ಪಲ್ಲವಿ : ಆರತಿ ಬೆಳಗಿರಿ ದಾರಿ ದೀಪನಿಗೆ
ದ್ವಾರಕಾಧೀಶಗೆ ದೊರೆಗಳ ದೊರೆಗೆ

ಚರಣ :  ಮನ್ಮಥ ಪಿತನಿಗೆ ಅತಿರಥ ರಥನಿಗೆ
ಪಾರ್ಥಸಾರಥಿಗೆ ಶ್ರೀಹರಿ ಕೃಷ್ಣಗೆ   

ದ್ರೌಪದಿ ರಕ್ಷಕ ದುಷ್ಟ ಶಿಕ್ಷಕ
ದುರಿತ ನಿವಾರಕ ದೋಷ ದೂರನಿಗೆ

ರುಕ್ಮಿಣಿ ವಲ್ಲಭ ಆತ್ಮಾರಾಮಗೆ
ಸುಂದರ ಸುರವರ ಜಗನ್ಮೋಹನಗೆ

ಗೋಪೀ ಜನಪ್ರಿಯ ಗೋವರ್ಧನ ಧರ
ಯಶೋಧ ನಂದಗೆ ದೇವಕಿ ಬಾಲಗೆ

ಕೆಂಪು ನೀರಿನ ಆರತಿ ಎತ್ತಿರಿ
ಮಂಗಳ ಮೂರ್ತಿಗೆ ಜಯ ಜಗಪಾಲೆಗೆ