಾಗು; ಮಸುಳಿಸು
ಬಾೞ್ತೆಗೆಯ್ ೨-೫೭ ಗಣನೆಗೆ ತೆಗೆದುಕೊ
ಬಾೞ್ಮೊದಲ್ ೩-೩೭ ಜನ್ಮಸ್ಥಾನ; ತವರು
ಬಿಚ್ಚಳಿಸು ೧೦-೩೨ ಬಣ್ಣಿಸು; ಹೊಗಳು
ಬಿದಿ ೯-೯೬ ಕವಳ; ಆಹಾರ
ಬಿದು ೯-೭೪ (ಆನೆಯ) ನೆತ್ತಿ; ಕುಂಭಸ್ಥಳದ ಮಧ್ಯ
ಬಿರುದನಿಗಡ ೧೦-೨೦ ಬಿರುದಿನ ಬಳೆ; ಬಿರುದಿನ ಪೆಂಡೆಯ
ಬೀಸರ ೮-೪ ವ ವ್ಯರ್ಥ
ಬೆಂಜನ ೯-೯೬ ಅಂಜನ, ಕಾಡಿಗೆ
ಬೆಗಡು ೫-೬೫ ವ ಭ್ರಮೆ; ಭ್ರಾಂತಿ
ಬೆಸೆ ೧೦-೧೯ ಬಿಂಕತಾಳು; ಗರ್ವಿಸು
ಬೆಳ್ತನ ೮-೫೯ ದಡ್ಡತನ; ತಿಳಿಗೇಡಿತನ
ಬೋಧಾಲೋಕ ೧-೫ ಜ್ಞಾನದೃಷ್ಟಿಯುಳ್ಳವನು; ಜ್ಞಾನಿ
ಭರ್ಮ ೧೦-೨೦ ಚಿನ್ನ; ಸುವರ್ಣ
ಭಾವಿತಾತ್ಮ ೯-೫೮ ಆತ್ಮಜ್ಞಾನಿ
ಭೂಮಿಕೆ ೧-೧೪೨ ಉಪ್ಪರಿಗೆ; ಮಹಡಿ
ಮಂದರ ೧-೮೦ (೧) ಮೇರುಪರ್ವತ (೨) ಸ್ವರ್ಗ
ಮಂದುರ ೧-೧೪೧ ಕುದುರೆಯ ಲಾಯ
ಮಥಿಯಿಸು ೧-೧೩೪ ಘಾತಿಸು; ಪೀಡಿಸು
ಮನಂಬಸು ೫-೬ ದಿಗ್ಭ್ರಮೆಗೊಳ್ಳು
ಮರುನ್ನದಿ ೧-೧ ದೇವನದಿ; ದೇವಗಂಗೆ
ಮಸಮಸನಾಗು ೮-೫೯ ಮಸುಳು; ಕುಗ್ಗು
ಮಹೀಗೃಹ ೭-೧೨೮ ನೆಲಮನೆ
ಮೞ್ಗು ೨-೪೩ ಆರು; ನಂದು
ಮಾಂಕರಿಸು ೬-೭೦ ಹೀಯಾಳಿಸು; ಲೇವಡಿ ಮಾಡು
ಮಾತರಿಶ್ವ ೪-೩೦ ಗಾಳಿ
ಮಾಧವ ೭-೬೫ ಮಾಧುಮಾಸ; ವಂಸತಮಾಸ
ಮಾಯ್ದ ೨-೪೨ ಕೆಟ್ಟ; ದುಷ್ಟ
ಮಾರ್ಪಾಡಿ ೧೦-೯೮ ಶತ್ರುಸೈನ್ಯ;ಎದುರಾಳಿಯ ಪಡೆ
ಮಾಸರ ೮-೫೧ ಮನೋಹರ; ಸುಂದರ
ಮುಂಬದ ೮-೬೮ ಮದನದ್ರವ
ಮುಖಮುದ್ರೆ ೯-೧೧೪ ನಿರುತ್ತರಗೊಳಿಸುವುದು, ಬಾಯಿ ಮುಚ್ಚಿಸುವುದು
ಮುಟ್ಟು ೫-೧೦೨ ಯೋಗ್ಯ; ಅರ್ಹ
ಮುಮೂರ್ಷು ೧೯-೫೭ ಸಾಯಬಯಸುವವನು
ಮುಳ್ಪು ೬-೩೭ ಕೆಂಪುಬಟ್ಟೆ
ಮೂಡಿಗೆ ೧-೧೧೧ ಬತ್ತಳಿಕೆ
ಮೂಲಧನ ೨-೬೧ ಬಂಡವಾಳ
ಮೃದ್ವೀಕೆ ೧-೧೦೫ ವ ದ್ರಾಕ್ಷೆ
ಮೆಯ್ವೆರ್ಚು ೬-೨೫ ಮೈಯುಬ್ಬು; ಮೈಸೊಕ್ಕು
ಮೇಚಕತೆ ೩-೮೬ ಕಪ್ಪುಬಣ್ಣ; ಶ್ಯಾಮತೆ
ಮೊೞ್ಗು ೫-೨೨ ವ ಎರಗು; ನಮಸ್ಕರಿಸು
ಯಾವಕ ೬-೬೩ ವ ಅರಗು
ಯೂಧಿಕೆ ೧-೧೦೬ ಮಲ್ಲಿಗೆ
ರಥಕಲ್ಪ ೧೦-೨೧ ರಥ ಸೈನ್ಯದ ಅಧಿಪತಿ
ರಸಿತ ೧೦-೬೧ ಧ್ವನಿ; ನಿನಾದ
ರೈ ೧-೧೫ ಚಿನ್ನ
ರೋಧ ೧-೮೨ ದಂಡೆ; ತೀರ
ರೋಧಸ್ವಿನಿ ೧-೧೨ ಹೊಳೆ; ನದಿ
ಲಪನ ೫-೧೩೪ ಮುಖ
ಲಾಸಕಿ ೩-೮೩ ನರ್ತಕಿ; ನಾಟ್ಯಗಾರ್ತಿ
ವಂಕದರ ೫-೧೦೬ ವಕ್ರದ್ವಾರ; ಗುಪ್ತದ್ವಾರ
ವಡ್ಡಾಗರ ೫-೪೭ ನೆಲೆವೀಡು; ಮೂಲಾಶ್ರಯ
ವರಾಕ ೮-೧೦ ಅದೃಷ್ಟಹೀನ; ದುರ್ದೈವಿ
ವರ್ಮ ೧-೮ ಅಂಗರಕ್ಷಕ ಕವಚ; ಚಿಲಖತ್ತು
ವಲ್ಲಭ ೯-೧೦೪ ಪ್ರಿಯವಾದ; ಮೆಚ್ಚಾದ
ವಳಭಿ ೧೩-೨೬ ವ ಉಪ್ಪರಿಗೆ; ಮಹಡಿ
ವಾತೂಳಿಕೆ ೪-೧೮ ವ ಸುಂಟರಗಾಳಿ
ವಾತ್ಯೆ ೧೨-೧೬೫ ಸುಂಟರಗಾಳಿ
ವಾರುವ ೩-೫೫ ಕುದುರೆ
ವಾವದೂಕ ೧-೧೧೦ ಶಬ್ದಮಯ; ವಾಚಾಳ
ವಾಸರ ೨-೧೫ ಹಗಲು
ವಾಸಿಸು ೮-೩೭ ವಾಸನೆ ಕಟ್ಟು; ಪರಿಮಳಿಸು
ವಿಗತಾರ್ಥ ೫-೭೫ ಹುರುಳುಗೆಟ್ಟ;ನಿರರ್ಥಕ
ವಿಚಕಿಲ ೨-೯೬ ಮಲ್ಲಿಗೆ
ವಿಜಾತಿ ೯-೧೨೧ ಪಕ್ಷಿಜಾತಿ; ಪಕ್ಷಿಕುಲ
ವಿಜೃಂಭಣ ೫-೧೧೯ ವಿಸ್ತಾರ; ವಿಕಾಸ
ವಿಪರ್ಯಯ ೨-೬೧ ಬದಲಾವಣೆ; ವ್ಯತ್ಯಾಸ
ವಿಭೂತಿ ೯-೧೧೦ (೧) ವೈಭವ (೨) ಬೂದಿ; ಭಸ್ಮ
ವಿಷಾದಗರ್ಭ ೩-೭೭ ದುಃಖಮಯವಾದ; ದುಃಖಕರವಾದ
ವಿಸರ್ಜಿಸು ೬-೪೨ ವ ಕಳುಹಿಸು; ಬೀಳ್ಕೊಡು
ವಿಹಿತಾರ್ಥ ೨-೧೮ ಸಾರ್ಥಕ; ಅನ್ವರ್ಥ
ವೃಂದಾರಕ ೧೨-೧೨೦ ಮುಖ್ಯ; ಪ್ರಧಾನ
ವೇಶಂತ ೫-೬೧ ಚಿಕ್ಕಹೊಂಡ; ಪಲ್ವಲ
ವೇಶ್ಮ ೧-೫೨ ನಿವಾಸ; ಗೃಹ
ವ್ಯಗ್ರ ೬-೫೫ ತೊಡಗಿದ; ಮಗ್ನ
ವ್ಯಸನ ೬-೫೫ ಕೆಲಸ; ಕಾರ್ಯ
ವ್ಯಾಸಕ್ತ ೧-೧ ತೊಡಗಿದ; ನಿರತ
ವ್ರೈಹೇಯ ೧-೯೦ ಕೆಂಪು ಭತ್ತ ಬೆಳೆಯುವ ಗದ್ದೆ
ಶಂಬ ೮-೩೪ ವಜ್ರಾಯುಧ; ವಜ್ರ
ಶಕುಳ ೧-೪೩ ಮೀನು
ಶತಮನ್ಯು ೨-೭ ಇಂದ್ರ
ಶಮನ ೧೦-೯೧ ಯಮ
ಶರ್ಮ ೧-೮ ನೆಲೆ; ಆಶ್ರಯ
ಶಶಿಮಣಿ ೧೦-೪೦ ಚಂದ್ರಕಾಂತಶಿಲೆ
ಶಾಲೂರ ೫-೪೦ ವ ಕಪ್ಪೆ; ಮಂಡೂಕ
ಶಾಲೇಯ ೧-೯೦ ಬಿಳಿಯ ಭತ್ತದ ಗದ್ದೆ
ಶಿರೋಧಿ ೫-೧೨ ಕೊರಳು; ಕತ್ತು
ಶೈಲಿ ೧೩-೧೫ ನಡತೆ; ವರ್ತನೆ
ಷಡಭಿಜ್ಞ ೧-೨೫ ಬುದ್ಧ; ಬುದ್ಧಮತಾನುಯಾಯಿ
ಷಡ್ಬಲ ೯-೧೧೮ ವ ಮೌಲ, ಭೃತಕ, ಶ್ರೇಣಿ, ಮಿತ್ರ, ಅಮಿತ್ರ, ಆಟವಿಕ ಎಂಬ ಆರು ಬಗೆಯ ಸೈನ್ಯ
ಷಾಡ್ಗುಣ್ಯ ೯-೧೧೭ ರಾಜನು ಪರಮಂಡಲಗಳೊಡನೆ ವ್ಯವಹರಿಸುವಾಗ ಕೈಕೊಳ್ಳುವ ಆರು ಬಗೆಯ ಕ್ರಮಗಳು-ಸಂಧಿ, ವಿಗ್ರಹ ಯಾನ, ಆಸನ, ಸಂಶ್ರಯ ಮತ್ತು ದ್ವೈಧೀಭಾವ
ಸಂವ್ಯಾನ ೭-೯೮ ಸೆರಗು
ಸಣ್ಣಿಗೆ ೧-೧೩೦ ಒರಳುಕಲ್ಲು
ಸನಾಭಿ ೯-೬೫ ವ ಬಂಧು; ರಕ್ತಸಂಬಂಧಿ
ಸನ್ನತೆ ೧೦-೪೨ ನಿರ್ವಿಣ್ಣತೆ; ಆಯಾಸ
ಸನ್ನಾಹ ೧೦-೬೩ ಕವಚ; ಚಿಲಖತ್ತು
ಸಪ್ತಿ ೯-೮೭ ಕುದುರೆ
ಸಮಂದರ್ ೬-೬೭ ವ ಸರಿಯಿಟ್ಟು ನೋಡು; ಸರಿದೂಗಿಸು
ಸಮಕಟ್ಟು ೫-೫೪ ತಯಾರಿಸು; ನಿರ್ಮಿಸು
ಸಮನಿಸು ೪-೫ ಒದಗು; ಹೊಂದು
ಸಮಱು ೬-೬೩ ವ ತಿದ್ದು; ನೇರ್ಪಡಿಸು
ಸಮಾನ ೧-೧೪೫ ವಿಸ್ತೀರ್ಣ
ಸಮಾಹಿತ ೯-೫೯ ಶಾಂತ; ಸ್ವಸ್ಥ
ಸಮಾಹೃತಿ ೨-೮೩ ಬೆರಕೆ; ಮಿಶ್ರಣ
ಸಮ್ಮನಿಸು ೪-೨೩ ಗೌರವಿಸು; ಮೆಚ್ಚು
ಸವನ ೪-೬೯ ಅಭಿಷೇಕ
ಸವಿತ್ರಿ ೧೧-೧೧೦ ವ ತಾಯಿ; ಜನನಿ
ಸಹಸ್ರೋಸ್ರ ೫-೭೦ ಸಹಸ್ರಕಿರಣ; ಸೂರ್ಯ
ಸಾಮಿಪಕ್ವ ೬-೫೪ ವ ಅರ್ಧಹಣ್ಣಾದ; ದೋರೆ ಹಣ್ಣು
ಸಾರ್ಚು ೩-೧೦೨ ಇಡು; ಇರಿಸು
ಸಾರ್ಥ ೨-೧೧೫ ಸಮೂಹ; ಸಮುದಾಯ
ಸಾಲ್ ೨-೬೮ ಸಮರ್ಥನಾಗಿರು; ತಕ್ಕವನಾಗಿರು
ಸಾವದ್ಯ ೧-೫ ಕಳಂಕ
ಸುಖಲವ ೩-೪೨ ಅಲ್ಪಸುಖ
ಸುತ್ತು ೬-೬೨ ಉಡುವ ಬಟ್ಟೆ; ಉಡುಗೆ
ಸುರಭಿ ೭-೬೯ ವ (೧) ಕಾಮಧೇನು (೨)ವಸಂತಮಾಸ
ಸೂರುಳ್ ೮-೫೯ ಆಣೆ; ಪ್ರತಿಜ್ಞೆ
ಸೂರ್ಯೋಪಲ ೪-೬ ಸೂರ್ಯಕಾಂತ ಶಿಲೆ
ಸೈತು ೨-೨೪ ಸುಮ್ಮನೆ; ಏನನ್ನೂ ಮಾಡದೆ
ಸೊಡರ್ವಕ್ಕು ೩-೪೫ ದೀಪದ ಕಾಡಿಗೆ
ಸೊಲ್ಲಿಸು ೩-೬೨ ನುಡಿ; ಮಾತಾಡು
ಸ್ತನಂಧಯ ೩-೭ ಮಗು
ಸ್ತನಯಿತ್ನು ೪-೩೭ ಮೋಡ
ಸ್ತನಿತ ೪-೩೨ ಮೋಡದ ಗರ್ಜನೆ; ಗುಡುಗು
ಸ್ತವಕ ೨-೭೬ ಗೊಂಚಲು; ಗುಚ್ಛ
ಸ್ತೂಪಿತ ೧-೧೫೧ ರಾಶಿಹಾಕಿದ; ಅಡಕಲೇರಿಸಿದ
ಸ್ಥಲೀಕ ೬-೪೪ ನೆಲಗಟ್ಟು; ಕುಟ್ಟಿಮ
ಸ್ಥಳಕಮಳ ೯-೨೭ ನೆಲದಾವರೆ
ಸ್ಥಳೇಂದೀವರ ೧-೧ ನೆಲದಾವರೆ
ಸ್ರಂಸಿ ೪-೩೬ ಕಳಚುವ; ಉದಿರುವ
ಸ್ವಾಂತಭೂ ೧-೨೧ ಮನ್ಮಥ; ಕಾಮ
ಹರವಸ ೮-೭೦ ಪರವಶತೆ; ಮೂರ್ಛೆ
ಹಳಿಕ ೧೧-೪೨ ಬೇಸಾಯಗಾರ; ಒಕ್ಕಲಿಗ
ಹಾಟಕ ೧-೧೧೪ ಚಿನ್ನ; ಬಂಗಾರ
ಹೀರ ೭-೧೨೯ ವಜ್ರ
ಱೋಡಾಡು ೧೦-೭ ಹಾಸ್ಯಮಾಡ; ಚೇಷ್ಟೆಮಾಡು