ಶಾಂತಿಯ ನೋಡಿದಿರಾ ಜ್ಞಾನಿಗಳೆಲ್ಲಾ ಮೂರರ
ಕೊನೆಯೊಳು ಇರುವುದ ಶಾಂತಿ ರಾಗಾ
ದ್ವೇಷದ ಬಿಡಿಸುವ ಶಾಂತಿ || ಪ ||

ಈದಾ ಹುಲಿಯಂತೆ ಮನಸುಸಂದ ಮಾಡುವ
ಶಾಂತಿ ಶಾಂತರ ಹೃದಯದೊಳ್ ಅಂತರದೊಳಿರ್ದು
ಸಂತೆ ಅಳಿಯುವುದು ಶಾಂತಿ ಬಸವನ
ಮನದೊಳು ನೆನೆದಿಹ ಶಾಂತಿ ಗುರುಹೇಶ್ವರನ
ಆತ್ಮದೋಳಿಹ ಕಾಂತಿ || ಶಾಂತಿ ||