ಜನನ : ೧೪-೩-೧೯೩೮ ಉಡುಪಿಯಲ್ಲಿ

ಮನೆತನ : ಸುಸಂಸ್ಕೃತ ಕಲಾವಿದರ ಮನೆತನ ತಂದೆ ಡಿ. ರಂಗರಾವ್ ಯಕ್ಷಗಾನ ಕಲಾವಿದರು.

ಗುರುಪರಂಪರೆ : ಸಂಗೀತವನ್ನು ಪ್ರೊ|| ವಿ. ರಾಮರತ್ನಂ ಹಾಗೂ ದಿಂಡಿಗಲ್ ಎಸ್.ಪಿ.ನಟರಾಜನ್ ಅವರಲ್ಲಿ ಅಭ್ಯಾಸ ಮಾಡಿದ್ದಾರೆ. ಕೆಲವು ಕಾಲ ವಿ. ಎಸ್. ರಾಮಚಂದ್ರರಾವ್ ಅವರಲ್ಲೂ ಶಿಕ್ಷಣ ಪಡೆದಿದ್ದಾರೆ.

ಸಾಧನೆ : ಕಳೆದ ೫೦ ವರ್ಷಗಳಿಂದಲೂ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ ಧಾರವಾಡಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುತ್ತಾರೆ. ಧಾರವಾಡ ಮೈಸೂರು, ಬೆಂಗಳೂರು ಆಕಾಶವಾಣಿ ಕೇಂದ್ರಗಳಿಂದಲೂ ಇವರ ಗಾಯನ ಪ್ರಸಾರವಾಗಿವೆ. ಆಕಾಶವಾಣಿಯ ಕೆಲವು ರೂಪಕಗಳಲ್ಲೂ ಪಾತ್ರವಹಿಸಿದ್ದಾರೆ. ಅನೇಕ ಮಕ್ಕಳ ಕಾರ್ಯಕ್ರಮಗಳನ್ನು ನಿರ್ದೇಶಿಸಿದ್ದಾರೆ. ೧೯೬೮ ರಲ್ಲಿ ಕೇಂದ್ರ ನಾಟಕ ಅಕಾಡೆಮಿಯ ವಿದ್ಯಾರ್ಥಿ ವೇತನ ಲಭಿಸಿತ್ತು.

ಪ್ರಶಸ್ತಿ – ಸನ್ಮಾನ : ಮೈಸೂರಿನ ಬಿಡಾರಂ ಕೃಷ್ಣಪ್ಪನವರ ರಾಮ ಮಂದಿರದಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ. ೧೯೯೯ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿಗಳು ಇವರಿಗೆ ಸಂದಿವೆ.