ಅವಕುಲವಾದರೇನು ಅವನಾದರೇನು ಆತ್ಮಭಾವವರಿತ ಮೇಲೆ || ಅ || || ಪ || ಹಸಿಕಬ್ಬು ಡೊಂಕಿರಲು ಅದರರಸ ಡೊಂಕೇನೋ | ವಿಷಯಾಸೆಗಳನೆ ಬಿಟ್ಟು ಹಸನಾದ ಗುರುಭಕ್ತಿ ಮಾಡೋ || ೧ || ನಾನಾವರ್ಣದ ಆಕಳು | ಅದು | ನಾನಾವರ್ಣದ ಕ್ಷೀರವೇನೋ | ಹೀನಕರ್ಮಗಳನು ಬಿಟ್ಟು | ಹಿಗ್ಗಿ | ಜ್ಞಾನವಾಲಿಸಿರೋ || ೨ || ಕುಲದಮೇಲೆ ಹೋಗಬೇಡ ಮನುಜ | ಕುಲವಿಲ್ಲ ಜ್ಞಾನಿಗಳಿಗೆ | ವರದ ಪುರಂದರ ವಿಠಲನ | ಪಾದವಸೇರಿ ಮುಕ್ತನಾಗೋ || ೩ ||