ಪಾಳ್ಯ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೨೨ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೫ ಕಿ.ಮೀ

ತಾಲ್ಲೂಕು ಕೇಂದ್ರ ಆಲೂರಿನಿಂದ ಪಶ್ಚಿಮಕ್ಕೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪ ೧೫ಕಿ.ಮೀ ಅಂತರದಲ್ಲಿರುವ ಹೋಬಳಿ ಕೇಂದ್ರ ಪಾಳ್ಯ. ಇಲ್ಲಿ ಲಕ್ಷ್ಮಿ ಜನಾರ್ಧನ, ರಾಮೇಶ್ವರ ೪ ತ್ರಿಪುರಾಂತಕೇಶ್ವರ ದೇವಾಲಯಗಳು ಇವೆ. ಲಕ್ಷ್ಮೀ ಜನಾರ್ಧನ ದೇವಾಲಯವನ್ನು ಸುಮಾರು ಹದಿನಾಲ್ಕನೇ ಶತಮಾನದ ಪ್ರಾರಂಭದಲ್ಲಿ ಕಟ್ಟಿಸಿರಬಹುದೆಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಪಾಳೆಗಾರರು ಇಲ್ಲಿ ಆಳ್ವಿಕೆ ನಡೆಸಿರುವರೆಂಬುದಕ್ಕೆ ಇಲ್ಲಿ ದೊರೆತ ಪಳೆಯುಳಿಕೆಗಳು ಸಾಕ್ಷಿಯಾಗಿವೆ.

ಪುರಾತನ ಪುರಾಣ ಪ್ರಸಿದ್ಧಿ ಪಡೆದ ಆಗಿನ ಪೂರ್ವದಲ್ಲಿನ ‘ಪದ್ಮಾವತಿ’ ಪುರ ಎಂಬ ಪಟ್ಟಣದಲ್ಲಿ ‘ವಿತಂಕ’ ನೆಂಬ ರಾಕ್ಷಸನು ಸೈನ್ಯ ಸಮೇತ ವಾಸವಾಗಿದ್ದನು. ಇವನು ಮುಂದೆ ರಾಮನಾಥಪುರದಲ್ಲಿ ದೇವರನ್ನು ಕುರಿತು ಘನ ಘೋರವಾದ ತಪಸ್ಸನ್ನು ಮಾಡುವಾಗ ಅವನ ತಲೆಯಲ್ಲಿ ಹೊಗೆ ಬರಲು ಪ್ರಾರಂಭವಾದಾಗ ರಾಮೇಶ್ವರ ದೇವರು ಪ್ರತ್ಯಕ್ಷನಾಗಿ ಏನು ವರಬೇಕೆಂದು, ಕೇಳು ಎಂದಾಗ, ‘ವಿತಂಕ’ನು ಎಲ್ಲರಿಗಿಂತಲೂ ಉನ್ನತ ಮಟ್ಟದವನಾಗಬೇಕೆಂದು ಕೇಳಿದನು.

ಪಾಳ್ಯ ಭಕ್ತನ ಕೋರಿಕೆ ಈಡೇರಿಸುವ ಸಲುವಾಗಿ ಹಾಗೇ ಆಗಲೆಂದು ದೇವರು ಅನುಗ್ರಹ ನೀಡಿದನು. ಆ ವರದ ಬಲದಿಂದ ಗರ್ವಿತವಾದ ರಾಕ್ಷಸನು ಸೈನ್ಯ ಸಮೇತ ಮಹಾವಿಷ್ಣುವಿನ ಮೇಲೆ ಯುದ್ಧಕ್ಕೆ ಹೊರಡಲು ಸಿದ್ದನಾದನು.

ಯುದ್ಧದಲ್ಲಿ ಮಹಾವಿಷ್ಣುವು ತನ್ನ ಸುದರ್ಶನ ಚಕ್ರದ ಸಹಾಯದಿಂದ “ವಿತಂಕ” ರಾಕ್ಷಸನನ್ನು ಸಂಹಾರ ಮಾಡಿ ಪಾಳ್ಯದಲ್ಲಿ ಅರ್ಚನಾ ರೂಪವನ್ನು ಸ್ವೀಕರಿಸಿದನು, ಹಾಗೂ ಇಂದ್ರನಿಗೆ ಬಂದ ಬ್ರಹ್ಮಾಹತ್ಯಾ ದೋಷವನ್ನು ಹೋಗಲಾಡಿಸಿಕೊಳ್ಳಲು ಇಲ್ಲಿ ಬಂದು ಶ್ರೀ ಜನಾರ್ಧನನ್ನು ಪೂಜಿಸಲಾಯಿತು. ಆದ್ದರಿಂದ ಇದಕ್ಕೆ ‘ಇಂದ್ರಪ್ರಸ್ತಪುರಿ’ ಎಂಬ ಹೆಸರು ಬಂದಿತು.

ಸಂತಾನವಿಲ್ಲದವರು ಇಲ್ಲಿನ ಸನ್ನಿದಿಯಾದ ಶ್ರೀ ಲಕ್ಷ್ಮೀ ಜನಾರ್ಧನ ಸ್ವಾಮಿಯ ಸೇವೆ ಮಾಡಿದರೆ, ಮಕ್ಕಳಾಗುತ್ತವೆಂದು ಪುರಾಣ ಪ್ರಸಿದ್ಧಿ ಪಡೆದಿದೆ.

ಪ್ರವರ್ಷ ಪಾಲ್ಗುಣ ಮಾಸದಲ್ಲಿ ಜಾತ್ರೆ ನಡೆಯುತ್ತದೆ. ಊರಿನ ಮುಂಭಾಗದ ಸ್ವಲ್ಪ ದೂರದಲ್ಲಿ ಶಂಕರತೀರ್ಥ ಮತ್ತು ಚಕ್ರತೀರ್ಥ ಎಂಬ ಎರಡು ಹಳ್ಳಗಳು ಕೂಡಿ ‘ಪದ್ಮಾವತಿ’ ಎಂಬ ಹೆಸರಿನ ಹೊಳೆ ಹರಿಯುತ್ತದೆ. ದಂತಕತೆಗಳ ಪ್ರಕಾರ ಜಮದಗ್ನಿ ಋಷಿಯ ಆಶ್ರಮ ಈ ಊರಲ್ಲಿ ಇತ್ತೆಂದು ಹೇಳುತ್ತಾರೆ. ಈ ಪ್ರಾಂತ್ಯವನ್ನು ಹಿಂದೆ ಆಳುತ್ತಿದ್ದ ಪಾಳೆಗಾರ ಈ ಊರಲ್ಲಿ ನಿಕ್ಷೇಪ ದ್ರವ್ಯವನ್ನು ಇಟ್ಟು ಇದರ ಸುತ್ತಲೂ ಕೋಟೆ ಕಟ್ಟಿದ್ದಾನೆಂಬ ಪ್ರತೀತಿಯಿದೆ.

ಮರಸು :-

ಆಲೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ “ಮರಸು” ತಾಲೂಕು ಕೇಂದ್ರ ಆಲೂರಿನಿಂದ ಸುಮಾರು ೧.೫ಕಿ.ಮೀ ದೂರದಲ್ಲಿದೆ. ಮರಸು ಗ್ರಾಮದಲ್ಲಿ ಈಶ್ವರ, ಗಣಪತಿ, ದೇವಸ್ಥಾನಗಳು, ವಿಶೇಷವಾದ ಒಂದು ‘ಗರುಡ’ಗಂಬ ಇದೆ. ಈ ರೀತಿಯ ಗರುಡಗಂಬ ಕಾಶಿಯಲ್ಲಿ ಬಿಟ್ಟರೆ, ಭಾರತದಲ್ಲಿ ಎರಡನೆಯ ಕಂಬ ಇದಾಗಿದೆ.

ಈಶ್ವರ ದೇವಸ್ಥಾನದ ಒಳಗಡೆ ಕಲ್ಲಿನ ಮೇಲೆ ಹಳಗನ್ನಡದ ಶಾಸನಗಳು ಬರೆಯಲ್ಪಟ್ಟಿವೆ. ಸುತ್ತ ಮುತ್ತಲ ಪರಿಸರ ರಮಣೀಯವಾಗಿದೆ. ಈ ಊರು ಹಿಂದೆ ಪಾಳೆಗಾರರ ಆಡಳಿತಕ್ಕೆ ಒಳಪಟ್ಟಿತ್ತು ಎಂಬುದಕ್ಕೆ ಇಲ್ಲಿನ ಪಳೆಯುಳಿಕೆಗಳು ಸಾಕ್ಷಿಯಾಗಿವೆ. ಊರಿನ ಮುಂಭಾಗದಲ್ಲಿ ಕೋಟೆಯ ದಿಟ್ಟಿ ಬಾಗಿಲು ಈಗಲೂ ಇದೆ.

 

ವಾಟೆಹೊಳೆ :-

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೩೦ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೪ ಕಿ.ಮಿ

ಆಲೂರು ತಾಲ್ಲೂಕಿನ ಸೌಂದರ್ಯ ತುಸು ಹೆಚ್ಚಿಸಿದ ಕೀರ್ತಿ ‘ವಾಟೆಹೊಳೆ’ ಯಾಗಿದೆ. ಅಲ್ಲದೇ ವಾಟೆಹೊಳೆ ತಾಲ್ಲೂಕಿನಲ್ಲಿ ಏಕೈಕ ಡ್ಯಾಂ ಆಗಿದೆ.

ಇದು ಮೂಲತಃ ಬೇಲೂರು ತಾಲ್ಲೂಕಿನ ನಾಗೇನಹಳ್ಳಿ ಬಳಿ ಹುಟ್ಟಿ ಬೇಲೂರು ತಾಲ್ಲೂಕಿನ ಗಡಿ ಹೊಂದಿಕೊಂಡಂತೆ ಎತ್ತರ ಭಾಗದಲ್ಲಿ ಹರಿದು ಬರುತ್ತವೆ. ಆಲೂರು ತಾಲ್ಲೂಕಿನ ವಾಟೆಹೊಳೆ ಎಂಬಲ್ಲಿ ಇದಕ್ಕೆ ಅಣೆಕಟ್ಟನ್ನು ಕಟ್ಟಲಾಗಿದೆ. ಇದರ ಎಡದಂಡೆ & ಬಲದಂಡೆ ಕಾಲುವೆಗಳು ತಾಲ್ಲೂಕಿಗೆ ರೈತರಿಗೆ ವರದಾನವಾಗಿದೆ.

ಆಲೂರುನಿಂದ ಸುಮಾರು ೧೪ಕಿ.ಮೀ ದೂರದಲ್ಲಿರುವ ವಾಟೆಹೊಳೆ ಜಲಾಶಯ ಸುಂದರ ಪ್ರಕೃತಿಯ ಮಡಿಲಲ್ಲಿ ರಮಣೀಯತೆ ಮೆರೆದಿದೆ. ಮುಂದೆ ಈ ನದಿಯು ಜನ್ನಾಪುರ ಬಳಿ ಯಗಚಿ ನದಿ ಸೇರುತ್ತದೆ. ಇಲ್ಲಿನ ಬಲದಂಡೆ ಕಾಲುವೆ ತಾಳೂರು ಮಾರ್ಗವಾಗಿ ಸಾಗಿ ಸುಮಾರು ೪೦ ಕಿ.ಮೀ ದೂರದುದ್ದಕ್ಕೂ ಸಾಗಿ ಚನ್ನಾಪುರ ಬಳಿ ಹೇಮಾವತಿ ಸೇರುತ್ತದೆ

 

ಮಹಾರಾಜನ ದುರ್ಗ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೩೨ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೫ ಕಿ.ಮೀ

ತಾಲ್ಲೂಕು ಕೇಂದ್ರವಾದ ಆಲೂರಿನಿಂದ ಸುಮಾರು ೨೫ ಕಿ.ಮೀ ದೂರದ ಮಗ್ಗೆ ಸಮೀಪ ಕಾಫಿ ತೋಟಗಳು ಕಾಡು-ಮೇಡುಗಳ ಮಧ್ಯೆ ಸುಮಾರು ಎರಡು ಕಿ.ಮೀ ಮುಂದೆ ಹೋದರೆ ಏಕಶಿಲಾ ಬೆಟ್ಟದ ದರ್ಶನವಾಗುತ್ತದೆ.

ನಯನ ಮನೋಹರವಾಗಿ ಪರಿಮಳಿಸುವ ಕಾಫಿ ತೋಟಗಳು, ಭತ್ತದ ಗದ್ದೆಗಳು, ಹರ್ಷೋಲ್ಲಾಸ ನೀಡುವ ಸುಂದರ ಸೃಷ್ಟಿಯ ಅಂದಕ್ಕೆ ಮೆರಗು ನೀಡಿ ಚೆಲುವ ದ್ವಿಗುಣಗೊಳಿಸಿ ಅಲ್ಲಲ್ಲಿ ಕಲರವಿಸುವ ಕಿರುತೊರೆಗಳು ದೃಷ್ಠಿಯ ಎಲ್ಲೆಗೆ ಸಿಗುತ್ತವೆ. ಸುತ್ತಲಿನ ಬೆಟ್ಟಗಳು ಚೆಲುವಾದ ರಮಣೀಯ ಮೆಟ್ಟಿಲುಗಳೊಂದಿಗೆ ಹಚ್ಚ ಹಸುರಿನ ಸೆರಗೊದ್ದ ಗುಡ್ಡವೇ ಪಾರ್ವತಮ್ಮನ ಗುಡ್ಡವಾಗಿದೆ.

ಗುಡ್ಡದ ಮೇಲೇರಿದರೆ ಪೂರ್ವಕ್ಕೆ ಮಲೆನಾಡಿ ನಂಚಿನಲ್ಲಿ ಅಕರ್ಷಕಕೃತಿಯ ಕಡಿದಾದ ಏಕಶಿಲಾ ಬೆಟ್ಟವಾದ ಮಹಾರಾಜನ ದುರ್ಗ, ಪಶ್ಚಿಮಕ್ಕೆ ಪಶ್ಚಿಮ ಘಟ್ಟಗಳ ಶ್ರೇಣಿ, ಅಕ್ಕ-ಪಕ್ಕದಲ್ಲಿ ಕಾಫಿ ತೋಟಗಳು, ಬೆಟ್ಟದ ಬುಡದಲ್ಲಿ ದಟ್ಟವಾದ ಕಾಡಿದೆ. ಈ ಕಾಡಿನ ಪೊದೆಗಳಲ್ಲಿ ಅಥವಾ ದಿಮ್ಮಿಗಳಂತಹ ಪೊಟರೆಗಳಲ್ಲಿ ಕಾಡು ಹಂದಿ, ನವಿಲು, ಕರಡಿ ಮುಂತಾದ ಪ್ರಾಣಿಗಳು ವಾಸವಾಗಿವೆ.

ಅಲ್ಲಿಂದ ಮುಂದೆ ಬೆಟ್ಟದ ಮೇಲೆ ಈಶ್ವರ -ಪಾರ್ವತಿಯರ ದೇವಸ್ಥಾನವಿದೆ. ಇಲ್ಲಿರುವ ಪಾರ್ವತಮ್ಮನ ವಿಗ್ರಹ ಸುಮಾರು ಆರು ಅಡಿ ಎತ್ತರವಿದ್ದು ನೋಡಲು ಸುಂದರವಾಗಿದೆ. ಈ  ದೇವಸ್ಥಾನ ಎದುರಿಗೆ ಮಹಾರಾಜ ದುರ್ಗವಿದೆ. ಸ್ಥಳೀಯ ದಂತಕತೆಗಳ ಪ್ರಕಾರ ಮಹಾರಾಜನ ದುರ್ಗ ಪ್ರದೇಶವನ್ನು ಆಳುತ್ತಿದ್ದ ರಾಜ ಬೆಟ್ಟದ ಮೇಲೆ ಇದ್ದ ತನ್ನ ಅರಮನೆಯಿಂದಲೇ ದೇವಿಯ ದರ್ಶನ ಪಡೆಯುತ್ತಿದ್ದಾನೆಂದು ಪ್ರತೀತಿಯಿದೆ.

ಬೆಟ್ಟದ ಕೆಳಗೆ ಮೂರು ಚಿಕ್ಕ ಚಿಕ್ಕ ಬಾವಿಗಳಿವೆ. ಶಿರವಿಲ್ಲದ ಬಸವಣ್ಣನ ವಿಗ್ರಹ, ಒಂದೇ ಬಂಡೆಯಲ್ಲಿ ವೀರಭದ್ರೇಶ್ವರ, ಸಿದ್ದೇಶ್ವರ ದೇವಾಲಯಗಳ ಜೊತೆಗೆ ಚಿಕ್ಕ, ಚಿಕ್ಕ ಬಾಗಿಲುಗಳುಳ್ಳ ಮೂರು ಆಶ್ರಮಗಳ ಅವಶೇಷಗಳು ಕಂಡುಬರುತ್ತವೆ. ಸುರಂಗಮಾರ್ಗ, ಮುನಿಗಳು ಯಾಗ ಮಾಡಿದರೆನ್ನಲಾದ ಗುಂಡಿಗಳು, ಮಂಟಪಗಳ ಅವಶೇಷಗಳು ಕಂಡುಬರುತ್ತವೆ.

ಸುತ್ತಮುತ್ತಲ ಪ್ರದೇಶದಲ್ಲಿ ಮಳೆ ಬಾರದೆ ಇದ್ದಾಗ, ಒಮ್ಮನಸ್ಸಿನಲ್ಲಿ ಭಯ-ಭಕ್ತಿಯಿಂದ ಪಾರ್ವತಿ ಹಾಗೂ ಈಶ್ವರ ಮೂರ್ತಿಗಳಿಗೆ ಅಭಿಷೇಕ ಮಾಡಿಸಿದರೆ ಮಳೆ ಬಂದೇ ಬರುತ್ತದೆ. ಎಂಬುದು ಇಂದಿಗೂ ಸ್ಥಳೀಯರ ಬಲವಾದ ನಂಬಿಕೆಯಿದೆ.

 

ಕೆಂಚಮ್ಮನ ಹೊಸಕೋಟೆ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೩೨ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೭ ಕಿ.ಮೀ

ಆಲೂರಿನಿಂದ ಸುಮಾರು ೨೭ ಕಿ.ಮೀ. ದೂರದಲ್ಲಿ ಬಾಳ್ಳುಪೇಟೆ ಸೋಮವಾರಪೇಟೆ ರಸ್ತೆಯಂಚಿನಲ್ಲಿರುವ ಹೋಬಳಿ ಕೇಂದ್ರ ಸ್ಥಾನವಾಗಿದ್ದು ಊರಿನ ಸುತ್ತಮುತ್ತಲಿನ ಪರಿಸರ ಕಾಫಿ, ಏಲಕ್ಕಿ ತೋಟಗಳಿಂದ ಘಮ ಘಮಿಸುತ್ತಾ ನೋಡುಗರ ನೇತ್ರಗಳಿಗೆ ರಮಣೀಯತೆಯನ್ನು ಉಣಬಡಿಸುತ್ತದೆ.

ಇಲ್ಲಿಂದ ೨ ಕಿ.ಮೀ. ದೂರದಲ್ಲಿ ಕೆಂಚಾಂಬಿಕಾ ದೇವಿಯ ದೇವಾಲಯವಿದೆ. ವರ್ಷದಲ್ಲಿ ಎರಡು  ಭಾರಿ ಸುತ್ತಮುತ್ತಲಿನ ೪೮ ಹಳ್ಳಿಯ ಜನರು ಒಟ್ಟಿಗೆ ಸೇರಿ ವಿಜೃಂಭಣೆಯಿಂದ ಜಾತ್ರೆ  ನಡೆಸುತ್ತಾರೆ. ಸ್ಥಳೀಯ ದಂತಕತೆಯ ಪ್ರಕಾರ ಕೆಂಚಾಂಬ ದೇವಿ ಸಪ್ತಮಾತೃಕೆಯಲ್ಲಿ ಒಬ್ಬಳೆಂದು ಹಾಗೂ ಹಾಸನದಲ್ಲಿ ಇರುವ ಹಾಸನಾಂಬೆಯ ಸಹೋದರಿ ಎಂದೂ ತಿಳಿದು ಬರುತ್ತದೆ. ರಕ್ತ ಬೀಜಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡುವಾಗ ದುರ್ಗಾ ದೇವತೆಗೆ ಸಹಾಯಕಳಾದಳೆಂದು ತಿಳಿದು ಬರುತ್ತದೆ.

ಕೆಂಚಾಂಬ ದೇವಿಯ ದೇವಸ್ಥಾನದ ಮೂರು ದಿಕ್ಕುಗಳಲ್ಲಿ ತ್ರಿಮೂರ್ತಿಗಳ ದೇವಸ್ಥಾನಗಳಿರುವುದೊಂದು ವಿಶೇಷ ಪೂರ್ವಕ್ಕೆ ಅರ್ಧ ಕಿ.ಮೀ. ದೂರದಲ್ಲಿ ಈಶ್ವರನ ದೇವಸ್ಥಾನ, ಪಶ್ಚಿಮಕ್ಕೆ ಸಿಂಧು ಬ್ರಹ್ಮನ ದೇವಾಲಯ, ದಕ್ಷಿಣಕ್ಕೆ ಶ್ರೀ ಕೃಷ್ಣ ದೇವಾಲಯಗಳು ಇವೆ.

ಇಲ್ಲಿ ಕೋಟೆಯೊಂದಿದ್ದು ಇದರೊಳಗೆ ನೀರಿನ ಕೊಳ, ವಿಭಿನ್ನ ರೀತಿಯ ಕೆತ್ತನೆ ವಿನ್ಯಾಸಗಳುಳ್ಳ ಆಂಜನೇಯ ದೇವಸ್ಥಾನ, ಗರುಡಗಂಬ, ಈಶ್ವರಲಿಂಗ, ನವಗ್ರಹ ವಿಗ್ರಹ, ಬಸವೇಶ್ವರ ದೇವಾಲಯಗಳಿವೆ. ಬೇಲೂರು ತಾಲ್ಲೂಕಿನ ಪ್ರಮುಖ ಸ್ಥಳಗಳು