ಜನನ : ೧೦.೬.೧೯೪೫

ಮನೆತನ : ಸಂಗೀತಾಸಕ್ತರ ಹಾಗೂ ಕಲಾವಿದರ ಮನೆತನ.

ಗುರುಪರಂಪರೆ : ಚೌಡಯ್ಯನವರ ಸಹೋದರರಾದ ವಿ|| ಟಿ. ಪುಟ್ಟಸ್ವಾಮಯ್ಯನವರಲ್ಲಿ ಕರ್ನಾಟಕ ಸಂಗೀತದಲ್ಲಿ ಶಿಕ್ಷಣ. ಮುಂದೆ ಸುಗಮ ಸಂಗೀತದ ಕಡೆ ಒಲವು. ಆಗ ಆ ಕ್ಷೇತ್ರಕ್ಕೆ ಇವರನ್ನು ಪರಿಚಯಿಸಿದವರು ವಿ|| ನಾರಾಯಣಸ್ವಾಮಿಯವರು.

ಸಾಧನೆ : ಹಾರ್ಮೋನಿಯಂ, ಕೊಳಲು, ಕೀಬೋರ್ಡ್‌ವಾದ್ಯಗಳನ್ನು ನುಡಿಸುವ ಪರಿಶ್ರಮ ಉಳ್ಳ ವೆಂಕಟೇಶಮೂರ್ತಿ ಅವರು ೧೯೬೭ ರಲ್ಲಿ ಲಘು ಸಂಗೀತ ಕಾರ್ಯಕ್ರಮವೊಂದಕ್ಕೆ ಹಾರ್ಮೋನಿಯಂ ನುಡಿಸುವುದರ ಮೂಲಕ ರಂಗಪ್ರವೇಶ. ಅನಂತರದಲ್ಲಿ ಅನೇಕ ದಿಗ್ಗಜರ ಸಂಗೀತ ಕಾರ್ಯಕ್ರಮಕ್ಕೆ ಪಕ್ಕ ವಾದ್ಯಗಳನ್ನು ನುಡಿಸುತ್ತಾ ಬಂದಿದ್ದಾರೆ. ಹಿರಿಯ ಜನಪದ ಗೀತೆಗಳ ಸಂಗ್ರಾಹಕರಾಗಿದ್ದ ಮತ್ತಿಘಟ್ಟ ಕೃಷ್ಣಮೂರ್ತಿಯವರ ಜೊತೆ ಜನಪದ ಗೀತೆಗಳ ಪ್ರಚಾರ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಉತ್ತಮ ರಾಗ ಸಂಯೋಜನಕರೂ ಕೂಡ. ಅಖಿಲ ಕರ್ನಾಟಕ ಮಕ್ಕಳ ಕೂಟದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ತರಬೇತುದಾರರಾಗಿ ಸೇವೆಯಲ್ಲಿದ್ದರು. ಉತ್ತಮ ಸ್ಕೌಟ್ ಎಂಬ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ಪ್ರಶಸ್ತಿ – ಸನ್ಮಾನ : ಯಶವಂತ ಹಳಿಬಂಡಿ ಅವರ ಬೇಂದ್ರ ಜನ್ಮ ಶತಮಾನೋತ್ಸವ ಗೌರವ. ಹೊಂಬಾಳೆ ಪ್ರತಿಭಾರಂಗದ ಕಲಾಕೋವಿದ ಪ್ರಶಸ್ತಿ, ಮುಂತದ ಸನ್ಮಾನ ಗೌರವಗಳಿಗೆ ಪಾತ್ರರಾದ ವೆಂಕಟೇಶಮೂರ್ತಿ ೧೯೯೯ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.