ಏಷ್ಯಾದ ಪ್ರತಿನಿಧಿ ಎಂಬಂತೆ ಕಾಣಬರುವ ದಿದೊಳನ್ನು ತಿರಸ್ಕರಿಸುವುದರ ಮೂಲಕ ತನ್ನಲ್ಲಿನ ಕೆಲ ಏಷ್ಯಾದ ಗುಣಗಳನ್ನು ಈನಿಯಾಸ್‌ ತಿರಸ್ಕರಿಸಿಕೊಳ್ಳುವಂತೆ ತೋರುತ್ತದೆ; ಆದರೂ ತನ್ನನ್ನು ನಂಬಿದ ಹೆಣ್ಣೊಬ್ಬಳ ಸಾವಿಗೆ ಪರೋಕ್ಷವಾಗಿಯಾದರೂ ಕಾರಣವಾಗುವವ ಎಂತಹ ನಾಯಕ ಎಂಬ ಪ್ರಶ್ನೆ ಉದ್ಭವಿಸದಿರುವುದಿಲ್ಲ.

‘ಇಲಿಯಡ್‌’ನಲ್ಲಿ ಬರುವ ಎರಡನೆ ಮುಂಚೂಣಿ ನಾಯಕನ ಪಾತ್ರವೊಂದನ್ನು ತನ್ನ ಕಾವ್ಯದ ನಾಯಕನನ್ನಾಗಿ ಆರಿಸಿಕೊಳ್ಳುವುದುರ ಮೂಲಕ ಹೋಮರನ ಪರಂಪರೆಗೆ ಸಲ್ಲಬೇಕಾದ ಗೌರವ ಸಲ್ಲಿಸುವ ವರ್ಜಿಲ್‌, ‘ಇಲಿಯಡ್‌’ ಮತ್ತು ‘ಒಡಿಸ್ಸಿ’ ತಂತ್ರಗಾರಿಕೆಯನ್ನು ಉಲ್ಟಾಪಲ್ಟಾ ಮಾಡಿ ತನ್ನ ಒಂದೇ ಕೃತಿಯಲ್ಲಿ ನಿರ್ವಹಿಸುತ್ತಾನೆ: ‘ಈನೀಡ್‌’ನ ಮೊದಲರ್ಧ ಭಾಗ ‘ಒಡಿಸ್ಸಿ’ ತರಹ ನಾಯಕನ ಅಲೆದಾಟದಿಂದ ಕೂಡಿದ್ದರೆ, ಉಳಿದ ಭಾಗ ‘ಇಲಿಯಡ್‌’ನ ರೀತಿ ಯುದ್ಧದಿಂದ ತುಂಬಿದೆ. ಹೋಮರನ ನಾಯಕನಣಿಗಳಿಗಾದರೋ ಶೌರ್ಯ ಪ್ರದರ್ಶನ ಮತ್ತು ಅಗತ್ಯಬಂದಲ್ಲಿ ಅದಕ್ಕಾಗಿ ಪ್ರಾಣ ತೆರುವುದು ಬದುಕಿನ ಅಂತಿಮ ಗುರಿಯಾದರೆ, ಅದೇ ಪೌರುಷವನ್ನು ಬದುಕಿನ ಗುರಿಸಾಧನೆಯ ಇಂಧನವಾಗಿ ಬಳಸಿಕೊಳ್ಳುವುದು ವರ್ಜಿಲನ ನಾಯಕನಿಗೆ ಮುಖ್ಯವಾಗುತ್ತದೆ. ತಮ್ಮ ಕಲಿತನ ಪ್ರದರ್ಶಿಸಲು ಯುದ್ಧ ಒದಗಿರುವ ಅವಕಾಶ ಎಂಬುದಾಗಿ ಹೋಮರನ ನಾಯಕರು ತೆಗೆದುಕೊಂಡರೆ; ಬದುಕಿನ ಹಾದಿಯಲ್ಲಿ ಎದುರಿಸಬೇಕಾಗಿ ಬಂದ ಯುದ್ಧವನ್ನು ಅನಿವಾರ್ಯ ಎಂಬಂತೆ ಸ್ವೀಕರಿಸುವ ಶಿಸ್ತು ಮತ್ತು ಮನೋಧರ್ಮ ಈನಿಯಾಸ್‌ನದು. ಆ ಬಗ್ಗೆ ಸಂಭ್ರಮವೂ ಇಲ್ಲ, ಸಡಗರವೂ ಇಲ್ಲ.

ಸೋತು ಧೂಳೀಪಟವಾದ ಟ್ರೋಜನ್ನರ ಗುಂಪಿಗೆ ಸೇರಿದ ಆತ, ದೇವತೆಗಳು ಮತ್ತು ಹಿರೀಕನಾದ ಹೆಕ್ತರ್‌ನ ಪ್ರೇತದ ಆಣತಿ ಮೇರೆ ಯುದ್ಧ ಭೂಮಿಯಿಂದ ಪಲಾಯನ ಮಾಡಿ ಬಂದವನಾಗಿರುತ್ತಾನೆ ಎಂಬುದು ಬಹಳ ಮುಖ್ಯ.

ಆ ಅರ್ಥದಲ್ಲಿ ನೋಡುವುದಾದಲ್ಲಿ ರಣರಂಗದಿಂದ ಓಡಿಬಂದ ಆತ ನಾಯಕನಾಗಲು ತಕ್ಕವನಲ್ಲ. ಆದರೆ ಗ್ರೀಕರ ಕುಯುಕ್ತಿಯಿಂದಾಗಿ ತನ್ನವರ ಶೌರ್ಯ ಮತ್ತು ಪೌರುಷ ಅರ್ಥಕಳೆದುಕೊಂಡುದನ್ನು ಕಣ್ಣಾರೆ ಕಂಡಿದ್ದ ಈನಿಯಾಸ್‌; ಅದೇ ಶೌರ್ಯವನ್ನು ರಾಷ್ಟ್ರ ಕಟ್ಟುವ ಘನವಾದ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಮನಸ್ಸು ಮಾಡಿದವನಾಗಿರುತ್ತಾನೆ. ಆ ಕಾರಣವೆ ಅವನಿಗೆ ಗುರಿಯಿಲ್ಲದ ಯುದ್ಧದಲ್ಲಿ ಸೋಲು ಅಥವಾ ಗೆಲುವು ಕಾಣುವುದಕ್ಕಿಂಥ, ಬದುಕಿನ ಅರ್ಥಪೂರ್ಣತೆಯ ಯುದ್ಧದಲ್ಲಿ ಗೆಲುವು ಸಾಧಿಸಲು ತನ್ನೆಲ್ಲ ಶಕ್ತಿ, ಯುಕ್ತಿ, ಪ್ರತಿಭೆ, ಕ್ರಿಯಾಶೀಲತೆ, ಚಿಂತನೆ, ವಿವೇಕ ಮತ್ತು ಹೃದಯವಂತಿಕೆಯನ್ನು ಸದ್ಬಳಕೆ ಮಾಡುವುದು ಹೆಚ್ಚಿನ ಸವಾಲಾಗಿ ಕಾಣುತ್ತದೆ. ಎಲ್ಲವನ್ನೂ ಕಳೆದುಕೊಂಡ ತನ್ನವರಿಗೆ ಬದುಕಿನಲ್ಲಿ ನೆಲೆ ಕಾಣಿಸುವುದರ ಮೂಲಕ, ಸಾರ್ಥಕಥೆ ಕಂಡುಕೊಳ್ಳುವ ಮಹತ್ವದ ಉದ್ದೇಶದಿಂದ ಯುದ್ಧಭೂಮಿಯಿಂದ ಪಲಾಯನ ಮಾಡುವ ಈನಿಯಾಸ್‌, ಆ ಗುರಿ ಮುಟ್ಟಲು ಬದುಕೆಂಬ ನಿಜವಾದ ಯುದ್ಧ ಭೂಮಿಗಿಳಿಯುತ್ತಾನೆ. ಆ ದೃಷ್ಟಿಯಲ್ಲಿ ಯುದ್ಧಕ್ಕೆ ಹೊಸ ಅರ್ಥ ನೀಡಿದವನು ವರ್ಜಿಲ್‌. ಆ ಅರ್ಥ ಇಂದಿಗೂ ಅರ್ಥಪೂರ್ಣವಾಗಿ ಉಳಿದಿದೆ. ಹೋಮರ್‌ ಮತ್ತು ಅವನ ನಾಯಕರು ನಿಂತಲ್ಲಿಂದ ವರ್ಜಿಲ್‌ ಮತ್ತವನ ನಾಯಕ ಮುಂದುವರಿಯುತ್ತಾರೆ – ಅದೇ ಹೋಮರನ ಜಗತ್ತಿನಿಂದ ಪಡೆಯಬೇಕಾದ ಪ್ರೇರಣೆ ಪಡೆದು ಅದರ ಮಿತಿ ಅರ್ಥಮಾಡಿಕೊಳ್ಳುವುದರ ಮೂಲಕ.

ನೂತನ ನೆಲೆಯಾದ ಇಟಲಿಯ ನೆಲದಲ್ಲಿ ಸ್ಥಾಪಿಸಲಾಗುವ ರೋಮ್‌ ಸಾಮ್ರಾಜ್ಯದ ಭವ್ಯ ಭವಿತವ್ಯ ತಿಳಿಯುವ ಉದ್ದೇಶದಿಂದ ಪಿತೃಲೋಕಕ್ಕೆ – Hades – ಇಳಿಯುವ ಈನಿಯಾಸ್‌, ಆತ್ಮಹತ್ಯೆ ಮಾಡಿಕೊಂಡ ದಿದೊಳನ್ನು ಎದುರಿಸಬೇಕಾಗುತ್ತದೆ :

The anguish of it !my wife Creusa, fate took her – did she
Stop there? Or lose her way? Did she sink down in exhaustion?

[1]ಪುಟ ೫೮

ಮಾರ್ಗಮಧ್ಯದಲ್ಲಿ ತನ್ನ ಹೆಂಡತಿ ಮತ್ತು ಹೆಗಲ ಮೇಲೆ ಹೊತ್ತು ತಂದ ತಂದೆ ಸತ್ತಾಗ ದುಃಖಿಸಲು ಸಮಯವಿಲ್ಲ ಎಂಬ ರೀತಿಯಲ್ಲಿ ಸಾಗಿ ಬಂದಿದ್ದ ಆತ, ಪಿತೃಲೋಕದಲ್ಲಿ ತನ್ನ ತಂದೆಯನ್ನು – ಭೇಟಿ ಮಾಡಿ, ತಾನು ಸ್ಥಾಪಿಸಬಯಸಿರುವ ರೋಮ್‌ ಸಾಮ್ರಾಜ್ಯದ ಕನಸಿನ ಸಾಧ್ಯತೆಗಳ ಬಗ್ಗೆ ಕೇಳಬೇಕಾಗುತ್ತದೆ. ಆ ತರಹದ ಪರಿಸ್ಥಿತಿ ಎದುರಿಸಬೇಕಾಗಿ ಬಂದ ಇಬ್ಬರಲ್ಲೂ ಯಾವುದೇ ಕಸಿವಿಸಿ ಇರುವುದಿಲ್ಲ. ಈನಿಯಾಸ್‌ಗೆ ತನ್ನ ಕರ್ತವ್ಯಪಾಲನೆ ಮುಖ್ಯವಾದಂತೆ, ತಂದೆಗೆ ಮಗನ ಕರ್ತವ್ಯ ಪ್ರಜ್ಞೆ ಅತಿ ಮುಖ್ಯವಾಗುತ್ತದೆ:

Quick, then, dear father, I said, climb onto my back, and I will
Carry you on my shoulders – that’s a burden will not be burdensome.[2]
ಪುಟ ೫೮

ಆದರೆ ದಿದೊ ಸಾವಿನ ಪ್ರತಿಫಲನದ ಅನುರಣವನ್ನು ಅಷ್ಟು ಸುಲಭ ಸರಳವಾಗಿ ತೆಗೆದುಕೊಳ್ಳಲು ವಿಶ್ಲೇಷಿಸಲು ಬರುವುದಿಲ್ಲ. ಕರ್ತವ್ಯಪಾಲನೆಯ ಹಾದಿಯಲ್ಲಿ ಜರುಗಿದ ಆ ದುರ್ಘಟನೆಗೆ ಪರೋಕ್ಷವಾಗಿಯಾದರೂ ಕಾರಣನಾದವನು ಅವನಾಗಿರುತ್ತಾನೆ. ಅದಕ್ಕಾಗಿ ಈನಿಯಾಸ್‌ ಎಲ್ಲಿಯೂ ಬಹಿರಂಗ ಪಶ್ಚಾತ್ತಾಪ ವ್ಯಕ್ತಪಡಿಸಲು, ಹಳಹಳಿಸಲು ಹೋಗುವುದಿಲ್ಲ. ನೋವು ಇಲ್ಲದೆಯೂ ಇಲ್ಲ. ಆ ನೋವು ಎಂತಾದ್ದು ಎಂದರೆ, ಅದನ್ನು ತೋರಿಸಿಕೊಳ್ಳಲು ಮತ್ತು ಹೇಳಿಕೊಳ್ಳಲು ಆಗದ ಕರುಳ ಒಳಗಿನ ನೋವು. ಪಿತೃಲೋಕದಲ್ಲಿ ಆಕೆಯನ್ನು ಕಂಡಾಗ ಆಕೆಗೆ ಹೇಳದೆ ಕೇಳದೆ ಮುನ್ನಡೆಯಬೇಕಾಗಿ ಬಂದ ಪರಿಸ್ಥಿತಿ, ಹಿನ್ನೆಲೆ ಮತ್ತು ತಾನು ಹಾಕಿಕೊಂಡ ಗುರಿ ಕುರಿತಂತೆ ಹೇಳಲು ಬಾಯಿ ತೆರೆಯುತ್ತಾನೆ. ದಿದೊ ಅದಕ್ಕೆ ಅವಕಾಶ ನೀಡುವುದೇ ಇಲ್ಲ, ಕಲ್ಲು ಮುಖ ಮಾಡಿಕೊಂಡು ತಿರುಗಿಯೂ ನೋಡದೆ ತನ್ನ ಗಂಡನ ಜತೆಗೆ ಹೋಗಿಬಿಡುತ್ತಾಳೆ.

ಪ್ರಕೃತಿ ಮತ್ತು ಆತ್ಮಸಾಕ್ಷಿಯಾಗಿ ಈನಿಯಾಸ್‌ನನ್ನು ಮದುವೆಯಾಗಿರುವುದಾಗಿ ದಿದೊ ನಂಬಿದರೆ, ರೋಮನ್‌ ವಿಧಿ ಮತ್ತು ಸಂಪ್ರದಾಯದ ಪ್ರಕಾರ ತಾನಿನ್ನೂ ಆಕೆಯನ್ನು ಕೈಹಿಡಿದಿರುವುದಿಲ್ಲ ಎಂಬ ವಾದ ಈನಿಯಾಸ್‌ನದು. ಅವರಿಬ್ಬರ ನಿಲುವು ಮತ್ತು ಧೋರಣೆ ಅವರವರ ಪ್ರಕಾರ ಸರಿಯಾದುದೇ ಆಗಿದೆ. ರೋಮ್‌ನಲ್ಲಿ ನೆಲೆ ಕಂಡುಕೊಳ್ಳಲು ಹೊರಟ ಈನಿಯಾಸ್‌, ರೋಮನ್ನರಿಗಿಂತ ಹೆಚ್ಚು ರೋಮನ್ನನಾಗಿ ನಡೆದುಕೊಳ್ಳುವುದು ಅವನ ಸಂದರ್ಭದಲ್ಲಿ ಅನಿವಾರ್ಯ. ರೋಮನ್‌ ವಿಧಿ ಪ್ರಕಾರ ಮದುವೆಯಾಗದೆ ಆಕೆಯನ್ನು ಪತ್ನಿಯಾಗಿ ಸ್ವೀಕರಿಸಲು ಬರುವುದಿಲ್ಲ. ಆದರೆ ಅನುರಕ್ತಿಯ ಕಾರಣ ತಮ್ಮಿಬ್ಬರ ವಿವಾಹ ನಡೆದುಹೋಗಿದೆ. ಎಂಬ ದಿದೊ ನಡವಳಿಗೆ ಗಾಂಧರ್ವ ವಿವಾಹ ಪದ್ಧತಿಯನ್ನು ನೆನಪಿಗೆ ತರುತ್ತದೆ.

ಮರುವಿವಾಹ ಕುರಿತಂತೆ ಗಂಡ ಸತ್ತ ನಂತರ ಧರಿಸಿದ್ದ ನಿಲುವನ್ನು ಮುರಿದು ತನ್ನ ಸಾಮ್ರಾಜ್ಯ – ವೈಯಕ್ತಿಕ ಸಾಮ್ರಾಜ್ಯವು ಸೇರಿದಂತೆ ಕಾಪಾಡಲು ಬೇಕಾದ ಸಮರ್ಥ ನಾಯಕನನ್ನು ಪಡೆಯುವ ಮೋಹದಿಂದ ಈನಿಯಾಸ್‌ನಲ್ಲಿ ಅನುರಕ್ತಳಾದುದೆ ಅಲ್ಲದೆ, ವಿವೇಚನೆ ಕಳೆದುಕೊಂಡುದು ಆಕೆಯ ಐಬು; ಪ್ರೇಮವಂಚಿತೆ ಎಂಬ ನೋವಿಗಿಂತಲೂ ಹೆಚ್ಚಾಗಿ ಕಳೆದುಕೊಂಡ ವಿವೇಕದ ಅರಿವು ಆಕೆಯನ್ನು ಪ್ರಾಣ ತ್ಯಜಿಸುವಂತೆ ಮಾಡುತ್ತದೆ. ಆ ಕಾರಣವೇ ಅತ್ಯಂತ ಸ್ವಾಭಿಮಾನಿಯಾದ ಆಕೆಗೆ, ಪಿತೃಲೋಕದಲ್ಲಿ ನಡೆದ ಮುಖಾಮುಖಿ ಕಾಲದಲ್ಲಿ ಈನಿಯಾಸ್‌ ನೀಡಬಯಸುವ ಯಾವುದೇ ವಿವರಣೆ, ತಪ್ಪೊಪ್ಪಿಗೆ ಅಥವಾ ಆತ್ಮನಿವೇದನೆ ಬೇಕಿರುವುದಿಲ್ಲ. ವಿಧಿ ನಿಯಾಮಕದಂತೆ ಕರ್ತವ್ಯಭಾರದ ಮೇಲೆ ರೋಮಿಗೆ ಪಯಣ ಮುಂದುವರಿಸಬೇಕಿತ್ತು – I Seek not Italy by choice. ಆ ಕಾರಣ ಕೂಡಿಕೆ ಅನಿವಾರ್ಯವಾದಂತೆ ಅಗಲಿಕೆ ಕೂಡ ಅನಿವಾರ್ಯ ; ವಿಧಿ ಅಥವಾ ಕರ್ತವ್ಯಭಾರದ ಮೇಲೆ ಭಾರ ಹಾಕಿ ಮನಸ್ಸನ್ನು ಹಗುರಮಾಡಿಕೊಳ್ಳುವುದು ಈನಿಯಾಸ್‌ನ ಉದ್ದೇಶವಿದ್ದಿರಬಹುದು. ಅದಾವುದಕ್ಕೂ ದಿದೊ ಅವಕಾಶ ನೀಡುವುದಿಲ್ಲ. ಪಿತೃಲೋಕದಲ್ಲಿ ಈನಿಯಾಸ್‌ ಎದುರಾದಾಗ ದಿದೊ ತನ್ನ ಗಂಡನ ಜತೆಗಿರುತ್ತಾಳೆ ಎಂಬುದು ಬಹಳ ಮುಖ್ಯ :

A mongst them with her death – wound still bleeding, through the deep wood
Was straying Phoenician Dido. Now when the Trojan leader
Found himself near her and knew that the form he glimpsed though the shadows
Was hers – as early in the month one sees, or imagines he sees,
Through a wrack of cloud the new moon rising and limmering –
He shed some tears, and addressed her in tender, loving tones: –

Poor, unhappy Dido, so the message was true that came to me
Saying you’d put an end to your life with the sword and were dead?
Oh god! Was it death I brought you, then? I swear by the stars,
By the powers above, by whatever is sacred in the Under world,
It was not of my own will, Dido, I left your land.
Haven’s commands, which now force me to traverse the shades,
This sour and derelict region, this pit of darkness, drove me
Imperiously from your side. I did not, could not imagine
My going would ever bring such terrible agony on you.
Don’t move away ! Oh, let me see you a little longer!
To fly from me, when this is the last word fate allows us !
ಪುಟ ೧೭೧

ಕಲ್ಪಂ (Culpam) ಎಂಬ ಒಂದೇ ಮಾತು ಬಳಸುವುದರ ಮೂಲಕ ವರ್ಜಿಲ್‌ ಆಕೆಯ ದುರಂತ ಅರ್ಥೈಸಲು ನೋಡುತ್ತಾನೆ: ದೋಷ, ಪ್ರಮಾದ, ಪ್ರಮತ್ತತೆ, ನ್ಯೂನತೆ, ತಪ್ಪು ಇತ್ಯಾದಿ ಹಲವಾರು ಅರ್ಥಗಳು ಆ ಪದಕ್ಕಿದೆಯಾದರೂ, ದೌರ್ಬಲ್ಯ ಎಂಬ ಅರ್ಥಛಾಯೆ ಪಡೆದಿರುವ ಆ ಪದದ ವ್ಯಾಪ್ತಿ ಎಷ್ಟು ವಿಶಾಲವಾದುದಾಗಿದೆ ಎಂದರೆ, ಅದರ ಅನುವಾದ ಸಾಧ್ಯವಿಲ್ಲ. ಅದು ಆಕೆಯ ವ್ಯಕ್ತಿತ್ವದ ಐಬು ಅಥವಾ ಫಾಲ್ಟೈನ್‌ ಅಂಥವರಿಗೆ ಬದುಕಿನಲ್ಲಿ ಅವಕಾಶವೆ ಇಲ್ಲವೆ?

ಈ ಕಡೆ ಈನಿಯಾಸ್‌ನ ಪರಿಸ್ಥಿತಿ :

Thus did Aeneas speak, trying to soften the wild – eyed,
Passionate – hearted ghost, and brought the tears to his own eyes.
She would not turn to him; she kept her gaze on the ground,
And her countenance remained as stubborn to his appeal
As if it were carved from recalcitrant flint or a crag of marble.
At last she flung away, hating him still, and vanished
Into the shadowy wood where her first husband. Sychaeus,
Understands her unhappiness and gives her an equal love.
None the less did Aeneas, hard hit by her piteous fate,
Weep after her from afar, as she went, with tears o comassion.
Then he passed on the appointed way
! ಪುಟ ೧೭೧ – ೧೭೨

ನಡೆದುಹೋದ ದುರ್ಘಟನೆ ಬಗ್ಗೆ ವಿಷಾಧಿಸಲು ಅಥವಾ ವಿವರಣೆ ನೀಡಲು ಅವಕಾಶ ದೊರಕದೆ ಹೊಟ್ಟೆಯಲ್ಲಿಯೇ ಉಳಿದ ನೋವನ್ನು ನುಂಗಿಕೊಂಡು, ಬದುಕಿನಲ್ಲಿ ಮುನ್ನಡೆಯುವ ಹೊಣೆ ಅವನ ಪಾಲಿಗೆ ಬಂದುದಾಗಿರುತ್ತದೆ. ಅದೊಂದು ತರಹದಲ್ಲಿ ದುರಂತವೂ ಹೌದು, ಆದರೆ ದುರಂತವಲ್ಲ. ಪ್ರತಿಯೊಬ್ಬ ಮಹತ್ವಾಕಾಂಕ್ಷಿ ಅಥವಾ ಸಾಧಕನ ಬೆನ್ನ ಹಿಂದಿನ ಕಪಾಟುಗಳಲ್ಲಿ ಹುದುಗಿರುವ ದುರಂತದ ಅನುಸರಣಿಗಳ ನೋವಿನ ಕತೆ ‘ಈನೀಡ್‌’ ಎಂದರೂ ನಡೆಯುತ್ತದೆ. ‘ನಂತರ ಅವನು ನಿಗದಿತ ಹಾದಿಯಲ್ಲಿ ಕ್ರಮಿಸಿದ’ ಎಂಬ ಮೇಲಿನ ಮಾತು ಬಹಳ ಮುಖ್ಯ. ತಮ್ಮ ಪಾಲಿನ ಕರ್ತವ್ಯವನ್ನು ತಿರಸ್ಕರಿಸುವ ಸ್ವಾತಂತ್ರ್ಯವೂ ಅಂಥವರಿಗಿರುವುದಿಲ್ಲ:

But I have always thought the meeting of Aeneas with the shade of Dido, in Book VI, not only one of the most poignant, but one of the most civilized passages in poetry. It is complex in meaning and economical inexpression, for it not only tells us about the attitude of Dido – still more important is what it tells us about the attitude of Aeneas. Dido’s behavior appears almost as a projection of Aeneas `own conscience: this, we feel, is the way in which Aeneas `conscience would expect Dido to behave to him. The point, it seems to me, is not that Dido is unforgiving – thought it is important that, instead of railing at him, she merely snubs him – perhaps the most telling snub in all poetry: what matters most is, that Aeneas does not forgive himself.[3]

ಆ ನೋವನ್ನು ಗುರುತಿಸಿ ಅತ್ಯಂತ ಸೂಕ್ಷ್ಮ ಸಂವೇದನೆಯಿಂದ ವರ್ಜಿಲ್‌ ಬರೆದ ಲಿಖಿತ ಎಪಿಕ್‌ ‘ಈನಿಡ್‌’; ಅದೊಂದು ರೀತಿಯಲ್ಲಿ ಏಷ್ಯಾ ಮತ್ತು ಯುರೋಪ್‌ ನಡುವಣ ಮುಖಾಮುಖಿಯೂ ಹೌದು; ಅಪ್ಪಟ ಏಷ್ಯಾ ನಾರಿಯಂತೆ ತೋರಿಬರುವ ದಿದೊ ಮತ್ತು ಕ್ರಿಸ್ತ ಬರುವುದಕ್ಕೆ ಮೊದಲೇ ತನ್ನ ನೋವಿನ ಸಿಲುಬೆ ತಾನೆ ಹೊತ್ತು ಸಾಗುವ ಈನಿಯಾಸ್‌ ಪಿತೃಲೋಕದಲ್ಲಿ ಮುಖಾಮುಖಿಯಾಗುವುದು ದಿದೊಳ ಪ್ರೇತವನ್ನಲ್ಲ, ನೈತಿಕ ಎಚ್ಚರದ ತನ್ನ ಆತ್ಮಸಾಕ್ಷಿಯನ್ನು. ಆ ಕಾರಣವೆ ತನ್ನನ್ನು ತಾನು ಕ್ಷಮಿಸಿಕೊಳ್ಳಲು ಸಿದ್ಧನಿಲ್ಲದ ಈನಿಯಾಸ್‌ನ ಸೃಷ್ಟಿಕರ್ತ ವರ್ಜಿಲನನ್ನು ಕ್ರಿಶ್ಚಿಯನ್‌ ಸಂಸ್ಕೃತಿಯ ಆಗಮನ ಸಾರುವ ಮುಂಗೋಳಿ ಎಂದು ಯುರೋಪ್‌ ಮೂಲದ ಪಶ್ಚಿಮ ಜಗತ್ತು ಭಾವಿಸಿದ್ದರಲ್ಲಿ ಆಶ್ಚರ್ಯ ಪಡುವಂತಾದ್ದು ಏನೂ ಇರಲಾರದು. ಮೇಲುನೋಟಕ್ಕೆ ಮಾಮೂಲಿ ಪ್ರೇಮಪ್ರಕರಣದಂತೆ ತೋರುವ ಅದರಿಂದ ಏನೆಲ್ಲ ಸಾಧಿಸಿದ್ದಾನೆ!

ಇಟಲಿಯಲ್ಲಿ ನೆಲೆಸಲು ವಲಸೆ ಬಂದ ಈನಿಯಾಸ್‌, ಮತ್ತವನ ಪಾಳಯಕ್ಕೆ ಬೇಕಾದ ನೆರವು ನೀಡಲು ಮತ್ತು ತನ್ನ ಮಗಳಾದ ಲ್ಯಾವಿನಿಯಾಳನ್ನು ಈನಿಯಾಸ್‌ಗೆ ಕೊಡಲು ಲ್ಯಾಟಿನೆಸ್‌ ಒಪ್ಪಿರುತ್ತಾನೆ. ಆದರೆ ಅವನ ಭಾವೀ ಅಳಿಯನಾದ ಟರ್ನಸ್‌ ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಾನೆ. ಪ್ರತಿನಾಯಕನಾದ ಆತ ಬರುವುದು ಕೊನೆಗೆ, ಯುದ್ಧದ ಕಾಲಕ್ಕೆ; ವಿನಾಶಕಾರಿಯಾದ ಆ ಯುದ್ಧಕ್ಕೆ ತಾನು ಕಾರಣನಾದೆ ಎಂಬ ಅಪಖ್ಯಾತಿ ಬರದಂತೆ ನೋಡಿಕೊಳ್ಳಲು ಬೇಕಾದ ಎಲ್ಲ ಎಚಚರ ಮತ್ತು ವಿನಯ ಪ್ರದರ್ಶಿಸುವ ಈನಿಯಾಸ್‌ ಹೆಚ್ಚಿನ ಹಾನಿ ಉಂಟಾಗುವುದನ್ನು ತಡೆಯುವ ಉದ್ದೇಶದಿಂದ ತನ್ನ ಮತ್ತು ಟರ್ನಸ್‌ ನಡುವೆ ದ್ವಂದ್ವ ಯುದ್ಧ ಏರ್ಪಾಡು ಮಾಡುವಂತೆ ಕೋರುತ್ತಾನೆ. ಅದರಂತೆ ನಡೆದ ದ್ವಂದ್ವ ಯುದ್ಧದಲ್ಲಿ ಸೋತ ಪ್ರತಿನಾಯಕನಿಗೆ ಅವನ ಕೋರಿಕೆಯಂತೆ ಕ್ಷಮಾಧಾನ ನೀಡಲು ಸಿದ್ಧನಿರಬೇಕಾದರೆ, ಯುದ್ಧದಲ್ಲಿ ಮಡಿದ ತನ್ನ ಪರಮಮಿತ್ರನೊಬ್ಬನ ಪಟ್ಟಿ (baldric) ಟರ್ನಸ್‌ನ ದೇಹದಲ್ಲಿ ರಾರಾಜಿಸುವುದು ಕಾಣುತ್ತದೆ. ಅನೇಕರ ಸಾವು ನೋವು ಮತ್ತು ಹಾನಿಗೆ ಕಾರಣನಾದ ಟರ್ನಸ್‌ ಕ್ಷಮೆಗೆ ಅರ್ಹನಲ್ಲ ಎಂಬ ತೀರ್ಮಾನಕ್ಕೆ ಬಂದ ಈನಿಯಾಸ್‌, ಆತನನ್ನು ಹೋಮರನ ನಾಯಕರು ಕೊಲ್ಲುವ ರೀತಿಯಲ್ಲಿಯೇ ಭೀಕರ ಮತ್ತು ಅಮಾನುಷವಾಗಿ ಮುಗಿಸುತ್ತಾನೆ :

Turnus, brought low, stretched out a pleading hand, lookd up at
His foe in appeal :

I know, I’ve deserved it. I’ll not beg life.
Yours was the luck. Make the most of it. But if the thought of a father’s
Unhappiness can move you – a father such as you had
In Anchises – I ask you, show compassion for aged Daunus,
And give me back to him; or if that is the way it must be,
Give back my dead body. You have won. The Italians have seen me
Beten, these hands oustretched. Lavinia is yours to wed.
Don’t carry hurted further.
Aeneas stood over him, poised
On the edge of the stroke; but his eyes were restless; he did not strike.
And now what Turns had said was talking effect, was making him
More and more indecisive, when on his enemy’s shoulder
He noticed the fatal baladric, the belt with its glittering studs –
How well he knew it! – which Turns had stripped from Young Pallas after
He’d killed him, and put on himself – a symbol of triumph and doom.
Aeneas fastened his eyes on this relic, this sad reminder
Of all the pain Pallas’ death had caused. Rage shook him. He looked

Frightening. He said;

Do you hope to get off now, wearing the spoils
You took from my Pallas? It’s he, it’s Pallas who strikes this blow
– –
The victim shedding his murderer’s blood in retribution!
So saying, Aeneas angrily plunged his sword full into
Turnus’s breast. The body went limp and cold. With a deep sigh
The unconsenting spirit fled to the shades below. ಪುಟ. ೪೦೦ – ೪೦೧

ಈನಿಯಾಸ್‌ ಕೊಲ್ಲುವುದು ಹೋಮರ್‌ ಯುಗದ ಪ್ರತಿನಿಧಿಯಾದ ಹಾಗೂ ಕಾಲ, ಪರಿಸ್ಥಿತಿ ಮತ್ತು ನಿಯತಿ ವಿರುದ್ಧವಿರುವ ಟರ್ನಸ್‌ನನ್ನು. ವಿವೇಚನಾರಹಿತವಾದ ಒಣಪ್ರತಿಷ್ಠೆ ಮತ್ತು ಅಹಂನಿಂದಾಗಿ ವಾಸ್ತವದ ಅರಿವೇ ಇಲ್ಲದ ಆತನಿಗೆ ಆತನ ಶೌರ್ಯ ಮತ್ತು ಪೌರುಷವೆ ಮುಳುವಾಗುತ್ತದೆ. ಮೂಲತಃ ಶಾಂತಿಪ್ರಿಯ, ನಾಗರಿಕ ಮತ್ತು ಸುಸಂಸ್ಕೃತ ನಡವಳಿಕೆಯ ವ್ಯಕ್ತಿಯಾದ ಈನಿಯಾಸ್‌, ತನ್ನ ಎದುರಾಳಿಯನ್ನು ಮುಗಿಸುವಾಗ ನಡೆದುಕೊಳ್ಳುವ ಬರ್ಬರ ರೀತಿ ಗಾಬರಿ ಹುಟ್ಟಿಸದಿರುವುದಿಲ್ಲ. ಪೌರುಷ ಪ್ರದರ್ಶನಕ್ಕಾಗಿ ಪೌರುಷದಲ್ಲಿ ಅಗಾಧ ನಂಬಿಕೆ ಇಟ್ಟಿದ್ದ ಟರ್ನಸ್‌ನನ್ನು ಕೊಲ್ಲುವಾಗ ಈನಿಯಾಸ್‌ ನಡೆದುಕೊಳ್ಳುವ ಸನ್ನಿವೇಶವನ್ನು ‘ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್‌’ ಎಂಬ ಕನ್ನಡ ಶಾಸನದ ಮಾತು ಅತ್ಯಂತ ಯುಕ್ತವಾಗಿ ಕಟ್ಟಿಕೊಡುತ್ತದೆ.

ಮನುಷ್ಯ ಜನಾಂಗದ ಮೂಲ ವಾಂಛಲ್ಯ ಮತ್ತು ತುಡಿತಗಳ ಪುರಾಣಾಕೃತಿಯಾದ ಈನಿಯಾಸ್‌ನನ್ನು ಸೃಷ್ಟಿಸಿದ ‘ಈನೀಡ್‌’ ಕೃತಿಸಂಚಯನ್ನು ವಿಭಿನ್ನ ದೃಷ್ಟಿ ಮತ್ತು ನೆಲೆಗಟ್ಟಿನಿಂದ ನೋಬಹುದಾದಂತೆಯೇ, ಅವನ ವ್ಯಕ್ತಿತ್ವವನ್ನು ಹಲವಾರು ರೀತಿಯಲ್ಲಿ ಕಾಣಬಹುದಾಗಿದೆ:

Virgil’s text, almost like the sortes virgilianae of the Middle Ages, became a mirror in which every reader found what he wished: populism or elitism, fascism or democracy. Commitment or escapism.[4]

ಆದರೂ ರೋಮ್ಯಾಂಟಿಕ್ ನಾಯಕರ ತರಹ ಕೇವಲ ಇತ್ಯಾತ್ಮಕ ಅಂಶಗಳ ಬಂಡಲ್‌ ಆದರ್ಶವಾದಿಯಲ್ಲದ ಈನಿಯಾಸ್‌ನಲ್ಲಿ ಅದು ಇರಬೇಕಾದ ಪ್ರಮಾಣದಲ್ಲಿ ಇಲ್ಲದಿಲ್ಲ. ಆಧುನಿಕ ಕಾದಂಬರಿಗಳ ನಾಯಕರ ತರಹ ಅತಿಯಾದ ಆತ್ಮರತಿ, ಮೇರೆಮೀರಿದ ಸ್ವಪ್ರಶಂಸೆ ಮತ್ತು ಹದ್ದುಮೀರುವ ಅನುಮಾನಗಳ ನೇತ್ಯಾತ್ಮಕ ವ್ಯಕ್ತಿಯೂ ಇಲ್ಲ. ವಿಧಿಯಿಂದ ಪ್ರೇರಿತನಾಗಿದ್ದೇನೆ ಅಥವಾ ಕಾಲ ತನ್ನ ಪರವಾಗಿದೆ ಎಂಬ ಅರಿವಿದ್ದರೂ, ತಾನು ಸಾಧಿಸಬೇಕಾದ ಮಹತ್ಕಾರ್ಯದ ಕ್ಷಮತೆ ಬಗ್ಗೆ ಅನುಮಾನಗಳು ಇದ್ದೇ ಇರುತ್ತವೆ. ಆದರೆ ಆ ಅನುಮಾನಗಳು ಸಾಗಬೇಕಾದ ಹಾದಿಯ ಬಗ್ಗೆ ಜುಗುಪ್ಸೆ ಉಂಟುಮಾಡಲು ಅವಕಾಶ ನೀಡುವುದಿಲ್ಲವಾದಂತೆಯೇ, ಅತಿಯಾದ ಆತ್ಮವಿಶ್ವಾಸ ಕುದುರಿಸುವ ಸಂಕಲ್ಪಬಲ ಅಹಂಕ್ಕಾರಕ್ಕೆ ತಿರುಗದಂತೆ ನೋಡಿಕೊಳ್ಳುತ್ತಾನೆ. ಅನುಮಾನ ಮತ್ತು ಅಪನಂಬಿಕೆಗಳು ಕರ್ತವ್ಯ ವಿಮುಖತೆಗೆ ಕಾರಣವಾಗುವುದಿಲ್ಲವಾದಂತೆ, ಉದ್ದೇಶದ ಋಜುತ್ವದ ಅಹಂನಿಂದ ಬರಬಹುದಾದ ಅತಿಯಾದ ಆತ್ಮವಿಶ್ವಾಸ ಅಸಡ್ಡೆ ಉಂಟುಮಾಡಲು ಬಿಡುವುದಿಲ್ಲ. ಕಾರ್ಯಕ್ಷಮತೆಯ ಹಾದಿಯಲ್ಲಿ ನಡೆದುಹೋಗುವ ದುರ್ಘಟನೆಯ ನೋವನ್ನು ರಕ್ತದಲ್ಲಿ ತುಂಬಿಕೊಂಡು ಸಾಗುತ್ತಲೇ, ಹಿಂದಿನದು ಮುಂದಿನ ದಾರಿಗೆ ಅಡ್ಡಬಾರದಂತೆ ಸದಾ ಎಚ್ಚರವಹಿಸುವ ಜಾಗೃತ ವ್ಯಕ್ತಿ ಈನಿಯಾಸ್‌. ಅದೇ ಅವನ ಬದುಕು ಕಂಡುಕೊಂಡ ಅತ್ಯುನ್ನತ ಮಟ್ಟದ ಆಧ್ಯಾತ್ಮ.

ದೇವರು, ಧರ್ಮ, ನಿಯತಿ, ಸಂಪ್ರದಾಯ, ಪಿತೃಭಕ್ತಿ ಮೊದಲಾದ ಎಲ್ಲವನ್ನೂ ನಂಬುವ ಈನಿಯಾಸ್‌ ಕ್ರಾಂತಿಕಾರಿ ಏನಲ್ಲ. ಆದರೆ ಮಹತ್ವದ ಬದಲಾವಣೆಗೆ ಕಾರಣವಾಗುವ ಆತನ ವ್ಯಕ್ತಿತ್ವವನ್ನು ಲೆನಿನ್‌ ಬಗ್ಗೆ ಆಡುವ ಮಾತುಗಳಿಂದಲೂ ಅರ್ಥೈಸಬಹುದಾಗಿದೆ ಎಂದರೆ ಆಶ್ಚರ್ಯ ಉಂಟಾಗದಿರುವುದಿಲ್ಲ:

Lenin was not a moralist….Yet it would be amistake to confuse this with moral indifference. Lenin was man of stong principles; and on his principles he acted with an extraordinary, selfless dedication, and with intense moral passion… it sharpened the sense of personal moral responsibility.[5]

ಆತನ ವ್ಯಕ್ತಿತ್ವ ‘ಭಗವದ್ಗೀತೆ’ಯ ನಿಷ್ಕಾಮಕರ್ಮದ ಜೀವಂತ ವ್ಯಾಖ್ಯಾನದಂತಿದೆ ಎಂದರೆ ಬೆಚ್ಚಿದ ಅನುಭವವಾಗಲೂಬಹುದು, ನಿಷ್ಕಾಮ ಕರ್ಮದ ಕಾವ್ಯರೂಪ. ‘ಈನೀಡ್‌’ ರಚನೆ ಕಾಲದಲ್ಲಿ ಬೇಕಾದ ಭೂಮಿಕೆ ಒದಗಿಸಿದ್ದ ‘ಸ್ಟೋಇಕ್‌ ಸ್ಕೂಲ್‌ ಆಫ್‌ ಥಾಟ್‌’ (Stoic school of thought)ನ ಪ್ರಭಾವ ‘ಭಗವದ್ಗೀತೆ’ ಮೇಲಾಗಿದೆ ಎಂಬುದಾಗಿ ನೀರದ್‌ ಸಿ. ಚೌಧುರಿ ವಾದಿಸುತ್ತಾರೆ:

It can be set down briefly that the doctrine of disinterestedness in action came from Stoicism, and the God of the Gita from Christianity. It is equally certain that both the notions were present in the Greeco – Roman world in a fully elaborated form when the Gita was written.[6]

ಅದನ್ನು ಒಪ್ಪುವುದು ಬಿಡುವುದು ಅವರವರ ನಿಲುವಿಗೆ ಸಂಬಂಧಿಸಿದ್ದು. ಆದರೆ ನಿಷ್ಕಾಮಕರ್ಮ ನೆನಪಿಗೆ ತರುವ ಈನಿಯಾಸ್‌ನ ವ್ಯಕ್ತಿತ್ವ ಭಾರತೀಯರಿಗೆ ಅಪರಿಚಿತ ಏನಲ್ಲ.[7]

ತಾನು ಬರಕತ್ತಾಗಲು ಕಾರಣವಾದ ಸಂಸ್ಕೃತಿ ಮತ್ತ ನಾಗರಿಕತೆಯ ಪ್ರಮುಖ ಅಸ್ತಿಭಾರವಾದ ಈನಿಯಾಸ್‌ನ ಸಮಾಹಿತ ವ್ಯಕ್ತಿತ್ವದ ಕಲ್ಪನೆ, ಅದು ವಿಕಸನಗೊಳ್ಳುತ್ತಾ ಸಾಗಿದಂತೆ ತಾನೂ ವಿಕಾಸಗೊಳ್ಳುತ್ತಲೇ ಸಾಗಿದೆ.

 

[1]ದಿದೋಳಿಗೆ ತನ್ನ ಕತೆ ಹೇಳುವ ಕಾಲದಲ್ಲಿ ತನ್ನ ಹೆಂಡತಿ ಸತ್ತ ರೀತಿ ನೆನಪಿಸಿಕೊಂಡು ವಿಷಾಧಿಸುವುದು.

[2]ಟ್ರಾಯ್‌ನಿಂದ ತಪ್ಪಿಸಿಕೊಂಡು ಬರುವಾಗ ತಂದೆಯನ್ನು ಹೆಗಲ ಮೇಲೆ ಹತ್ತಿಸಿಕೊಳ್ಳುವ ಕಾಲದಲ್ಲಿ ಆಡುವ ಮಾತು.

[3]On Poety and Poets ಪುಟ. ೬೨

[4]Theodore Ziolkowski, virgil and Moderns, Princeton, ೧೯೯೩, ಪುಟ ೨೬.

[5]Isaac Deutscher, Ironies of History, Ramparts Press, Berkey ೧೯೬೬, ಪುಟ ೧೬೭ – ೧೬೮

[6]Hinduism, B. I. Publications, New Delhi, ೧೯೭೯, ಪುಟ ೨೬೭.

[7]ಭಾರತದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಿಕಲ್ಪನೆಗಳ ಮೇಲಾಗಿರಬಹುದಾದ ಕ್ರಿಶ್ಚಿಯನ್‌ ಮತ್ತು ಇಸ್ಲಾಮಿಕ್‌ ರಿಲಿಜನ್ನುಗಳ ಪರಂಪರೆಯ ಪ್ರಭಾವ ಕುರಿತಂತೆ ನೀರದ್‌ ಚೌಧುರಿ ಬರೆಯುವುದಕ್ಕೆ ಎಷ್ಟೋ ವರ್ಷಗಳಿಗೂ ಮೊದಲೇ, ಅನೇಕರು ಆ ಕಡೆಗೆ ತಮ್ಮ ಗಮನ ಹರಿಸಿದ ಉದಾಹರಣೆ ಇದೆ. ‘ಯುಗಯಾತ್ರೀ ಭಾರತೀಯ ಸಂಸ್ಕೃತಿ’ಯ ನಾಲ್ಕನೆಯ ಸಂಪುಟವನ್ನು ಗಮನಿಸಬಹುದು. ಆದರೆ, ನೀರದ್‌ ಬಾಬು ಅಂಥವರು ಬರೆದಾಗ ಅವುಗಳಿಗೊಂದು ಉಗ್ರತ್ವ ಪ್ರಾಪ್ತವಾಗುತ್ತದೆ; ಅವರ ಮನೋಧರ್ಮ, ಮಂಡನ ಕ್ರಮ ಮತ್ತು ಪರಿಭಾವಿಸುವ ರೀತಿ ಅದಕ್ಕೆ ಕಾರಣವಿದ್ದಿರಬಹುದು.