ಜನನ: ೧೯೩೮-ಅಕ್ಕಿ ಆಲೂರು ಗ್ರಾಮ

ಗುರುಪರಂಪರೆ: ಮೊದಲಿಗೆ ಪರಶುರಾಮಪ್ಪ ಮಾಸ್ತರಲ್ಲಿ ಸಂಗೀತ ಕಲಿಕೆ ಪ್ರಾರಂಭಿಸಿ ಮುಂದೆ ಶ್ರೀ ಗುರುಶಾಂತಗವಾಯಿಗಳಲ್ಲಿ ಹಾಗೂ ಪಂ.ಡಿ.ಬಿ. ಹರೀಂದ್ರ ಅವರಲ್ಲಿ ಶಿಕ್ಷಣ ಮುಂದುವರಿಸಿ ಸೀನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಶ್ರೇಣಿ ಗಳಿಸಿ ತೇರ್ಗಡೆ ಹೊಂದಿದರು. ಅನಂತರ ಪಂ. ಚಂದ್ರಶೇಖರ ಪುರಾಣಿಕ ಮಠ ಅವರಲ್ಲಿ ಉನ್ನತ ಶಿಕ್ಷಣ ಪಡೆದರು ವಿದ್ವತ್ ಪರೀಕ್ಷೆಯಲ್ಲೂ ತೇರ್ಗಡೆಯಾದರು.

ಸಾಧನೆ: ಬಾಲ್ಯದಲ್ಲಿ ಸಂಗೀತ ಪ್ರಧಾನ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದರು. ಮುಂದೆ ಅಂತರ ವಿಶ್ವವಿದ್ಯಾಲಯದ ಯುವ ಜನೋತ್ಸವದಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ್ದಾರೆ. ಸುಗಮ ಸಂಗೀತದಲ್ಲೂ ಸಾಕಷ್ಟು ಪರಿಶ್ರಮ ಹೊಂದಿ ೨೫ ವರ್ಷಗಳಿಗೂ ಮಿಕ್ಕಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಇವರು ಉತ್ತಮ ಹಾರ್ಮೋನಿಯಂ ವಾದಕರೂ ಕೂಡ. ಇವರು ಹಾಡಿರುವ ಧ್ವನಿ ಸುರುಳಿಗಳು ಹೊರಬಂದಿವೆ. ಮೂರು ಸ್ನಾತಕೋತ್ತರ ಪದವಿ ಗಳಿಸಿರುವ ಇಂದೂಧರ ಅವರು ತುಂಗಾ ಕಾಲೇಜಿನ ಪ್ರಾಂಶುಪಾಲರಾಗಿ ಅನಂತರ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ ಸೇವೆಯಲ್ಲಿದ್ದರು.

ಪ್ರಶಸ್ತಿ-ಸನ್ಮಾನ: ಇವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ೧೯೯೧-೯೨ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ತಿಲಕ ಪ್ರಶಸ್ತಿ ಇವರಿಗೆ ಸಂದಿದೆ.