ಮಧ್ಯ ಮತ್ತು ಪಶ್ಚಿಮ ಸುಡಾನ್ ರಾಜ್ಯಗಳು

ಅನಾದಿ ಕಾಲದಿಂದಲೂ ಸೂಡಾನ್ ಮತ್ತು ಸಹರಾದ ಪಶ್ಚಿಮ ಭಾಗಗಳು ಕರಾವಳಿ ಮೈದಾನ ಭೂಮಿಯ ಫಿನೇಷಿಯನ್ನರು, ಗ್ರೀಕರು ಮತ್ತು ರೋಮ್ ನಾಗರಿಕತೆಗಳ ಪ್ರಭಾವಕ್ಕೆ ಒಳಗಾದರು. ಈ ಪ್ರಭಾವ ಗೋವಳಲಿ ಬಿಯನ್ ಅಲೆಮಾರಿ ಬುಡಕಟ್ಟುಗಳ ಮೂಲಕ ಪರೋಕ್ಷವಾಗಿ ಅವರನ್ನು ತಲುಪಿತ್ತು. ಈ ಬುಡಕಟ್ಟು ಜನಾಂಗದವರು ಕುದುರೆ ರಥಗಳ ಮೇಲೆ ಮರುಭೂಮಿಯನ್ನು ದಾಟಿ ಚಿನ್ನದ ಹುಡಿ, ಉಷ್ಟ್ರಪಕ್ಷಿ ಪುಕ್ಕಗಳು ಮತ್ತು ಗುಲಾಮರನ್ನು ಕರಾವಳಿ ಪ್ರದೇಶದಲ್ಲಿ ಮಾರುವುದಕ್ಕಾಗಿ ಸಂಗ್ರಹಿಸುವ ಅಭ್ಯಾಸ ಬೆಳಸಿಕೊಂಡಿದ್ದರು. ಈಜಿಪ್ಟಿನ ಮೂಲಕವಾಗಿ ಒಂಟೆ ಸಹರಾಕ್ಕೆ ಪರಿಚಯವಾಗಿದ್ದ ಕಾರಣ ಒಂಟೆಯು ಕಾರವಾನ್ ಸಾರಿಗೆಯ ಸಾಧನವಾಯಿತು. ಮರುಭೂಮಿಯಲ್ಲಿ ಕಲ್ಲಿನ ಮೇಲಿನ ರೇಖಾಚಿತ್ರಗಳು ದೊರೆತಿರುವುದರಿಂದ ನೈಜರ್ ಮತ್ತು ಸೆನೆಗಲ್ ನದಿಗಳ ಕಡೆಗೆ ಎರಡು ಸಹರಾ ಹಾದುಹೋಗುವ ಮಾರ್ಗಗಳು ಬೆಳೆದುಬಂದಿದ್ದವು ಎಂಬುದು ಅರ್ಥವಾಗುತ್ತದೆ. ನೈಜರ್ ಮತ್ತು ಸೆನೆಗಲ್ ನದಿಪ್ರದೇಶ ಮೆಕ್ಕಲುಮಣ್ಣಿನ ಚಿನ್ನಕ್ಕೆ ಪ್ರಸಿದ್ಧವಾಗಿತ್ತು. ತರುವಾಯ ಅರಬ್ಬರು ಅದನ್ನು ‘ವಂಗಾರ’ ಎಂದು ಕರೆಯುತ್ತಿದ್ದರು. ವ್ಯಾಪಾರ ವಾಣಿಜ್ಯಗಳ ಕಾರಣದಿಂದ ಸುಡಾನ್ ಪ್ರದೇಶದಲ್ಲಿ ನಗರಗಳು ಬೆಳೆದವು. ಬೃಹತ್ ಸಹಾರ ಕೆಳಗಿನ ವ್ಯಾಪಾರ ಕೇಂದ್ರಗಳ ಸುತ್ತಮುತ್ತ ಬಲವಾದ ಮತ್ತು ವ್ಯಾಪಕವಾದ ರಾಜ್ಯಗಳು ಬೆಳೆದುಬಂದವು. ಈ ರಾಜ್ಯಗಳಲ್ಲಿನ ಜನರು ಕಡೇಶಿಯನ್ ಸಮ್ಮಿಶ್ರವಾದ ಕಪ್ಪುಜನಾಂಗವಾಗಿದ್ದರು. ನಗರ ಪ್ರದೇಶದ ಬಹುಪಾಲು ಜನರು ಮುಸ್ಲಿಮರಾಗಿದ್ದರು ಅಥವಾ ತರುವಾಯ ಇಸ್ಲಾಂ ಅನುಯಾಯಿಗಳಾದರು. ಆದರೆ ಹಳ್ಳಿಗಾಡಿನ ಜನರ ಧಾರ್ಮಿಕ ನಂಬಿಕೆ ಪ್ರಕೃತಿ ಆರಾಧನೆ ಆಗಿತ್ತು. ಇಲ್ಲಿನ ಬಹಳಷ್ಟು ರಾಜ್ಯಗಳು ನಗರ ರಾಜ್ಯಗಳಾಗಿದ್ದವು ಮತ್ತು ಸಂಕೀರ್ಣ ರಾಜಕೀಯ ವ್ಯವಸ್ಥೆ ಹಾಗೂ ಚೆನ್ನಾಗಿ ತರಬೇತಿ ಹೊಂದಿದ ಅಶ್ವದಳವನ್ನು ಹೊಂದಿದ್ದವು. ಕಾಲಕ್ರಮದಲ್ಲಿ ಪಶ್ಚಿಮ ಆಫ್ರಿಕಾದ ಘಾನದ ಸುಡಾನ್ ನಾಗರಿಕತೆಗೆ ಸೇರಿದ ಪ್ರಮುಖ ರಾಜ್ಯಗಳು ಮತ್ತು ಜಾಡ್ ಸರೋವರದ ಈಶಾನ್ಯ ಭಾಗದಲ್ಲಿದ್ದ ಕಾನೆಮ್ ರಾಜ್ಯ ಮತ್ತು ಮೊಜಾಂಬಿಕ್‌ನ ಒಳನಾಡಿನಲ್ಲಿ ಇದ್ದ ಪ್ರಮುಖ ರಾಜ್ಯಗಳ ಪೈಕಿ ಸೇನೆಗೆ ಕಡ್ಡಾಯ ಭರ್ತಿ ಮೂಲಕ ಈ ಅಶ್ವದಳಗಳ ಬದಲು ದೊಡ್ಡ ಸೇನೆಗಳು ಬೆಳೆದವು.

ಘಾನಾ ಸಾಮ್ರಾಜ್ಯ

ಕ್ರಿ.ಶ.೫ನೆಯ ಶತಮಾನದ ಹೊತ್ತಿಗೆ ವಂಗಾರದ ಉತ್ತರಕ್ಕೆ ಸೆನೆಗಲ್ ಮತ್ತು ನೈಲ್ ನದಿಗಳ ನಡುವೆ ಘಾನ ಸಾಮ್ರಾಜ್ಯ ಮೂಡಿತು. ಸ್ವಲ್ಪಮಟ್ಟಿಗೆ ನೆಮಿಡಿಕ್ ಅಂಶವನ್ನೂ ಹೊಂದಿದ್ದ ಲಿಬಿಯಾದ ಅಲೆಮಾರಿ ವಲಸೆಗಾರರು ಈ ರಾಜ್ಯವನ್ನು ಕಟ್ಟಿರುವ ಸಾಧ್ಯತೆ ಇಲ್ಲ. ಆದರೆ ಘಾನಾದ ತರುವಾಯದ ರಾಜರು ನಿಸ್ಸಂದೇಹವಾಗಿ ಕರಿಯರೇ ಆಗಿದ್ದರು ಮತ್ತು ಘಾನಾದ ಪ್ರಾರಂಭದಲ್ಲಿದ್ದ ಪರಕೀಯರನ್ನು ಸೆನೆಗಲ್‌ನ ಕೆಳಭಾಗದ ಟಕರೂನ್ ಮತ್ತು ಘಾಟಾಲ-ಟೌರೋಗಳಿಗೆ ಓಡಿಸಲಾಯಿತು ಎಂದು ಹೇಳಲಾಗಿದೆ. ಅಲ್ಲಿ ಸ್ಥಳೀಯ ಕುಕುಲಾರ್ ಜನಾಂಗದವರೊಂದಿಗೆ ಅಂತರ್ ವಿವಾಹದಿಂದ ಫುಲಾನಿ ಎಂಬ ಗೋವಳ ಜನಾಂಗದ ಉಗಮವಾಯಿತು. ತರುವಾಯ ಇವರು ಪೂರ್ವ ಪ್ರದೇಶಗಳತ್ತ ವಲಸೆ ಹೋಗಿ ಸೂಡಾನ್ ಮತ್ತು ಕಮರೂನ್ ಪ್ರದೇಶಗಳಲ್ಲಿ ಹರಡಿಹೋದರು. ಅಲ್ಲಿನ ಜನಾಂಗಗಳೊಂದಿಗೆ ಸೇರಿಹೋದರೂ ಪ್ರಮುಖವಾಗಿ ಬೇಸಾಯಗಾರರಾದ ಸ್ಥಳೀಯ ಕರಿಯರಿಂದ ಬೇರೆಯಾಗಿಯೇ ಉಳಿದರು. ೭ನೆಯ ಶತಮಾನದಲ್ಲಿ ಮಘರಿಬ್‌ಗೆ ಅರಬ್ಬರು ಬಂದಾಗ ಘಾನ ಆಗಲೇ ‘ಚಿನ್ನದ ಬೀಡು’ ಎಂದು ಹೆಸರುವಾಸಿಯಾಗಿತ್ತು. ಹೀಗಿದ್ದರೂ, ಚಿನ್ನದ ಗಣಿಗಳನ್ನು ವಾಸ್ತವವಾಗಿ ಹೊಂದಿರುವುದಕ್ಕಿಂತಲೂ ಹೆಚ್ಚಾಗಿ ಇದು ಚಿನ್ನವೂ ಸೇರಿ ಪಶ್ಚಿಮ ಸುಡಾನ್‌ನ ಉತ್ಪನ್ನಗಳನ್ನು, ಉತ್ತರ ಆಫ್ರಿಕಾದಿಂದ ರಪ್ತು ಮಾಡುವುದಕ್ಕೆ ಸಂಗ್ರಹಿಸುವ ಕೇಂದ್ರವಾಗಿದ್ದುದು ಇದರ ಐಶ್ವರ್ಯ ಹಾಗೂ ಮಹತ್ವಕ್ಕೆ ಕಾರಣವಾಗಿತ್ತು. ಮರುಭೂಮಿಯ ವ್ಯಾಪಾರ ನಿಯಮಗಳನ್ನು ನಿಯಂತ್ರಿಸುತ್ತಿದ್ದ ಲಿಬಿಯಾದ ಅಲೆಮಾರಿ ಬುಡಕಟ್ಟು ಜನಾಂಗ ದವರು ಘಾನ ಮಾರುಕಟ್ಟೆಗೆ ಸಹರಾದಿಂದ ಉಪ್ಪನ್ನು ತರುತ್ತಿದ್ದರು.

ಮುಸ್ಲಿಂ ಪ್ರಭಾವದ ವಿಸ್ತಾರ

ಒಂಟೆ, ಅರಬ್ಬರ ಆಗಮನ ಮತ್ತು ಇಸ್ಲಾಂ ಸಹರಾ ಉದ್ದಗಲದ ಪ್ರದೇಶದ ಸಂಬಂಧಗಳ ಸ್ವರೂಪವನ್ನು ನಿರ್ಧರಿಸಿತು. ರೋಮನ್ ಕಾಲಾವಧಿಯ ಅಂತ್ಯಕ್ಕಿಂತ ಮುಂಚೆ ಮಘರಿಬ್‌ನಲ್ಲಿ ಒಂಟೆ ನೆಲೆಯೂರಿದ್ದರಿಂದ ಬುಡಕಟ್ಟು ಅಲೆಮಾರಿ ಜನ ಮರುಭೂಮಿಯ ಜೀವನದ ನಿಷ್ಣಾತರಾದರು. ಇದು ಅವರ ಸಂಚಾರ ಸಾಧ್ಯತೆಯನ್ನು ಹೆಚ್ಚಿಸಿತು ಮತ್ತು ಒಯಸಿಸ್‌ಗಳನ್ನೇ ನಂಬಿಕೊಂಡು ಜೀವಿಸುವುದನ್ನು ಕಡಿಮೆ ಮಾಡಿಸಿತು. ಅರಬ್ಬರು ಮಘರಿಬ್‌ಗೆ ನುಗ್ಗಿ ಬಂದದ್ದರಿಂದ ಬುಡಕಟ್ಟು ಜನಾಂಗದವರು ದಕ್ಷಿಣದೆಡೆಗೆ ಓಡಬೇಕಾಯಿತು. ಅವರಲ್ಲಿ ಕೆಲವರು ಇಸ್ಲಾಂಧರ್ಮಕ್ಕೆ ಮತಾಂತರ ಹೊಂದಿದ್ದರಿಂದ ದಕ್ಷಿಣಕ್ಕೆ ದಂಡಯಾತ್ರೆ ಹೊರಡಲೂ ಹೊಸ ಸ್ಫೂರ್ತಿ ದೊರೆತಿರಬಹುದು. ೫ನೆಯ ಶತಮಾನದಿಂದ ೧೩ನೆಯ ಶತಮಾನದ ಸಹರಾ ಮತ್ತು ಸುಡಾನ್‌ಗಳ ಇತಿಹಾಸವನ್ನು ನೋಡಿದಾಗ ಜನರ ಬಹಳಷ್ಟು ಓಡಾಟಗಳನ್ನು ಕಾಣುತ್ತೇವೆ. ಆದರೆ ನುಬಿಯಾದಲ್ಲಿ ಈ ವಲಸೆ ಪ್ರವೃತ್ತಿ ಕಾಣಬರುವುದಿಲ್ಲ. ಇಲ್ಲಿ ೫ನೆಯ ಶತಮಾನದಿಂದ ೧೩ನೆಯ ಶತಮಾನದ ಸಹರಾ ಮತ್ತು ಸುಡಾನ್‌ಗಳ ಇತಿಹಾಸವನ್ನು ನೋಡಿದಾಗ ಜನರ ಬಹಳಷ್ಟು ಓಡಾಟ ಗಳನ್ನು ಕಾಣುತ್ತೇವೆ. ಆದರೆ ನುಬಿಯಾದಲ್ಲಿ ಈ ವಲಸೆ ಪ್ರವೃತ್ತಿ ಕಾಣಬರುವುದಿಲ್ಲ. ಇಲ್ಲಿ ೫ನೆಯ ಶತಮಾನದೊಹೊತ್ತಿಗೆ ಕ್ರೈಸ್ತ ಮತವನ್ನು ಅವಲಂಬಿಸಲಾಯಿತು ಮತ್ತು ವಾಸ್ತವವಾಗಿ ಇದು ಕುಶ್ ಜನರಿಂದ ಪರಂಪರಾಗತವಾಗಿ ಬಂದ ಸಂಸ್ಕೃತಿಗೆ ಹೊಸತನವನ್ನು ನೀಡಿತು. ಹೀಗಿದ್ದರೂ ಈ ರಾಜ್ಯಗಳು, ಮುಸ್ಲಿಂ ವ್ಯಾಪಾರಿಗಳು ಮತ್ತು ಬೆಡೂಯಿನ್ ಜನಾಂಗದವರ ಆಗಮನದಿಂದಾಗಿ ನಿಧಾನವಾಗಿ ಮಾಯವಾದವು. ಬೆಡೂಯಿನ್ ಜನಾಂಗದವರ ಆಗಮನದಿಂದ ಪೂರ್ವ ಸೂಡಾನ್ ಅರಬ್ಬೀಕರಣಕ್ಕೆ ಒಳಗಾಯಿತು. ದಕ್ಷಿಣವನ್ನು ಬಿಟ್ಟರೆ ಉಳಿದೆಡೆ ಕೇಂದ್ರೀಕೃತ ಸರ್ಕಾರದ ಬದಲಾಗಿ ಬುಡಕಟ್ಟು ಆಳ್ವಿಕೆ ಜಾರಿಗೆ ಬಂತು.

ಸೂಡಾನ್‌ನ ಕೆಲವು ಭಾಗಗಳಲ್ಲಿ ಮರುಭೂಮಿಯ ವಲಸೆಗಾರರು ಅಶ್ವದಳ ಮತ್ತು ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಸಂಘಟಿಸಿದ್ದರೂ ಸ್ಥಳೀಯ ಕಪ್ಪು ಬಂಧು ಗುಂಪುಗಳನ್ನು ಕಪ್ಪ ನೀಡುವಂತಹ ರಾಜ್ಯಕ್ಷೇತ್ರಗಳನ್ನಾಗಿಸಿದರು. ಅವರು ಸೂಡಾನ್‌ಗೆ ಬಂದದ್ದು ಎಲ್ಲೆಡೆ ಇಸ್ಲಾಂ ಆಗಮಿಸಿದುದರ ಒಂದು ಪ್ರತಿಕ್ರಿಯೆಯಾಗಿರಬೇಕು. ಈ ವಲಸೆಗಾರ ಬುಡಕಟ್ಟು ಜನಾಂಗ ಬಹುಶಃ ಸಹರಾದ ಲಿಬಿಯಾದ ಅಲೆಮಾರಿ ಬುಡಕಟ್ಟು ಜನಾಂಗದವರಿರಬೇಕು. ಉದಾಹರಣೆಗೆ ಪಶ್ಚಿಮದಲ್ಲಿ ಸನ್‌ಹಜಾ ಎಂದು, ಮಧ್ಯದಲ್ಲಿ ಲೆಮ್ತಾ ಮತ್ತು ಅಹಗ್ಗರ್ ಎಂದು, ಇನ್ನೂ ಪೂರ್ವಕ್ಕೆ ಜಗಾವಾ ಎಂದು ಇವರು ಪರಿಚಿತರಾಗಿದ್ದರು. ಈ ಬುಡಕಟ್ಟು ಜನರು ತರುವಾಯ ತುಆರೆಗ್ ಎಂದು ಹೆಸರಾಂತ ಜನಾಂಗವಾದರು. ಸೂಡಾನ್‌ನ ಇತಿಹಾಸದ ಪ್ರಾರಂಭದ ದಿನಗಳಲ್ಲಿ ಮಧ್ಯ ಮತ್ತ ಪಶ್ಚಿಮ ಸೂಡಾನ್ ಮೇಲೆ ಪರಕೀಯ ಪ್ರಭಾವ ಬೀರಿದ ಎರಡು ಮುಖ್ಯ ಧಾರೆಗಳಿದ್ದಂತೆ ಕಾಣಬರುತ್ತದೆ. ಒಂದು ಮೆಘರಿಬ್‌ನಿಂದ ಬಂದದ್ದು, ಮತ್ತೊಂದು ನೈಲ್ ಕಣಿವೆ ಮತ್ತು ಕೆಂಪು ಸಮುದ್ರದಿಂದ ಬಂದದ್ದು. ಈಗ ನೈಜೀರಿಯಾ ಎಂದು ಕರೆಯುವ ಪ್ರದೇಶದಲ್ಲಿ ಈ ಎರಡೂ ಧಾರೆಗಳು ಒಂದುಗೂಡಿ ಎಷ್ಟೊಂದು ಪದರಗಳಲ್ಲಿ ಸಮ್ಮಿಶ್ರವಾದವೆಂದರೆ ಅವನ್ನು ಬಿಡಿಸುವುದು ದುಸ್ಸಾಧ್ಯ. ಚಾಡ್ ಸರೋವರದ ಉತ್ತರ ಮತ್ತು ಪಶ್ಚಿಮದ ಭಾಗಗಳಲ್ಲಿ ಇದ್ದ ಕನೇಂ ಮತ್ತು ಅದರ ಉತ್ತರಾಧಿಕಾರಿ ಬೋರ್ನಾ ರಾಜ್ಯಗಳು ೧೪ನೇ ಶತಮಾನದಲ್ಲಿ ಪ್ರಬಲ ರಾಜ್ಯಗಳಾಗಿ ಒಡಮೂಡಿದವು. ಕರ್ಪಾಸ ಹೊದಿಕೆ ಸರಪಳಿರಕ್ಷೆ ಕವಚಗಳುಳ್ಳ ಅವರ ಸಮವಸ್ತ್ರಧಾರಿ ಸೇನೆ, ಅಶ್ವಸೇನೆ ಹಾಗೂ ಪದಾತಿದಳವುಳ್ಳ ಬಲು ಕಾಲ ಚಾಲ್ತಿಯಲ್ಲಿದ್ದ ಅದರ ಸೇನೆ ತುಂಬ ಪ್ರಸಿದ್ಧವಾಗಿತ್ತು. ಉತ್ತರ ಮತ್ತು ಪೂರ್ವ ಪ್ರದೇಶಗಳಿಗೆ ಗುಲಾಮರನ್ನು ರಫ್ತು ಮಾಡಿ ಇದು ಸಮೃದ್ಧ ರಾಜ್ಯವಾಯಿತು. ಅದು ಇಸ್ಲಾಂಗೆ ಪರಿವರ್ತನೆಯಾದ ಮೇಲೆ ೧೧ನೆಯ ಶತಮಾನದಲ್ಲಿ ಪೂರ್ವದಿಂದ ಬಂದಂತಹ ಸೆಫ್ ಜನರಿಂದ ಸ್ಥಾಪಿತವಾಯಿತು ಎಂದು ಹೇಳಲಾಗುತ್ತದೆ. ಇನ್ನೊಂದು ಕಡೆ ಸೊಂಗೈ ಪರಂಪರೆ ಉತ್ತರದ ಮತ್ತು ೮ನೆಯ ಶತಮಾನದಲ್ಲಿ ಪೂರ್ವ ನೈಜರ್ ಮುಡುಕಿನಲ್ಲಿ ನೆಲಸಿದ್ದ ಲೆಮ್ಟಾ ಬರ್ಬರದಿಂದ ಇವರಿಗೆ ಪೂರ್ವದ ಪ್ರಾರಂಭಿಕ ಪ್ರಭಾವ ಉಂಟಾಯಿತು. ಹನ್ಸಾ ರಾಜ್ಯವು ೭ನೆಯ ಶತಮಾನ ಮತ್ತು ೧೧ನೆಯ ಶತಮಾನದ ಕಡೇ ಪಕ್ಷ ಎರಡು ಪ್ರಮುಖ ವಲಸೆ ಪ್ರವಾಹಗಳಿಂದ ಉಂಟಾದದ್ದು ಎಂದು ಕಂಡುಬರುತ್ತದೆ. ಇನ್ನೂ ಪೂರ್ವಕ್ಕೆ ದರ್ ಫುರ್ ನಂತಹ ರಾಜ್ಯಗಳ ಆರಂಭವನ್ನು ಜಗ್ವಾಗಳೊಂದಿಗೆ ತೋರಿಸ ಬಹುದು ಮತ್ತು ಇದು ಮಿರಾಯಿಟಿಕ್ ಸಂಸ್ಕೃತಿಯ ಪ್ರತಿರೂಪ.

ಮಾಲಿ ಮತ್ತು ಗಾವೂ ಸಾಮ್ರಾಜ್ಯಗಳು

ಪಶ್ಚಿಮ ರಾಜ್ಯವಾಗಿದ್ದ ಘಾನ ಮುಖ್ಯವಾಗಿ ಒಂದು ಕಪ್ಪು ಜನಾಂಗದವರ ರಾಜ್ಯ. ಇವರು ಸನ್ ಹಜಾ ಬರ್ಬರ ಬುಡಕಟ್ಟಿನವರೊಂದಿಗೆ ವಿರೋಧ ಬೆಳಸಿಕೊಂಡರು. ಅಲ್ಮೊರಾವಿಡ್ ಮುಸ್ಲಿಮರು ಅಪ್ಪಟ ಇಸ್ಲಾಮಿಕ್ ಕಟ್ಟಳೆಗಳನ್ನು ಹೇರಿ ಒಂದು ತಾತ್ಕಾಲಿಕ ಐಕಮತ್ಯವನ್ನು ಸಾಧಿಸಿದರು. ಇದರಿಂದ ಅವರಿಗೆ ಮರುಭೂಮಿಯ ‘‘ವ್ಯಾಪಾರ ಮಾರ್ಗದ’’ ಎರಡೂ ತುದಿಗಳಲ್ಲಿನ ಐಶ್ವರ್ಯ ಲಭಿಸಿತು. ಆದರೆ ಮುಂದೆ ಕ್ರಿ.ಶ.೧೦೭೬ರಲ್ಲಿ ಘಾನವನ್ನು ಅಂತಿಮವಾಗಿ ಗೆಲ್ಲಲಾಯಿತು. ಅದಕ್ಕೆ ಮತ್ತೆ ಸ್ವಾತಂತ್ರ್ಯ ದೊರೆತರೂ ಮೊದಲಿದ್ದ ವಾಣಿಜ್ಯ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲಗೊಳಿಸಿದರು. ಅವರ ಕುರಿ ಮಂದೆ ಮತ್ತು ದನಗಳು ಬೇಸಾಯ ಭೂಮಿಯನ್ನು ಬೀಳುಗೈದವು. ಅಲ್ಲದೆ ಇದು ಚಿಕ್ಕಪುಟ್ಟ ರಾಜ್ಯಗಳಾಗಿ ಒಡೆದು ಹೋಯಿತು. ಕಾಲಾಂತರದಲ್ಲಿ ಪಶ್ಚಿಮ ಸೂಡಾನ್‌ನ ರಾಜಕೀಯ ಶಕ್ತಿ ಇನ್ನೂ ದಕ್ಷಿಣ ಪ್ರದೇಶದಲ್ಲಿದ್ದ ಮಾಂಡಿಂಗೋ ಗುಂಪಿಗೆ ಸೇರಿತು. ಇವರ ಮುಖಂಡನಾದ ಸುಂಡಿಯೂತ ೧೨೪೦ರ ಹೊತ್ತಿಗೆ ಘಾನವನ್ನು ಸೂರೆಗೈದನು ಮತ್ತು ಹೊಸದಾದ ಹಾಗೂ ವಿಶಾಲವಾದ ಮಾಲಿಂಕೆ ಸಾಮ್ರಾಜ್ಯಕ್ಕೆ ತಳಹದಿ ಹಾಕಿದನು. ಮಾಲಿಮನ್ಸ ಮುಗಾ (೧೩೦೭/೧೨-೧೩೩೨) ಆಶಿವರುಗಳ ಸಮಯದಲ್ಲಿ ಉಚ್ಛ್ರಾಯ ಸ್ಥಿತಿಗೇರಿತು. ಇವರ ಸಾಮ್ರಾಜ್ಯ ಪೂರ್ವದ ತೆಕರೂರ್‌ನಿಂದ ಪೂರ್ವ ಕರಾವಳಿಯು ಬೆಳೆಯುತ್ತಿದ್ದ ವಾಣಿಜ್ಯ ಸಾಮ್ರಾಜ್ಯಗಳಾದ ಗಾವೊ ಮತ್ತು ಟಿಂಬಿಕ್ಟು, ನೈರುತ್ಯದಲ್ಲಿ ವಂಗಾರ ಹಾಗೂ ಉತ್ತರದ ಮರುಭೂಮಿ ಗಡಿಗಳಿಂದ ಕಪ್ಪ ಪಡೆಯುತ್ತಿತ್ತು. ೧೪ನೆಯ ಶತಮಾನದಲ್ಲಿ ಮಾಲಿಯ ಆಳರಸರು ಇಸ್ಲಾಂಧರ್ಮದ ಅನುಯಾಯಿಗಳಾದರು. ಹೀಗೆ ಅವರು, ಮಾಲಿಯ ವರ್ತಕರು ದಕ್ಷಿಣ ಅರಣ್ಯದ ಚಿನ್ನ ಮತ್ತು ಕೋಲ ಉತ್ಪಾದಿಸುವ ಪ್ರದೇಶಗಳಿಗೆ ಹಾಗೂ ಪೂರ್ವಕ್ಕೆ ಹೌಸಾಲ್ಯಾಂಡ್‌ವರೆಗೆ ವಿಸ್ತರಿಸುವ ಸಮಯದಲ್ಲಿ ಉತ್ತರ ಆಫ್ರಿಕಾ ರಾಜ್ಯಗಳಿಂದ ಮನ್ನಣೆ ಪಡೆದುಕೊಂಡರು. ಚಿನ್ನ, ಕೋಲ ಹಾಗೂ ಗುಲಾಮರಿಗಾಗಿ ವ್ಯಾಪಾರ ಪ್ರಮುಖ ಸರಕೆಂದರೆ ಉತ್ತರ ಆಫ್ರಿಕಾದ ಮರುಭೂಮಿಗಳ ಉಪ್ಪು. ಪರಿಣಾಮವಾಗಿ ಮಾಲಿ ಟಿಂಬಿಕ್ಟು ಮತ್ತು ಗಾವೋಗಳು ಅತ್ಯಂತ ಪ್ರವರ್ಧಮಾನವನ್ನು ತಲುಪಿದವು. ಟಿಂಬಕ್ಟು ಇಸ್ಲಾಂ ಕಲಿಕೆ ಮತ್ತು ಸಂಸ್ಕೃತಿಯ ಕೇಂದ್ರವಾಯಿತು. ಹೀಗೆ ಇಸ್ಲಾಂ ಮತಾವಲಂಬನದಿಂದ ಮಾಲಿಯ ವಾಣಿಜ್ಯ ಮತ್ತು ಸಾಂಸ್ಕೃತಿಕ ಪ್ರಭಾವ ಬಲುದೂರದವರೆಗೆ ತಲುಪಿತು. ೧೪ನೆಯ ಶತಮಾನದ ಉತ್ತರಾರ್ಧದಲ್ಲಿ ಮಾಲಿ ಸಾಮ್ರಾಜ್ಯದ ಅವನತಿ ಪ್ರಾರಂಭವಾಯಿತು. ಯಾರು ಉತ್ತರಾಧಿಕಾರಿಯಾಗಬೇಕೆಂಬ ವಿವಾದ ಮಾಲಿಯ ಸೇನಾ ಸರ್ವೋನ್ನತೆಗೆ ಧಕ್ಕೆ ತಂದಿತು. ಅದರ ರಾಜಕೀಯ ನಿಯಂತ್ರಣ ಸೊಂಗಾಯಿಯಂತಹ ಅನೇಕ ಜನಾಂಗದವರೆಗೆ ಪ್ರಸರಿಸಿತ್ತು. ಆದರೆ ಈ ನಿಯಂತ್ರಣವೇನಿದ್ದರೂ ಮಾಲಿಯನ್ನು ಯಾರೂ ವಿರೋಧಿಸದೇ ಇದ್ದ ಕಾಲದವರೆಗೆ ಮಾತ್ರ. ಮಾಲಿಯ ಸೇನಾ ದುರ್ಬಲತೆಯ ಜೊತೆಗೆ ವಾಣಿಜ್ಯ ಇಳಿಮುಖವಾಯಿತು. ಮೊರಾಕ್ಕೊದ ರಾಜಕೀಯ ದುರ್ಬಲತೆ ವಿಶಾಲ ಸಹರಾ ವ್ಯಾಪಾರದ ವಿನಾಶಕ್ಕೆ ಕಾರಣವಾಯಿತು. ಮಾಲಿ ಸಾಮ್ರಾಜ್ಯವನ್ನು ಟರೆಕ್ ಅವರು ಉತ್ತರದಿಂದ, ಫುಲಾನಿ ಪಶ್ಚಿಮದಿಂದ ಮತ್ತು ಮೊಸಾಯಿ ದಕ್ಷಿಣದಿಂದ ಆಕ್ರಮಿಸಲಾರಂಭಿಸಿ ದರು. ಪೂರ್ವದ ಸೊಂಗಾಯಿ ತಾನು ಸ್ವತಂತ್ರ ಎಂದು ಘೋಷಿಸಿಕೊಂಡಿತು. ಇದು ಮಧ್ಯ ನೈಜರ್ ಹಾಗೂ ಮಧ್ಯ ಕಾರವಾನ್ ಮಾರ್ಗಗಳನ್ನು ನಿಯಂತ್ರಿಸಲಾರಂಭಿಸಿತು ಮತ್ತು ಗಾವೋ ಸಾಮ್ರಾಜ್ಯವನ್ನು ಕಟ್ಟಿತು. ೧೩೭೫ರಲ್ಲಿ ಸೊಂಗ್ಯಾ ಮಾಲಿಯ ಪ್ರಾಬಲ್ಯವನ್ನು ಕಿತ್ತೊಗೆದು ಪೂರ್ವದಿಂದ ಅದರ ಮೇಲೆ ಒತ್ತಡ ಹೇರಲಾರಂಭಿಸಿತು ಮತ್ತು ಅದು ಪಶ್ಚಿಮ ಸೂಡಾನ್ ಅನ್ನೂ ನಿಯಂತ್ರಿಸಲಾರಂಭಿಸಿತು. ಆದರೆ ಈ ಹೊಸ ಸಾಮ್ರಾಜ್ಯದ ಪ್ರಾಬಲ್ಯ ಬಹಳ ಕಾಲ ಉಳಿಯಲಿಲ್ಲ. ಇಸ್ಲಾಂ ಮಾಲಿ ಸಾಮ್ರಾಜ್ಯದ ಶಕ್ತಿಮೂಲವಾಗಿತ್ತು. ಆದರೆ ಅದು ಸೊಂಗಾಯಿಯಲ್ಲಿ ಇಸ್ಲಾಂಮೇತರ ಜನಾಂಗದ ಪ್ರತಿಕ್ರಿಯೆಗೆ ಕಾರಣವಾಯಿತು. ಹೀಗಾಗಿ ತರುವಾಯದ ರಾಜರು ರಾಜಪಟ್ಟಕ್ಕೆ ಕ್ರಮಬದ್ಧ ಉತ್ತಾರಾಧಿಕಾರಕ್ಕೆ ಒಪ್ಪಲಿಲ್ಲ. ಆದ್ದರಿಂದ ರಾಜ್ಯನಿಯಂತ್ರಣದಲ್ಲಿ ವಿಫಲರಾದರು ಅಥವಾ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರು. ಅದು ಸೌದಿ ಸುಲ್ತಾನರು ರೂಪಿಸಿದ್ದ ಬಲುವ್ಯವಸ್ಥಿತ ಮೊರಾಕ್ಕೋದ ದಾಳಿಗಳಿಗೆ ಪದೇ ಪದೇ ತುತ್ತಾಗಬೇಕಾಯಿತು. ಸಹರಾ ಉಪ್ಪು ಗಣಿಗಳ ನಿಯಂತ್ರಣಕ್ಕಾಗಿ ಈ ದಾಳಿಗಳನ್ನು ಮಾಡಲಾಯಿತು. ೧೫೯೦-೧೫೯೧ರಲ್ಲಿ ಅಹ್ಮದ್-ಅಲ್-ಮನ್ಸೂರನ ನೇತೃತ್ವದಲ್ಲಿ ಒಂದು ಯುದ್ಧಯಾತ್ರೆ ಹೊರಟು ಗಾವೋ, ಟಿಂಬಿಕ್ಟು ಮತ್ತು ಜಿನ್ನಿಗಳನ್ನು ಮುತ್ತಿ ಆಕ್ರಮಿಸಿಕೊಂಡಿತು. ಆದರೆ ಎಲ್ಲರೂ ಹಾತೊರೆಯುತ್ತಿದ್ದ ಅರಣ್ಯದ ಚಿನ್ನ ಉತ್ಪಾದಿಸುವ ಪ್ರದೇಶಗಳು ಮೊರಾಕ್ಕೋದವರ ಕೈಗೆ ನಿಲುಕಲಿಲ್ಲ. ಸೂಡಾನ್‌ನಲ್ಲಿ ಒಂದು ಶಕ್ತಿಶಾಲಿ ಕೇಂದ್ರಸರ್ಕಾರ ಇಲ್ಲದೇ ಇದ್ದ ಕಾರಣ ಈ ದಿಗ್ವಿಜಯದಿಂದ ಬಲುಕಾಲ ಬಾಳುವ ಯಾವುದೇ ಆರ್ಥಿಕ ಲಾಭ ದೊರೆಯಲಿಲ್ಲ.

ವಿಶಾಲ ಸಹರಾ ವಾಣಿಜ್ಯದ ಅವನತಿ

ಸೂಡಾನ್ ಸಾಮ್ರಾಜ್ಯದ ವೈಭವಪೂರ್ಣ ದಿನಗಳು ಹಾಗೂ ಅದು ಬೆಳೆಸಿದ ವಿಶಾಲ ಸಹರಾ ವ್ಯಾಪಾರಗಳು ಕ್ಷೀಣಿಸುತ್ತ ಬಂದವು. ಹದಿನೈದನೇ ಶತಮಾನದಲ್ಲಿ ಪೋರ್ಚುಗೀಸರು ಮತ್ತವರ ಪ್ರತಿಸ್ಪರ್ಧಿ ರಾಷ್ಟ್ರಗಳು ಅಟ್ಲಾಂಟಿಕ್ ತೀರದ ಅನ್ವೇಷಣೆ ಪ್ರಾರಂಭಿಸಿದರು. ಗಿನಿಯಿಂದ ಉತ್ತರಕ್ಕೆ ಹರಿದು ಬರುತ್ತಿದ್ದ ಕೆಲವಾರು ವ್ಯಾಪಾರಗಳಿಗೆ ಯುರೋಪಿನ ವಾಣಿಜ್ಯ ಕೇಂದ್ರಗಳಲ್ಲಿ ಹೊಸ ವ್ಯಾಪಾರ ಕೇಂದ್ರಗಳು ದೊರೆತವು. ವಿಶಾಲ ಸಹರಾ ರಾಜ್ಯಗಳ ಮೇಲೆ ನಿಯಂತ್ರಣ ಉಳಿಸಿಕೊಳ್ಳುವುದಕ್ಕಾಗಿ ಆಕ್ರಮಣಕಾರರು ಪೋರ್ಚುಗಲ್, ಸ್ಪೈನ್, ಮೊರಾಕ್ಕೊ ಮತ್ತು ಅಟೊಮನ್ ಟರ್ಕ್‌ಗಳ ವಿರುದ್ಧ ಹೋರಾಟಕ್ಕೆ ಇಳಿಯ ಬೇಕಾಯಿತು. ಟರ್ಕಿಯ ಬಂದೂಕುಗಳು ಮತ್ತು ಯುದ್ಧತಂತ್ರಗಳನ್ನು ಬಳಸಿಕೊಂಡು ಬೋರ್ನು ಶಕ್ತಿಶಾಲಿ ರಾಜ್ಯವಾಯಿತು. ವಾಣಿಜ್ಯ ದೃಷ್ಟಿಯಿಂದ ಇದು ಘಾನ, ಮಾಲಿ ಅಥವಾ ಸೋಗಾಯ್‌ಗಳಷ್ಟೇ ಶ್ರೀಮಂತವಾಗಿದ್ದರೂ ಅದು ಮಘಾನಿಬ್‌ನಿಂದ ಸ್ಫೂರ್ತ ವಾಗಿರದೆ ಈಜಿಪ್ಟಿನಿಂದ ಸ್ಫೂರ್ತವಾದ ಇಸ್ಲಾಂನ ಸ್ಥಳೀಯ ಕೇಂದ್ರವಾಗಿ ಉಳಿಯಿತು. ವಿಶಾಲ ಸಹರಾ ವ್ಯಾಪಾರವು ಕೃಷಿ ಹಾಗೂ ಕೈಗಾರಿಕೆ ಸಂಪತ್ತಿನಲ್ಲಿ ಸಮೃದ್ಧವಾಗುತ್ತ ಬಂದ ಒಂದು ಸಣ್ಣ ರಾಜ್ಯವಾದ ಹೌಸಾದ ನಗರ ರಾಜ್ಯಗಳಿಗೆ ಹರಿಯಲಾರಂಭಿಸಿತು. ಮಾಲಿ, ಸೋಗಾಯ್ ಹಾಗೂ ಬೋರ್ನುಗಳ ಮೇಲಿನ ದಾಳಿಯ ಕಾರಣದಿಂದಾಗಿ ಹೌಸ (ನೈಜೀರಿಯದಲ್ಲಿ ಮಾತನಾಡುವ ಆಪ್ರೋಏಷಿಯಾಟಿಕ್ ಕುಟುಂಬದ ಜಾಡ್‌ನ ಉಪಕುಟುಂಬದ ಒಂದು ಸದಸ್ಯ ಭಾಷೆ) ತನ್ನ ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಭಾವವನ್ನು ಮುಸ್ಲಿಂ ವ್ಯಾಪಾರಿಗಳ ಮೂಲಕ ಹರಡ ಲಾರಂಭಿಸಿತು. ಏಕೆಂದರೆ ಆಗ ಆ ಮುಸ್ಲಿಂ ವ್ಯಾಪಾರಿಗಳೇ ಅರಣ್ಯವಾಸಿ ಜನಕ್ಕೆ ವ್ಯಾಪಾರ ಮತ್ತ ಇಸ್ಲಾಂ ಅನ್ನು ತಲುಪಿಸುತ್ತಿದ್ದ ಪ್ರಧಾನ ವಾಹಕರಾಗಿದ್ದರು.

ಬ್ರಿಟಿಷ್ ಹಾಗೂ ಫ್ರೆಂಚ್ ಅಧಿಕಾರ ವಿಸ್ತರಣೆ

ಫ್ರೆಂಚರು ಶೆವಾಸಿಲ್ ನದಿ ದಂಡೆ ಮೇಲೆ ನೆಲೆಯೂರಿದರು. ಬ್ರಿಟಿಷರು ಚಿನ್ನದ ತೀರದ ನೈಜೀರಿಯಾ ಪ್ರದೇಶದಲ್ಲಿ ನೆಲೆಯೂರಿದರು. ಗುಲಾಮ ಮತ್ತು ದಂತ ವ್ಯಾಪಾರಿಗಳ ಮೂಲಕ ನೈರೋಪಿಕ್ ಸೂಡಾನ್‌ನಲ್ಲಿ ಈಜಿಪ್ಟ್ ಆಕ್ರಮಿಸಿತು. ಸುಡಾನ್‌ನಲ್ಲಿ ಈಗ ಮುಸ್ಲಿಮರು ಸಕ್ರಿಯರಾಗಿದ್ದರು ಮತ್ತು ಇಡೀ ಜನಸಮುದಾಯ ಇಸ್ಲಾಂಗೆ ಪರಿವರ್ತಿತವಾಯಿತು. ನೈಜೀರಿಯಾದಲ್ಲಿ ಹೌಸಾ ಅಮೀರರ ಭ್ರಷ್ಟ ಮತ್ತು ದುರ್ಬಲ ಆಳ್ವಿಕೆ ವಿರುದ್ಧ ಫುಲಾನಿ ಒಂದು ಜಿಹಾದ್ ದಂಗೆ ಮಾಡಿತು ಮತ್ತು ೧೮೦೪ ಮತ್ತು ೧೮೧೦ರಲ್ಲಿ ತಮ್ಮ