‘ಇಲಿಯಡ್‌’ ‘ಒಡಿಸ್ಸಿ’ಗಳು ಗತಿಸಿಹೋದ ಎನ್ನುವುದಕ್ಕಿಂತ ಸಂಸ್ಕೃತಿ ಮತ್ತು ನಾಗರಿಕತೆಯ ಹಾದಿಯಲ್ಲಿ ಕಾಣಿಸಿಕೊಂಡ ಪ್ರಮುಖ ಘಟ್ಟ ಅಥವಾ ಅಧ್ಯಾಯವೊಂದರ ಚಿತ್ರಣ ನೀಡಿದರೆ, ‘ಈನೀಡ್‌’ನಲ್ಲಿ ನಂತರದ ಸಮಾಜದ ಬದುಕು ದೊರಕುತ್ತದೆ. ಹೋಮರನ ಕಾಲದ ಬದುಕಿನ ಅನೇಕ ಗುಣಲಕ್ಷಣ ಮತ್ತು ಮೂಲ ತುಡಿಗಳು ಇಂದಿಗೂ ಬೇರೆ ಬೇರೆ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತಿವೆ ಅಥವಾ ಪ್ರಕಟವಾಗುತ್ತಿವೆಯಾದರೂ, ಅದು ತನ್ನ ಅನೇಕ ಲಕ್ಷಣಗಳಲ್ಲಿ ಬದಲಾವಣೆಗೆ ತುತ್ತಾಗಿವೆ:

When I was a schoolboy, it was my lot to be introduced to the Iliad and to the Aeneid in the same year. I had, up to that point, found the Greek language a much more exciting study than Latin. I still think it a much greater language: a language which has never been surpassed as a vehicle for the fullest range and the finest shades of thought and feeling. Yet it found myself at ease with Virgil as I was not at ease with Homer. It might have been rathr different if we had started with the Odyssey instead of the Iliad; for when we came to read certain selected books of the Odyssey – and I have never read more of the Odyssey in Greek than those selected books – I was much happier. My preference certainly did not, I am glad to say, mean that I thought Virgil the greater poet.……. The obstacle to my enjoyment of the Iliad, at that age, was the behavior of the people Homer wrote about. The gods were as irresponsible, as much a prey to their passions, as devoid of public spirit and the sense of fair play, as the heroes. This was shocking. Furthermore, their sense of humour extended only to the crudest form of horseplay. Achilles was ruffian; the only here who could be commended for either conduct or judgement was Hector;

……..the explanation I should now give is simply that I instinctively preferred the world of Virgil to the world of Homer – because it was a more civilized world of dignity, reason and order. When I say `the world of Virgil’, I mean what Virgil himself made of the world in which he lived. The Rome of the imperial era was coarse and beastly enough; in important respects for less civilized than Athens at its greatest. The Romans were less gifted than the Athenians for the arts, philosophy and pure science; and their language was more obdurate to the expression of either poetry or abstract thought. Virgil made of Roman civilization in his poetry something better than it really was. His sensibility is more nearly Christian than that of any other Roman or Greek poet: not like that of an early Christian perhaps. But like that of Christianity from the time at which we can say that a Christian civilization had come into being. We cannot compare Homer and Virgil; but we can compare the civilization which Homer accepted with the civilization of Rome as refined by the sensibility of Virgil.[1]

ಆದರೆ ಇಂದಿಗೂ ಹತ್ತಿರವಾಗಿ ಉಳಿದಿರುವ ಸಮಾಜದ ಬದುಕಿನ ಚಿತ್ರಣ ನೀಡುವುದರ ಮೂಲಕ ವರ್ಜಿಲ್‌ ವಿವರಗಳಲ್ಲಿ ಅರ್ಥಪೂರ್ಣತೆ ಉಳಿಸಿಕೊಂಡಿದ್ದರೆ, ಕಾಲದ ಗತಿಯಲ್ಲಿ ಅನೇಕ ವಿವರಗಳಲ್ಲಿ ಮಾರ್ಪಾಡಿಗೆ ತುತ್ತಾದ ಬದುಕಿನ ಚಿತ್ರಣ ನೀಡುವುದರ ಮೂಲಕ ಹೋಮರ್‌ ಉಳಿಸಿಕೊಂಡಿರುವ ಅರ್ಥಪೂರ್ಣತೆ ಐತಿಹಾಸಿಕವಾದುದರ ಜತೆಗೆ ಅತ್ಯಂತ ಮಹತ್ವದ್ದು. ಆ ಅರ್ಥದಲ್ಲಿ ಮಿಲನ್‌ ಕುಂದೆರಾ ಮೊದಲಾದ ಸಮಕಾಲೀನ ಲೇಖಕರಿಗಿಂತ ಹೆಚ್ಚು ಸಮಕಾಲೀನ ಹೋಮರ್‌. ಅವನ ಸಂದರ್ಭದಲ್ಲಿ ಸಮಕಾಲೀನತೆ ಎಂಬ ಪದ ಪಡೆದುಕೊಳ್ಳುವ ಅರ್ಥ ಬೇರೆಯಾಗಿರುತ್ತದೆ.

ಹೋಮರ್‌ನ ಸಮಾಜದ ಎದ್ದು ಕಾಣುವ ಗುಣಲಕ್ಷಣಗಳಾದ ಒರಟುತನ, ರೂಕ್ಷತೆ, ನೇರ ನಡೆನುಡಿ, ಪೌರುಷಪ್ರಾಧಾನ್ಯ ಮೊದಲಾದವುಗಳು ವ್ಯಾಸಭಾರತಕ್ಕೆ ಸಾಮಾನ್ಯ ವಾದುದು:

……………………..since I have learned to be Valiant
and to fight always among the foremost ranks of the Trojans,
winning for my own self great glory, and for my father.[2]

………………………………………..it would be much
better
at that time, to go against Achilleus, and slay him, and come
back, or else be killed by him in glory in front of the city.
ಪುಟ ೪೩೮

ಕ್ಷತ್ರಿಯಃ ಕ್ಷತ್ರಿಯಂ ಹನ್ತಿ ಮತ್ಸ್ಯೋಮತ್ಸೈನ ಜೀವತಿ
ಶ್ವಾ ಶ್ವಾನಂ ಹನ್ತಿ ದಾಶಾರ್ಹ ಪಶ್ಯ ಧರ್ಮೋ ಯಥಾಗತಃ || ೪೮ ||[3]

“ನಾನು ಕೇಳಿದಂತೆ ಐದು ಗ್ರಾಮಗಳನ್ನೂ ದುರ್ಯೋಧನನು ಕೊಡುವುದಿಲ್ಲ…..
ವಿಧಿಯಿಲ್ಲದೆ ಬಂದರೆ ಕೊನೆಗೆ ರೌದ್ರವಾಗಿ ಅವರನ್ನು ಕೊಂದು ನಮ್ಮ
ರಾಜ್ಯವನ್ನು ಪಡೆಯಬೇಕು. ಜ್ಞಾತಿವಧೆ ಮಹಾ ಪಾಪ; ಆದರೇನು ಮಾಡುವುದು?
ಕ್ಷತ್ರಿಯ ಧರ್ಮವೇ ಅಂಥದು. ವಧೆಯಿಂದಲೇ ನಮ್ಮ ಜೀವನ ನಡೆಯಬೇಕು. …….”[4]

ಆದರೆ ಆ ಕಡೆ ವರ್ಜಿಲ್‌ ನೀಡುವ ನಾಗರಿಕ ಮತ್ತು ಸುಸಂಸ್ಕೃತ ನಡವಳಿಕೆಗೆ ಹತ್ತಿರಬರುವ ಸಮಾಜದ ಬದುಕಿನ ಚಿತ್ರಣವನ್ನು ವಾಲ್ಮೀಕಿ ಕ್ರಿ.ಪೂ. ಐದನೇ ಶತಮಾನಕ್ಕಾಗಲೇ ನೀಡಿರುವುದು ಕುತೂಹಲ ಕೆರಳಿಸದಿರುವುದಿಲ್ಲ. ಬದುಕಿನ ವಿವರ ಮತ್ತು ಅಂತಃಸತ್ವದಲ್ಲಿ ಇಲಿಯಡ್‌, ಒಡಿಸ್ಸಿ ಮತ್ತು ಮಹಾಭಾರತಗಳ ನಡುವೆ ಕಂಡುಬರುವ ಹೊಂದಾಣಿಕೆ ಕಣ್ಣಿಗೆ ರಾಚುವಷ್ಟು ದಟ್ಟವಾದುದಾಗಿದ್ದರೆ, ‘ಈನೀಡ್‌’ ಮತ್ತು ‘ರಾಮಾಯಣ’ಗಳ ನಡುವಿನ ಹೊಂದಾಣಿಕೆಯಗಳು ಅಷ್ಟೇ ದಟ್ಟವಾದುದಾಗಿವೆ.

‘ಇಲಿಯಡ್‌’ ಮತ್ತು ‘ರಾಮಾಯಣ’ದ ನಡುವೆ ಬಹಳ ಹೊಂದಾಣಿಕೆ ಇದೆ ಎಂದು ಭಾವಿಸಿರುವ ಅನೇಕ ವಿದ್ವಾಂಸರು ಆ ಕುರಿತಂತೆ ಸುದೀರ್ಘ ಚರ್ಚೆ ಮಾಡಿದ್ದಾರೆ. ಆದರೆ ತಾನಾಗಿಯೇ ಓಡಿಹೋದ ಹೆಲೆನ್‌ ಇನ್ನೊಬ್ಬನ ಜೊತೆ ಸಂಸಾರ ನಡೆಸಿದರೆ, ಈ ಕಡೆ ಅಪಹರಣಕ್ಕೆ ತುತ್ತಾದ ಸೀತೆ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ನಿರಾಕರಿಸುತ್ತಾಳೆ ಎಂಬ ಅತ್ಯಂತ ಸೂಕ್ಷ್ಮ ಮತ್ತು ಮಹತ್ವದ ವ್ಯತ್ಯಾಸವನ್ನು ಯಾರೂ ಅಷ್ಟಾಗಿ ಗಮನಕ್ಕೆ ತಂದುಕೊಂಡಂತೆ ಕಾಣುವುದಿಲ್ಲ. ನಿಜವಾದ ಹೊಂದಾಣಿಕೆ ಇರುವುದು ಮಹಾಭಾರತ ಮತ್ತು ಇಲಿಯಡ್‌ – ಒಡಿಸ್ಸಿ ಹಾಗೂ ರಾಮಾಯಣ – ಈನೀಡ್‌ ನಡುವೆ. ಆ ತರಹದ ಆಂತರಿಕ ಹೊಂದಾಣಿಕೆಯಿಂದಾಗಿ ಮೊದಲ ಆ ಮೂರು ಕೃತಿಗಳು ಒಂದು ವರ್ಗಕ್ಕೆ ಸೇರಿದರೆ, ಉಳಿದ ಎರಡು ಕೃತಿಗಳು ಮುಂದಿನ ಬೆಳವಣಿಗೆಯಾದ ಮತ್ತೊಂದು ಗುಂಪಿನಲ್ಲಿ ಬರುತ್ತವೆ.

ಹೋಮರನ ಮೂಲಜಾಯಮಾನಕ್ಕೆ ಧಕ್ಕೆ ತಾರದ ರೀತಿಯಲ್ಲಿ ಅವುಗಳನ್ನು ಕಾಪಾಡಿಕೊಂಡ ಬರುವ ವಿಚಾರದಲ್ಲಿ ಯುರೋಪಿಯನ್ನರು ಪ್ರದರ್ಶಿಸಿದ ಎಚ್ಚರ ಮತ್ತು ತೋರಿದ ವಿವೇಕದ ಕಾರಣ, ಈ ಮೊದಲೇ ಗುರುತಿಸದಂತೆ ಹೋಮರನ ಕೃತಿಗಳು ಅನೇಕ ರೀತಿಯ ಪ್ರಕ್ಷಿಪ್ತ ಮತ್ತು ಪಾಠಾಂತರದ ಹಾವಳಿ ಎದುರಿಸಿಯೂ ಮೂಲಕ್ಕೆ ಹತ್ತಿರದ ರೂಪದಲ್ಲಿಯೇ ಉಳಿದು ಬರಲು ಸಾಧ್ಯವಾಯಿತು. ಆದರೆ, ಮಹಾಭಾರತ ತೀರ ಇತ್ತೀಚಿನವರೆಗೂ ಬೆಳೆಯುತ್ತಲೇ ಬಂದಿದೆ. ಹಾಗಾಗಿ ಅಲಿಖಿತ ಕಾವ್ಯಪರಂಪರೆಯ ಮಹಾಭಾರತದ ಮೂಲ ಜಾಯಮಾನ ಬದಲಿಸಲು ಯಾರಿಗೂ ಸಾಧ್ಯವಾಗಿಲ್ಲ. ಕೃಷ್ಣಕತೆ ಪ್ರತಿಭಾಶಾಲಿಯ ಕೈಯಲ್ಲೂ ಅದರ ಹುಟ್ಟುಗುಣ ಮತ್ತು ಮೂಲ ಜಾಯಮಾನ ಬದಲಿಸಲು ಸಾಧ್ಯವಾಗಲಿಲ್ಲ. ಮಹಾಭಾರತದ ಒರಟುತನಕ್ಕೆ ಹೆಸರಾದ ದ್ರೌಪದಿ ವಸ್ತ್ರಾಪಹರಣ ಮತ್ತು ದುಶ್ಯಾಸನನ ವಧೆ ಮೊದಲಾದ ಪ್ರಸಂಗಗಳು ಕುಮಾರವ್ಯಾಸನ ಕೈಯಲ್ಲಿ ಮತ್ತು ಒರಟಾಗುತ್ತವೆ. ಹೆಕ್ತೆರ್‌ನನ್ನು ಅಟ್ಟಿಸಿಕೊಂಡು ಹೋಗಿ ಅಖಿಲ್ಯೂಸ್‌ ಕೊಲ್ಲುವ ಮತ್ತು ಕೊಂದನಂತರ ಆತನ ದೇಹವನ್ನು ಹಲವಾರು ದಿನಗಳ ಕಾಲ ಎಳೆದಾಡುವ ಪ್ರಸಂಗಕ್ಕಿಂತಲೂ ಭೀಮ ದುಶ್ಯಾಸನನನ್ನು ಕೊಲ್ಲುವ ಮತ್ತು ಕೊಂದನಂತರ ಅದರಲ್ಲಿ ಸಂಭ್ರಮಪಡುವ ರೀತಿ ಹೆಚ್ಚು ಅಮಾನವೀಯ; ಆಗ ದ್ರೌಪದಿ ತೋರುವ ಒರಟುತನ ಮತ್ತು ರೂಕ್ಷತೆಯನ್ನು ಮಹಾಭಾರತ ಹೊರತು ಬೇರೆ ಎಲ್ಲಿಯೂ ಕಾಣಲಾಗುವುದಿಲ್ಲ.

ಮಹಾಭಾರತದ ಕಾಲದ ಬದುಕು ಆ ದೃಷ್ಟಿಯಿಂದ ನೋಡುವುದಾದಲ್ಲಿ, ಇಲಿಯಡ್‌ ಕಾಲದ ಬದುಕಿಗಿಂತಲೂ ಹೆಚ್ಚು ಕ್ರೂರ, ಕಠಿಣ ಮತ್ತು ಒರಟಾಗಿರುವಂತೆ ತೋರುತ್ತದೆ. ಹೆಕ್ತೆರ್‌ನನ್ನು ಅಖಿಲ್ಯೂಸ್‌ ಕೊಲ್ಲುವ ಪ್ರಸಂಗದ ಜತೆ ಭೀಮ ದುಶ್ಯಾಸನನನ್ನು ಕೊಲ್ಲುವ ಭಾಗವನ್ನು ಹೋಲಿಸಿ ನೋಡಿದರೆ ಸಾಕು: ಅದು ರಚನೆಯಾದಂದಿನಿಂದ ಇಲ್ಲಿಯವರೆಗೆ ಶತಶತಮಾನಗಳ ಕಾಲ ನಿರಂತರ ನಡೆದ ಅನೇಕ ದಾಳಿ ರೀತಿಯ ಮತ್ತು ಅನಾಹುತಗಳನ್ನು ಎದುರಿಸಿಯೂ ಮಹಾಭಾರತ ಅಂತಃಸತ್ವದಲ್ಲಿ ಇಂದಿಗೂ ಮಹಾಭಾರತವಾಗಿಯೇ ಉಳಿದು ಬಂದಿರುವುದು ಹೋಮರ್‌ ಮತ್ತು ವ್ಯಾಸಪರಂಪರೆ ನಡುವಿನ ನಿಕಟ ಬಾಂಧವ್ಯಕ್ಕೆ ಉದಾಹರಣೆ.

ಹೋಮರನ ಕಾಲದ ಪ್ರಧಾನ ಲಕ್ಷಣಗಳಾದ ಒರಟುತನ, ರೂಕ್ಷತೆ, ಪೌರುಷಪ್ರಾಧಾನ್ಯತೆ ಮಹಾಭಾರತದ ಮೂಲಗುಣವೂ ಹೌದು. ಪ್ಯಾರಿಸ್‌ ಜತೆ ಓಡಿಹೋದ ಹೆಲೆನಳ ಶೀಲ ಅಥವಾ ಲಜ್ಜೆಯ ಬಗ್ಗೆ ಯಾರೂ ಅಷ್ಟಾಗಿ ಯೋಚಿಸುವುದಿಲ್ಲವಾದಂತೆ, ಬಹಿಷ್ಠೆಯಾದ ಹೆಂಗಸೊಬ್ಬಳನ್ನು ಎಲ್ಲರೆದುರು ವಿವಸ್ತ್ರಗೊಳಿಸಿ ಮೋಜು ನೋಡುವ ಅಥವಾ ಅದನ್ನು ಅಸಹಾಯಕತೆಯಿಂದ ನೋಡಬೇಕಾಗಿ ಬರುವ ಜನರಿಗೆ ದ್ರೌಪದಿಯ ಶೀಲ ಅಥವಾ ಅಶ್ಲೀಲದ ಪ್ರಶ್ನೆ ಮುಖ್ಯವಾಗಿ ಕಾಣುವುದಿಲ್ಲ. ಆ ರೀತಿ ತನ್ನ ಹೆಂಡತಿಯನ್ನು ಅವಮಾನಿಸಿದ ದುಶ್ಯಾಸನನನ್ನು ಕೊಂದ ಭೀಮ ಆತನ ರಕ್ತ, ತಾಯಿ ಮೊಲೆ ಹಾಲು, ಕಬ್ಬಿನ ರಸ, ಕೆನೆ ಮೊಸರು ಮತ್ತು ಜೇನುತುಪ್ಪಕ್ಕಿಂತ ರುಚಿಯಾಗಿದೆ ಎಂದು ಸಂತೋಷಪಡುವುದು, ತನ್ನ ಮತ್ತು ತನ್ನ ನಾಲ್ವರು ಸಹೋದರರ ಧರ್ಮಪತ್ನಿಯನ್ನು ಪಣವಾಗಿಟ್ಟು ಜೂಜಾಡಲು ಹಿಂಜರಿಯದ ಧರ್ಮರಾಯ ವ್ಯಾಸ ಮಹಾಭಾರತ ಚಿತ್ರಿಸುವ ರೂಕ್ಷ ಸಮಾಜ ಮತ್ತವರ ಒರಟು ನಡವಳಿಕೆಗೆ ಕೆಲ ಉದಾಹರಣೆಗಳು.

ಭೀಮಸೇನನು ಹದಿಮೂರು ವರ್ಷಗಳಿಂದ ಪಟ್ಟ ದುಃಖವನ್ನು ನೆನೆದು ದುಃಶ್ಯಾಸನನನ್ನು ಗದೆಯಿಂದ ಹೊಡೆದು ಕೆಳಗೆ ಬೀಳಿಸಿದನು….ಹಂಗಿಸುತ್ತ ಎದೆಯನ್ನು ಬಗೆದು, ಬಿಸಿರಕ್ತವನ್ನು ಚಪ್ಪರಿಸುತ್ತ ಚಪ್ಪರಿಸುತ್ತ ಸುರಿದುಕೊಂಡನು. “ಹಾಲು ಮೊಸಲು ಕಬ್ಬಿನ ಹಾಲು ಜೇನುತುಪ್ಪ ತಾಯಿ ಸ್ತನ್ಯ ಇವೆಲ್ಲಕ್ಕಿಂತಲೂ ಈ ರಕ್ತ ರುಚಿಯಾಗಿದೆ!” ಎಂದು ಹಿಗ್ಗಿದನು. ಮೃತ್ಯು ಅಡ್ಡಿಯಾಗಿ ಬಂದಿದ್ದರಿಂದ ದುಶ್ಯಾಸನನನ್ನು ಇನ್ನೇನೂ ಮಾಡುವುದಕ್ಕಾಗುವುದಿಲ್ಲ. ಅಲ್ಲಿ ಭಯಂಕರವಾಗಿ ಸುತ್ತಾಡುತ್ತಿದ್ದ ಅವನನ್ನು ನೋಡಿಯೇ ಅನೇಕರು ಹೆದರಿ ಬಿದ್ದರು. ಹಾಗೆ ಬೀಳದವರ ಕೈಯಿಂದ ಆಯುಧಗಳು ಜಾರಿ ಬಿದ್ದುವು. ಅವನು ರಕ್ತ ಕುಡಿದಿದ್ದನ್ನು ನೋಡಿದವರು “ಇವನು ಮನುಷ್ಯನಲ್ಲ!” ಎಂದು ಹೆದರಿ ಓಡಿಹೋದರು. ಘೋರವಾಗಿ ನಡೆಯುತ್ತಿದ್ದ ಯುದ್ಧ ಒಂದು ಕ್ಷಣದಲ್ಲಿ ತಣ್ಣಗಾಯಿತು. ಪುಟ ೨೮೩

ಎರಗಿದನು ಕಟವಾಯ ಹಲುಗಳ
ಮುರಿಯಲುಗುರಲಿ ಹೊಯ್ದು ಹೃದಯವ
ನುರೆ ಬಗಿದು ಮೊಗೆಮೊಗೆದು ರಕ್ತವ ಕುಡಿತೆಕುಡಿತೆಯಲಿ
ಸುರಿಸುರಿದು ಸುರಿದಡಿಗಡಿಗೆ ಚ
ಪ್ಪಿರಿದು ಚಪ್ಪಿರಿದಿದರ ಮಧುರಕೆ
ನೆರೆವವೇ ಸುಧೆಯಿಕ್ಷುರಸಗಿಸವೆಂದನಾ ಭೀಮ ||೫೩||

ಬಳಿಕ ಪರಿತೋಷದಲಿ ಮಾರುತಿ
ಲಲನೆಯಲ್ಲಿಗೆ ಕಳುಹಿಸಿದನು ತ
ನ್ನೊಲವಿನಾಹವಾದುದೈತಹುದೆನಲು ಬೇಗದಲಿ
ನಳಿನಮುಖಿ ನಲವೇರಿ ಮೇಳದ
ಕೆಳದಿಯರು ಕೈಗೊಡಲು ನೇವುರ
ದೆಳಮೊಳಗು ಮೋಹಿಸಲು ಮಾನಿನಿ ಬಂದಳಾಯೆಡೆಗೆ ||೭೪||

ತರುಣಿ ಕುಳ್ಳಿರು ಸ್ವಾಮಿದ್ರೋಹಿಯ
ಕರುಳ ಮುಡಿ ಬಾ ನಿನ್ನ ಖಾತಿಯ
ಪರಿಹರಿಸುವೆನು ಖಳನ ರುಧಿರಸ್ನಾನಕೆಳಸುವರೆ
ಸರಸಿಜಾನನೆ ಕೊಳ್ಳೆನುತ ಖಳ
ನುರವನಿಬ್ಬಗಿಮಾಡಿ ಕುಡಿತೆಯ
ಲರುಣಜಲವನು ಮೊಗೆದು ಮಾನಿನಿಗಿತ್ತನಾ ಭೀಮ ||೮೦||

ಕೆಲದ ತಲೆಯದ್ರಿಗಳ ಮೂಳೆಯ
ಹೊಳೆವ ಸಾಲಿನ ಸುಂಟಗೆಯ ತೊಂ
ಗಲಿನ ತೋರಣದೊಟ್ಟಿಲಟ್ಟೆಯ ಕರುಳ ಮಾಲೆಗಳ
ತಿಳಿದ ರಕುತದ ಕೊಳನ ಘನಕೊಳು
ಗುಳದ ತೋವಿನ ನಡುವೆ ಮಾರುತಿ
ಲಲನೆಹಿತಾಡಿದನು ಶೋಣಿತವಾರಿಯೋಕಳಿಯ ||೮೬|| ಕರ್ಣಪರ್ವ, ಸಂಧಿ ೧೯

[ದ್ರೌಪದಿಯ]ನೆತ್ತಿಯೊಳ್‌ ಎಱೆದೆಱೆದು,
ಇನಿಸು ಅಱೆಯೊತ್ತಿ
ಬಱಿಕ್ಕ
ಇೞೆಯೆ ಪೊಸೆದು ಜಡೆಗೊಂಡಿರ್ದ
ಉದ್ವೃತ್ತ, ಕುಚಯುಗೆಯ ಕೇಶಮನ್‌
ಎತ್ತಂ ಪಸರಿಸಿದನ್‌
ಎಯ್ದೆ ಪಸರಿಸಿದ ಅದಿಟಿಂ! (೧೨ – ೧೫೪)

ಒಸರ್ವ ಬಿಸುನೆತ್ತರಂ
ರಕ್ಕಸನಂದದೆ
ಕುಡಿದು ಕುಡಿದು,
ಕಂಡಂಗಳನ್ ಅರ್ವಿಸೆ ಮೆಲ್ದು ಮೆಲ್ದು
ಕರ್ಬಿನ ರಸಕ್ಕಮ್‌ ಇನಿಸು ಇಂಪುಗಾಣೆನ್‌ ಎಂದು
ಅನಿಲ ಸುತಂ! (ಕಂದ ೧೨ – ೧೫೭)

ಸವಿಸವಿದು
ಬಿಕ್ಕಿ ಬಿಕ್ಕಿಸಿ – ಸವಿ ನೋಡು ಎನ್ನಾಣೆ ಎಂದು
ರಕ್ಕಸಿಗಮ್‌ ಅದಂ ಸವಿದೋಱೆ,
ನೆತ್ತರೆಲ್ಲಂ ತವೆ
ಮುಳಿಸಿಂದೆ
ಅವನ ಕರುಳ ಪಿಣಿಲಂ ನೊಣೆದಂ! (೧೨ – ೧೫೮)
ಸರಳ ಪಂಪಭಾರತ, ೪೨೦ – ೪೨೨

ಅದೇ ಪ್ರಸಂಗವನ್ನು ವ್ಯಾಸರು ನಿರೂಪಿಸುವ ರೀತಿ :

ಸ್ತನಸ್ಯ ಮಾತುರ್ಮಧುಸರ್ಪಿಷೋರ್ವಾ
ಮಾಧ್ವೀಕಪಾನಸ್ಯ ಚ ಸತ್ಕೃತಸ್ಯ|
ದಿವ್ಯಸ್ಯ ವಾ ತೋಯರಸಸ್ಯ ಪಾನಾ –
ತ್ಪಯೋದಧಿಬ್ಯಾಂ ಮಥಿತಾಚ್ಛ ಮುಖ್ಯಾತ್‌ ||೩೦||

ಅನ್ಯಾನಿ ಪಾನಾನಿ ಚ ಯಾನಿ ಲೋಕೇ
ಸುಧಾಮೃತಸ್ವಾದುರಸಾನಿ ತೇಭ್ಯಃ|
ಸರ್ವೇಭ್ಯ ಏವಾಭ್ಯಧಿಕೋ ರಸ್ಟೋ
sಯಂ|
ಮಮಾದ್ಯ ಚಾಸ್ಯಾಹಿತಲೋಹಿತಸ್ಯ ||೩೧||
ಕರ್ಣಪರ್ವ, ಅಧ್ಯಾಯ ೮೩

ಆ ಅರ್ಥದಲ್ಲಿ ಮಹಾಭರತ ಕಾಲದ ಬದುಕು ಮತ್ತು ಸಮಾಜ, ಹೋಮರನ ಕಾಲದ ಬದುಕು ಮತ್ತು ಸಮಾಜಕ್ಕಿಂತ ಕ್ರೌರ್ಯದಲ್ಲಿ ಶತಮಾನ ಹಿಂದಕ್ಕೆ ಹೋಗುತ್ತದೆ. “ನಿನ್ನ ಮಾಂಸವನ್ನು ಹಸಿಯಾಗಿ ತಿನ್ನುವ ಮನಸ್ಥಿತಿ ನನ್ನಲ್ಲಿ ಉಳಿಯಲಿ” ಎಂದು ಪ್ರಾಣಭಿಕ್ಷೆ ನೀಡುವಂತೆ ಮೊಣಕಾಲ ಮೇಲೆ ಕುಳಿತ ಹೆಕ್ತರ್‌ನನ್ನು ಉದ್ದೇಶಿಸಿ ಗ್ರೀಕರ ಅಖಿಲ್ಯೂಸ್‌ ಆಡುವ ಮಾತುಗಳು, ದುಶ್ಯಾಸನನನ್ನು ಭೀಮ ಕೊಲ್ಲುವ ರೀತಿ ಆ ಕ್ರೌರ್ಯ, ಆ ಅಬ್ಬರ! ಅಬ್ಬ! ಅಬ್ಬ!!

In his weakness Hektor of the shining helm spoke to him;
‘I entreat you, by your life, by your knees, by your parents,
do not let the dogs feed on me by the ships of the Achains,
but take yourself the bronze and gold that are there in abundance,
those gifts that my father and the lady my mother will give you,
and give my body to be taken home again………………’

But looking darkly at him swift – footed Achilleus answered:
‘No more entreating of me, you dog, by knees or parents.
I wish only that my spirit and fury would drive me
to hack your meat away and eat it raw for the things that
you have done to me’.
ಪುಟ ೪೪೪.

ಕರುಳಿನ ಮಧ್ಯಭಾಗದಲ್ಲಿ ಹಲ್ಲುಹಾಕಿ ಹಸಿಹಸಿ ತಿನ್ನುವ ಕೋಪ ಬರಲಿ ಎಂಬುದಾಗಿ ‘ಇಲಿಯಡ್‌’ನಲ್ಲಿ ಬರುವ ಅಂತಹ ಮಾತುಗಳಿಗೂ ಭೀಮನ ನಡವಳಿಕೆಗೂ ಒಂದು ವಿಚಾರದಲ್ಲಿ ಹೆಚ್ಚಿನ ಅಂತರವಿದೆ:

……………………………….. I wish I could set teeth
In the middle of his liver and eat it. That would be vengeance
For what he did to my son; ……………………
ಸರ್ಗ ೨೪, ಪುಟ ೪೮೦.

ಹೋಮರನ – ಪ್ರೀಅಂನ ಮಾತು – ಪಾತ್ರಗಳು ಆಡಿ ತೋರಿಸಿದರೆ, ವ್ಯಾಸನ ಕಾಲದ ಭೀಮ ಮಾಡಿ ಕುಡಿದು ತೋರಿಸುತ್ತಾನೆ. ಆ ದೃಷ್ಟಿಯಿಂದ ನೋಡುವುದಾದಲ್ಲಿ, ಮಹಾಭಾರತದ ಕಾಲದ ಬದುಕು ಹೆಚ್ಚು ರೂಕ್ಷವೂ, ಕ್ರೂರವೂ ಆದುದಾಗಿ ತೋರುತ್ತದೆ.

ಹೋಮರನ ಮುಂದಿನ ಬೆಳವಣಿಗೆಯಾದ ವರ್ಜಿಲ್‌ ಕಾಲಕ್ಕೆ ದೊರಕುವುದು ನಯ ನಾಜೂಕಿನ ಸಮಾಜದ ಬದುಕು. ಅವನ ಕಥಾನಾಯಕ ಈನಿಯಾಸ್‌ ಇಂದಿನ ಅರ್ಥದಲ್ಲೂ ಸುಸಂಸ್ಕೃತ, ಆಧುನಿಕ ಮತ್ತು ನಾಗರಿಕ ಮಾತ್ರವಲ್ಲ; ಸನ್ನಿವೇಶದ ಮಹತ್ವ ಅರ್ಥಮಾಡಿಕೊಂಡು ತಕ್ಕಂತೆ ನಡೆಯುವ ವಿವೇಕಿ. ಶತ್ರುಗಳನ್ನು ಕೊಲ್ಲಬೇಕಾಗಿ ಬಂದಾಗ ಕೂಡ ಪೌರುಷಕ್ಕಾಗಿ ಪೌರುಷ ಪ್ರದರ್ಶಿಸಲು ಹೋಗದೆ, ಆ ಪೌರುಷವನ್ನು ಸಂಪನ್ಮೂಲ ಎಂಬಂತೆ ಬಳಸುತ್ತಾನೆ. ಪೌರುಷಕ್ಕಾಗಿ ಪೌರುಷ ಪ್ರದರ್ಶಿಸಲು ಹಾತೊರೆಯುವ ಟರ್ನಸ್‌, ಹೋಮರನ ಅಂದರೆ ಬದಲಾವಣೆಗೆ ತುತ್ತಾದ ಯುಗದ ಪ್ರತಿನಿಧಿ ಮತ್ತು ಆ ಕಾರಣವೇ ಕಾಲ ಆತನ ವಿರುದ್ಧವಿದೆ ಎಂದು ಖಚಿತವಾದ ನಂತರ ಈನಿಯಾಸ್‌ ಅವನನ್ನೂ ಅತ್ಯಂತ ಬೀಭತ್ಸವಾಗಿ ಕೊಲ್ಲಲು ಮುಂದಾಗುತ್ತಾನೆ. ಕೊಲ್ಲುವಾಗ ಖುಷಿ, ಸಂತೋಷ ಅಥವಾ ವಿಷಾದ ಯಾವುದನ್ನೂ ವ್ಯಕ್ತಪಡಿಸಲು ಹೋಗದೆ ಕರ್ತವ್ಯ ಎಂಬಂತೆ ನಿರ್ವಹಿಸುತ್ತಾನೆ.

ರಾಮಾಯಣದಲ್ಲಿ ದೊರಕುವುದು ಅದೇ ರೀತಿಯ ನಯನಾಜೂಕಿನ ನಾಗರಿಕ ಅಥವಾ ನಾಗರಿಕತೆಯ ಹೊಸ್ತಿಲಿನಲ್ಲಿರುವ ಸಮಾಜದ ಚಿತ್ರಣ. ಅಲ್ಲಿನ ಈನಿಯಾಸ್‌ ತರವಹೇ ಇಲ್ಲಿನ ರಾಮ ಆದರ್ಶ ವ್ಯಕ್ತಿ ಮಾತ್ರವಲ್ಲ, ಮರ್ಯಾದಾಪುರುಷೋತ್ತಮ. ಹೋಮರನಲ್ಲಿ ಕಾಣಸಿಗುವ ಒದಿಸ್ಯೂಸ್‌ನಂತಹ ಕುತಂತ್ರಿಗಳನ್ನು ಕಾಣಬೇಕಾದರೆ ಮಹಾಭಾರತಕ್ಕೆ ಹೋಗಬೇಕು – ಶಕುನಿ ಮತ್ತು ಕೃಷ್ಣರ ರೂಪದಲ್ಲಿ. ರಾಮಾಯಣದ ಮಂಥರೆ, ಶೂರ್ಪನಖಿಯರಲ್ಲಿ ಆ ಲಕ್ಷಣಗಳನ್ನು ಗುರುತಿಸಬಹುದಾದರೂ, ಕೈಕೇಯಿ ಮತ್ತು ರಾವಣನಲ್ಲಿ ಆಂತರಿಕವಾಗಿ ಹುದುಗಿದ್ದ ಪ್ರಲೋಭನೆ ಬಡಿದೆಬ್ಬಿಸುವ ಕೆಲಸವನ್ನಷ್ಟೇ ಅವರು ಮಾಡುತ್ತಾರೆ. ಅಲ್ಲಿ ಈನಿಯಾಸ್‌ ಗೆಲುವು ಸಾಧಿಸಿದರೆ, ಇಲ್ಲಿ ಗೆಲುವು ದೊರಕುವುದು ಶ್ರೀರಾಮನಿಗೆ. ಶ್ರೀರಾಮನ ತರಹವೇ ಈನಿಯಾಸ್‌ ಒಂದು ತತ್ವ ಮತ್ತು ಮೌಲ್ಯಕ್ಕಾಗಿ ಹೋರಾಟ ನಡೆಸಿದರೆ, ಕೌರವರಿಗೆ ಮುಖ್ಯವಾಗುವುದು ಪಾಂಡವರ ನಿರ್ನಾಮ. ಅದೇ ತರಹ ಗ್ರೀಕರು ಹೊರಡುವುದು ಟ್ರೋಜನ್ನರನ್ನು ನಿರ್ನಾಮ ಮಾಡುವ ಉದ್ದೇಶದಿಂದ. ಇಲಿಯಡ್‌ – ಮಹಾಭಾರತಗಳಲ್ಲಿ ಮಾತ್ಸರ್ಯ, ಸೇಡು ಮತ್ತು ಸರ್ವನಾಶ ಮಾಡಬೇಕೆಂಬ ದ್ವೇಷದ ಮನೋಭಾವ ವಿಜೃಂಭಿಸುತ್ತದೆ. ಈರ್ಷ್ಯೆ ಮತ್ತು ಮಾತ್ಸರ್ಯ ಟ್ರೋಜನ್‌ ಯುದ್ಧಕ್ಕೆ ಪ್ರಮುಖ ಕಾರಣವಾದಂತೆ, ಮಹಾಭಾರತದ ಯುದ್ಧದ ಮೂಲವೂ ಅದೇ ಆಗಿದೆ.

ತತ್ತ್ವಪ್ರತಿಪಾದನೆಗಾಗಿ ವನವಾಸಕ್ಕೆ ಹೊರಟ ರಾಮ, ತನ್ನ ಪತ್ನಿಯನ್ನು ಅಪಹರಿಸುವುದರ ಮೂಲಕ ತನ್ನ ನಂಬಿಕೆಗಳನ್ನೇ ಪ್ರಶ್ನಿಸಿದ ರಾವಣನ ಜತೆ ಅನಿವಾರ್ಯವಾಗಿ ಯುದ್ಧಕ್ಕಿಳಿಯಬೇಕಾಗುತ್ತದೆ. ನೆಲೆ ಹುಡುಕಿಕೊಂಡು ಹೊರಟ ಈನಿಯಾಸ್‌, ತನ್ನ ಅಸ್ತಿತ್ವನ್ನೇ ಒಪ್ಪಿಕೊಳ್ಳಲು ನಿರಾಕರಿಸಿದ ಟರ್ನಸ್‌ ಜತೆ ಅನಿವಾರ್ಯವಾದಾಗ ಯುದ್ಧ ಮಾಡಬೇಕಾಗುತ್ತದೆ. ಆದರೆ ಟರ್ನಸ್‌ ರೂಪದಲ್ಲೆದುರಾದಾದ ಹೋಮರ್‌ ಕಾಲದ ಸಮಾಜದ ಜತೆ, ಬರುತ್ತಿರುವ ಯುಗದ ಪ್ರತಿನಿಧಿಯಾದ ಈನಿಯಾಸ್‌ ಸಂಘರ್ಷಕ್ಕಿಳಿಯುತ್ತಾನೆ. ಆದರೆ ಶ್ರೀರಾಮ ಪ್ರತಿನಿಧಿಸುವ ನಾಗರಿಕ ಸಮಾಜ ವಾಲಿ, ಸುಗ್ರೀವ, ಹನುಮಂತರು ಪ್ರತಿನಿಧಿಸುವ ಆದಿವಾಸಿಗಳಿಗೆ ಹತ್ತಿರದ ಸಮಾಜ; ಮತ್ತು ರಾವಣ ಪ್ರತಿನಿಧಿಸುವ ಅತ್ಯಾಧುನಿಕ ಮನೋಭಾವದ ಷೋಕಿಲಾಲ ಬದುಕು, ಏಕತ್ರ ಮುಖಾಮುಖಿಯಾಗುವುದನ್ನು ರಾಮಾಯಣದಲ್ಲಿ ಕಾಣಬಹುದಾಗಿದೆ.

ಆಫ್ರಿಕನ್ನರು, ಏಷ್ಯನ್ನರು ಮತ್ತು ಯುರೋಪಿಯನ್ನರು ಎಂಬ ಖಂಡಾಂತರ ವಿಭಜನೆ ಎಷ್ಟು ಕೃತಕವೊ, ಅಷ್ಟೇ ಸಹಜವೂ ಹೌದು. ಪ್ರಾಯಶಃ ಒಂದೇ ಮೂಲ ಅಥವಾ ತೆಂಡೆಯಿಂದ ಬಂದವರಿರಬಹುದಾದ ಅವರು, ತಾವು ನೆಲೆಸಿದ ಪ್ರಾಕೃತಿಕ ಭಿನ್ನತೆಗಳಿಗನುಗುಣ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆ ಹಾಗೂ ಬದುಕಿನ ಕ್ರಮಗಳನ್ನು ರೂಢಿಸಿಕೊಂಡಂತೆ ಕಾಣುತ್ತದೆ. ಕೆಲವರು ತಡವಾಗಿ ವಲಸೆಹೋಗದರೆ ಮತ್ತು ಕೆಲವರು ಮುಂಚಿತವಾಗಿ ಹೋಗಿರಬಹುದು, ಅಷ್ಟೆ ವ್ಯತ್ಯಾಸ. ವಲಸೆ ಎಂಬ ಪ್ರಕ್ರಿಯೆಯಿಂದಾಗಿ ಮೊದಲು ವಲಸೆ ಹೋದವರು ಮತ್ತೊಂದು ಕಡೆ ಮೂಲ ನಿವಾಸಿಗಳಾಗಿ ಪರಿವರ್ತನೆಗೊಳ್ಳುತ್ತಿರುವುದು ಇತ್ತೀಚಿನ ಯುಗಗಳಲ್ಲಿ ಹೆಚ್ಚಾಗಿ ಹೋಗಿದೆ; ಇಥಿಯೋಪಿಯಾ ಭಾಗದಲ್ಲಿ ಮೊದಲು ಕಾಣಿಸಿಕೊಂಡ ಮಾನವ ಜನಾಂಗದ ಮೊದಲ ತಲೆಮಾರಿನ ಜನರೇ ಇಂದಿಗೂ ಅಲ್ಲಿಯೇ ನೆಲೆಸಿದ್ದಾರೆ ಎಂದು ಭಾವಿಸಲು ಬರುವುದಿಲ್ಲವಾದಂತೆ, ಬೇರೆಲ್ಲಿಂದಲೋ ಬಂದವರು ಅವರನ್ನು ಒಕ್ಕಲೆಬ್ಬಿಸಿ ತಾವೂ ಮತ್ತೊಬ್ಬರಿಂದ ನೆಲೆ ಕಳೆದುಕೊಂಡಿರಬಹುದಾದ ಘಟನೆಗಳು, ಇತಿಹಾಸಕ್ಕೆ ಹೊಸತೇನಲ್ಲ.

ಇತಿಹಾಸದ ಯಾವುದೋ ಒಂದು ಹಂತದಲ್ಲಿ ಆಫ್ರಿಕಾ, ಏಷ್ಯಾ ಮತ್ತು ಯುರೋಪ್‌ ಮೂಲದವರು ಎಂಬ ವಿಭಜನೆ ಇಲ್ಲದೇ ಇರಬಹುದು. ಆ ಕಾರಣವೇ ನೆಹರು ಭಾವಿಸುವಂತೆ ಯುರೋಪಿನ ಮೂಲದ ಸಂತತಿಯ ಅನೇಕರು ಏಷ್ಯನ್‌ ಮೂಲದವರಾಗಿದ್ದಿರಬಹುದಾದಂತೆ,ಏಷ್ಯಾದ ಅನೇಕರು ಯುರೋಪ್‌ ಮೂಲದ ಸಂತತಿಗೆ ಸೇರಿದವರಾಗಿದ್ದಿರಬಹುದು. ಭೌಗೋಳಿಕವಾಗಿ ಈ ಜಗತ್ತನ್ನು ಏಳು ಖಂಡಗಳಾಗಿ ವಿಭಜಿಸಲಾಗಿದೆಯಾದರೂ, ಮೂರು ಖಂಡಗಳು ಮುಖ್ಯವಾಗುತ್ತವೆ – ಆಫ್ರಿಕಾ, ಏಷ್ಯಾ ಮತ್ತು ಯುರೋಪ್‌. ಇನ್ನೂ ಬಹಳ ವಿಶಾಲ ಅರ್ಥದಲ್ಲಿ ನೋಡಿದಾಗ ಎದ್ದು ಕಾಣಿಸುವುದು, ಏಷ್ಯಾ ಮತ್ತು ಯುರೋಪ್‌ ಮಾತ್ರ: ಪೂರ್ವ ಮತ್ತು ಪಶ್ಚಿಮ; ಅವುಗಳ ನಡುವಣ ಬರಬಹುದಾದ ಸಂಘರ್ಷದ ಕತೆಯನ್ನು ಆರಿಸಿಕೊಂಡ ಮೊದಲ ಕವಿ ಹೋಮರ್‌. ೧೦೨

ಮತ್ತಾವುದೆ ಕಾರಣಕ್ಕಾಗಿ ನಡೆಯಬಹುದಾದ ಕದನಕ್ಕೆ ಹೆಲೆನ್‌ ಪಲಾಯನ ಅಥವಾ ಮತ್ತಾವುದೆ ಘಟನೆ ನಪವಾಗಿಬಿಡಬಹುದು ಎಂಬ ಕಾಲಘಟ್ಟವೊಂದರ ಸಮಾಜ ಮತ್ತು ಮನುಷ್ಯರ ನಡವಳಿಕೆ ಚಿತ್ರಿಸುವುದರ ಮೂಲಕ ಅದನ್ನು ಕಾಲಾತೀತವಾಗಿಸುವ ಅದ್ಭುತ ಕಲೆಗಾರಿಕೆಯನ್ನು ಹೋಮರ್‌ ಸಾಧಿಸುತ್ತಾನೆ. ತನಗೆ ಮೆಚ್ಚುಗೆಯಾದವನೊಂದಿಗೆ ಸಂಸಾರ ನಡೆಸಲು ಬಯಸಿದ ಹೆಲೆನ್‌ ಪಲಾಯನ, ದುರಂತದಿಂದ ಕೂಡಿದ ಘನಘೋರ ಯುದ್ಧಕ್ಕೆ ಕಾರಣವಾಗುತ್ತದೆ. ಅನೇಕ ತರಹದ ಆಂತರಿಕ ಅಥವಾ ಬಾಹ್ಯ ವೈವಿಧ್ಯಗಳ ಕಾರಣಗಳಿಗಾಗಿ ಬಂದೆರಗಬಹುದಾದ ಭಿನ್ನಾಭಿಪ್ರಾಯಗಳು, ಘರ್ಷಣೆ ಅಥವಾ ಸಂಘರ್ಷಕ್ಕೆ ಕಾರಣವಾಗಬಹುದು. ಅದನ್ನೆದುರಿಸಲು ಸದಾ ಸಿದ್ಧವಾಗಿದ್ದಾಗ ಮಾತ್ರ, ಸಂಸ್ಕೃತಿ ಮತ್ತು ನಾಗರಿಕತೆಯೊಂದು ತನಗೆ ದಕ್ಕಿದ ಭಿನ್ನತೆ ಮತ್ತು ಐಕ್ಯತೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ತಿಳುವಳಿಕೆ ಬಂದುದೇ ಹೋಮರನಿಂದ ಎಂದು ಕಾಣುತ್ತದೆ. (ಅತ್ಯುತ್ತಮ ಅರಿವು ಮತ್ತು ತಿಳಿವಳಿಕೆಗೆ ಸಂಕೇತವಾದ ಬುದ್ಧನಂತಹ ಬುದ್ಧನಿಗೂ ಹೊಳೆಯದ) ಆ ಅರಿವು ಹೋಮರ್‌ ಎಂಬ ಕವಿಗೆ ದಕ್ಕಿದ್ದು ಒಂದು ಕಾಲದಲ್ಲಿ ಕವಿಗಳು ಪಡೆದಿರುತ್ತಿದ್ದ ಪ್ರತಿಭೆ ಮತ್ತು ಪ್ರಾಮುಖ್ಯತೆಗೆ ಉದಾಹರಣೆ.

ಎಲ್ಲ ಸಾಮ್ರಾಜ್ಯಗಳು ಮಣ್ಣಿನಲ್ಲಿ ಮಣ್ಣಾಗಿ ಹೋದಂತೆ, ರೋಮನ್‌ ಸಾಮ್ರಾಜ್ಯ ಸಹ ಕುಸಿದುಹೋಯಿತು. ಆದರೆ ಅವರ ಸಾಮ್ರಾಜ್ಯ ಕಲ್ಪನೆ ಮಾತ್ರ ಕುಸಿದು ಹೋಗಲಿಲ್ಲ.

ಆ ಸಾಮ್ರಾಜ್ಯ ಕಲ್ಪನೆ ಇಂದಿಗೂ ಒಂದಲ್ಲ ಒಂದು ರೂಪದಲ್ಲಿ ಜೀವಂತವಾಗಿ ಉಳಿದುಬರಲು ಕಾರಣವಾದ ಗುಣ ಮತ್ತು ಅಂಶಗಳಾವುವು? ಆ ಸಾತತ್ಯತೆ ಅವರಿಗೆ ದೊರಕಿದುದಾದರೂ ಎಲ್ಲಿಂದ? ಪ್ರಧಾನವಾಗಿ ಗಣತಂತ್ರ ವ್ಯವಸ್ಥೆಯ ಅನೇಕ ಪ್ರಯೋಗಗಳಲ್ಲಿ ನಿರತರಾಗಿದ್ದ ಯುರೋಪ್‌ ಮೂಲದ ಜನ, ರಾಜಪ್ರಭುತ್ವ ಮತ್ತು ಸಾಮ್ರಾಜ್ಯ ಕಲ್ಪನೆಯನ್ನು ಏಷ್ಯಾ ಮೂಲದಿಂದ ಪಡೆದುಕೊಂಡ ನಂತರ, ಅದನ್ನು ತಮ್ಮದಾಗಿಸಿಕೊಳ್ಳುವ ಹಾದಿಯಲ್ಲಿ ತಂದುಕೊಂಡ ಒಂದು ಪ್ರಮುಖ ಬದಲಾವಣೆ ಅತ್ಯಂತ ಮುಖ್ಯವಾದುದು. ಗಣತಂತ್ರ ವ್ಯವಸ್ಥೆ ಯಶಸ್ವಿಯಾಗಬೇಕಾದರೆ ರಾಜಪ್ರಭುತ್ವದ ಪ್ರಮುಖ ಲಕ್ಷಣವಾದ ಪ್ರಭುತ್ವವನ್ನು ಮೈಗೂಡಿಸಿಕೊಳ್ಳುವುದು ಅನಿವಾರ್ಯವಾದಂತೆ, ರಾಜತಂತ್ರ ವ್ಯವಸ್ಥೆ ಮಾನ್ಯತೆ ಗಳಿಸಬೇಕಾದರೆ ಕೆಲವಾದರೂ ಪ್ರಜಾಸತ್ತಾತ್ಮಕ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ ಎಂಬ ಪರಸ್ಪರವಾದ ಸತ್ಯ.

ಆ ತರಹದ ಪ್ರಯೋಗ ನಡೆಸಲು ಏಷ್ಯನ್ನರಿಗೆ ಏಎ ಸಾಧ್ಯವಾಗಲಿಲ್ಲ? ಏಷ್ಯಾದವನಾದ ಷಿನ್‌ – ಎಖಿ – ಉನ್ನಿನ್ನಿಯಿಂದ ಪಡೆಯಬಹುದಾದ ಪ್ರಭಾವ ಪಡೆದು ತನ್ನದೇ ಆದ ಎಪಿಕ್‌ ಪರಂಪರೆ ನಿರ್ಮಿಸಲು ಹೋಮರನಿಗೆ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗಲು ನಂತರ ಬಂದ ಯುರೋಪಿನ ಮೂಲದ ಕವಿಗಳಿಗೆ ಸಾಧ್ಯವಾದಂತೆ, ಮೆಸಪೊಟೋಮಿಯಾ ಭಾಗದ ಮತ್ತು ಇತರೆ ಏಷ್ಯನ್ನರಿಗೆ ಏಕೆ ಸಾಧ್ಯವಾಗಲಿಲ್ಲ? ಆ ಎಪಿಕ್‌ ಪರಂಪರೆಯ ಮೊದಲ ಕವಿಯಾಗಿದ್ದಿರಬಹುದಾದ ಷಿನ್‌ – ಎಖಿ – ಉನ್ನಿನ್ನಿಯನ್ನು ಮತ್ತೆ ಕಂಡುಕೊಳ್ಳುವ ವಿಚಾರದಲ್ಲಿ ಪಾಲುಗೊಂಡ ಬಹುತೇಕ ವಿದ್ವಾಂಸರು ಯುರೋಪ್‌ ಮೂಲದವರಾಗಿದ್ದರು ಎಂಬುದು ಕೇವಲ ಆಕಸ್ಮಿಕವೇ? ಆ ಮೂಲಕ ಅವರು, ತಮಗೂ ಮೂಲದ್ದಾಗಿರಬಹುದುದಾದ ಪರಂಪರೆಯ ಶೋಧದಲ್ಲಿ ಮತ್ತು ಅದರ ಪುನರ್‌ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದು ಅರ್ಥವೇ?

ಯಾವುದೇ ದೃಷ್ಟಿಯಿಂದ ನೋಡಿದರೂ ಮಹಾಭಾರತ – ರಾಮಾಯಣಗಳು, ಇಲಿಯಡ್‌ – ಒಡಿಸ್ಸಿ – ಈನೀಡ್‌ಗಳಿಗಿಂತ ಹೆಚ್ಚು ಮಹತ್ವಾಕಾಂಕ್ಷೆಯಿಂದ ಕೂಡಿದ ಕೃತಿಗಳು. ಅಂತಹ ಕೃತಿಗಳನ್ನು ಆರಂಭದ ಕಾಲದಲ್ಲಿಯೇ ಪಡೆದ ಭಾರತೀಯರು ಮುಂದೆ ಬರುಬರುತ್ತಾ ಯುರೋಪಿಯನ್ನರ ಪ್ರಭಾವ ಮತ್ತು ಮಾರ್ಗದರ್ಶನ ಒಪ್ಪಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಗೆ ಕಾರಣವಾದ ಬೀಜಗಳು ಮಹಾಭಾರತ ಮತ್ತು ರಾಮಾಯಣದ ಕಾಲದಲ್ಲೆ ಬಿತ್ತನೆಯಾಗಿರಬಹುದೆ? ಆ ಯಾವುದೇ ಬೆಳವಣಿಗೆಗಳು ದಿಡೀರ್‌ ಆಗಿರುವ ಸಾಧ್ಯತೆ ಬಹಳ ಕಡಿಮೆ. ಹೋಮರ್‌ ಕಟ್ಟಿದ ಪರಂಪರೆ ಹಲವಾರು ತರಹದ ಮಾರ್ಪಾಡು ಮತ್ತು ಬದಲಾವಣೆಗಳನ್ನು ಎದುರಿಸಿಯೂ ಇಂದಿಗೂ ಉಳಿದು ಬಂದಿದೆ ಎಂಬುದಾದರೆ, ವ್ಯಾಸ – ವಾಲ್ಮೀಕಿ ಪರಂಪರೆ ಅದರ ನಿಜವಾದ ಅರ್ಥದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ ಏಕೆ? ಪರಂಪರೆ ಕಟ್ಟುವ ಕಲೆ ಅಥವಾ ನೈಪುಣ್ಯ ಭಾರತೀಯರಿಗೆ ದಕ್ಕಲಿಲ್ಲವೇ? ಅಥವಾ ಪರಂಪರೆ ನಿರ್ಮಾಣ ಎಂಬುದನ್ನು ಬೇರೆ ಅರ್ಥದಲ್ಲಿ ಅರ್ಥಮಾಡಿಕೊಂಡ ಅವರು ಅದಕ್ಕೆ ನೀಡಿದ ಅರ್ಥ ಬೇರೆಯದಾಗಿತ್ತೆ?

ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಹ ಮರಳಿ ಹೋಮನಿರಗೆ ಹೋಗಬೇಕು. ಹೋಮರನತ್ತ ನೋಡುವುದೆಂದರೆ, ಎಲ್ಲರಿಗೂ ಮೂಲವಾಗಿದ್ದಿರಬಹುದಾದ ಮತ್ತು ಅದರ ಮೂಲರೂಪದಲ್ಲಿ ಉಳಿದು ಬಂದಿರಬಹುದಾದ ಮೂಲ ಮಾನವ ಪರಂಪರೆಗೆ ಸಲ್ಲಬೇಕಾದ ನಮನ ಸಲ್ಲಿಸುವುದು ಎಂದೇ ಅರ್ಥ; ಅವನ ಮತ್ತು ನಂತರದ ತಲೆಮಾರಿನ ಜನ ಕಟ್ಟಿದ ಪರಂಪರೆ ಸಾಗಿ ಬಂದ ಹಾದಿಯನ್ನು ಅರಿಯಲು ಯತ್ನಿಸುವುದು ಎಂದರ್ಥ.

 

[1]On Poetry and Poets, ಪುಟ ೧೨೩ – ೧೨೪

[2]The Iliad of Homer, ಸರ್ಗ ೬, ಪುಟ ೧೬೫

[3]ಉಯೋಗಪರ್ವ, ಅಧ್ಯಾಯ ೭೨

[4]ವಚನಭಾರತ, ಗೀತಾ ಬುಕ್‌ಹೌಸ್‌, ಮೈಸೂರು, ೧೯೯೩, ಪುಟ ೨೨೭