೧. ಇಂಚರ: ಪಂ. ಬಸವರಾಜ ರಾಜಗುರು ಅಭಿನಂದನಾ ಗ್ರಂಥ (ಸಂ) ಡಾ. ಬಸವರಾಜ ಮಲಶೆಟ್ಟಿ, ಶ್ರೀ. ಜ. ಕೊಟ್ಟುರು ಸ್ವಾಮಿ ಮಠ , ಹೊಸಪೇಟೆ,  ೧೯೮೩.

೨. ಪದ್ಮಶ್ರೀ ಪಂ. ಬಸವರಾಜ ರಾಜಗುರು ಷಷ್ಠಿಪೂರ್ತಿ ಸಮಾರಂಭದ ಸ್ಮರಣ ಸಂಚಿಕೆ, ಧಾರವಾಡ, ೧೯೮೨.

೩. ಪದ್ಮಭೂಷಣ ಪಂ. ಬಸವರಾಜ ರಾಜಗುರು ಪುಣ್ಯ ಸ್ಮರಣಾರ್ಥ ಸ್ಮರಣೆ ಸಂಚಿಕೆ, ಧಾರವಾಡ, ೧೯೯೩.

೪. ಗಣಪತಿ ಭಟ್ಟ ಹಾಗೂ ಪರಮೇಶ್ವರ ಹೆಗಡೆಯವರ ಪತ್ರಗಳು

೫. ಶ್ರೀಮತಿ ಭಾರತಿ ಬಸವರಾಜ ರಾಜಗುರು ಹಾಗೂ ಕುಮಾರ ನಿಜಗುಣಿ ರಾಜಗುರು ಅವರೊಂದಿಗೆ ಸಂದರ್ಶನ.

 

ಘಟನಾವಳಿಗಳು

೧೯೨೦ ಆಗಸ್ಟ್‌೨೪- ಜನನ.

೧೯೨೬- ತಾಯಿಯ ಮರಣ

೧೯೨೯- ವಾಮನರಾವ್‌ಮಾಸ್ತರರ ನಾಟಕ ಕಂಪನಿಗೆ ಸೇರ್ಪಡೆ

೧೯೩೦- ತಂದೆಯ ಮರಣ ಮೂರೂಸಾವಿರ ಮಠಕ್ಕೆ ಸಂಸ್ಕೃತಾಭ್ಯಾಸಕ್ಕೆ ಸೇರ್ಪಡೆ. ಪಂಚಾಕ್ಷರಿ ಗವಾಯಿಗಳವರ ಶಿಷ್ಯತ್ವ ಸ್ವೀಕಾರ

೧೯೩೩- ಎರಡು ಹಾಡುಗಳ ಧ್ವನಿ ಮುದ್ರಣ (ಮುಂಬೈನಲ್ಲಿ)

೧೯೩೬- ಹಂಪೆಯ ವಿಜಯನಗರ ಉತ್ಸವದಲ್ಲಿ ಸಂಗೀತ ಕಛೇರಿ

೧೯೩೮- ಪ್ರತಮ ರೇಡಿಯೋ ಕಾರ್ಯಕ್ರಮ

೧೯೪೦- ಪಂಚಾಕ್ಷರಿ ಗವಾಯಿಗಳವರ ನಾಟಕ ಕಂಪನಿ ಸ್ಥಾಪನೆ ಅದರಲ್ಲಿ ನಟನಾಗಿ ಸೇವೆ.

೧೯೪೧- ಬಸವಜಯಂತಿ-ಕೂಡಲಸಂಗಮದಲ್ಲಿ ಗುರುಗಳ ಆರ್ಶೀವಾದ. ಸ್ವತಂತ್ರ ಗಾಯನ

೧೯೪೩- ಕಲಕತ್ತಾದಲ್ಲಿ ಅಖಿಲ ಭಾರತ ಸಮ್ಮೇಳನದಲ್ಲಿ ಕಛೇರಿ

೧೯೪೩- ಸಿಂಧ, ಪಂಜಾಬಗಳಲ್ಲಿ

೧೯೪೬ ರಿಂದ- ಧಾರವಾಡದಲ್ಲಿ ಖಾಯಂ ವಸತಿ

೧೯೫೨- ಮಹಾದೇವಿಯೊಂದಿಗೆ ಲಗ್ನ

೧೯೫೩ ಆಗಸ್ಟ್‌೧೫- ಪ್ರಥಮ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ

೧೯೫೬- ಹೈದ್ರಾಬಾದ್‌ವೀರಶೈವ ಸಮ್ಮೇಳನದಲ್ಲಿ “ಸಂಗೀತ ಸುಧಾಕರ” ಬಿರುದು

೧೯೫೮- ಬೆಂಗಳೂರ “ಸಂಗೀತ ರತ್ನ” ಬಿರುದು

೧೯೬೨- ಮಹಾದೇವಿಯ ಮರಣ

೧೯೬೫- ಭಾರತಿದೇವಿಯೊಂದಿಗೆ ಮರು ಮದುವೆ

೧೯೭೧- ರಾಜ್ಯ ಸಂಗೀತ ನಾಟಕ ಅಕಾಡೆಮಿ ಸದಸ್ಯ

೧೯೭೧- ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ

೧೯೭೫- ಪದ್ಮಶ್ರೀ ಪ್ರಶಸ್ತಿ

೧೯೭೫- ಹುಬ್ಬಳ್ಳಿ ಮೂರೂಸಾವಿರ ಮಠದಲ್ಲಿ ಸನ್ಮಾನ ಮತ್ತು ‘ಸಂಗೀತ ಶಿರೋಮಣಿ’ ಬಿರುದು

೧೯೭೬ ರಿಂದ- ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗೌರವ ಪ್ರಾಧ್ಯಾಪಕ

೧೯೮೧- ಗದುಗಿನ ತೋಂಟದಾರ್ಯ ಮಠದಲ್ಲಿ ಸನ್ಮಾನ ಮತ್ತು “ಅಭಿನವ ಗಂಧರ್ವ” ಬಿರುದು

೧೯೮೨- ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರ. ಧಾರವಾಡದಲ್ಲಿ ಷಷ್ಟಿಪೂರ್ತಿ ಸಮಾರಂಭ

೧೯೮೨- ಬಸವ ಜಯಂತಿ-ಹೊಸಪೇಟ ಕೊಟ್ಟೂರು ಸ್ವಾಮಿ ಮಠದಲ್ಲಿ ಸನ್ಮಾನ ಮತ್ತು ‘ಇಂಚರ’ ಅಭಿನಂದನ ಗ್ರಂಥ ಸಮರ್ಪಣೆ

* * *