ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್‌. ಜೆ. ಲಕ್ಕಪ್ಪಗೌಡ, ಕುಲಸಚಿವ ಡಾ. ಕೆ. ವಿ. ನಾರಾಯಣ, ಪ್ರಸಾರಾಂಗದ ನಿರ್ದೇಶಕ ಡಾ. ಹಿ. ಚಿ. ಬೋರಲಿಂಗಯ್ಯ ಮೊದಲಾದವರ ಆಸಕ್ತಿಯ ಫಲವಾಗಿ ಈ ಕೃತಿ ಬೆಳಕು ಕಾಣುತ್ತಿದೆ. ಅವರಿಗೆ ವಂದನೆಗಳು.

ಪ್ರಸಾರಾಂಗದ ಸಹಾಯಕ ನಿರ್ದೇಶಕ ಸುಜ್ಞಾನಮೂರ್ತಿಯವರ ಶ್ರದ್ಧೆಯ ಫಲವಾಗಿ ಇಷ್ಟು ಸುಂದರವಾಗಿ ಹೊರಬಂದಿದೆ. ಅವರಿಗೆ ನೆನಕೆಗಳು.

ಒಂದಲ್ಲ ಒಂದು ರೀತಿ ಸಹಕರಿಸಿದ ಡಾ. ಕರೀಗೌಡ ಬೀಚನಹಳ್ಳಿ, ಟಿ. ಆರ್‌. ಚಂದ್ರಶೇಖರ, ಡಾ. ಯು. ಆರ್‌. ಅನಂತಮೂರ್ತಿ ಮೊದಲಾದವರನ್ನು ನೆನೆಯಬೇಕು.

ಒತ್ತಾಸೆಯಾಗಿ ನಿಂತ ಮಣಿಪಾಲದ ‘ಮಾಹೆ’ ಕುಲಪತಿ ಡಾ. ಬಿ. ಎಂ. ಹೆಗ್ಡೆ ಮತ್ತು ಮಂಗಳೂರಿನ ಡಾ. ಮದನಮೋಹನ ನಾಯಕ್‌ ಅವರ ಸ್ಮರಣೆ ಒಂದು ರೀತಿಯಲ್ಲಿ ಕರ್ತವ್ಯ.

ಈ ಕೃತಿಯ ಬರವಣಿಗೆ ಕಾಲದಿಂದ ಪ್ರಕಟಣೆ ಕಾಣುವವರೆಗೂ ಬೆಂಬಲವಾಗಿ ನಿಂತ ಹಿರಿಯ ಕವಿ, ವಿಮರ್ಶಕ, ಅನುವಾದಕ ಡಾ. ಡಿ. ಎ. ಶಂಕರ್‌ ಅವರನ್ನು ನೆನೆಯುವುದು ಎಂದರೆ ಒಳಿತಿಗಾಗಿ ಹಾರೈಸುವ ಬದುಕಿನ ಹಿರಿಯ ಪರಂಪರೆಗೆ ಸಲ್ಲಬೇಕಾದ ಗೌರವ ಸಲ್ಲಿಸುವುದು ಎಂದೇ ಅರ್ಥ. ಈ ಕೃತಿ ಬರೆಯುವ ಐಡಿಯಾ ಬರಲು ಪರೋಕ್ಷವಾಗಿಯಾದರೂ ಕಾರಣರಾದ ಕೆ. ಎನ್. ಹರಿಕುಮಾರ್‌, ಡಾ. ಥಾಮಸ್‌ ಡಿಸೋಜಾ, ಅನಿಲ್‌ ಕುಮಾರ್‌, ಪಿ. ವಿ. ರಘುನಾಥ್‌, ಎಂ. ರಮೇಶ್‌, ಎಸ್‌. ಆರ್‌. ರಾಮಕೃಷ್ಣ, ಸುಗಂಧಿ, ಎಸ್‌. ಭಾಗೇಶ್ರೀ ಮೊದಲಾದವರನ್ನು ಈ ಹೊತ್ತಿನಲ್ಲಿ ನೆನೆಯುವುದು ಅಗತ್ಯ.

ಕೆ. ವಿ. ಸುಬ್ಬಣ್ಣ, ಜಿ. ರಾಜಶೇಖರ ಓದಿ ಕೊಟ್ಟಿದ್ದಾರೆ. ಅವರಿಗೆ ವಂದನೆಗಳು. ಅದರಲ್ಲೂ ರಂಗ ನಿರ್ದೇಶಕ ಸಿಜಿಕೆ ಅವರ ಉತ್ಸಾಹವನ್ನು ವಿಶೇಷವಾಗಿ ಸ್ಮರಿಸಬೇಕು. ಹಿರಿಯ ಮಿತ್ರರಾದ ಎನ್. ಎಸ್‌. ಶಾರದಾಪ್ರಸಾದ್‌ ತಮ್ಮ ಎಂದಿನ ಉತ್ಸಾಹದಲ್ಲಿ ತಮ್ಮದೇ ಕೃತಿ ಎಂಬಂತೆ ಓದಿ ಕೊಟ್ಟಿದ್ದಾರೆ. ಅವರ ಆ ಗುಣ ಅವರಿಗೆ ವಿಶಿಷ್ಟವಾದುದು.

ಮಂಗಳೂರು ವಿವಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ವಲೇರಿಯನ್‌ ರೊಡ್ರಿಗಸ್‌ ಅವರ ಪರಿಚಯ ಈ ಮೊದಲೇ ಆಗಿದ್ದಲ್ಲಿ ಪಶ್ಚಿಮ ಜಗತ್ತಿನ ಭಯ ಮತ್ತು ತಲ್ಲಣಗಳನ್ನು ಮತ್ತುಷ್ಟು ಜಬರ್‌ದಸ್ತಿನಿಂದ ದಾಖಲಿಸಬಹುದಿತ್ತು. ಬೆಂಗಳೂರು ವಿವಿಯ ಕನ್ನಡ ಪ್ರಾಧ್ಯಾಪಕ ಡಾ. ಬಸವರಾಜ ಕಲ್ಗುಡಿ ಅವರನ್ನು ನೆನೆಯಬೇಕು.

ಕ ಕೃತಿಯ ಬಗ್ಗೆ ಅಪಾರ ಒಲವು ತೋರಿದ ಡಾ. ಹಾ. ಮಾ. ನಾಯಕರು ಅದು ಸಿದ್ಧಗೊಳ್ಳುವಷ್ಟರಲ್ಲಿ ಕಣ್ಮರೆಯಾಗುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಸಾವು ವಿಚಿತ್ರ ಸತ್ಯ. ಡೆಕ್ಕನ್‌ ಹೆರಾಲ್ಡ್‌ನ ಹಿಂದಿನ ಸುದ್ದಿ ಸಂಪಾದಕ ಬಿ. ಎಂ. ಅಪ್ಪಾಜಿ ಇನ್ನಷ್ಟು ಬೇಗನೆ ಈ ಬದುಕಿಗೆ ವಿದಾಯ ಹೇಳುತ್ತಾರೆ ಎಂದೂ ಸಹ ಅಂದುಕೊಂಡಿರಲಿಲ್ಲ. ‘ಓದುವುದನ್ನು’ ಕಲಿಸಿದ ಜಿ. ಕೆ. ಕೃಷ್ಣ ‘ಜಗತ್ತಿನ ನಡವಳಿಕೆ ಓದುವುದನ್ನು ಕಲಿಯುತ್ತಲೆ ತನ್ನ ಕಣ್ಣುಗಳನ್ನು ತಾನೇ ಮುಚ್ಚಿಕೊಂಡು ಈ ಬದುಕಿನಿಂದ ನಡೆದುಬಿಟ್ಟ. ಇಲ್ಲಿನ ಕೆಲ ಮೂಲ ರೇಖುಗಳು ಆತ ಕಲಿಸಿದ ಓದಿನಿಂದ ಬಂದವು. ಹಾಮಾನಾ, ಅಪ್ಪಾಜಿ, ಕೃಷ್ಣರನ್ನು ನೆನೆಯುವುದು – ಸ್ವಂತ ನೋವಿನ ಭಾಗ.

ಕೃತಿ ರಚನೆ ಕಾಲದಲ್ಲಿ ಸಂಗಾತಿ ಸುಚೇತಾ ತೆಗೆದುಕೊಂಡ ಜವಾಬ್ದಾರಿ ಅಪಾರ, ಈ ಬದುಕು ಆಕೆಯದು ಎಂದು ನೆನಪಿಗೆ ತಂದುಕೊಳ್ಳುವುದರ ಹೊರತು ಮತ್ತಾವ ರೀತಿಯಲ್ಲಿ ವಂದನೆ ಸಲ್ಲಿಸಲು ಸಾಧ್ಯ.

ಸುಚೇತನ ಸ್ವರೂಪ