ಹೀಗೆಕಾರುವೆ ಪಕ್ಕಿಯೆ ನೀನು
ಹೀಗೇಕಿಜುವೆ ವಿಶ್ವದಲಿ?
ಲತೆಯಲಿ ಪೊದೆಯಲಿ ಚಿಗುರಿಲ್ಲೇನು
ಪ್ರಣಯದ ಗೀತೆಯು ಕೋಕಿಯಲಿ?
ಒಣಗಿದ ಮರದಲಿ ನೆರಳಿಲ್ಲೇನು
ತನಿವಣ್ಣಿಲ್ಲೇ ತೋಟದಲಿ?
ಗಗನದತಾರೆಗೆ ಮಿಣುಕಿಲ್ಲೇನು
ಹೊಳೆಯುವ ಮಿಂಚಾ ಮೋಡದಲಿ?
ಕುರಿಯನು ಕಾಯುವ ಹುಡುಗನ ಕೊಳಲಲಿ,
ತುದಿ ಸಂಜೆಯ ರಾಗಡಗಿಹುದೇ?
ಹಳ್ಳಿಯ ಮನುಜರ ಕುಗ್ಗಿದ ಮನದಲಿ,
ಹರುಷದ ಬುಗ್ಗೆಯು ಇಂಗಿಹುದೇ?
ಏತಕೆ ಚಿಂತೆಯು ಪಕ್ಕಿಯೆ ನಿನಗೆ
ವಿಶ್ವದ ನಿಯಮವನನುಸರಿಸಿ,
ಕಾತರ-ಸಡಗರ ಬರುವುವು ನಮಗೆ
ಒಂದರ ಹಿಂದೊಂದನುಸರಿಸಿ
ಚಳಿಬಂತಾದರೆ ಹಿಂದಿಯೆಬರುವನು ಋತುರಾಜ
ಹೀಗೆಂದಾಡಿದ ಕವಿರಾಜ

* * *

– ರತ್ನಾಂಬಾ,
ಜಯ ಕರ್ನಾಟಕ, ಸಂಪುಟ ೯, ಸಂಚಿಕೆ ೪, ೧೯೩೧