ನವೀನ್ಕುಮಾರ್ ಎಚ್‌.ಸಿ. ಹುಟ್ಟಿದ್ದು ೧೯೭೫ರಲ್ಲಿ ತುಮಕೂರು ಜಿಲ್ಲೆಯ ಹಾಲುಗೊಣದಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯ ಜೊತೆಗೆ ಇಂಗ್ಲಿಷ್‌ ಕಲಿಕೆ, ಫ್ರೆಂಚ್‌, ಜರ್ಮನ್‌, ಭಾಷಾಂತರ, ಪತ್ರಿಕೋದ್ಯಮ, ಸಾಫ್ಟ್ ಸ್ಕಿಲ್ಸ್‌ನಲ್ಲಿ ಡಿಪ್ಲೊಮಾಗಳನ್ನು ಪಡೆದಿದ್ದಾರೆ. ಅರುಂಧತಿ ರಾಯ್‌ ಅವರ ಗಾಡ್ಆಫ್ಸ್ಮಾಲ್ಥಿಂಗ್ಸ್ಕುರಿತು ಎಂ.ಫಿಲ್‌. ಪದವಿ ಪಡೆದಿರುವ ಇವರು ಇಲೆಕ್ಟ್ರಾನಿಕ್‌ ಇಂಗ್ಲಿಷ್‌ ಕುರಿತು ಪಿ.ಎಚ್‌.ಡಿ. ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದಾರೆ. ವೃತ್ತಿಯಿಂದ ಇಂಗ್ಲಿಷ್‌ ಉಪನ್ಯಾಸಕ. ಅನುವಾದ, ಸಿನಿಮಾ, ಚಿತ್ರಕಲೆ, ರಂಗಭೂಮಿ, ಕೌಶಲ್ಯಗಳ ತರಬೇತಿ, ಸಹಜ ಕೃಷಿ, ಮುಂತಾದ ವಿಷಯಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ.

ಇವರ ಸರಳಾನುವಾದದಲ್ಲಿ ರವೀಂದ್ರನಾಥ ಟ್ಯಾಗೋರರ ‘ಗೀತಾಂಜಲಿ(೨೦೦೮) ಪ್ರಕಟವಾಗಿದೆ.

ಸದ್ಯಕ್ಕೆ ತುಮಕೂರು ಜಿಲ್ಲೆಯ ದಂಡಿನಶಿವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿದ್ದಾರೆ.

ವಿಳಾಸ: ನವೀನ್‌ ಕುಮಾರ್ ಎಚ್‌.ಸಿ., ಇಂಗ್ಲಿಷ್‌ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ದಂಡಿನಶಿವರ, ತುರುವೇಕೆರೆ ತಾ. ತುಮಕೂರು ಜಿಲ್ಲೆ – ೫೭೨೨೧೫ ದೂರವಾಣಿ: ೯೬೮೬೧೯೫೯೦೯

ಈ – ಅಂಚೆ: naveenhalemane@gmail.com