(ಕ್ರಿ. ಶ. ೧೮೭೯-೧೯೫೫)
(ಸಾಪೇಕ್ಷತಾ ಸಿದ್ಧಾಂತ, ಪರಮಾಣು ಶಕ್ತಿ)

ಆಲ್ಬರ್ಟ್ ಐನ್ ಸ್ಟೀನ್ ೧೮೭೯ರಲ್ಲಿ ಜರ್ಮನಿಯ ಉಲ್ಮ್ ಎಂಬಲ್ಲಿ ಜನಿಸಿದರು. ಈತ ಯೆಹೂದ್ಯ ಜನಾಂಗದವ. ಹಿಟ್ಲರ್ ಅಧಿಕಾರಕ್ಕೆ ಬಂದ ಮೇಲೆ ಯಹೂದ್ಯರು ಆತನ ಪೀಡನೆಗೆ ಒಳಗಾಗಬೇಕಾಯಿತು. ಹಿಟ್ಲರನ ಹಿಂಸೆಯಿಂದ ತಪ್ಪಿಸಿಕೊಳ್ಳಲು ಅನೇಕ ವಿಜ್ಞಾನಿಗಳನ್ನೊಳಗೊಂಡು ಯಹೂದ್ಯರು ದೇಶ ಬಿಟ್ಟು ಹೋದರು. ಐನ್ ಸ್ಟೀನ್ ಸಂ. ರಾ. ಅಮೆರಿಕಕ್ಕೆ ಹೋಗಿ ಅಲ್ಲೇ ನೆಲೆಸಿದರು. ೧೯೪೦ರಲ್ಲಿ ಸಂ. ರಾ. ಅಮೆರಿಕಕ್ಕೆ ಹೋಗಿ ಅಲ್ಲೇ ನೆಲೆಸಿದರು. ೧೯೪೦ರಲ್ಲಿ ಸಂ. ರಾ. ಅಮೆರಿಕದ ಪೌರತ್ವವನ್ನು ಕೂಡ ಪಡೆದರು.
ಆಲ್ಬರ್ಟ್ ಐನ್ ಸ್ಟೀನ್ ಕ್ವಾಂಟಮ್ ಸಿದ್ಧಾಂತವನ್ನು ಫೋಟೋ ಇಲೆಕ್ಟ್ರಿಸಿಟಿಗೆ ಅನ್ವಯಿಸಲು ಸಾಧ್ಯವೆಂದು ತೋರಿಸಿಕೊಟ್ಟರು. ಅದಕ್ಕಾಗಿ ೧೯೨೧ರಲ್ಲಿ ಅವರಿಗೆ ನೊಬೆಲ್ ಪಾರಿತೋಷಕವನ್ನು ನೀಡಲಾಯಿತು. ಅವರು ಬ್ರೌನ್ ಅವರ ಚಲನ ಸಿದ್ಧಾಂತವನ್ನು ಗಣಿತ ಶಾಸ್ತ್ರೀಯವಾಗಿ ವಿಶ್ಲೇಷಿಸಿದರು.
ಸಾಪೇಕ್ಷತಾ ಸಿದ್ಧಾಂತವು ಆಲ್ಬರ್ಟ್ ಐನ್ ಸ್ಟೀನ್ ರ ಒಂದು ಬಹು ಮುಖ್ಯವಾದ ಸಾಧನೆಯಾಗಿದೆ. ಈ ಸಿದ್ಧಾಂತವು ಭೌತಶಾಸ್ತ್ರದಲ್ಲಿ ಒಂದು ಕ್ರಾಂತಿಕಾರಕ ಅಲೆಯನ್ನೇ ಎಬ್ಬಿಸಿತು. ಈ ಸಿದ್ಧಾಂತವೇ ಮುಂದೆ ಪರಮಾಣು ಬಾಂಬಿನ ಸಂಶೋಧನೆಗೆ ಕಾರಣವಾಯಿತು. ಪರಮಾಣು ಬಾಂಬಿನ ಸಂಶೋಧನೆಯ ಬಗ್ಗೆ ಪ್ರತಿಪಾದನೆ ಮಾಡಿ ಐನ್ ಸ್ಟೀನ್ ೧೯೩೯ರಲ್ಲಿ ಸಂ. ರಾ. ಅಮೆರಿಕದ ಅಧ್ಯಕ್ಷ ರೂಸ್ ವೆಲ್ಟರಿಗೆ ಪತ್ರ ಬರೆದಿದ್ದರು. ಆದರೆ ದ್ವಿತೀಯ ಜಾಗತಿಕ ಯುದ್ಧದಲ್ಲಿ ಆ ಬಾಂಬಿನಿಂದಾದ ಅನಾಹುತವನ್ನು ಕಂಡು ಆತ ಶಾಂತಿ ಸ್ಥಾಪನೆಗಾಗಿ ಶ್ರಮಿಸತೊಡಗಿದರು.
ಆಲ್ಬರ್ಟ್ ಐನ್ ಸ್ಟೀನ್ ೧೯೫೫ರಲ್ಲಿ ನಿಧನ ಹೊಂದಿದರು.