ಭಾರತ ಸರ್ಕಾರದ, ಕಲ್ಯಾಣ ಸಚಿವಾಲಯದ, ಬುಡಕಟ್ಟು ಅಭಿವೃದ್ಧಿ ವಿಭಾಗ ಪ್ರಸ್ತುತ ಅಧ್ಯಯನಕ್ಕಾಗಿ ಸಂಶೋಧನಾ ಧನಸಹಾಯವಾಗಿ ೧.೫೦ ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದು ಅದರಲ್ಲಿ ಶೇಕಡಾ ೫೦ ಭಾಗದ ಹಣವನ್ನು ಮುಂಗಡವಾಗಿ ನೀಡಿದೆ. ಈ ಸಹಾಯವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

ಪ್ರಸ್ತಾವನೆ ಸಿದ್ಧಪಡಿಸುವ ಹಂತದಿಂದ ಹಿಡಿದು ವರದಿ ತಯಾರಿಸುವ ಹಂತದವರೆಗೆ ಅನೇಕರು ಸಹಾಯ ಹಸ್ತ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ನನ್ನ ಮುಂಚಿನ ಸಹೋದ್ಯೋಗಿಗಳಾದ ಡಾ. ಆರ್. ಇಂದಿರಾ, ಸಮಾಜಕಾರ್ಯ ವಿಭಾಗದ ಡಾ. ಆರ್. ನಾಗರಾಜು ವಿಷಯವನ್ನು ಆರಂಭದ ಹಂತದಲ್ಲಿ ಚರ್ಚಿಸಿ ಪ್ರಸ್ತಾವನೆಯ ರೂಪರೇಷೆ ರಚಿಸುವಲ್ಲಿ ಸಹಾಯ ಮಾಡಿದ್ದಾರೆ. ಈ ಅಧ್ಯಯನಕ್ಕೆ ಅವರು ನನ್ನನ್ನು ಹಚ್ಚಿದುದಕ್ಕಾಗಿ ನಾನವರಿಗೆ ಆಭಾರಿಯಾಗಿದ್ದೇನೆ. ವಿಷಯ ಸಂಗ್ರಹ ಕಾಲದಲ್ಲಿ ಹಾಗೂ ತರುವಾಯ ಅನೇಕ ಹಂತಗಳಲ್ಲಿ ಮಾನಸಗಂಗೋತ್ರಿಯ ಅದೇ ಸಮಾಜಶಾಸ್ತ್ರ ವಿಭಾಗದ ಮಿತ್ರರಾದ ಡಾ. ಬಿ. ಎಸ್‌. ಪರೇಶ್‌ಕುಮಾರ್‌ಹಾಗೂ ಡಾ. ಸತ್ಯನಾರಾಯಣ ಸಹಾಯ ಮಾಡಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು.

ಕಡೆಯದಾಗಿ, ಸಮಾಜಕಾರ್ಯ ವಿಭಾಗದ ಡಾ. ವೈ. ಎಸ್‌. ಸಿದ್ದೇಗೌಡ ಅವರು ಅಂಕಿ ಅಂಶ ಪಟ್ಟಿ ಹಾಗೂ ಇತರ ಮುಖ್ಯ ಸಂಗತಿಗಳನ್ನು ಅನೇಕ ಗಂಟೆಗಳ ಕಾಲ ಚರ್ಚಿಸಿದ್ದಾರೆ. ಅವರಿಗೆ ನನ್ನ ವಿಶೇಷ ವಂದನೆಗಳು ಸಲ್ಲುತ್ತವೆ. ಅನೇಕ ಬುಡಕಟ್ಟಿನ ಪ್ರತಿಕ್ರಿಯೆಗಾರರು, ಗ್ರಾಮಸ್ಥರು, ಅಧಿಕಾರಿಗಳು, ವಿ.ಜಿ.ಕೆ.ಕೆ. ಯ ಡಾ. ಸುದರ್ಶನ್‌, ಡೀಡ್‌ ಸಂಸ್ಥೆಯ ಶ್ರೀಕಾಂತ್‌ ಇವರನ್ನು ವಿಶೇಷವಾಗಿ ನೆನೆಯುವೆ. ಅವರ ಸಹಕಾರವಿಲ್ಲದಿದ್ದರೆ ಮತ್ತು ಅವರು ತಮ್ಮ ಜ್ಞಾನ ಹಾಗೂ ಮಾಹಿತಿಯನ್ನು ಒದಗಿಸದಿದ್ದರೆ ಪ್ರಸ್ತುತ ಅಧ್ಯಯನ ಸಾಧ್ಯವಾಗುತ್ತಿರಲಿಲ್ಲ. ಅವರ ಸಹಕಾರ ಹಾಗೂ ಆತಿಥ್ಯವನ್ನು ನಾನು ಕೃತಜ್ಞತೆಯಿಂದ ನೆನೆಯುತ್ತೇನೆ.

ಅಂತಿಮವಾಗಿ, ಪ್ರಸ್ತುತ ಅಧ್ಯಯನದ ಫಲಿತ ತೀರ್ಮಾನಗಳು ಹಾಗೂ ವ್ಯಾಖ್ಯಾನ ನನ್ನದು ಎಂದು ದಾಖಲಿಸಲು ನನಗೆ ಸಂತೋಷವಾಗುತ್ತದೆ. ಆಗಂತಕಳಾಗಿ ನಾನು ಈ ಕ್ಷೇತ್ರವನ್ನು ಪ್ರವೇಶಿಸಿದ್ದೆನಾದರೂ ಸಂಬಂಧಪಟ್ಟ ಸಾಹಿತ್ಯವನ್ನು ಅಧ್ಯಯನ ಮಾಡುವುದು ಹಾಗೂ ವರದಿಯನ್ನು ತಯಾರಿಸುವಂತಹ ಕೆಲಸವು ನನಗೆ ತೃಪ್ತಿಯನ್ನು ತಂದುಕೊಟ್ಟಿದೆ. ೧೯೫೦ರ ದಶಕದ ಕೊನೆಯ ಭಾಗದಲ್ಲಿ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ದಿವಂಗತ ಮ್ಯಾಕ್ಸ್‌ಗ್ಲಕ್‌ಮನ್‌ರ ಮಾರ್ಗದರ್ಶನದಲ್ಲಿ ನಾನು ಬುಡಕಟ್ಟು ಅಧ್ಯಯನವನ್ನು ಕೈಗೊಂಡಿದ್ದೆ. ಈಗ ಮತ್ತೆ ಬುಡಕಟ್ಟು ಅಧ್ಯಯನವನ್ನು ನಾನು ಕೈಗೊಳ್ಳಲು ಆ ಅನುಭವ ಒದಗಿಬಂದಿರುವುದನ್ನು ನೆನೆಯುತ್ತೇನೆ.

ಮೂಲ ಆಂಗ್ಲ ಪ್ರತಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಹೊರೆಯನ್ನು ಸ್ವಲ್ಪ ತಡವಾಗಿಯಾದರೂ ಹೊರಲು ಪ್ರೊ. ಸಿ. ನಾಗಣ್ಣ ಅವರು ಸ್ಪಂದಿಸಿದರು. ಅದಕ್ಕಾಗಿ ಅವರಿಗೂ ನನ್ನ ಧನ್ಯವಾದಗಳು ಸಲ್ಲುತ್ತವೆ. ಅನುವಾದ ಮಾಡಿದ ಪ್ರತಿಯನ್ನು ಡಾ. ಎಂ. ಪಿ. ಸುಧಾ ಮುತುವರ್ಜಿಯಿಂದ ಓದಿ ಅತ್ಯಂತ ಅವಶ್ಯಕ ಎಂದು ಕಂಡುಬಂದ ಕಡೆ ವಿಷಯದ ಬಗ್ಗೆ ಅರ್ಥವತ್ತಾದ ಬದಲಾವಣೆಗಳನ್ನು ಸೂಚಿಸಿ ನನ್ನ ಜೊತೆ ಚರ್ಚೆಮಾಡಿ ತುಂಬಾ ಕಡಿಮೆ ಸಮಯದಲ್ಲಿ ಪೂರೈಸಿದ್ದಕ್ಕೆ ಅವರಿಗೆ ನನ್ನ ಕೃತಜ್ಞತೆಯನ್ನು ಆದರದಿಂದ ಸಮರ್ಪಿಸುತ್ತೇನೆ.

ಕನ್ನಡ ವಿಶ್ವವಿದ್ಯಾನಿಲಯವು ಹೊನ್ನಾರು ಮಾಲೆಯಲ್ಲಿ ನನ್ನ ಆದಿವಾಸಿಗಳ ಅಭಿವೃದ್ಧಿ ಪುಸ್ತಕಗಳನ್ನು ಪ್ರಕಟಿಸಲು ಮುಂದೆ ಬಂದ ಕನ್ನಡ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿ ಡಾ. ಬಿ. ಎ. ವಿವೇಕ ರೈ ಅವರಿಗೂ, ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ. ಜಿ. ವೆಂಕಟೇಶ್‌ಅವರಿಗೂ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಪುಸ್ತಕವು ಅಂತಿಮ ಹಂತದಲ್ಲಿದ್ದಾಗ ಪ್ರೊ. ಮಲ್ಲೇಪುರಂ ಅವರು ಪುಸ್ತಕದ ವಿನ್ಯಾಸ ರೂಪಿಸಿಕೊಟ್ಟಿದ್ದಾರೆ. ಅವರ ನೆರವು ಅಪಾರವಾಗಿದೆ.

ಡಿ.ಟಿ.ಪಿ. ಕರಡು ಪ್ರತಿಯನ್ನು ತಿದ್ದಿದ ಡಾ. ವೆಂ. ವನಜರವರಿಗೂ ಕೃತಜ್ಞತೆಗಳು. ಛಾಯಚಿತ್ರಗಳನ್ನು ಒದಗಿಸಿದ ಡಾ. ಯು. ಟಿ. ಅಶೋಕ್‌ಕುಮಾರ್‌ಅವರಿಗೂ ನೆನಹುಗಳು. ಪ್ರಕಟಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಅಧಿಕಾರಿ ವರ್ಗದವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಪ್ರೊ. ಸಿ. ಪಾರ್ವತಮ್ಮ