ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಮೂರು ಸ್ವಯಂ ಸೇವಾ ಸಂಸ್ಥೆಗಳ ಬುಡಕಟ್ಟು ಅಭಿವೃದ್ಧಿ ಕೆಲಸದ ಮೌಲ್ಯಮಾಪನಕ್ಕೆ ಸಂಬಂಧಿಸಿದ ಅಧ್ಯಯನ ಇದು. ೧೯೮೦ರ ದಶಕದಲ್ಲಿ ಈ ಮೂರು ಸಂಸ್ಥೆಗಳು ಕ್ರಿಯಾಶೀಲವಾಗಿ ಕೆಲಸ ಮಾಡಲು ಪ್ರಾರಂಭಿಸಿದವು. ಹಾಗಾಗಿ ಅಂದಾಜು ಒಂದೂವರೆ ದಶಕಗಳಿಂದ ಅವು ಈ ಕ್ಷೇತ್ರದಲ್ಲಿವೆ. ಈ ಹದಿನೈದು ವರ್ಷಗಳಲ್ಲಿ ಬುಡಕಟ್ಟು ಜನರ ಹಕ್ಕುಗಳಿಗೆ ಚ್ಯುತಿ ಬಂದಾಗ, ನ್ಯಾಯಕ್ಕೆ ಧಕ್ಕೆ ಒದಗಿದಾಗ ಅದನ್ನು ಅವರು ದೈರ್ಯವಾಗಿ ಒತ್ತಾಯಿಸುವಂತೆ ಅವರಿಗೆ ಪ್ರೋತ್ಸಾಹ ನೀಡಿರುವುದು ಸ್ಪಷ್ಟವಾಗಿದೆ. ಬುಡಕಟ್ಟು ಜನರಲ್ಲಿ ಅರಿವು ಮೂಡಿಸಿರುವುದೇ ಸ್ವಯಂ ಸೇವಾ ಸಂಸ್ಥೆಗಳ ದೊಡ್ಡ ಸಾಧನೆಯೆಂದು ಧಾರಾಳವಾಗಿ ಹೇಳಬಹುದು. ಏಕೆಂದರೆ ಸ್ವಯಂ ಸೇವಾ ಸಂಸ್ಥೆಗಳು ಈ ಸ್ಥಳಗಳಿಗೆ ಪ್ರವೇಶ ಮಾಡುವುದಕ್ಕೆ ಮೊದಲು ಇಲ್ಲಿ ದರಬಾರು ಮಾಡುತ್ತಾ ಬುಡಕಟ್ಟು ಜನರೆದುರು ಒರಟುತನ ಪ್ರದರ್ಶಿಸುತ್ತಾ, ಸ್ವಲ್ಪ ಮಟ್ಟಿಗೆ ಶೋಷಣೆಯಲ್ಲೂ ತೊಡಗಿದ್ದವರು ಅರಣ್ಯ ಇಲಾಖೆ ಸಿಬ್ಬಂದಿ, ಗುತ್ತಿಗೆದಾರರು, ಸಣ್ಣ ವ್ಯಾಪಾರಿಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು.

೧೯೬೦ ಹಾಗೂ ೧೯೭೦ರ ದಶಕಗಳಲ್ಲಿ ವಿಶಾಲವಾಗಿ ಭಾರತದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು; ಕರ್ನಾಟಕದಲ್ಲೂ ಸಹ ಇದೇ ವಿನ್ಯಾಸದಿಂದ ಇವು ತಲೆ ಎತ್ತಲು ಪ್ರಾರಂಭವಾಯಿತು. ಪ್ರೊ. ಪಾಲ್‌ಚೌಧರಿ, ಡಾ. ಎಲ್‌. ಎಂ. ಪ್ರಸಾದ್‌, ಬಂಕರ್ ರಾಯ್‌ಮುಂತಾದ ವಿದ್ವಾಂಸರು ಹಾಗೂ ಕಾರ್ಯಶೀಲರು ಭಾರತ ಸಮಾಜದಲ್ಲಿ ಸಮಾಜ ಸೇವೆಗೆ ಒಂದು ದೀರ್ಘ ಪರಂಪರೆಯಿದೆಯೆಂದು ನಂಬುತ್ತಾರೆ. ಇದಕ್ಕಾಗಿ ಅವರು ರಾಮಕೃಷ್ಣ ಮಿಷನ್‌, ಹರಿಜನ್‌ಸೇವಕ ಸಂಘ, ಕೇಂದ್ರೀಯ ಸಮಾಜ ಕ್ಷೇಮಾಭಿವೃದ್ಧಿ ಮಂಡಳಿ ಮತ್ತಿತರ ಸಂಸ್ಥೆಗಳನ್ನು ಉಲ್ಲೇಖಿಸುತ್ತಾರೆ. ಸ್ವಾಮಿ ವಿವೇಕಾನಂದ, ರಾಮಕೃಷ್ಣ, ಗಾಂಧಿ, ವಿನೋಬಾಭಾವೆ ಮುಂತಾದ ವರ್ಚಸುಳ್ಳ ನಾಯಕರು ಅವರ ದೃಷ್ಟಿಯಲ್ಲಿದ್ದಾರೆ. ಸಂತರು, ಸಾಧುಗಳು ಹಾಗೂ ವರ್ಚಸ್ಸಿನ ನಾಯಕರು ಮತ್ತಿತರು ಪ್ರೇರೇಪಿಸಿದ ಸ್ವಯಂ ಸೇವಾ ಕ್ರಿಯೆಗೂ ಪ್ರಸ್ತುತ ಗ್ರಾಮಾಂತರ ಪ್ರದೇಶಗಳು ಹಾಗೂ ಬುಡಕಟ್ಟು ವಲಯಗಳಲ್ಲಿ ಕಾರ್ಯನಿರತವಾಗಿರುವ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯವಿಧಾನಕ್ಕೂ ಬಹಳ ವ್ಯತ್ಯಾಸವಿದೆ.

ಗೀತೆ, ಉಪನಿಷತ್ತುಗಳು ಮತ್ತಿತರ ಧರ್ಮದಮೂಲದ ಸಾಹಿತ್ಯದಿಂದ ಸ್ಫೂರ್ತಿ ಪಡೆದು ಅದರ ಪ್ರಕಾರ ಶುದ್ಧ ಜೀವನ ನಡೆಸಿ ಮೋಕ್ಷ ಸಾಧಿಸಿರೆಂದು ಜನರಿಗೆ ಮನವರಿಕೆ ಮಾಡಿಕೊಡುವ ವಿಧಾನ ಭಾರತೀಯ ಪರಂಪರೆಯಲ್ಲಿ ಇದ್ದೇ ಇದೆ. ಆದರೆ ಅದೇ ಉಸಿರಿನಲ್ಲಿ ಲಿಂಗ ತಾರತಮ್ಯ, ಜಾತಿ ಶ್ರೇಣೀಕರಣ ಹಾಗೂ ಇನ್ನಿತರ ತಾರತಮ್ಯಗಳನ್ನು ಸಮರ್ಥಿಸಿಕೊಳ್ಳುವುದಕ್ಕೂ ಧರ್ಮಗ್ರಂಥಗಳನ್ನು ಉಲ್ಲೇಖಿಸಲಾಗಿದೆ. ಸಹಜವಾಗಿಯೇ ಇದು ವೈಚಾರಿಕತೆ ಹಾಗೂ ಮಾನವರಹಿತ ಸಾಧನಾತತ್ವಕ್ಕೆ ವಿರೋಧವಾದುದಾಗಿದೆ. ಅನುಭಾವಿಕವೂ, ಧಾರ್ಮಿಕವೂ ಅದಂಥ ಕೋರಿಕೆ ಜನರನ್ನು ಆಕರ್ಷಿಸಿರುವುದು ನಿಜವಾದರೂ ಅವರ ಸಮಸ್ಯೆಗಳನ್ನು ಅವು ಪರಿಹರಿಸಿಲ್ಲ. ಅವರ ಜೀವನ ಕ್ರಮದಲ್ಲಿ ಉತ್ತಮಿಕೆಯನ್ನು ಸಾಧಿಸಿಲ್ಲ. ತಾನೊಬ್ಬ ಸನಾತನ ಹಿಂದುವೆಂದೂ, ಚಾರುರ್ಣದಲ್ಲಿ ನಂಬಿಕೆಯುಳ್ಳವನೆಂದು ವ್ಯಕ್ತಿಯೊಬ್ಬ ನಿರ್ಣಯಿಸಿದರೆ ಅದರಿಂದ ಅಷ್ಟು ಊನವಾಗಲಾರದೇನೊ, ಆದರೆ ವಿಶಾಲ ಜನಸ್ತೋಮದ ದೃಷ್ಟಿಯಿಂದ ಇದು ಸಾಧುವಾಗಲಾರದು. ತತ್ವಜ್ಞಾನ, ಧರ್ಮ, ಪುರಾಣಗಳು, ಪದ್ಧತಿಗಳು ಹಾಗೂ ಪರಂಪರೆ ಸಾಮಾಜಿಕ ಬದುಕಿನೊಂದಿಗೆ ಬೆರೆತಿರುವುದು ನಿಜ. ಆದರೆ ಅವುಗಳ ಪ್ರಭಾವ ಸಾಮಾನ್ಯವಾಗಿ ಸಕಾರಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸುವ ನಕಾರತ್ಮಕ ಸಂಗತಿಗಳನ್ನೇ ಎತ್ತಿ ಹಿಡಿದಿರುವುದನ್ನು ಕಾಣುತ್ತೇವೆ.

ದೇಶೀಯವಾದ ಸುಧಾರಣಾ ಚಳವಳಿಗಳು, ಧಾರ್ಮಿಕ ಚಳವಳಿಗಳು, ಕ್ರಾಂತಿಕಾರಿ ಚಳವಳಿಗಳೂ ಸೇರಿದಂತೆ ಎಲ್ಲವೂ ಕೂಡ ಈ ಉಪಖಂಡದಲ್ಲಿ ಜನರನ್ನು ಒಟ್ಟುಗೂಡಿಸುವ ಬದಲು ಪ್ರತಿಯೊಂದು ಜನಸಮುದಾಯಕ್ಕೂ ಪ್ರತ್ಯೇಕವಾದ ವಲಯವನ್ನು ನಿರ್ಮಿಸಿಬಿಟ್ಟಿವೆ. ಬೌದ್ಧ ಧರ್ಮ, ಜೈನ ಧರ್ಮ, ಆರ್ಯ ಸಮಾಜ, ಬ್ರಹ್ಮ ಸಮಾಜ, ಕವೀರ ಪಂಥ, ವೀರಶೈವ ಧರ್ಮ ಮತ್ತು ಇನ್ನೂ ಅನೇಕ ಸುಧಾರಣಾ ಪ್ರಯತ್ನಗಳನ್ನು ಇಲ್ಲಿ ಉದಾಹರಿಸಬಹುದಾಗಿದೆ. ಮಹಿಳೆಯರೂ ಸಹ ಜನಿವಾರ ಧರಿಸಬಹುದೆಂದು ತಿಳಿಸುದುದರ ಮೂಲಕ ಆರ್ಯ ಸಮಾಜ ಲಿಂಗ ಸಮಾನತೆಯನ್ನು ಸಾರಿತು. ಮಹಿಳೆಯರ ಸ್ಥಾನಮಾನಗಳಲ್ಲಿ ಯಾವ ತರಹದ ಬದಲಾವಣೆ ಬಂದು ಬಡವರು ಹಾಗೂ ದುರ್ಬಲ ವರ್ಗವನ್ನು ಇದು ಯಾವ ರೀತಿ ಪರಿಣಮಿಸಿದೆ ಎಂದು ಕೇಳಿದರೆ ಉತ್ತರ ನಕಾರಾತ್ಮಕವಾದುದಾಗಿದೆ. ಜಾತಿ ಪದ್ಧತಿ ವೈದಿಕ ಧರ್ಮವನ್ನು ೧೨ ನೇ ಶತಮಾನದ ವೀರಶೈವ ಮತಸ್ಥಾಪಕರಾದ ಬಸವವಣ್ಣನವರು ಬಹಳ ಕಟುವಾಗಿಯೇ ಟೀಕಿಸಿದರು. ಪ್ರತಿಯೊಬ್ಬನೂ ಕಾಯಕ ಮಾಡಬೇಕೆಂಬ ಕ್ರಾಂತಿಕಾರಿ ಧಾರ್ಮಿಕ ಸಿದ್ಧಾಂತವೊಂದನ್ನು ಅವರು ಪ್ರತಿಪಾದಿಸಿದರು. ಅದರ ಫಲವಾಗಿ ಇನ್ನೂ ಹಲವಾರು ಜಾತಿಗಳು ಹೊಸದಾಗಿ ಸೇರ್ಪಡೆಯಾದವು ಹಾಗೂ ಈ ಭೂಮಿಯ ಮೇಲಿನ ಸಂಕಟ ಅಧಿಕವಾಗಲು ಕಾರಣವಾದವು. ಭಾರತದಲ್ಲಿ ಇನ್ನೂ ಕೂಡ ಕಾಯಕದ ಮಹತ್ವವನ್ನು ಜನರು ಅರಿತುಕೊಂಡಿಲ್ಲ.

ಸಮಾನತೆ ಭ್ರಾತೃತ್ವ ಹಾಗೂ ಸ್ವಾತಂತ್ರ್ಯದ ಆಧಾರದ ಮೇಲೆ ಭಾರತ ಸ್ವತಂತ್ರವಾದಾಗ ಈ ಆದರ್ಶಗಳನ್ನು ವಾಸ್ತವಗೊಳಿಸುವಂಧ ದೊಡ್ಡ ಜವಾಬ್ದಾರಿಯನ್ನು ಹೊಂದಿತ್ತು. ಆ ಪ್ರಕ್ರಿಯೆಯಲ್ಲಿ ಸರ್ಕಾರವು ಅನೇಕ ಅರ್ಥಿಕ ಮಾದರಿಗಳನ್ನು ಅನುಸರಿಸಿ ತನ್ಮೂಲಕ ಸಾಮಾಜಿಕ ಬದಲಾವಣೆಯನ್ನು ತಂದು ಜಾತಿ, ಅಸ್ಪೃಶ್ಯತೆ ಮುಂತಾದ ಅನಿಷ್ಟಗಳನ್ನು ತೊಡೆದುಹಾಕಲು ಪ್ರಯತ್ನ ನಡೆಸಿತು. ಬ್ರಿಟಿಷ್ ಆಡಳಿತವು ತನ್ನ ಅಧಿಕಾರಿಶಾಹಿಯ ಸಹಾಯದಿಂದ ಕಾನೂನು ಮತ್ತು ಶಾಂತಿಪಾಲನೆಯನ್ನು ನಿರ್ವಹಿಸಿತು. ಆಡಳಿತಶಾಹಿಯ ಮೂಲಕ ಸಾಮಾಜಿಕ ಬದಲಾವಣೆ ತರಬೇಕೆಂಬ ಇರಾದೆ ಬ್ರಿಟಿಷ್‌ಸಾಮ್ರಾಜ್ಯಶಾಹಿಗೆ ಇರಲಿಲ್ಲ ಆಡಳಿತ ನಡೆಸುವುದರ ಜೊತೆಗೆ, ಕಾನೂನು ಮತ್ತು ನಿಯಮ ಪಾಲಿಸುತ್ತಾ ಸಾಮಾಜಿಕ ಬದಲಾವಣೆಗೂ ಕಾರಣವಾಗಬೇಕೆಂದು ಅಧಿಕಾರಶಾಹಿಯಿಂದ ನೀರೀಕ್ಷಿಸಿದ್ದು ಸ್ವತಂತ್ರ ಭಾರತದ ವೈಶಿಷ್ಟವಾಗಿದೆ. ಅಧಿಕಾರಶಾಹಿಯ ಮೇಲೆ ಇಟ್ಟ ಭರವಸೆ ಈಗ ಏನಾಗಿದೆಯೆಂಬುದು ಯಾರೂ ಊಹಿಸಬಹುದಾದ ಸಂಗತಿಯಾಗಿದೆ. ಕೃಷಿ, ಸಹಕಾರ, ಗ್ರಾಮ ಪಂಚಾತಿ, ಮತ್ತಿತರ ಸಮುದಾಯ ಅಭಿವೃದ್ಧಿ ಯೋಜನೆಗಳು ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳಂಥ ಅನಿಷ್ಟಗಳನ್ನು ಹೆಚ್ಚಿಸುವುದಾರ ಜೊತೆಗೆ ಮೇಲ್ಜಾತಿ ಹಾಗೂ ಕೆಳಜಾತಿಗಳ ನಡುವಿನ ಕಂದರವನ್ನು ಹೆಚ್ಚಿಸಲೂ ಕೂಡ ಸಹಕಾರಿಯಾಗಿವೆ ಎನ್ನದೆ ವಿಧಿಯಿಲ್ಲ. ಸರ್ಕಾರ ಅಥವಾ ಅಡಳಿತಶಾಹಿಗೆ ಇದನ್ನು ತಡೆಯಲು ಸಾಧ್ಯವಾಗಿಲ್ಲ. ಸದುದ್ದೇಶಗಳು ವಿಫಲವಾಗಿರುವುದು ಹೀಗೆ. ಇದೇ ತರಹ ಬಾರತೀಯ ಸಮಾಜದಲ್ಲಿ ಬಡವರ ಪರವಾದ ಬದಲಾವಣೆ ತರಲು ರೂಪಿತವಾದಂಥ ಪಂಚಚಾರ್ಷಿಕ ಯೋಜನೆಗಳು, ನದೀ ಕಣಿವೆ ಯೋಜನೆಗಳು, ಬೃಹತ್‌ಕೈಗಾರಿಕೆಗಳೂ ಸಹ ಊರ್ಜಿತವಾಗಿಲ್ಲ.

ವಾಲ್ಟರ್‌ಫೆರ್ನಾಂಡಿಸ್‌ಅವರು ತಿಳಿಸುವಂತ ಸುಶಿಕ್ಷಿತ ಮದ್ಯಮವರ್ಗದ ಸ್ತ್ರೀಯರು ಹಾಗೂ ಪುರುಷರನ್ನೊಳಗೊಂಡ ಸ್ವಯಂ ಸೇವಾ ಸಂಸ್ಥೆಗಳು ಅಸ್ತಿತ್ವಕ್ಕೆ ಬರತೊಡಗಿದ್ದು ೧೯೬೦ರ ದಶಕದಲ್ಲಿ. ಗ್ರಾಮೀಣ ಜನರು ಹಾಗೂ ಬುಡಕಟ್ಟು ಜನರಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಪ್ರೇರಣೆ ಆಗ ಅವರಲ್ಲಿ ಗಾಢವಾಗಿ ಇದ್ದಿತ್ತು. ತಪ್ಪು ನಿಯಮಗಳು, ಆಧ್ಯತೆಗಳು ಹಾಗೂ ಸುಳ್ಳು ಭರವಸೆಗಳೀಂದ ಕೂಡಿದ ಆಡಳಿತವು ನತದೃಷ್ಟರನ್ನು ಸಂಪೂರ್ಣವಾಗಿ ದಿಕ್ಕು ತಪ್ಪಿಸುವ ಮೊದಲು ಅವರನ್ನು ರಕ್ಷಿಸುವ ಹೊಣೆ ಹೊತ್ತವರಾಗಿದ್ದರು. ಉಪಖಂಡದಲ್ಲಿ ವಿಳಂಬವಾಗಿರುವಂಥ ಸಾಮಾಜಿಕ -ಆರ್ಥಿಕ ಪರಿಸ್ಥಿತಿಯಿಂದಾಗಿ ಸ್ವಯಂ ಸೇವಾ ಸಂಸ್ಥೆಗಳು ಇತ್ತೀಚಿನ ದಶಕಗಳವರೆಗೂ ಉಳಿದು ಬೆಳೆದು ಬರುವುದಕ್ಕೆ ಸಮರ್ಥನೆಯಿದೆ. ಅರ್ಹರೂ, ಬಡವರೂ ಆದ ಜನಸಮುದಾಯಕ್ಕೆ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ತಲುಪಿಸುವ ಜವಾಬ್ದಾರಿಯಿಂದ ಸ್ವಯಂ ಸೇವಾ ಸಂಸ್ಥೆಗಳು ಆಡಳಿತಶಾಹಿ ಅರ್ಧಕ್ಕೆ ಬಿಟ್ಟದ್ದನ್ನು ಕೈಗೆತ್ತಿಕೊಂಡಿವೆ ಅನ್ನಬಹುದು.

ಹೀಗಾಗಿ ಸ್ವಯಂ ಸೇವಾ ಸಂಸ್ಥೆಗಳು ಅಧಿಕಾರಿಗಳ ಸ್ಪರ್ಧಿಗಳೆಂದು ಭಾವಿಸಲಾಗದು. ಅವರು ಸ್ವಯಂ ಪ್ರೆರಣೆಯಿಂದ ದುಡಿಯುವವರಾದ್ದರಿಂದ ಯಾವುದೇ ಬಿಗಿ ನಿಯಮಾವಳಿಗಳ ನಿರ್ಬಂಧಕ್ಕೆ ಒಳಪಟ್ಟವರಾಗಿರುವುದಿಲ್ಲ. ಸರ್ಕಾರವು ತನ್ನ ಕಾರ್ಯಕ್ರಮಗಳನ್ನು ಒಂದು ವಾಹಿನಿಯಲ್ಲಿ ನಡೆಸಿ ಹಣಕಾಸಿನ ಸಹಾಯ ನೀಡುವ ಮಟ್ಟಿಗೆ ಸ್ವಯಂ ಸೇವಾ ಸಂಸ್ಥೆ (ಎನ್‌.ಜಿ.ಓ.)ಗಳು ಉತ್ತರ ನೀಡಬೇಕಾಗುತ್ತದೆ. ಹಣಕಾಸಿನ ದುರ್ಬಳಕೆಯಾದರೆ ಅದನ್ನು ಕೇಳುವ ಹಕ್ಕು ಸಾರ್ವಜನಿಕರಿಗೆ ಇರುತ್ತದೆ. ಜನರ ಜೀವನವನ್ನು ಉತ್ತಮಪಡಿಸಲು ಸಹಾಯವಾಗುವಂಥ ಆರೋಗ್ಯ, ಶಿಕ್ಷಣ ಹಾಗೂ ಆಶ್ರಯದಂಥ ಕಾರ್ಯಕ್ರಮಗಳಿಗೆ ಹಣ ವಿನಿಯೋಗವಾಗುವುದು. ಸಹಜ. ಆದರೆ ವಿಚಕ್ಷಣೆಯಿಂದ ಹಣವನ್ನು ಉಪಯೋಗಿಸಬೇಕಾಗುತ್ತದೆ.

ಭಾರತೀಯ ಉಪಖಂಡದಲ್ಲಿ ಬೇರೆ ಬೇರೆ ಕಡೆ ಅನೇಕ ತರಹದ ಸಂಘಟಿತ ಗುಂಪು ಚಟುವಟಿಕೆಗಳು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿವೆ. ದೇಶದ ನಾನಾ ಭಾಗಗಳಲ್ಲಿ ಅನೇಕ ಭಯೋತ್ಪಾದಕ ಗುಂಪು ಚಟುವಟಿಕೆಗಳು ನಡೆಯುತ್ತಿವೆ – ಈ ಮೊದಲು ಪಂಜಾಬಿನಲ್ಲಿ, ಈಗ ಜಮ್ಮು- ಕಾಶ್ಮೀರದಲ್ಲಿ, ಈಶಾನ್ಯ ಭಾಗದಲ್ಲಿ, ಬಿಹಾರ ಹಾಗೂ ಒರಿಸ್ಸಾದ ಕೆಲವು ಭಾಗಗಳಲ್ಲಿ, ಆಂಧ್ರ ಪ್ರದೇಶ ನಕ್ಸಲೀಯರು ಹಾಗೂ ‘ಪೀಪಲ್ಸ ವಾರ್‌ಗ್ರೂಪ್’ ನವರು, ದಕ್ಷಿಣ ಭಾಗಕ್ಕೆ ನುಸುಳುವ ಎಲ್‌ಟಿಟಿಇಗಳು.

ಸರ್ಕಾರ ತನ್ನ ದೋಷಪೂರಿತವಾದ ಆದ್ಯತೆಗಳನ್ನು ಕೈಬಿಡುವಂತೆ ಅಥವಾ ಸರಿಪಡಿಸಿಕೊಳ್ಳುವಂತೆ ಒತ್ತಡ ಹೇರುವಂಥ ಅನೇಕ ಚಟುವಟಿಕೆಗಳು ಈಗ ಕಾಣಿಸಿಕೊಳ್ಳುತಿವೆ. ಪರಿಸರವಾದಿಗಳು, ವಿದ್ಯಾರ್ಥಿ ಕಾರು ಶೀಲರು, ವರದಕ್ಷಿಣೆ ಸಾವು, ಅತ್ಯಾಚಾರ ಮುಂತಾದ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ ನಡೆಸಿ ರಕ್ಷಣೆ ಕೋರುವಂಥ ಸಂಘಟನೆಗಳು – ಇವೂ ಕೂಡ ಕ್ರಿಯಾಶೀಲವಾಗಿವೆ. ಸಂವಿಧನಾತ್ಮಕ ಹಕ್ಕುಗಳನ್ನು ಪ್ರತಿಪಾದಿಸುತ್ತಾ, ಅನ್ಯಾಯ, ಅಸಮಾನತೆ, ಜಾತಿ ತಾರತಮ್ಯದ ವಿರುದ್ಧ ಹೋರಾಡುವ ಅನೇಕ ದಲಿತ ಕಾರ್ಯುಶಾಲಿಗಳಿಗೆ ಲೆಕ್ಕವಿಲ್ಲ.

ಇಂದು ಪ್ರತಿಯೊಂದು ಜಾತಿ ಹಾಗೂ ಉಪಜಾತಿಯೂ ಕೂಡ ಸಂಘಟಿತವಾಗುತ್ತಾ ತಮ್ಮ ಹಕ್ಕುಗಳ ಪ್ರತಿಪಾದನೆಗಾಗಿ ಹೋರಾಡುವಂಥ ನಾಯಕರನ್ನು ಪಡೆದುಕೊಳ್ಳುತ್ತಿವೆ. ಸರ್ಕಾರಕ್ಕೆ ಹಕ್ಕೊತ್ತಾಯ ಹೇರುವಂಥ ರೈತ ಸಂಘಟನೆಗಳು ಅಸ್ತಿತ್ವದಲ್ಲಿವೆ. ನಗರಗಳ ಕೊಳೆಗೇರಿಗಳಲ್ಲಿ ಅಥವಾ ಗ್ರಾಮಾಂತರ ಪ್ರದೇಶಗಳಲ್ಲಿ ಸದ್ದುಗದ್ದಲವಿಲ್ಲದಂತೆ ಕೆಲಸ ಮಾಡುತ್ತಿರುವಂಥ ಸಾಮಾಜಿಕ ಕಾರ್ಯಕರ್ತರು ಕೂಡ ಇದ್ದಾರೆ.

ಭಯೋತ್ಪಾದಕರು, ಕಾರ್ಯುಶೀಲರು ಹಾಗೂ ಸಾಮಾಜಿಕ ಕಾರ್ಯುಕರ್ತರು -ಹೀಗೆ ಈ ಮೇಲೆ ಕಾಣಿಸಿದ ಗುಂಪುಗಳು ಯಾವುದೋ ಒಂದು ಅಂಶವನ್ನು ಕುರಿತಂತೆ ಕೆಲಸ ಮಾಡುತ್ತಿರುತ್ತವೆ; ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸುತ್ತಿದ್ದಂತೆಯೇ ಗುಂಪಿನ ಚಟುವಟಿಕೆಗಳು ಕುಂಠಿತವಾಗುತ್ತವೆ. ಬೊಡೋಲ್ಯಾಂಡ್‌, ಝಾರ್ಕಂಡ್‌, ಡಾರ್ಜಿಲಿಂಗ್‌ಈ ತರಹದ ಚಳುವಳಿಗಳು ಈಗ ಸ್ಥಗಿತಗೊಂಡಿವೆ. ಭಯೋತ್ಪಾದಕ ಗುಂಪುಗಳು ಮಾತ್ರ ಜನರಲ್ಲಿ ಅತಂಕವುಂಟುಮಾಡುತ್ತಾ ಜೀವಹಾನಿ ಹಾಗೂ ಆಸ್ತಿಪಾಸ್ತಿ ಹಾನಿಯನ್ನು ಮುಂದುವರಿಸಿದೆ, ಜವಾಬ್ದಾರಿಯಲ್ಲಿ ಯಾವುದೇ ಸರ್ಕಾರ ಇಂಥ ಹಾನಿಕಾರಕವಾದ ಸಂಘಟನೆಗಳನ್ನು ಬಗ್ಗು ಬಡಿಯುವುದನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು.

ಇದಕ್ಕೂ ಮೊದಲು ಕ್ರಿಶ್ಚಿಯನ್‌ಮಿಷನರಿಗಳು ಬುಡಕಟ್ಟು ಹಾಗೂ ಗ್ರಾಮಂತರ ವಲಯಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ/ ವೈದ್ಯಕೀಯ ಸೇವೆಗಳ ಮೂಲಕ ಪ್ರವೇಶ ಪಡೆದು ಅಂತಿಮವಾಗಿ ಕೆಳಜಾತಿ ಜನಸಮುದಾಯವನ್ನು ಕ್ರೈಸ್ತಧರ್ಮಕ್ಕೆ ಮತಾಂತರ ಮಾಡುವಲ್ಲಿ ಸಫಲರಾದರು. ಸಮಾಜ ಸೇವೆಯನ್ನು ಸಹ ಕ್ರಿಸ್ತ ಮಿಷನರಿಗಳು ಕೈಗೊಳ್ಳುವರಾದರೂ ಮತಾಂತರಕ್ಕೆ ಸಮುದಾಯದ ಸಹಮತವಿಲ್ಲ. ಮದರ್‌ಥೇರೇಸಾ ಅವರ ಸಂಘಟನೆ ಇದಕ್ಕೆ ಒಂದು ಉದಾಹರಣೆಯಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಎನ್‌ಜಿಓಗಳು ಸರ್ಕಾರವು ಅಪೇಕ್ಷಾರ್ಹ ಸಾಮಾಜಿಕ ಬದಲಾವಣೆಗಾಗಿ ಹಾಕಿಕೊಳ್ಳುವ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಶಿಕ್ಷಣ, ಅರೋಗ್ಯ ವಲಯಗಳಲ್ಲಿ ಜನ ಸಮುದಾಯಗಳ ಹೆಚ್ಚಿನ ಸವಲತ್ತು ದಕ್ಕಿಸಿಕೊಂಡು ಕೆಲಸ ಮಾಡುತ್ತಿವೆ ಎನ್ನಬಹುದು.

ಪ್ರಸ್ತುತ ಅಧ್ಯಯನವು ಇತರೆ ಎನ್‌ಜಿಓಗಳನ್ನು, ವಿಶೇಷವಾಗಿ ಮೈಸೂರು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಅಂಥ ಮೂರು ಸಂಸ್ಥೆಗಳನ್ನು ಗಮನಕ್ಕೆ ತೆಗೆದುಕೊಂಡಿದೆ. ತಮಿಳುನಾಡು ಗಡಿಯಲ್ಲಿರುವಂಥ ಬಿಳಿಗಿರಿಗಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ; ಕೇರಳ ಗಡಿಯ ಎಚ್‌. ಡಿ. ಕೋಟೆ ತಾಲೂಕಿನ ಎನ್‌. ಬೇಗೂರಿನಲ್ಲಿರುವ ಸ್ವಾಮಿ ವಿವೇಕಾನಂದ ಯುವಕ ಚಳುವಳಿ ಮತ್ತು ಕೊಡಗು ಜಿಲ್ಲೆಯ ಗಡಿಗೆ ಸೇರಿದ ಹುಣಸೂರು ತಾಲೂಕಿನಲ್ಲಿ ಕಾರ್ಯಪ್ರವೃತ್ತವಾಗಿರುವ ಡೀಡ್‌ಸಂಸ್ಥೆಗಳನ್ನು ಆಯ್ದುಕೊಳ್ಳಲಾಗಿದೆ.

ಸ್ವಯಂ ಸೇವಾ ಚಳುವಳಿಯ ಭಾರತದಲ್ಲಿ ಒಂದು ಚಾರಿತ್ರಿಕ ಘಟನೆಯಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಅದರ ಕಾರ್ಯವಿಧಾನದಲ್ಲಿ ಸ್ವಲ್ಪ ದೋಷಗಳು ಕಂಡುಬರುವ ಕಾರಣದಿಂದ ಅದನ್ನು ಸಂಪೂರ್ಣವಾಗಿ ನಿರಾಕರಿಸದೆ, ಜಾಗರೂಕತೆಯಿಂದ ಚಳುವಳಿಯನ್ನು ಕಾಪಾಡಿಕೊಳ್ಳಬೇಕಾಗಿರುವುದು ಅನಿವಾರ್ಯ. ಸ್ವಯಂ ಸೇವಾ ಸಂಸ್ಥೆಗಳಲ್ಲಿ ಏಲರೂಪತೆ ಇಲ್ಲ. ಪ್ರತಿಯೊಂದು ಸ್ವಯಂ ಸೇವಾ ಸಂಸ್ಥೆಯೂ ಕೂಡ ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಿರುವಂಥದು. ಪ್ರತ್ಯೇಕವಾದ ಗ್ರಾಮೀಣ ಅಥವಾ ಬುಡಕಟ್ಟು ಗುಂಪು ಅಥವಾ ಗುಂಪುಗಳ ವಿಶೇಷವಾದ ಸಮಸ್ಯೆಯ ಪರಿಹಾರಕ್ಕಾಗಿ ಒಂದು ಸಂಸ್ಥೆ ರೂಪು ತಳೆದಿರುವುದೂ ಕೂಡ ಸ್ಪಷ್ಟವಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಸ್ವಯಂ ಸೇವಾ ಹೆಸರಿನಲ್ಲಿ ಬೇರೆ ಬೇರೆ ಗುಂಪುಗಳಿಗೆ ಕಾರ್ಯಪ್ರವೃತ್ತವಾಗಿದ್ದು ಸಿಕ್ಕ ಸಿಕ್ಕ ಮೂಲಗಳಿಂದ ಹಣವನ್ನು ಪಡೆಯುತ್ತಿವೆ. ಕೆಲವು ರಾಜಕೀಯ ರಂಗದಲ್ಲಿ ಬೆಳೆಯಲು ಸ್ವಯಂ ಸೇವೆಯನ್ನು ಚಿಮ್ಮು ಹಲಗೆಯನ್ನಾಗಿ ಮಾಡಿಕೊಂಡರೆ, ಇನ್ನು ಕೆಲವರು ಸಂಸ್ಥೆಯನ್ನು ತಮ್ಮ ಸ್ವಂತ ಆಸ್ತಿಯಾಗಿ ಪರಿವರ್ತಿಸಿಕೊಂಡಿದ್ದಾರೆ. ಎರಡೂ ಸಂದರ್ಭದಲ್ಲಿ ಧನಸಹಾಯ ದುರುಪಯೋಗವಾಗುವುದರ ಜೊತೆಗೆ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ತಲೆ ಹಾಕಿ ನಿರ್ದಿಷ್ಟವಾದ ಸಮುದಾಯಗಳಿಗೆ ಸವಲತ್ತು ತಲುಪದಂತಾಗಿದೆ. ವಿದೇಶೀ ಧನಸಹಾಯ ಏಜೆನ್ಸಿಗಳು ಗುರಿ ಹಾಗೂ ಉದ್ದೇಶಗಳನ್ನು ನಿಗದಿಮಾಡುವುದರಿಂದ ಕಾರ್ಯಕ್ರಮವನ್ನು ಅವರು ಹೇಳಿದ ಪ್ರಕಾರವೇ ನೆರವೇರಿಸಬೇಕಾದ ನಿರ್ಬಂಧ ನಿರ್ಮಾಣವಾಗುತ್ತದೆ. ನಮ್ಮ ಧನಸಹಾಯ ಏಜೆನ್ಸಿಗಳು ಪ್ರಾಯಶಃ ಆ ತರಹದ ನಿರ್ಬಂಧಗಳನ್ನು ಹೇರುವುದಿಲ್ಲ.

ದೇಶೀಯವಾಗಿ ಸಮಾಜ ಕಲ್ಯಾಣ ಸಚಿವಾಲಯ ಮತ್ತಿತರ ಮೂಲಗಳು ಧನ ಸಹಾಯ ಒದಗಿಸುತ್ತವೆ. ಸರ್ಕಾರಿ ಮೂಲಗಳಲ್ಲದೆಯೇ ಅನೇಕ ದಾನಶೀಲ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಮತ್ತು ಕೆಲವು ಕೈಗಾರಿಕೋದ್ಯಮಗಳು ದೇಣಿಗೆಯನ್ನು ಕೊಡುತ್ತವೆ.

ಅನೇಕ ಸರ್ಕಾರಿ ಪ್ರಾಯೋಜಿತ ಅಥವಾ ಸಹಾಯ ಪಡೆದ ಯೋಜನೆಗಳ ಮೌಲ್ಯಮಾಪನ ನಡೆಯದಿರುವುದು ಸಾಮಾನ್ಯವಾಗಿ ಕಂಡುಬರುವ ದೋಷವಾಗಿದೆ. ಈ ವಲಯದಲ್ಲಿ ಹೊಸ ರೀತಿಯ ಅಭಿಗಮನದ ಅಗತ್ಯವಿದ್ದು ಸರ್ಕಾರವು ತನ್ನ ಮಾಮೂಲಿ ‘ಪರಿಶೀಲನಾ’ ಮಾರ್ಗವನ್ನು ಬಿಟ್ಟು ದೃಢವಾಗಿಯೇ ನಿಲುವು ತಳೆಯಬೇಕಾಗಿದೆ. ಇಷ್ಟು ವರ್ಷಗಳ ಕಾಲ ‘ಪರಿಶೀಲನೆ’ ಪರ್ವದಲ್ಲಿಯೇ ನಾವು ಬಾಳಿದುದಾಯಿತು. ಬಡವರು ಹಾಗೂ ದುರ್ಬಲ ವರ್ಗಗಳ ಹೆಸರಿನಲ್ಲಿ ಕೆಲವು ಮಧ್ಯವರ್ತಿಗಳು ಬಹಳ ಮುಂದುವರೆದಿರುವುದಲ್ಲದೆ ನಾಯಕರಾಗಿ ಮೇಲೆ ಕಾಣಿಸಿಕೊಳ್ಳುವಲ್ಲಿಯೂ ಯಶಸ್ವಿಗಳಾಗಿದ್ದಾರೆ.

ಕೆಲವು ವರ್ಷಗಳಿಂದೀಚೆಗೆ ಬಡವರ ಬಗೆಗಿನ ಕಾಳಜಿಯು ಅತ್ಯಂತ ಯಾಂತ್ರಿಕವಾಗುತ್ತಿದ್ದು, ನೈತಿಕ ಹಾಗೂ ಮಾನವೀಯ ಮೌಲ್ಯಗಳ ವಿಷಯದಲ್ಲಿ ಬಹಳ ಬದಲಾವಣೆಯಾಗಿದೆ. ಸರ್ಕಾರದ ನೀತಿ ನಿಯಮಾವಳಿಗಳು – ‘ಮೀಸಲಾತಿ’ ಯನ್ನೂ ಒಳಗೊಂಡಂತೆ – ಸರ್ಕಾರಕ್ಕೆ ಹಾಗೂ ಆಡಾಳಿತಸಾಹಿಗೆ ಚೆನ್ನಾಗಿ ತಿಳಿದಿರಬೇಕಾಗುತ್ತದೆ. ಕೇವಲ ಚುನಾವಣಾ ಭರವಸೆಗಳೀಂದಲೇ ರಾಕಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗಲಾರದು. ಇದು ಸಾಮಾಜಿಕ -ಆರ್ಥಿಕ ಜನತಂತ್ರದೊಡನೆ ಮಿಳಿತವಾಗಬೇಕು. ಆವಾಗ ಮಾತ್ರ ರಾಷ್ಟ್ರದ ಸಮಗ್ರ ಪ್ರಗತಿಯನ್ನು ಕಾಣಬಹುದು. ನಮ್ಮ ನಾಯಕರು ಜಂಭದಿಂದ ಹೇಳಿಕೊಳ್ಳುವ ಗತಕಾಲದ ಘನ ಸಂಸ್ಕೃತಿ, ಮೌಲ್ಯಗಳು, ಪರಂಪರೆಗೆ ವ್ಯತಿರಿಕ್ತವಾದ ರೀತಿಯಲ್ಲಿ ಹಿಂಸೆ ಹಾಗೂ ವಿನಾಶದ ಕ್ರಮದಲ್ಲಿಯೇ ೨೧ ನೇ ಶತಮಾನದ ಉದ್ಘಾಟನೆಗೊಂಡಿದೆ. ಈಗಿನ ಕಾಲದಲ್ಲಿ ಮುಷ್ಕರ, ಹರತಾಳವಿಲ್ಲದೆ ಏನೂ ಚಲಿಸದು ಎಂಬಂತಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವೆನ್ನುವುದು ಜನತಂತ್ರ ವ್ಯವಸ್ಥೆಯ ಪ್ರಮುಖವಾದ ಅಂಗ ಎಂಬುದರಲ್ಲಿ ಎರಡು ಮಾತಿಲ್ಲ: ಆದರೆ ಜನರ ಪ್ರಗತಿಗೆ ಅದೇ ಕಾಲ್ತೋಡಕಾಗಬಾರದು. ನಮ್ಮ ವ್ಯವಸ್ಥೆಯನ್ನು ಸರಿಪಡಿಸಬೇಕಾದುದು ಮೊದಲ ಆದ್ಯತೆಯನ್ನು ಪಡೆಯಬೇಕು, ಇಂಥ ಸಂದರ್ಭದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಜಾತ್ಯತೀತತೆ, ಐಕ್ಯತೆ ಹಾಗೂ ರಾಷ್ಟ್ರೀಯ ಸಮಗ್ರತೆಯಂಥ ಮೌಲ್ಯಗಳನ್ನು ಬಿತ್ತಬೇಕಾಗಿರುವುದು.

* * *