ಈ ಆಳೋ ನನ್ನ ಮಕ್ಕಳಿಗಿ ಏನಾಗೇತಿ? ಏನಾಗೇತಿ?
ತಿಳಕೋಬೇಕಂತೀನಿ ಯಾರು ತಿಳಸ್ತೀರಿ? ಯಾರು ತಿಳಸ್ತೀರಿ?
ಅವರ ತಲೀಮ್ಯಾಲೊಂದ ಟೊಪ್ಪಿಗೈತಿ ಟೊಪ್ಪಿಗೈತಿ
ಅದನ್ನ ಕಂಡರ ನನಗ ಆಗಾಣಿಲ್ಲ ತಗಿ ಆಗಾಣಿಲ್ಲ ತಗಿ
ಅದನ್ನ ಎಲ್ಲರೂ ನೋಡಲೆಂತ ತಲೀಕಡೆ ನೋಡತಾರ ತಲೀಕಡೆ ನೋಡತಾರ      ೧೦
ಮುಂದ ಇದ್ದವರಿಗಿ ಡಿಕ್ಕಿ ಹೊಡೀತಾರ ಡಿಕ್ಕಿ ಹೊಡೀತರ
ಸುಳ್ಳಲ್ಲ ಟೊಪ್ಪಿಗಿ ಚಂದ ಐತೀ ಖರೆ! ಚಂದ ಐತೀ ಖರೆ!
ಆದರ ಕಂಡವರಿಗೆಲ್ಲಾ ಡಿಕ್ಕೀ ಯಾಕ ಹೊಡೀಬೇಕು? ಡಿಕ್ಕೀ ಯಾಕ ಹೊಡೀಬೇಕು?

ಹೊಡಿಸಿಕೊಂಡಿವಿ ಡಿಕ್ಕೀ ಹೊಡಿಸಿಕೊಂಡಿವಿ
ಅಥವಾ ಇನ್ನೇನ ಹೊಡಿಸಿಕೊಬೇಕಂತ ನಿಂತೀವಿ?
ತಿಳೀಧಾಂಗ ಆಗೇತಿ ಯಾರು ತಿಳಸ್ತೀರಿ? ಯಾರು ತಿಳಸ್ತೀರಿ?                ೨೦