ನೋನಿ ಎಂಬ ಕಾಡು ಹಣ್ಣಿನ ಮೇಲೆ ಇಡೀ ಜಗತ್ತಿನ ಕಣ್ಣು ಬಿದ್ದಿದೆ. ವಿಶ್ವದ ೨೦ ದೇಶಗಳ ೪೪ ವಿಶ್ವ ವಿದ್ಯಾಲಯಗಳಲ್ಲಿ ಔಷಧೀಯ ಗುಣಗಳ ಬಗೆಗೆ ಸಂಶೋಧನೆ ನಡೆದಿದೆ. ನೋನಿಯ ಮಹತ್ವದ ಬಗೆಗೆ ಅಧ್ಯಯನ ನಡೆಸಿದ ಅಮೇರಿಕಾದ ಮೂವರು ವಿಜ್ಞಾನಿಗಳಾದ ಡಾ|| ರಾಬರ್ಟ್. ಎಫ್.ಫರ್ಟಗಾಟ್, ಡಾ||ಲೂಯಿಸ್ ಜೆ. ಇಗ್ನಾರೊ ಹಾಗೂ ಡಾ||ಫೆಂದ ಮುರಾದ್ರಿಗೆ ೧೯೯೮ರಲ್ಲಿ ನೋಬಲ್ ಪುರಸ್ಕಾರ ದೊರಕಿದೆ. ವಿಜ್ಞಾನಿಗಳು ನೋನಿಯಲ್ಲಿ ಕಂಡಿದ್ದು ೧೫೦ ಸಸ್ಯಪೋಷಕಾಂಶಗಳು! ಮನುಷ್ಯ ಜೀವಕೋಶಗಳ ಆರೋಗ್ಯ ಸಂರಕ್ಷಣೆಗೆ ಅತ್ಯಗತ್ಯವಾದ ‘ನೈಟ್ರಿಕ್ ಆಕ್ಸೈಡ್‘ ಇದರಲ್ಲಿದೆ. ಮೊರಿಂಡಾ ಸಿಟ್ರಿಪೋಲಿಯಾ (Morinda citrifolia) ಎಂಬ ಸಸ್ಯ ಶಾಸ್ತ್ರೀಯ ಹೆಸರಿನಿಂದ ಕರೆಯಲ್ಪಡುವ ಈ ಸಸ್ಯಕ್ಕೆ ಆಯುರ್ವೇದದಲ್ಲಿ ವಿಶೇಷ ಸ್ಥಾನವಿದೆ. ಅಚುಕ, ಆಯುಷ, ತಗಟೆಮರ, ಕಂಬಲ ಪಂಡು, ವೆನ್ನುವ, ಬರ್ತುಂಡಿ ಹೀಗೆ ದೇಶಾದ್ಯಂತ ಮೂಲಿಕಾ ಪಂಡಿತರಿಗೆ ಪರಿಚಿತವಾಗಿದೆ. ಅಷ್ಟೇಕೆ Noni ಎಂದು ಗೂಗಲ್ದಲ್ಲಿ ನಾವು ಸರ್ಚ್ ಮಾಡಿದರೆ ೬೦ ಲಕ್ಷಕ್ಕಿಂತ ಅಧಿಕ ಇಂಟರ್ನೆಟ್ ಲಿಂಕ್ಗಳು ಕಾಣುತ್ತವೆ !
ನೋನಿ ನಮ್ಮ ನೆಲದ ಅಮೃತಫಲ, ಇದು ಆರೋಗ್ಯ ಸಂರಕ್ಷಣೆಗೆ ಅತ್ಯಗತ್ಯವಾದ ‘ನೈಟ್ರಿಕ್ ಆಕ್ಸೈಡ್‘ ಆಗರ!. ರಕ್ತಶುದ್ದೀಕರಣ, ರೋಗನಿರೋಧಕ ಶಕ್ತಿ, ಜೀವಕೋಶಗಳಿಗೆ ಮರುಚೈತನ್ಯ, ಮಾನಸಿಕ ಒತ್ತಡ ನಿವಾರಣೆ, ಚರ್ಮ ಹಾಗೂ ಕೂದಲಿನ ಆರೋಗ್ಯ ರಕ್ಷಣೆ, ಎಕಾಗ್ರತೆ, ಜ್ಞಾಪಕಶಕ್ತಿ, ಜೀರ್ಣಶಕ್ತಿ, ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ದಿವ್ಯಗುಣಗಳಿವೆ. ದಿನದಿಂದ ದಿನಕ್ಕೆ ನೋನಿ ಬೇಡಿಕೆ ಹೆಚ್ಚಿದೆ. ನೋನಿಯ ನಿರಂತರ ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧೀ ಕಾಯಿಲೆ, ಮಧುಮೇಹ, ಕೀಲುನೋವು, ಋತುಸ್ರಾವ ಸಮಸ್ಯೆ, ಚರ್ಮರೋಗ, ಉಬ್ಬಸ, ಅಲರ್ಜಿಗಳ ನಿಯಂತ್ರಣ ಸಾಧ್ಯವೆಂಬುದು ಅನುಭವಿಗಳ ಮಾತು.
ಇಂದು ದೇಶ ವಿದೇಶಗಳ ಬೃಹತ್ ಕಂಪನಿಗಳು ನೂರಾರು ನಮೂನೆಯ ನೋನಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿವೆ. ನಮ್ಮ ಆಹಾರ ವೈದ್ಯ ಪರಂಪರೆಯ ಜ್ಞಾನ ಬಳಸಿ ನಾವು ಆಯುರ್ ನೋನಿಯನ್ನು ಸಿದ್ದಗೊಳಿಸಿದ್ದೇವೆ. ಕಳೆದ ಮೂರು ತಲೆಮಾರುಗಳಿಂದ ಕೇರಳ ಮೂಲದ ನಂಬಿಯಾರ್ ಬಾರಕೂರ್ ಮನೆತನದ ಪಾರಂಪರಿಕ ಆಯುರ್ವೇದ ಪದ್ದತಿಯಲ್ಲಿ ಇದು ಸಿದ್ದಗೊಂಡಿದೆ. ಕುಂದಾಪುರದ ಆಜ್ರಿಯ ಸಾವಯುವ ತೋಟದಲ್ಲಿ ಬೆಳೆದ ನೋನಿ ಹಣ್ಣುಗಳನ್ನು ಬಳಸಿ ಅಮೃತಬಳ್ಳಿ, ಅಶ್ವಗಂಧ, ಶತಾವರಿ, ಬ್ರಾಹ್ಮಿಗಳ ಸಮ್ಮಿಶ್ರಣದ ಈ ಪೇಯ ಆರೋಗ್ಯ ಸಂವರ್ಧನೆಯ ದಿವ್ಯಾಸ್ತ್ರವಾಗಿದೆ.
Leave A Comment