ಅಗಲು – ಹಗಲಕ್ಕ

ಅಂದಲ – ಪಲ್ಲಕ್ಕಿ

ಅಂಬಗೆ – ಬಾಣದಲ್ಲಿ

ಅಟ್ಟಿದಾನೂ – ಇಟ್ಟಿದಾನೆ

ಅರಿ – ಕತ್ತರಿಸು

ಅಳಿ – ಅಚ್ಚು

ಅಳ್ಳಿ – ಅರಳಿ, ಹತ್ತಿ

ಆಲಚ್ನಿ – ಆಲೋಚನೆ

ಇನವಂದ – ವಿನೋದ

ಇಂಬೆ – ನಿಂಬೆ

ಇಸ್ತ್ರೆ – ಹೆಣ್ಣು

ಈಬತ್ತಿ – ವಿಭೂತಿ

ಉಳುಕಳಿ – ಉಳಿದುಕೊಳ್ಳಿ

ಏಡು – ಎರಡು

ಒತ್ತಿನಲಿ – ಪಕ್ಕದಲ್ಲಿ

ಒಳಮಲ್ಲಿ – ಒಳಮನೆಯಲ್ಲಿ

ಕಟವು – ಅದೃಷ್ಟ

ಕಣಕಲಿಕೆ – ಕೊಪ್ಪರಿಕೆ (ಕಿಡ್ಡೇರ ಅವ್ವಣ್ಣ)

ಕತ್ತೋದು – ಹಚ್ಚುವುದು

ಕದಬೆಹಗ್ಗ – ತೆಂಗಿನನಾರಿನ ಹಗ್ಗ

ಕರಕಂತೆ – ಕರೆದುಕೊಳ್ಳುವೆ

ಕಲುಚೇ – ಕಲಸಿ

ಕಾಲುದಲ್ಲಿ – ಕಾಲದಲ್ಲಿ

ಕೀಳಿ – ಎಲೆ

ಕುಡಿತಕ್ಕೂ – ಕುಡಿದಿರಬಹುದು

ಕುಮರಿ – ಬೆಟ್ಟದ ಬತ್ತಿನಲ್ಲಿ ಬೆಳೆಯನ್ನು ಬೆಳೆಯುವುದು

ಕುರ್ಬಾಲ – ಚಿಕ್ಕಬಾಗಿಲು

ಕುಲುಹಿಸ್ತೆ – ಕುಳ್ಳಿಸಿತ್ತು

ಕುವಾಲಿ – ಕುಲಾವಿ, ಟೊಪ್ಪಿಗೆ

ಕೆಸ್ನಾಯಲ್ಯಾ – ಕೆಸುವಿನ ಎಲೆ

ಕೇಸು – ಪೋಣಿಸು

ಕೇಂಡು – ಕೇಳು

ಕೊಡುಲು – ತಗ್ಗು, ಇಳಿಜಾರು

ಗನಾಮಾಡಿ – ಚೆನ್ನಾಗಿ

ಗಳಿಲೆಲ್ಲಾ – ಕಳೆಯಲಿಲ್ಲ

ಗಾಲಿ – ಒಂದು ತರಹಪಾತ್ರೆ

ಗುಟ್ಟಿಕೆ – ಗುಟರಿಕೆ

ಗುಡ್ಲು – ಮೈನೆರೆದ ಹೆಣ್ಣು ಮಕ್ಕಳಿಗೆ ಒಸಗೆ ಹಾಕಿ ಆಲದ ಹಸಿಯ ಸೊಪ್ಪಿನಲ್ಲಿ ಸೋದರ ಮಾವ ಕಟಟಿದ ಗುಡಿಸಲಲ್ಲಿ ಬಿಡುವರು

ಗ್ಯಾರಣ್ಯ – ಘೋರಾರಣ್ಯ

ಗುಗ್ಗರಿ – ತಿನ್ನುವುದಕ್ಕೆಂದು ಕುದಿಸಿ ಕಾಳುಗಳು

ಗೆಡ್ಸು – ಹಚ್ಚಿತಿಕ್ಕು

ಗೌಡಿ – ಸೂಳೆ

ಗೊಂಡ – ಕೆಂಪುವೀಳ್ಯದ ಅಗಿದಕವಳ

ಚಂಚರಣೆ – ಸಂಚಾರ

ಚಂದಿ – ಹಣೆಯ ಮೇಲೆ ಚಂದ್ರವಿರುವಕರು

ಚಿಗಳಿ – ಎಳ್ಳಿನಲ್ಲಿ ಮಾಡುವ ಸಿಹಿ ತಿಂಡಿ

ಚಿಲ – ಕದುರು ಹಾಕುವ ಕಿವಿ (ಚರ್ಮದ್ದು)

ಚೆಂಡಿ – ರುಂಡ

ಚೆಂಬುಳಿಗೆ – ಚಪ್ಪಲಿ

ಜೋಗಿಲ – ಧೋತರ

ತಕ್‌ಹಾಕಿ – ತೆಕ್ಕೆಹಾಕಿ

ತಗಟೇಲ – ಏಳು

ತಜೂರಿ – ತಜೋರಿ

ತಟ್ಯಾಗನ – ತಟ್ಟೆಯೊಳಗಿನ

ತಟ್ಟಿಕಂಡಾ – ತೊಟ್ಟುಕೊಂಡ

ತಿರಿಕಂತೆ – ತಿರುಗಿಕೊಳ್ಳುತ್ತ

ತೆರ – ವರನ ಕಡೆಯವರು ವಧುವಿಗೆ ಕಟ್ಟುವ ಹಣ

ತೊಲೆ – ತೊಳೆ

ತೋಲೊಡ್ಡೆ – ತೋಳಿನ ಮೇಲೆ

ದಗಾ>ದಗದ – ಕೆಲಸ

ದಾಟಿನಗುಂಡಿ – ಒಂದು ಗುಂಡಿಯನ್ನು ತೋಡಿ ಅದಕ್ಕೆ ಕಟ್ಟು ಮಾಡಿಸಿದರೆ ಆ ಗುಂಡಿ ದಾಟಿದವರಿಗೆ ಕೆಟ್ಟದಾಗುವದೆಂಬ ನಂಬಿಕೆ ಇದೆ

ದಾವುಣಿ – ದನಗಳನ್ನು ಸಾಲಾಗಿ ಕಟ್ಟುವ ಹಗ್ಗ

ದಿಂಬೆ, ದಿಂಬ – ದಿಬ್ಬ, ದಿನ್ನೆ

ದುಕ್ಕಲು – ದುಃಖ

ದೇಸಂತ್ರ – ದೇಶಾಂತರ

ದೋಸಿಗರಯ್ಯ – ಜೋಯಿಸ

ನಂದರು – ನನ್ನದಾದರೂ

ನಡವೀಲ – ನೆಡುವೆ

ನಡುಮಟ – ಸೊಂಟದವರೆಗೆ

ನಡುಮಲ್ಲರಬಿ – ನಡುಮನೆಯಲ್ಲಿ ಹರಬಿ

ನರಿಗೆದಾರ – ಸೀರೆಯನ್ನು ಸೊಂಟಕ್ಕೆ ಬಿಗಿಯುವ ದಾರ

ನಾಮಿದು – ನಪುಂಸಕ

ನಿದುರೆ – ನಿದ್ರೆ

ನೀರಡ್ಡೆ – ನೀರನ್ನು ತರುವ ಬಿದಿರ ಸಾಧನ

ನೆಗದಿ – ಎತ್ತಿ

ನೆಂಗು – ಆರು

ನೆರಿ – ನರಿ

ನೇಲಾ – ನೇಗಿಲು

ಪಾಪಸು – ಪಾದರಕ್ಷೆ

ಪೇಳು – ಹೇಳು

ಪುಂಜಿಯಮಾಡಿ – ತಬ್ಬಿ ಪ್ರೀತಿ ಮಾಡಿ

ಬಳಿ – ಕೂಡಿಸು

ಬಂಕ – ಆಸನ

ಬಟ್ಟಕೋಲ – ಭಟ್ಟರುಗಳ

ಬಲ್ಲಿ – ಬನ್ನಿ

ಬಸ್ವ – ಅಸವ

ಬಣ್ಣ – ಸೀರೆ

ಬಾಲಗಿಟು – ಬಾಲನಿಗಿಷ್ಟು

ಬಾಶಿ – ಭಾಷೆ

ಬಾನ – ಅನ್ನ

ಬಾಕಿ – ಎತ್ತರ ಪ್ರದೇಶ

ಬಾನಿ – ದನಕರುಗಳಿಗೆ ನೀರು ತುಂಬುವ ಸಾಧನ

ಬಿಟ್ಟಿತ್ತಾವು – ಬಿಟ್ಟ ಎಡೆಯಲ್ಲಿ

ಬೆಲ್ಲುಜಮಿ – ಬೆಳಗು ಮುಂಜಾನೆ

ಬೇಸಿ – ಬೇಯಿಸಿ

ಬೋಳಿ – ಕೋಡಿಲ್ಲದ ಆಕಳು

ಮಟ – ಶಾಲೆ

ಮಟ್ಟೆ – ಮೊಟ್ಟೆ

ಮದವರಿ – ಮಯಾದೆ

ಮಂಚದಾಗೌಡ – ಏನೂ ಅರಿಯದ ಗೌಡ

ಮನಿಕಣೇ – ಮುಳಗಿಕೊಳ್ಳು

ಮಸ್ತಾರೊ – ಮಸೆದರು

ಮರುಕಣೇ – ಮರೆತುಕೊಳ್ಳು

ಮರ‍್ಕು – ದುಃಖಪಡು

ಮಾಗಾಯ್ – ಮಾವಿನಕಾಯಿ ಆಕಾರದ ಆಭರಣ

ಮುಕ್ಕಾದ – ಒಡೆದ, ಬದಿಹೋದ

ಮುಗಿತ್ತೊ – ಮೊಗೆದಳು

ಮುನದ – ಸಿಟ್ಟಾದ

ಮುರಾವು – ಆಭರಣ ವಿಶೇಷ

ಮೂಡೆ – ಧಾನ್ಯ ತುಂಬುವ ಒಂದು ಬಗೆಯ ಹುಲ್ಲಿನ ಸಾಧನ

ಮೆಂದ – ಮೆಲಿದ

ರಗತ – ರಕ್ತ

ರಕ್ಕೂಲಿಸಿ – ಸಿಟ್ಟಾಗಿ

ರ‍್ಯಾಗುಟೆ – ಆಭರಣ ವಿಶೇಷ

ರಾಜುಣ – ಧ್ಯಾನ

ರಾಮರೈತ – ಬಹಳ ರಕ್ತ

ರುಲಿ – ಒಂದು ಆಭರಣ

ಲರುಗಿತ್ತೆ – ಎರಗಿತ್ತು

ಲಣ್ಣು – ಹಣ್ಣು

ಲತ್ತಗದೀರೂ – ಅತ್ತಿಗೆಯರು

ಲಬ್ಬರಗಿ – ಹಬ್ಬಸಿಗೆ ಎಂಬ ಕೆಂಪು ಹೂ

ಲಶುವಾದರೆ – ಹಸಿವಾದರೆ

ಲಶುವಂತ – ಅಶ್ವತ್ಥ

ಲತ್ತೆ – ಅತ್ತೆ

ಲಾದರಿಗಿತ್ತಿ – ಹಾದರಗಿತ್ತಿ

ಲಾರಣ್ಯ – ಅರಣ್ಯ

ಲಿಂದೊಮ್ಮೆ – ಹಿಂದೊಮ್ಮೆ

ಲೋಟಾ – ನೋಟ

ವನದೇಶ – ವನವಾಸ

ವಲುವೋಮ – ಅತ್ತಿತ್ತ ಒನೆಯುವುದು

ವಾಡೆ – ದಿನಸಿಯನ್ನು ತುಂಬುವ ಮಣ್ಣಿನ ಸಾಧನ

ಶಡಿ – ಸಿಡಿಸು

ಶಂಜಿ – ಸಂಜೆ

ಶಂಬೀ – ಚಂಬನ್ನು

ಶಮುದರ – ಸಮುದ್ರ

ಶರಿ – ಪರಪಳಿ

ಶಲುಸಿದ್ದೆ – ಸಲ್ಲಿಸಿದ್ದೆ

ಶವಣಿದ್ದೆ – ಸಿದ್ದಳಾಗಿರುವೆ

ಶಾಲಕಣ್ಣನ್‌ನೆರಿ – ದೊಡ್ಡ ಕಣ್ಣಿನ ನರಿ, ತೋಳ

ಶಿನ್ನ – ಚಿನ್ನ

ಶುಮ್ಮನೆ – ಸುಮ್ಮನೆ

ಶೂಡಲು – ಸುಡಲಿಕ್ಕೆ

ಸಣ್ಣಗುಂಡು – ಆಭರಣ ವಿಶೇಷ

ಸಣ್ಣಾಡು – ಶರಣುಮಾಡು, ನಮಸ್ಕರಿಸು

ಸಾಲಿಯ – ನೇಯ್ದ ಬಟ್ಟೆ ಉಡುಪನ್ನು

ಸಿಕ್ಕೇದಂಬೂ – ಸಿಕ್ಕಿದೆ ಎನ್ನುವ

ಸದುರಿ – ಹಾಸಿಗೆ

ಸಪ್ಪರ – ಚಪ್ಪರ

ಸರುಪರಾಯ – ಸರ್ಪ

ಸವ್ರಿ – ಸವತಿ

ಸುಳಿಚಿಗುರು – ಬಲಿ, ದೊಡ್ಡದಾಗು

ಸುಳಿದಿರೋ – ಸುಳಿಯಬೇಡ

ಸೆರೆಮುಕ್ಕ – ಬೊಗಸೆಪೂರ್ತಿ ಇಲ್ಲದ

ಸೆಲ್ಯೆ – ಶಲ್ಯ

ಸೊರುದಂತಾ – ಸುರದಂಥ

ಸಂತುಣೆ – ಮುದ್ದಾನೆ

ಹಂಡ್ಹುಲಿ – ಪಟ್ಟೆಹುಲಿ

ಹೆಬ್ಬಾಗಿಲು – ದೊಡ್ಡಬಾಗಿಲು

ಹಮ್ಮಿಗಿ – ಚಕ್ರಕ್ಕೆ ಸುತ್ತುವ ದಾರ

ಹರಲಿ – ಅಪವಾದ

ಹರದೆರ – ಮುತ್ತೈದೆಯರ

ಹಲ್ಲಮುಕ್ಕಳಿಸಿ – ಬಾಯಿಮುಕ್ಕಳಿಸಿ

ಹಾರಕೊಡು – ಬಲಿಕೊಡು

ಹಾವ್ತಿ – ಆಹುತಿ

ಹಿರಿತನ – ಮನೆತನದ ಜವಾಬ್ದಾರಿ

ಹೂಡಾಕ – ಗದ್ದೆಉಳಲು

ಹ್ರೂಗಂಟ್‌ಹೂಗಾ – ಎಲ್ಲಾ ತರದ ಹೂಗಳನ್ನು

ಹೆರಗೆ – ಹೊರಗೆ

ಹೆರಟೇ – ಹೊರಡು

ಹಲ್ಲಿ – ಹಳ್ಳಿ