೧೯೨೮ರಲ್ಲಿ ಜನಿಸಿದ ಶ್ರೀ ಆರ್. ಎಸ್. ಮಣಿ ಬಹಳ ಅಪರೂಪವಾದ ವಸ್ತ್ರಾಲಂಕಾರವನ್ನು ವೃತ್ತಿಯನ್ನಾಗಿಸಿ ಸ್ವೀಕರಿಸಿ ಈವರೆಗೆ ನಡೆಸಿಕೊಂಡು ಬಂದಿರುವ ಸಾಧಕರು.

ಈ ಉದ್ಯೋಗದಲ್ಲಿ ಶ್ರೀಯುತರಿಗೆ ಐವತ್ತು ವರ್ಷಗಳಿಗೂ ಮಿಕ್ಕಿದ ಅನುಭವವಿದೆ. ಮೊದಲು ಸಿನಿಮಾ ಮತ್ತು ನಾಟಿಕಗಳಿಗೆ ಉಡುಗೆಗಳನ್ನು ವಿನ್ಯಾಸ ಮಾಡುತ್ತಿದ್ದ ಮಣಿ ನಂತರ ತಮ್ಮ ಸೇವೆಯನ್ನು ನೃತ್ಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡರು.

ನೃತ್ಯ ಕಲಾವಿದರ ಶಾರೀರಿಕ ನಿಲುವು ಆಧರಿಸಿ ಉಡುಗೆ ತಯಾರಿಸುವುದು ಬಹಳ ಜವಾಬ್ದಾರಿಯುತ ಕೆಲಸ. ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮಣಿ ಅವರ ಉಡುಗೆಗಳು ನೃತ್ಯ ಕ್ಷೇತ್ರದಲ್ಲಿ ಬಹಳ ಹೆಸರು ಮಾಡಿವೆ.

ನೃತ್ಯ ಕ್ಷೇತ್ರದ ಸುಮಾರು ನಾಲ್ಕು ತಲೆಮಾರಿನ ಕಲಾವಿದರು ಮಣಿ ಅವರು ಸಿದ್ಧಪಡಿಸದ ಉಡುಗೆಗಳನ್ನು ಒದಗಿಸುತ್ತಿರುವ ಮಣಿಯವರಿಗೆ ೨೦೦೦-೦೧ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.