ಓ ಬನ್ನಿ, ಎಲ್ಲರು ಬನ್ನಿ
ರಾಧಾಪ್ರೇಮದ ಹೊಳೆ ಹರಿಯುತಿದೆ !
ಅತ್ತಲು ಇತ್ತಲು ಸುತ್ತಲು ಮುತ್ತಲು
ಶತಧಾರೆಯೊಳದು ಹರಿಯುತಿದೆ !

ಓ ಬನ್ನಿ, ಎಲ್ಲರು ಬನ್ನಿ,
ತಡಮಾಡಿದರದು ಬತ್ತುವುದು,
ಈಗಲೆ ಬಂದರೆ ಬಿಂದಿಗೆ ತಂದರೆ
ಬಯಸಿದಷ್ಟು ಅದು ದೊರಕುವುದು.

ಓ ಬನ್ನಿ, ಎಲ್ಲರು ಬನ್ನಿ,
ತಡ ಮಾಡದೆ ಬನ್ನಿ,
ಎಲ್ಲರಿಗಾಗಿಯೆ ಹರಿದಿದೆ ಬನ್ನಿ
ಈ ರಾಧೆಯ ಹೃದಯ !
ಬ್ರಹ್ಮಾನಂದದಿ ಮೀಯಲು ಬನ್ನಿ,
ಎಲ್ಲಾ ಅವಳ ದಯ.

ಓ ಬನ್ನಿ, ಎಲ್ಲರು ಬನ್ನಿ,
ಹರಿನಾಮವ ನುತಿಸಲು ಬನ್ನಿ,
ರಾಧಾಪ್ರೇಮದ ಹೊಳೆ ಹರಿಯುತಿದೆ
ಶತಧಾರೆಯೊಳದು ಹರಿಯುತಿದೆ !