ತಬಲಾ ವಾದಕರಾಗಿ ಹಾಗೂ ತಬಲಾ, ಮೃದಂಗವಾದ್ಯ ತಯಾರಕರಾಗಿ ಹೆಸರು ಗಳಿಸಿರುವ ಶ್ರೀ. ಆರ್. ಎಸ್. ಅನಂತರಾಮಯ್ಯನವರು ಕನ್ನಡನಾಡು ಕಂಡ ಅಪರೂಪದ ಕಲಾವಿದರಲ್ಲೊಬ್ಬರು. ೧೯೩೮ ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬಳ್ಳಾಪುರ ತಾಲೂಕು, ರಾಜಘಟ್ಟದಲ್ಲಿ ದಶಕಗಳಿಂದ ತಾಳವಾದ್ಯ ತಯಾರಿಕೆಯಲ್ಲಿ ಜನಿಸಿದ ಶ್ರೀ ಆರ್. ಎಸ್. ಅನಂತರಾಮಯ್ಯ ಅವರು ಸುಮಾರು ನಾಲ್ಕು ದಶಕಗಳಿಂದ ತಾಳವಾದ್ಯ ತಾಳವಾದ್ಯ ತಯಾರಿಕೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರು ತಯಾರಿಸಿದ ಮೃದಂಗ, ತಬಲಾ, ಖಂಜರ ಮುಂತಾದ ತಾಳ ವಾದ್ಯಗಳನ್ನು ನಮ್ಮ ರಾಜ್ಯದ ಬಹುತೆಕ ಎಲ್ಲಾ ಹಿರಿಯ ವಿದ್ವಾಂಸರುಗಳು ಬಳಸುತ್ತಿದ್ದಾರೆ.

ಗುರು ಶ್ರೀ ನರಸಿಂಹಯ್ಯನವರ ಬಳಿ ಹಲವು  ವಷðಗಳ ಕಾಲ ತಬಲಾ ನುಡಿಸುವುದನ್ನು ಕಲಿತು, ಸಂಗೀತ, ನಾಟಕ, ನೃತ್ಯ, ಹರಿಕಥೆಗಳಿಗೆ ಪಕ್ಕವಾದ್ಯ ನುಡಿಸುತ್ತಲೇ ವಾದ್ಯ ತಯಾರಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡು, ಮೃದಂಗ ವೆಂಕಟಪ್ಪನವರ ಬಳಿ ಮೃದಂಗ ಮತ್ತು ತಬಲಾ ತಯಾರಿಸುವುದನ್ನು ಕುರಿತು ನಂತರ ತಮ್ಮ ಸ್ವಂತ ತಯಾರಿಕಾ ಘಟಕವನ್ನು ಸ್ಥಾಪಿಸಿದರು. ಅಂದು ಪ್ರಾರಂಭವಾದ ಅನಂತರಾಮಯ್ಯನವರ ಈ ಕಾರ್ಯ ಇಂದಿಗೂ ನಡೆಯುತ್ತಲೇ ಬಂದಿದೆ.

೧೯೬೩ ರಲ್ಲಿ ಘಾಟಿ ಸುಬ್ರಹ್ಮಣ್ಯಸ್ವಾಮಿ ಜಾತ್ರೆಯಲ್ಲಿ ಉತ್ತಮ ತಬಲಾಗಳನ್ನು ಪ್ರದರ್ಶಿಸಿ. ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯಿಂದ ಪ್ರಶಸ್ತಿ ಪಡೆದ ಶ್ರೀಯುತರಿಗೆ ಶ್ರೀ ವಿದ್ಯಾಗಣಪತಿ ಭಕ್ತಮಂಡಲಿ, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ, ಬೆಂಗಳೂರು ಆಕಾಶವಾಣಿ, ಶ್ರೀ ವಾಣಿ ಕಲಾಸಂಘ, ಶ್ರೀ ದುರ್ಗಾಪರಮೇಶ್ವರಿ ನೃತ್ಯ ನಿಕೇತನ ಮುಂತಾದ ಸಂಸ್ಥೆಗಳಿಂದ ಗೌರವ ಪುರಸ್ಕಾರಗಳು ಸಂದಿವೆ. ಅಲ್ಲದೇ ಶ್ರೀ ಗುರುರಾಘವೇಂದ್ರ ಸ್ವಾಮಿ ಟ್ರಸ್ಟಿನಿಂದ ‘ಲಯವಾದ್ಯ ಭೂಷಣ’, ಶ್ರೀ ತ್ಯಾಗರಾಜ ಗಾನಸಭಾದಿಂದ ‘ಲಲಿತ ಕಲಾಭೂಣ’ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ “ಕರ್ನಾಟಕ ಕಲಾಶ್ರೀ” (೧೯೯೯-೨೦೦೦) ಮುಂತಾದ ಪ್ರಶಸ್ತಿ ಅವರಿಗೆ ದೊರೆತಿವೆ.